65 ವರ್ಷದಾಟಿದವರಲ್ಲಿ ಕಂಡು ಬರುವ ತೊಂದರೆಗಳೆಂದರೆ
*ಕಣ್ಣುಗಳು ಒಣಗಿದಂತೆ,ಅಂಟಂಟಾಗಿರುವಂತೆ ಭಾಸವಾಗುವುದು
*ಕಣ್ಣಿನಲ್ಲಿ ಪರಕೀಯ ವಸ್ತುಗಳು ಇರುವಂತೆ ಅನ್ನಿಸುವುದು
ಕಣ್ಣಿನ ಕಣ್ಣೀರ ಪದರ ಅಥವಾ ಕಂಜ್ಕೆಕ್ಟೈವಲ್ ಗಾಬ್ಲೆಟ್ ಕೋಶಗಳಲ್ಲಾಗುವ ಬದಲಾವಣೆಗಳು, ಕಣ್ಣೀರ ಕೋಶದ ದೋಷಗಳಿಂದ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣು ಮಿಟುಕಿಸುವುದು ಕಡಿಮೆಯಾಗಿ ಪರಿಸರ ಸಂಬಂಧಿ ತೊಂದರೆಗಳಿಂದಾಗಿ, ಕಾಂಟಾಕ್ಟ್ ಲೈನ್ ಬಳಕೆ ಯಿಂದಾಗಿ, ಆಂಟಿಹಿಸ್ಟಮೈನ್, ಡಯರೆಟಿಕ್ಸ್ ಬೀಟಾ ಬ್ಲಾಕರ‍್ಸ್ ಹಾಗೂ ಖಿನ್ನತೆ ನಿವಾರಕ ಔಷಧಿಗಳ ಸೇವನೆಯಿಂದಾಗಿ ಕಣ್ಣಿನಲ್ಲಿ ದ್ರವಾಂಶ ಬತ್ತುವ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ರಕ್ಷಣೆ
ಕಣ್ಣೀರ ಕೋಶಗಳಿಗೆ ಸಿಲಿಕಾನ್ ಬಿರಟೆಗಳನ್ನು ಮುಚ್ಚಿ ಅವನ್ನು ಸಂರಕ್ಷಿಸುವ ಮೂಲಕ ಅಥವಾ ಹೈಪ್ರೊಮಲ್ಲೋಸ್ ನಂತಹ ಕೃತಕ ಕಣ್ಣೀರ ಹನಿಗಳನ್ನು ಬರಿಸುವ ಮೂಲಕ ಈ ತೊಂದರೆಯನ್ನು ತಪ್ಪಿಸಬಹುದು.
ಕಣ್ಣಿಗೆ ಸಂಬಂಧಪಟ್ಟ ಅನೇಕ ತೊಂದರೆಗಳು ಸಾಮಾನ್ಯವಾಗಿ ೪೦ ವರ್ಷದಾಟಿದ ಕೂಡಲೇ ಪ್ರಾರಂಭವಾಗುತ್ತದೆ. ಆದ್ದರಿಂದ ೪೦ವರ್ಷ ದಾಟಿದ ಬಳಿಕ ಪ್ರತಿಯೊಬ್ಬರೂ ಆಗಾಗ ನಿಯಮಿತವಾಗಿ ಕಣ್ಣುಗಳ ತಪಾಸಣೆಗೆ ಒಳಗಾಗುವುದು ಅತ್ಯಗತ್ಯ.
ರೆಟಿನೋಪತಿ
ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಶರೀರದ ಹಲವಾರು ಭಾಗಗಳ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುವ ಒಂದು ಗೋಚರವಾದ ಕಾಯಿಲೆ. ರಕ್ತದಲ್ಲಿ ಸಕ್ಕರೆಯ ಅಂಶವು ಹೆಚ್ಚಾದರೆ ಅದು ಕುರುಡುತನಕ್ಕೂ ಕಾರಣವಾಗಬಹುದು. ಮಧುಮೇಹ ವಿಧ ಮತ್ತು ರೋಗ ತಗಲಿ ಆಗಿರುವ ಅವಧಿಗಳನ್ನು ಅವಲಂಬಿಸಿ ರೋಗದ ಹಾನಿ ಸಂಭವಿಸಿರುತ್ತದೆ.
