ಮಾನವ ದೇಹವೆಂಬ ವಿಸ್ಮಯ
mail-img print-img

ಮಾನವ ದೇಹವೆಂಬ ವಿಸ್ಮಯ

- ಎ. ಪಿ.
ಶನಿವಾರ - ಜೂನ್ -16-2012

ಸೃಷ್ಟಿಯ ಅದ್ಭುತಗಳನ್ನು ನೋಡಿ ಆಶ್ಚರ್ಯ ಚಕಿತನಾಗುವ ಮನುಷ್ಯನು ಸೃಷ್ಟಿಯೇ ಒಂದು ವಿಸ್ಮಯ ಎನ್ನುವುದನ್ನು ಮರೆಯುತ್ತಾನೆ. ಮಾನವ ದೇಹ ರಚನೆ ಕೂಡ ಹಲವು ವಿಸ್ಮಯಗಳ ಗೂಡಾಗಿದೆ. ನಿಮ್ಮ ದೇಹ ದಲ್ಲೂ ವಿದ್ಯುತ್ ಉತ್ಪಾದನೆ ಆಗುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೇ? ಮಾನವ ಹಾಗೂ ಮಾನವ ದೇಹದ ಕುರಿತಂತೆ ವಿಜ್ಞಾನಿಗಳು ಅದೆಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. ನಾವಿಲ್ಲಿ ಮಾನವ ದೇಹದ ಅಚ್ಚರಿಕಾರಕ ಸಂಗತಿಗಳ ಬಗ್ಗೆ ತಿಳಿಯೋಣ.ಒಬ್ಬ ವಯಸ್ಕ ಮನುಷ್ಯನ ದೇಹದಲ್ಲಿ ಒಟ್ಟು 206 ಮೂಳೆಗಳು ಇರುತ್ತವೆ. ಅದರಲ್ಲಿ ಅರ್ಧದಷ್ಟು ಮೂಳೆಗಳು ಕೈ ಹಾಗೂ ಕಾಲುಗಳಲ್ಲಿಯೇ ಇರುತ್ತವೆ. ಒಂದು ನವಜಾತ ಶಿಶುವಿನಲ್ಲಿ 300ಕ್ಕಿಂತ ಹೆಚ್ಚು ಮೂಳೆಗಳು ಇರುತ್ತವೆ. ಆದರೆ ಆ ಮಗುವಿನ ಬೆಳವಣಿಗೆಯ ಜತೆ ಜತೆ 94 ಮೂಳೆಗಳೂ ಪರಸ್ಪರ ಕೂಡಿಕೊಂಡು ವಯಸ್ಕ ನಾದಾಗ 206ರಷ್ಟು ಮಾತ್ರ ಉಳಿಯುತ್ತವೆ.ಮಾನವ ದೇಹದಲ್ಲಿ ತೊಡೆಯ ಮೂಳೆ (ಫೀಮರ್) ಎಲ್ಲಕ್ಕೂ ಉದ್ದದ ಮೂಳೆಯಾಗಿರುತ್ತದೆ. ಅದೇ ರೀತಿ ಕಿವಿಯ ಮಧ್ಯದ ಮೂಳೆ ‘ಸ್ಟೆಪೀಸ್’ ಎಲ್ಲಕ್ಕೂ ಚಿಕ್ಕ ಮೂಳೆಯಾಗಿರುತ್ತದೆ. ದವಡೆಯ ಮೂಳೆ ಎಲ್ಲಕ್ಕೂ ಗಟ್ಟಿಯಾದ ಮೂಳೆಯಾಗಿರುತ್ತದೆ. ಅದು 279ಕ್ಕೂ ಹೆಚ್ಚು ಕಿಲೋ ತೂಕದ ಬಲವನ್ನು ಸಹಿಸಿಕೊಳ್ಳಬಲ್ಲದ್ದಾಗಿರುತ್ತದೆ.

