ವಿಷಮ ಜ್ವರ (ಭಾಗ-1)
mail-img print-img

ವಿಷಮ ಜ್ವರ (ಭಾಗ-1)

- ಡಾ. ಬಿ. ಜಿ. ಚಂದ್ರಶೇಖರ್
ಶುಕ್ರವಾರ - ಜುಲೈ -06-2012

ಈ ಜ್ವರಕ್ಕೆ ಗಡುವಿನ ಜ್ವರ, ಸೊಕ್ಕಂದ ಜ್ವರ, ಸೊಕ್ಕುತೆರ ಜ್ವರ ಎಂಬ ಪರ್ಯಾಯ ಹೆಸರುಗಳಿವೆ.ಇದು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗ.ಒಮ್ಮೊಮ್ಮೆ ಈ ರೋಗ ಮರಣಕ್ಕೂ ಕಾರಣವಾಗಬಹುದು.ಈ ರೋಗವು ಸಾಮಾನ್ಯವಾಗಿ ಒಂದುಸಾವಿರ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಂಡರೆ,ಒಂದು ಲಕ್ಷ ಜನರಲ್ಲಿ 7ಜನರು ಸಾವಿಗೀಡಾಗಬಹುದು. ಈ ರೋಗವು ಪರಿಸರ ನೈರ್ಮಲ್ಯದ ಅಳತೆಗೋಲು.ಗ್ರಾಮೀಣ ಪ್ರದೇಶದಲ್ಲಿ, ವ್ಯವಸಾಯ ಉದ್ಯೋಗದಲ್ಲಿ ನೈರ್ಮಲ್ಯದ ಕೊರತೆಯಿಂದ, ನೀರು, ಆಹಾರ, ಹಾಲು ಕಲುಷಿತವಾಗುವುದರಿಂದ, ನೊಣಗಳ ಸಂತತಿ ಹೆಚ್ಚಿರುವುದರಿಂದ, ರೋಗ ಕಾರಕಗಳು ಮಣ್ಣಿನಲ್ಲಿ ದೀರ್ಘಾವಧಿಯವರೆಗೆ ಬದುಕುಳಿಯವುದರಿಂದ ರೈತರಲ್ಲಿ ಈ ರೋಗ ಹೆಚ್ಚು.ಕೆಲವು ಪ್ರದೇಶಗಳಲ್ಲಿ ಈ ರೋಗವು ವರ್ಷವಿಡೀ ಕಡಿಮೆ ಪ್ರಮಾಣದಲ್ಲಿದ್ದು, ಒಮ್ಮೊಮ್ಮೆ ಸಾಧಾರಣದಿಂದ ದೊಡ್ಡ ಪ್ರಮಾಣದವರೆಗೆ ಇದ್ದು, ಒಮ್ಮೊಮ್ಮೆ ಪಿಡುಗಿನ ರೂಪವನ್ನು ಸಹ ತಾಳಬಹುದು.

ರೋಗ ಕಾರಕಗಳು: ಈ ರೋಗವು ಸ್ಯಾಲ್ಮನೆಲ್ಲಾ ಟೈಫಿ (Salmonella Typhi)ಎಂಬ ಬ್ಯಾಕ್ಟೀರಿಯದಿಂದ ಬರುತ್ತದೆ. ಅತಿಯಾದ ಶಾಖದಲ್ಲಿ ಈ ರೋಗಾಣುಗಳು ತತ್‌ಕ್ಷಣ ನಾಶವಾಗುತ್ತವೆ.ಆದರೆ ಅದು ಒಣಗುವು ದರಿಂದ ಅಥವಾ ಶೈತ್ಯದಲ್ಲಿಡುವುದರಿಂದ ನಾಶವಾಗುವುದಿಲ್ಲ.ಶುದ್ಧವಾದ ನೀರಿನಲ್ಲಿ, ಮಣ್ಣಿನಲ್ಲಿ ಮತ್ತು ನೊಣಗಳ ದೇಹದಲ್ಲಿ ಅನೇಕ ದಿವಸಗಳವರೆಗೆ ಬದುಕಿರುತ್ತವೆ.ಹಾಲು, ಹಾಲಿನಿಂದ ತಯಾರಿಸಿದ ಪದಾರ್ಥಗಳು ಮತ್ತು ಶೆಲ್‌ಫಿಶ್‌ನಲ್ಲಿ ಹೆಚ್ಚು ಕಾಲ ಬದುಕಿರುತ್ತವೆ ಹಾಗೂ ಸಂಖ್ಯೆಯಲ್ಲಿ ಹೆಚ್ಚುತ್ತವೆ.ಆದರೂ ಸಹ ಆ ವಸ್ತುಗಳ ಬಣ್ಣ, ವಾಸನೆ ಮತ್ತು ರುಚಿಯಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.