ರೆಟಿನೋಪತಿಗೆ ಇತರ ಕಾರಣಗಳು
ಮಧುಮೇಹ ಮಾತ್ರವಲ್ಲದೆ-
*ಮೆಟಬಾಲಿಕ್ ನಿಯಂತ್ರಣ
* ರಕ್ತದೊತ್ತಡ
*ಮೂತ್ರ ಪಿಂಡಗಳ ತೊಂದರೆಗಳು
*ಬೊಜ್ಜು
* ರಕ್ತ ಹೀನತೆ
*ಅತಿಯಾದ ಧೂಮಪಾನ
ಇವುಗಳಿಂದಲೂ ಕೂಡ ರೆಟಿನೋಪತಿ ಕಾಣಿಸಿಕೊಳ್ಳುತ್ತದೆ.
ತೀವ್ರಸ್ವರೂಪದ ದೃಷ್ಟಿದೋಷಗಳಿಗೆ ಈ ತೊಂದರೆಗಳು ಮೂಲಾಧಾರವಾಗಬಹುದು. ಆದ್ದರಿಂದ ಮಧುಮೇಹಿಗಳು ಆಗಾಗ ಅಫ್ತಾಲ್ಮೋಸ್ಲೋಪಿ ತಪಾಸಣೆಗೆ ಒಳಗಾಗುವುದು ಬಹಳ ಅವಶ್ಯಕ. ಈ ರೋಗಕ್ಕೆ ಲೇಸರ್ ಫೊಟೋಕೊ ಅಗ್ಯುಲೇಷನ್ ಚಿಕಿತ್ಸೆಯು ಲಭ್ಯವಿದೆ.
ಕ್ಯಾಟರಾಕ್ಟ್
ವಯಸ್ಸು ಹೆಚ್ಚುತ್ತಾ ಹೋದಂತೆ ತೀರಾ ಸಮಾನ್ಯವಾಗಿ ಕಂಡುಬರುವ ಕಣ್ಣು ಸಮಸ್ಯೆಯೆಂದರೆ ಕ್ಯಾಟರಾಕ್ಟ್. ೬೦-೬೫ ವರ್ಷದಾಟಿದ ಭಾರತೀಯರಲ್ಲಿ ಪ್ರತಿನಾಲ್ಕು ಜನರಿಗೊಬ್ಬರಲ್ಲಿ ಈ ತೊಂದರೆ ಕಂಡುಬರುತ್ತವೆ.
ಲಕ್ಷಣಗಳು
ಇದು ಕಣ್ಣಿನ ಮಸೂರ ಕ್ರಮೇಣ ಅಪಾರದರ್ಶಕ ಗೊಳ್ಳುವ ತೊಂದರೆ. ಮಸೂರ ಅಪಾರದರ್ಶಕಗೊಂಡಾಗ, ಕಣ್ಣಿನ ಮೇಲೆ ಬಿದ್ದ ಬೆಳಕು ಚೆಲ್ಲಾಪಿಲ್ಲಿಯಾಗಿ ದೃಶ್ಯಗಳು ಅಸ್ಪಷ್ಟವಾಗತೊಡಗುತ್ತವೆ. ಕ್ರಮೇಣ ದೃಷ್ಟಿಯು ಮಂದವಾಗುತ್ತದೆ.
ಆಘಾತಗೊಳಗಾಗಿ ಅಥವಾ ಮಧುಮೇಹ, ಗಾಲಾಕ್ಯುಸೆಮಿಯ ಇಲ್ಲವೇ ದೀರ್ಘಕಾಲ ಅಯಾನೀಕೃತ ವಿಕಿರಣಕ್ಕೆ, ವಿಷಕಾರಿ ವಸ್ತಗಳಿಗೆ ಶರೀರ ಒಡ್ಡಿಕೊಂಡಾಗ ಕೂಡ ಕ್ಯಾಟರಾಕ್ಟ್ ಕಾಣಿಸಿಕೊಳ್ಳಬಹುದು. ದೀರ್ಘಕಾಲ ಸ್ಟಿರಾಯಿಡ್ ಔಷಧಿಗಳ ಬಳಕೆಯಿಂದಲೂ ಕೂಡ ಈ ತೊಂದರೆ ಉಂಟಾಗುತ್ತದೆ.