ಮಾನವ ನಾಲಿಗೆಯ ಮೇಲೆ ಸುಮಾರು 3000ಕ್ಕೂ ಹೆಚ್ಚು ರುಚಿಗ್ರಾಹಿ ಜೀವಕೋಶಗಳಿರುತ್ತವೆ. ಈ ರುಚಿ ಗ್ರಾಹಿ ಜೀವಕೋಶಗಳು 4 ಪ್ರಕಾರದ್ದಾಗಿರುತ್ತವೆ. ಮೊದಲ ಪ್ರಕಾರದ ಜೀವಕೋಶಗಳು ನಾಲಿಗೆಯ ಮುಂಭಾಗದಲ್ಲಿ ಸಿಹಿ ಹಾಗೂ ಉಪ್ಪಿನ ರುಚಿಯನ್ನು ಗ್ರಹಿಸುತ್ತವೆ.ಎರಡನೆ ಪ್ರಕಾರದ ಜೀವಕೋಶಗಳು ಹಿಂಭಾಗದ ಲ್ಲಿದ್ದು, ಅವು ಕಹಿ ರುಚಿಯನ್ನು ಗ್ರಹಿಸುವ ಸಾಮರ್ಥ್ಯ ಪಡೆದುಕೊಂಡಿರುತ್ತವೆ. ಮೂರನೆ ಪ್ರಕಾರದ ಜೀವ ಕೋಶಗಳು ಅಂಚಿನ ಭಾಗದಲ್ಲಿದ್ದು ಹುಳಿ ರುಚಿಯನ್ನು ಗ್ರಹಿಸುವ ಶಕ್ತಿ ಪಡೆದುಕೊಂಡಿರುತ್ತವೆ. ನಾಲ್ಕನೆಯ ಪ್ರಕಾರದ ಜೀವಕೋಶಗಳು ನಾಲಿಗೆಯ ನಟ್ಟ ನಡುವೆ ಇದ್ದು, ಇವು ಯಾವುದೇ ಪ್ರಕಾರದ ರುಚಿಯನ್ನು ಗ್ರಹಿಸುವ ಶಕ್ತಿ ಹೊಂದಿರುವುದಿಲ್ಲ.

ಮಾನವ ದೇಹದಲ್ಲಿ ವಿದ್ಯುತ್ ಕೂಡ ಉತ್ಪಾದನೆ ಆಗುತ್ತದೆ. ಈ ತೆರನಾದ ಚುಂಬಕೀಯ ವಿದ್ಯುತ್ ಸಂದೇಶ ನಮ್ಮ ದೇಹದ ಎಲ್ಲ ಅಂಗಗಳಲ್ಲೂ ಪ್ರವಹಿಸು ತ್ತಿರುತ್ತವೆ. ಅವು ನರಮಂಡಲ, ಮಾಂಸಖಂಡಗಳು ಹಾಗೂ ಬೇರೆ ಅಂಗಗಳನ್ನು ಸಂಚಾಲನೆ ಮಾಡುತ್ತಿರು ತ್ತವೆ.ಮಾನವ ದೇಹದ ಎಲ್ಲಕ್ಕೂ ದೊಡ್ಡ ಅಂಗವೆಂದರೆ ತ್ವಚೆ. ಹಳೆಯ ತ್ವಚೆ ಸುಮಾರು 50 ದಿನದಲ್ಲಿ ಹೊಸ ತ್ವಚೆಯಾಗಿ ಬದಲಾಗುತ್ತದೆ. ದೇಹದಲ್ಲಿ ತ್ವಚೆಯ ದಪ್ಪ ಎಲ್ಲಾ ಕಡೆ ಒಂದೇ ತೆರನಾಗಿರುವುದಿಲ್ಲ. ಪಾದಗಳಲ್ಲಿ ಹಾಗೂ ಅಂಗೈನಲ್ಲಿ ಅದು ಎಲ್ಲಕ್ಕೂ ಹೆಚ್ಚು ದಪ್ಪನಾಗಿರುತ್ತದೆ. ಕಣ್ಣುಗಳ ರೆಪ್ಪೆಯ ತ್ವಚೆ ಎಲ್ಲಕ್ಕೂ ತೆಳ್ಳಗೆ ಅಂದರೆ 5ರಿಂದ 6 ಮಿಲಿಮೀಟರ್‌ನಷ್ಟಿರುತ್ತದೆ.