ಕುಮುಲು ಕಾಲ: ರೋಗಕಾರಕಗಳು ಮಾನವರ ದೇಹವನ್ನು ತಲುಪಿದ ನಂತರ 10-14 ದಿವಸಗಳು ರೋಗ ಲಕ್ಷಣಗಳು ಕಂಡು ಬರುತ್ತವೆ.ಕೆಲವೊಮ್ಮೆ 7ರಿಂದ 21ದಿವಸಗಳವರೆಗೆ ಹಿಡಿಯಬಹುದು.ಈ ರೋಗವು ಚಿಕ್ಕ ಮಕ್ಕಳು ಮತ್ತು ಇಳಿ ವಯಸ್ಸಿನವರನ್ನು ಕಾಡುವ ಸಾಧ್ಯತೆ ಕಡಿಮೆಯಿದ್ದು ಹದಿಹರೆಯದವರು ಮತ್ತು ಯುವಾವಸ್ಥೆಯಲ್ಲಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರಲ್ಲೂ ಪುರುಷರಿಗಿಂತ ಸ್ತ್ರೀಯರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಪರಿಸರ: ಬೇಸಿಗೆಯ ಅಂತ್ಯ ಮತ್ತು ಮಳೆಗಾಲದ ಪ್ರಾರಂಭದಲ್ಲಿ ಅಂದರೆ ಜುಲೈನಿಂದ ಸೆಪ್ಟಂಬರ್‌ವರೆಗೆ ಈ ರೋಗ ಬೇರೆ ಸಮಯಕ್ಕಿಂತಲೂ ಹೆಚ್ಚಾಗಿ ಹರಡುತ್ತದೆ.ಸಿಕ್ಕ ಸಿಕ್ಕಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದರಿಂದ ನೀರು, ಆಹಾರ ಕಲುಷಿತವಾಗುತ್ತದೆ. ಅಜ್ಞಾನ, ಅನಕ್ಷರತೆ, ವೈಯಕ್ತಿಕ ಆರೋಗ್ಯದ ಬಗ್ಗೆ ನಿರ್ಲಕ್ಷ, ಅತಿಯಾದ ಜನಸಂದಣಿ, ಕಳಪೆ ಮಟ್ಟದ ವಾಸದ ಮನೆ ಮುಂತಾದವುಗಳು ರೋಗಾಣುಗಳ ಪ್ರಸಾರಕ್ಕೆ ಮಾಧ್ಯಮವಾಗಿರುತ್ತವೆ.

ರೋಗ ಪ್ರಸಾರ:ಈ ರೋಗ ಕಾರಕಗಳು ಕಲುಷಿತ ವಸ್ತುಗಳ ಮೂಲಕ ದೇಹವನ್ನು ಪ್ರವೇಶಿಸಿ, ವಿವಿಧ ಅಂಗಗಳಾದ ಕರುಳು, ಪಿತ್ತಕೋಶ, ಮೂತ್ರಕೋಶಗಳಲ್ಲಿ ಸೇರಿ ಕಾರ್ಯಾರಂಭಿಸುತ್ತವೆ.ರೋಗ ಪೀಡಿತ ವ್ಯಕ್ತಿಯ ಮಲ-ಮೂತ್ರ ವಿಸರ್ಜನೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ.ಕಲುಷಿತ ನೀರು, ಹಸಿ ಹಾಲು, ಶೆಲ್‌ಫಿಶ್ ಮತ್ತು ಚೆನ್ನಾಗಿ ಬೇಯಿಸದ ತರಕಾರಿಗಳ ಮೂಲಕ ಸಹ ಮತ್ತೊಬ್ಬರನ್ನು ಸೇರುತ್ತವೆ.

ರೋಗ ಲಕ್ಷಣಗಳು: ಮಕ್ಕಳು ಅಥವಾ ಹದಿಹರೆಯದವರು ಜ್ವರದಿಂದ ನರಳುತ್ತಿದ್ದರೆ, ಅದರಲ್ಲೂ ಜ್ವರವು ಒಂದೇ ಸಮನೆ 24ಗಂಟೆಗಳೂ ಇದ್ದರೆ,ಜ್ವರ ಕಡಿಮೆಯಾಗುವ ಮಾತ್ರೆ ತೆಗೆದುಕೊಂಡರೂ ಕಡಿಮೆಯಾಗದೆ ಸಾವಕಾಶವಾಗಿ ಹೆಚ್ಚಾಗುತ್ತಿದ್ದರೆ, ಜ್ವರದ ಜೊತೆ ಶ್ವಾಸಕೋಶ ಅಥವಾ ಕರುಳಿನ ರೋಗ ಲಕ್ಷಣಗಳಿದ್ದರೆ, ರೋಗಿಯು ಮಂಕಾಗಿದ್ದು ಮುಖದಲ್ಲಿ ಯಾವ ಭಾವನೆಗಳನ್ನೂ ತೋರದಿದ್ದರೆ ಇದನ್ನು ವಿಷಮಜ್ವರ ಎಂದು ಅನುಮಾನಿಸಿ ಪರೀಕ್ಷೆ ಮಾಡಬೇಕು.ನಾಲಿಗೆಯ ಮೇಲೆ ಬಿಳಿಯ ಬಣ್ಣ (Coated), ಒಣಗಿದ ತುಟಿಗಳು, ಚರ್ಮದ ಮೇಲೆ ಗಂದೆ ಇರುತ್ತದೆ. ಕುತ್ತಿಗೆಯ ಬಿಗಿತ ಸಹ ಇರಬಹುದು. ಈ ಲಕ್ಷಣಗಳು ಸರ್ವೇಸಾಮಾನ್ಯ.

ಕೃಪೆ: ಆರೋಗ್ಯ

 





Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಅಗ್ಗದ ಮದ್ಯಕೆ ಶುದ್ಧ ನೀರು ಬೆರೆಸಿ ಕುಡಿವ ವೇಳೆಗೆ ಸೌಭಾಗ್ಯದ ಸೋನಿಯಾ ಬಾರಮ್ಮಾ...

ಕಳಂಕಿತರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಭೇಷ್ ಅನಿಸಿಕೊಂಡ ಸಿದ್ದು, ಖಾತೆ ಹಂಚಿಕೆಯಲ್ಲ ...


- ಪಿ.ಕೆ.ಮಲ್ಲನಗೌಡರ್‌

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್