*ನೋವಿಲ್ಲದ ದೃಷ್ಟಿ ಕ್ಷೀಣಿಸುತ್ತಾ ಹೋಗುವುದು
*ಕಣ್ಣಿಗೆ ವಸ್ತುಗಳು ಅಡ್ಡಡ್ಡ ಬಂದಂತೆ ಭಾಸವಾಗುವುದು
* ಮುಂಭಾಗದಲ್ಲಿ ಕಲೆಗಳು ಎರಡಾಗಿ ಕಾಣಿಸಿಕೊಳ್ಳುವುದು
*ರಾತ್ರಿಯಲ್ಲಿದೃಷ್ಟಿ ಮಂದವಾಗುವುದು
*ವಾಹನ ಚಾಲನೆ ಕಷ್ಟವಾಗುವುದು
* ಓದುವುದಕ್ಕೆ ಕಷ್ಟವಾಗುವುದು
ತಪಾಸಣೆ
*ಸ್ಲಿಟ್-ಲ್ಯಾಂಪ್ ತಪಾಸಣೆ
*ಪಾಪೆ ಹಿಗ್ಗಿಸಿ ನೋಡುವ ತಪಾಸಣೆ
*ಆಫ್ತಲ್ಮೋಸ್ಕೋಪಿ ತಪಾಸಣೆ
ಇವುಗಳ ಮೂಲಕ ಕ್ಯಾಟರಾಕ್ಟ್‌ನ್ನು ಪತ್ತೆ ಮಾಡಬಹುದು.
ಚಿಕಿತ್ಸೆ
ಈ ತೊಂದರೆ ಶಸ್ತ್ರ ಚಿಕಿತ್ಸೆಯೊಂದೇ ಪರಿಹಾರ. ಕ್ಯಾಟರಾಕ್ಟ್ ಪೀಡಿತ ಕಣ್ಣಿನ ಮಸೂರವನ್ನು ಶಸ್ತ್ರಕ್ರಿಯೆ ಮೂಲಕ ತೆಗೆದು, ಆ ಭಾಗದಲ್ಲಿ ಮಸೂರವನ್ನು ಜೋಡಿಸಲಾಗುತ್ತದೆ.
ಮ್ಯಾಕುಲಾ
೬೦ವರ್ಷವಾದವರಲ್ಲಿ ಮರಳಿಸಲು ಸಾಧ್ಯವಾಗದ ದೃಷ್ಟಿದೋಷಕ್ಕೆ ಕಾರಣವಾಗುವ ಸಾಮಾನ್ಯ ತೊಂದರೆಯೇ ಈ ಮ್ಯಾಕುಲಾ. ಇದು ಸಾಮಾನ್ಯವಾಗಿ೬೫ ರಿಂದ ೭೫ ವರ್ಷಮೇಲ್ಪಟ್ಟವರಲ್ಲಿ ಶೇ.೧೦ರಷ್ಟು ಜನರಲ್ಲಿ ಕಂಡುಬರುತ್ತದೆ.
ಲಕ್ಷಣ
ದೃಷ್ಟಿಯ ಕೇಂದ್ರ ಭಾಗವನ್ನು ಸಂಸ್ಕರಿಸುವ ಮ್ಯಾಕುಲಾ ಅಕ್ಷಿಪಟಲ ಅತ್ಯಂತ ಸೂಕ್ಷ ಭಾಗವಾಗಿದ್ದು, ಅದರಲ್ಲಿರುವ ಬ್ರೂಟ್ ಪದರದ ಮೇಲೆ ಅಸಜ ವಸ್ತಗಳು ಶೇಖರಣೆಗೊಂಡು, ದೃಷ್ಟಿಯಕೇಂದ್ರಗಳಲ್ಲಿ ವಿಕಾರಗೊಳ್ಳುವಂತೆ ಮಾಡುತ್ತದೆ. ಈ ತೊಂದರೆಯೇ ಮ್ಯಾಕುಲದ ಪ್ರಮುಖ ಲಕ್ಷಣವಾಗಿದೆ.