ಮಿದುಳಿನ ಭಾರ ನಮ್ಮ ದೇಹದ ಒಟ್ಟು ತೂಕದ ಶೇ.3ರಷ್ಟು ಆಗಿರುತ್ತದೆ. ಆದರೆ ಅದು ನಮ್ಮ ದೇಹ ಉಸಿರಾಟದ ಮೂಲಕ ಪಡೆಯುವ ಆಮ್ಲಜನಕದ ಶೇ.20ರಷ್ಟನ್ನು ಪಡೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ನಾವು ಸೇವಿಸುವ ಆಹಾರದ ಶೇ.20ರಷ್ಟು ಕ್ಯಾಲೋರಿಯ ಶಕ್ತಿಯನ್ನು ಮಿದುಳು ಉಪಯೋಗಿಸಿಕೊಳ್ಳುತ್ತದೆ.ನಮ್ಮ ದೇಹದ ಅತ್ಯಂತ ಜಟಿಲ ಕೇಂದ್ರವೆಂದರೆ ಅದು ‘ನಿದ್ರಾಕೇಂದ್ರ’ ಅದನ್ನು ರಕ್ತದಲ್ಲಿ ಮಿಶ್ರಣಗೊಂಡಿರುವ ಕ್ಯಾಲ್ಷಿಯಂ ನಿಯಂತ್ರಣ ಮಾಡುತ್ತದೆ ಮತ್ತು ಕ್ಯಾಲ್ಷಿಯಂನ ಒಂದು ನಿಶ್ಚಿತ ಪ್ರಮಾಣವಿರುವ ರಕ್ತದ ಪ್ರಮಾಣ ನಿದ್ರಾ ಕೇಂದ್ರಕ್ಕೆ ತಲುಪುತ್ತಿರುವಂತೆ ನಮಗೆ ನಿದ್ರೆ ಆವರಿಸಿಕೊಳ್ಳುತ್ತದೆ. ನಮ್ಮ ತುಟಿಯಲ್ಲಿ ತೈಲಗ್ರಂಥಿಗಳು ಕಂಡು ಬರುವು ದಿಲ್ಲ. ಈ ಕಾರಣದಿಂದ ಚಳಿಯಲ್ಲಿ ನಮ್ಮ ತುಟಿಗಳು ಒಡೆಯುತ್ತವೆ.

ಮಾನವ ದೇಹದಿಂದ ಹೊರಸೂಸುವ ವಾಸನೆ ಒಂದು ಹಂತದ ತನಕ ಅವನ ದೇಹದಲ್ಲಿರುವ ಬೆವರು ಗ್ರಂಥಿಗಳಲ್ಲಿ ಉತ್ಪನ್ನವಾಗುವ ಕೊಬ್ಬು ದ್ರವವನ್ನು ಅವಲಂಬಿಸಿರುತ್ತವೆ. ಆದರೆ ಈ ವಾಸನೆಗೆ ಮುಖ್ಯ ಕಾರಣ ಜೀವಾಣುಗಳಾಗಿವೆ. ಈ ಜೀವಾಣುಗಳು ಬೆವರಿನ ಮುಖಾಂತರ ಬೆಳೆಯುತ್ತವೆ.ಪ್ರತಿಯೊಬ್ಬ ಮನುಷ್ಯನ ತ್ವಚೆಯಲ್ಲಿ ನಿಸರ್ಗದಲ್ಲಿ ಕಂಡುಬರುವ ಅದೆಷ್ಟೋ ಲಕ್ಷಾಂತರ ಬಗೆಯ ಜೀವಾಣುಗಳು ಕಂಡುಬರುತ್ತವೆ.ನಮ್ಮ ಹೃದಯದ ಮಾಂಸಖಂಡಗಳು ದೇಹದ ಮಾಂಸ ಖಂಡಗಳಿಗಿಂತ ಹೆಚ್ಚು ಬಲಶಾಲಿಯಾಗಿರುತ್ತವೆ. ಹೃದಯ ಒಂದು ನಿಮಿಷದಲ್ಲಿ 72ಸಲ ಮಿಡಿಯುತ್ತದೆ. ಇದರ ಜತೆ-ಜತೆಗೆ ಪ್ರತಿ ಗಂಟೆಗೆ ಸುಮಾರು 340 ಲೀಟರ್‌ನಷ್ಟು ರಕ್ತವನ್ನು ಪಂಪ್ ಮಾಡುತ್ತದೆ.

ನಮ್ಮ ಕಣ್ಣುಗಳ ರೆಪ್ಪೆಗಳು ಬಡಿಯುವುದು ಒಂದು ಅನೈಚ್ಛಿಕ ಕ್ರಿಯೆ. ಪ್ರತಿ 6 ಸೆಕಂಡಿಗೊಮ್ಮೆ ರೆಪ್ಪೆಗಳು ಬಡಿಯುತ್ತವೆ. ಮನುಷ್ಯ ನೋಡಲು ತನ್ನ ಬಲಗಣ್ಣನ್ನು ಶೇ.65 ರಷ್ಟು ಉಪಯೋಗಿಸುತ್ತಾನಾದರೆ, ಎಡಗಣ್ಣನ್ನು ಶೇ.32ರಷ್ಟು ಮಾತ್ರ ಉಪಯೋಗಿಸುತ್ತಾನೆ. ಎರಡೂ ಕಣ್ಣುಗಳನ್ನು ಏಕಕಾಲಕ್ಕೆ ಬಳಸುವುದು ಶೇ.3ರಷ್ಟು ಸಂದರ್ಭದಲ್ಲಿ ಮಾತ್ರ. ಇದು ಗೊತ್ತಿಲ್ಲದಂತೆಯೇ ನಡೆಯುವ ಪ್ರಕ್ರಿಯೆ.ನಮ್ಮ ಕಣ್ಣುಗಳಲ್ಲಿ ಬರುವ ಕಣ್ಣೀರಿನಲ್ಲಿ ಲೈಸೊಜೈಮ್ ಎಂಬ ಕಿಣ್ವಗಳಿದ್ದು, ಅದು ಕ್ರಿಮಿನಾಶಕವಾಗಿದ್ದು, ಕ್ರಿಮಿ ಕೀಟಗಳಿಂದ ಕಣ್ಣನ್ನು ರಕ್ಷಿಸುತ್ತದೆ.