ರೋಗ ನಿರ್ಧಾರಕ
ಆಫ್ತಾಲ್ಮೋಸ್ಕೋಪಿ, ಆಮ್‌ಸ್ಲರ್ ಗ್ರಿಡ್ ಮತ್ತು ಫಂಡಸ್ ಫ್ಲೋರೋಸಿನ್ ಆಂಜಿಯೋಗ್ರಫಿ ಮುಂತಾದವುಗಳ ತಪಾಸಣೆಯ ಮೂಲಕ ರೋಗವನ್ನು ಪತ್ತೆ ಹಚ್ಚಬಹುದು.ಕನ್ನಡಕಗಳು ಅಥವಾ ಲೇಸರ್ ಶಸ್ತ್ರಕ್ರಿಯೆ ಈ ತೊಂದರೆಗೆ ಮುಖ್ಯ ಪರಿಹಾರ.ಕಾಲ ಕಳೆಯುತ್ತಿದ್ದಂತೆ ವಯಸ್ಸು ಹೆಚ್ಚಾಗುತ್ತಾ ಹೋಗುತ್ತದೆ. ಇದರ ಪರಿಣಾಮವಾಗಿ ಅನೇಕ ರೋಗಗಳು ಅಂಟಿ ಕೊಳ್ಳುವುದು ಸಹಜ ಶರೀರದಲ್ಲಿ ನಿರೋಧಕ ಶಕ್ತಿಯು ಕಡಿಮೆಯಾದಂತೆಲ್ಲ ರೋಗಗಳು ಆಕ್ರಮಿಸುತ್ತವೆ. ಅವುಗಳಲ್ಲಿ ದೀರ್ಘಕಾಲದ ರೋಗಗಳು ಬಂತೆಂದರೆ ಜೀವನವೇ ಬೇಡ ಅನ್ನಿಸುವುದು ಸಹಜ. ಅಂತಹ ರೋಗಗಳಲ್ಲಿ ಕುರುಡುತನ ಬಂತೆಂದರೆ ಬಳ್ಳಿಯ ಹಾಗೆ ಇನ್ನೊಬ್ಬರನ್ನು ಆಶ್ರಯಿಸಲೇ ಬೇಕು.
೬೦ವರ್ಷದಾಟಿದ ಕೂಡಲೆ ಅನೇಕ ವಿಧವಾದ ದೃಷ್ಟಿದೋಷಗಳು ಉಂಟಾಗುತ್ತವೆ. ಅವುಗಳಿಗೆ ಕಾಲ ಕಾಲಕ್ಕೆ ಸರಿಯಾಗಿ ಚಿಕಿತ್ಸೆ ಮಾಡುವುದು ಒಳ್ಳೆಯದು. ನಿರ್ಲಕ್ಷ ಮಾಡಿದರೆ ದೃಷ್ಟಿ ಕಳೆದು ಕೊಂಡು ಕತ್ತಲೆ ಜೀವನ ನಡೆಸ ಬೇಕಾಗುವುದು. ಗ್ಲುಕೋಮ, ಕ್ಯಾಟರಾಕ್ಟ್, ಮ್ಯಾಕುಲಾ,ರೆಟಿನೋಪತಿ, ಅಕ್ಷಪಟಲ ಕಳಚಿಕೊಳ್ಳುವುದು, ಕಣ್ಣುಗಳು ಒಣಗುವುದು, ಕಣ್ಣಲ್ಲಿ ಸದಾ ನೀರು ಸೋರುವುದು ಮುಂತಾದ ಲಕ್ಷಣಗಳು ಕಂಡು ಬಂದ ಕೂಡಲೇ ತಜ್ಞವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಆವಶ್ಯಕ.
ಈ ಎಲ್ಲಾ ತೊಂದರೆಗಳೂ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ೪೦ - ೪೫ ವರ್ಷ ದಾಟಿದ ವ್ಯಕ್ತಿಗಳು ನಿಯಮಿತವಾಗಿ ಕಣ್ಣು ತಪಾಸಣೆ ಮಾಡಿಸಿಕೊಳ್ಳುವುದು ಆವಶ್ಯಕ.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...