ಒಬ್ಬ ವಯಸ್ಕ ಮನುಷ್ಯನ ಯಕೃತ್ತಿನ ಭಾರ 1.5 ಕಿಲೋ ಗ್ರಾಂ ಆಗಿರುತ್ತದೆ. ಈ ಯಕೃತ್ತು ‘ಪಿತ್ತ’ ಎಂಬ ಪಾಚಕ ಕಿಣ್ವಗಳನ್ನು ಉತ್ಪಾದಿಸುತ್ತದೆ. ಯಕೃತ್ತಿನ ಮಹತ್ವದ ಕೆಲಸವೆಂದರೆ ರಕ್ತದಲ್ಲಿ ಮಿಶ್ರಣಗೊಳ್ಳುವ ಹಾನಿಕಾರಕ ರಾಸಾಯನಿಕ ಘಟಕಗಳನ್ನು ನಾಶಗೊಳಿಸುವುದಾಗಿರುತ್ತದೆ. ವಿಟಮಿನ್‌ಗಳು, ಕಬ್ಬಿಣಾಂಶ ಹಾಗೂ ತಾಮ್ರದ ಅಂಶವನ್ನು ಒಗ್ಗೂಡಿಸಲು ಭಂಡಾರದ ರೂಪದಲ್ಲೂ ಸಹ ಯಕೃತ್ತು ಕಾರ್ಯ ನಿರ್ವಹಿಸುತ್ತದೆ. ನಮ್ಮ ದೇಹದಲ್ಲಿ 24 ಘಟಕಗಳು ಇರುತ್ತವೆ. ಅದರಲ್ಲಿ ಜಲಜನಕದ ಪ್ರಮಾಣ ಶೇ.63ರಷ್ಟು ಹಾಗೂ ಆಮ್ಲಜನಕದ ಪ್ರಮಾಣ ಶೇ.25ರಷ್ಟು.

1972ರಲ್ಲಿ 4 ಹೊಸ ಘಟಕಗಳನ್ನು ಶೋಧಿಸಲಾಯಿತು. ಅವೆಂದರೆ-ಫ್ಲೋರಿನ್, ಸಿಲಿಕಾನ್, ಟಿನ್ ಮತ್ತು ಬೆನಿಡಿಯಂ. ಮಾನವ ದೇಹದಲ್ಲಿ ಶೇ.40 ರಷ್ಟು ನೀರು ಇರುತ್ತದೆ. ನಮ್ಮ ಜೀವಕೋಶಗಳಲ್ಲಿ 25ಲೀ., ರಕ್ತದ ಪ್ಲಾಸ್ಮಾದಲ್ಲಿ 3 ಲೀ. ಹಾಗೂ ಜೀವಕೋಶಗಳ ಸಮೂಹದಲ್ಲಿ 12 ಲೀಟರ್ ನೀರು ಇರುತ್ತದೆ.ನಮ್ಮ ದೇಹದಲ್ಲಿ 4-5 ಲೀಟರ್ ರಕ್ತ, 1 ಲಕ್ಷ ಕಿಲೋ ಮೀಟರ್‌ನಷ್ಟು ಉದ್ದದ ರಕ್ತನಾಳಗಳು ಮತ್ತು 1 ಲಕ್ಷ 30 ಸಾವಿರ ನರನಾಡಿಗಳು ಇರುತ್ತವೆ.ನಮ್ಮ ಕಣ್ಣಿನ ರೆಟಿನಾದಲ್ಲಿ 137 ದಶಲಕ್ಷ ಪ್ರಕಾಶ ಸಂವೇದನಾಶೀಲ ಜೀವಕೋಶಗಳು, ಕಪ್ಪು ಹಾಗೂ ಬಿಳಿ ದೃಷ್ಟಿಗಾಗಿ 90 ದಶಲಕ್ಷ ರಾಡ್ ಜೀವಕೋಶಗಳು ಇರುತ್ತವೆ. ಮಾನವನ ಕಣ್ಣುಗಳ ಬಣ್ಣದ ಸಂವೇದನಾಶೀಲತೆ ಎಷ್ಟೊಂದು ತೀವ್ರವಾಗಿರುತ್ತದೆಂದರೆ ವಿಶೇಷ ಲೆನ್ಸ್‌ನ ಪ್ರಯೋಗವಿಲ್ಲದೆಯೇ ಎರಡೂ ಕಣ್ಣುಗಳ ಸಹಾಯದಿಂದ ಸುಮಾರು 1 ಕೋಟಿ ಬೇರೆ ಬೇರೆ ಬಣ್ಣಗಳ ಪದರುಗಳನ್ನು ಗುರುತಿಸಬಹುದಾಗಿದೆ.

ಮಾನವ ದೇಹದಲ್ಲಿ ಭಾರೀ ದೈಹಿಕ ಒತ್ತಡ, ಅಸಹನೆ ಹಾಗೂ ಮಾನಸಿಕ ಏಕಾಗ್ರತೆಯ ಸಮಯದಲ್ಲಿ ದೈಹಿಕವಾಗಿ ಏಟು ಬಿದ್ದಾಗ ತಕ್ಷಣವೇ ನೋವಿನ ಅನುಭವ ಏಕೆ ಆಗುವುದಿಲ್ಲವೆಂದರೆ ಮಿದುಳು ತಾನಾಗಿಯೇ ನೋವು ನಿವಾರಕ ಎಂಡಾರ್ಫಿನ್ಸ್ ಮತ್ತು ಎನ್‌ಕೆಫಿಲಿನ್ಸ್ ಅನ್ನು ದೇಹದಲ್ಲಿ ಉತ್ಪನ್ನ ಮಾಡುತ್ತದೆ. ಇದೇ ಕಾರಣದಿಂದ ಸೈನಿಕರು ಯುದ್ಧದಲ್ಲಿ ಹೋರಾಡುವ ಸಮಯದಲ್ಲಿ ಮತ್ತು ಆಟಗಾರರು ಆಡುವ ಸಮಯದಲ್ಲಿ ಏಟು ಬಿದ್ದಾಗ ತಕ್ಷಣವೇ ಅವರಿಗೆ ಅದರ ಅನುಭವವಾಗುವುದಿಲ್ಲ.
ಮನುಷ್ಯನ ತ್ವಚೆಯಲ್ಲಿ ಎರ್ಗೋಸ್ಟಿರಾರ್ ಎಂಬ ಪದಾರ್ಥವಿರುತ್ತದೆ. ಅದು ಸೂರ್ಯನ ಅತಿನೇರಳೆ ಕಿರಣಗಳ ಪ್ರಭಾವದಿಂದ ವಿಟಮಿನ್ ‘ಡಿ’ಯಾಗಿ ಪರಿವರ್ತನೆಗೊಳ್ಳುತ್ತದೆ. ಈ ವಿಟಮಿನ್ ಮೂಳೆಗಳಿಗೆ ಅತ್ಯಂತ ಉಪಯುಕ್ತವಾಗಿದೆ.

ಮಾನವ ದೇಹದಲ್ಲಿ ವರ್ಣಿಸಲ್ಪಟ್ಟ ಕೆಲವು ಅದ್ಭುತ ಸಂಗತಿಗಳ ಹೊರತಾಗಿಯೂ ಇನ್ನೂ ಅದೆಷ್ಟೋ ಮಹತ್ವಪೂರ್ಣ ಸಂಗತಿಗಳಿದ್ದು, ಅವನ್ನು ಶಬ್ದಗಳಲ್ಲಿ ಪರಿಪೂರ್ಣವಾಗಿ ಕಟ್ಟಿಹಾಕಲು ಸಾಧ್ಯವಿಲ್ಲ. ಆದರೆ ಇಲ್ಲಿ ವರ್ಣಿಸಲ್ಪಟ್ಟ ಕೆಲವೇ ಸಂಗತಿಗಳಿಂದ ನೀವು ಕೆಲವಷ್ಟು ಲಾಭಗಳನ್ನು ಪಡೆದೇ ಪಡೆಯುವಿರಿ.

ಕೃಪೆ: ಆರೋಗ್ಯ

 




Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್