ಚಿಕ್ಕ ಕುಟುಂಬದ ಅಡ್ಡ ಪರಿಣಾಮಗಳು
mail-img print-img

ಚಿಕ್ಕ ಕುಟುಂಬದ ಅಡ್ಡ ಪರಿಣಾಮಗಳು

- ಮೋಹನ್ ಆರ್.
ಶುಕ್ರವಾರ - ಜುಲೈ -20-2012

ಕುಟುಂಬಕ್ಕೆ ಯಾವ ಮಹತ್ವವಿರುತ್ತದೆ ಎಂಬುದನ್ನು ಭಾರತದಲ್ಲಿರುವ ಪ್ರತಿಯೊಬ್ಬರೂ ಬಲ್ಲರು. ನಮ್ಮ ಈ ಸಂಸ್ಕೃತಿ ನಮ್ಮನ್ನು ಪಾಶ್ಚಾತ್ಯರಿಗಿಂತ ವಿಭಿನ್ನ ಎಂಬ ರೀತಿ ತೋರಿಸಿಕೊಟ್ಟಿದೆ. ಆದರೆ ಬದಲಾಗುತ್ತಿರುವ ಕಾಲದ ಬೇಡಿಕೆ ನಮ್ಮ ಕುಟುಂಬದ ಸ್ವರೂಪವನ್ನು ಬದಲಿಸಿ ಬಿಟ್ಟಿದೆ. ಅಂದರೆ ನಗರೀಕರಣದ ಪ್ರಭಾವದಿಂದ ಕುಟುಂಬ ಎಂದರೆ ತಂದೆ-ತಾಯಿ ಒಂದು ಅಥವಾ ಎರಡು ಮಕ್ಕಳು ಎಂಬಷ್ಟೇ ಆಗಿಬಿಟ್ಟಿದೆ. ಹೊಸ ಕುಟುಂ ಬದಲ್ಲಿ ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ, ಇವರ್ಯಾರಿಗೂ ಸ್ಥಾನ ಇಲ್ಲ.ಚಿಕ್ಕ ಕುಟುಂಬವನ್ನು ಪ್ರಸ್ತುತ ‘ನ್ಯೂಕ್ಲಿಯರ್ ಫ್ಯಾಮಿಲಿ’ ಎಂದೂ ಕರೆಯಲಾಗುತ್ತದೆ. ಆದರೆ ಈ ನ್ಯೂಕ್ಲಿಯರ್ ಫ್ಯಾಮಿಲಿ ಒಂದಷ್ಟು ಅಡ್ಡಪರಿಣಾಮಗಳಿಗೂ ಜನ್ಮ ನೀಡಿದೆ. ಈ ಅಡ್ಡಪರಿಣಾಮಗಳಲ್ಲಿ ಕೆಲವು ಸಕಾರಾತ್ಮಕವಾಗಿದ್ದರೆ ಮತ್ತೆ ಕೆಲವು ನಕಾರಾತ್ಮಕವಾಗಿವೆ.

ನಕರಾತ್ಮಕ ಮುಖಗಳ ಮೇಲೊಂದು ದೃಷ್ಟಿ.

ಕಾಳಜಿಯೇ ಇರುವುದಿಲ್ಲ: ಇಂದಿನ ಕಾಲಘಟ್ಟದಲ್ಲಿ ಗಂಡ ಹೆಂಡತಿ ಇಬ್ಬರೂ ನೌಕರಿ ಮಾಡುವವರಾಗಿರು ತ್ತಾರೆ. ಇಂತಹುದರಲ್ಲಿ ಒಬ್ಬ ಸಂಗಾತಿಗೆ ಅಥವಾ ಮಗು ವಿಗೆ ಏನಾದರೂ ತೊಂದರೆಯಾದರೆ ಅಥವಾ ಅನಾ ರೋಗ್ಯ ಪೀಡಿತರಾದರೆ ಅವರ ಬಗ್ಗೆ ಕಾಳಜಿ ವಹಿಸಲು ಯಾರ ಬಳಿಯೂ ಸಮಯ ಇರುವುದಿಲ್ಲ. ನೌಕರಿ ಮಾಡುವುದು ಅನಿವಾರ್ಯ ಎಂಬಂತಾಗಿದೆ. ಇಂತಹು ದರಲ್ಲಿ ಮಕ್ಕಳನ್ನು, ದೊಡ್ಡವರನ್ನು ನಿರ್ವಹಿಸುವುದು ಒಂದು ಸವಾಲು ಎಂಬಂತಾಗಿ ಬಿಟ್ಟಿದೆ.

ಮಗುವಿನ ಬಗ್ಗೆ ಗಮನವಿಲ್ಲ: ಚಿಕ್ಕ ಕುಟುಂಬದಲ್ಲಿ ಮಕ್ಕಳ ಯೋಗಕ್ಷೇಮ ವಿಚಾರಿಸಿಕೊಳ್ಳುವುದೇ ಒಂದು ಸಮಸ್ಯೆಯಾಗಿಬಿಟ್ಟಿದೆ. ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಸಂದರ್ಭದಲ್ಲೆಲ್ಲ ಅವರಿಗೆ ಮನೆಯಲ್ಲಿ ಯಾರಾದರೂ ಹಿರಿಯರು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತದೆ. ಮಕ್ಕಳಿಗೆ ಸಕಾಲದಲ್ಲಿ ಊಟ-ತಿಂಡಿ ದೊರೆಯುತ್ತಿತ್ತು. ಅನಾರೋಗ್ಯ ಪೀಡಿತ ರಾದಾಗ ಅವರಿಗೆ ಒಳ್ಳೆಯ ಉಪಚಾರ ಸಿಗುತ್ತಿತ್ತು. ತಂದೆ-ತಾಯಿಯರು ನಿಶ್ಚಿಂತರಾಗಿ ತಮ್ಮ ಕೆಲಸ- ಕಾರ್ಯಗಳಲ್ಲಿ ತೊಡಗುತ್ತಿದ್ದರು.

ಅಸುರಕ್ಷತೆಯ ಭೀತಿ:ಚಿಕ್ಕ ಕುಟುಂಬಗಳಲ್ಲಿ ಸದಾ ತಂದೆ-ತಾಯಿಗಳಿಗೆ ತಮ್ಮ ಮನೆ ಹಾಗೂ ಅಸುರಕ್ಷತೆಯ ಚಿಂತೆ ಕಾಡುತ್ತಿರುತ್ತದೆ. ಒಮ್ಮೆ ಮನೆಯಲ್ಲಿರುವ ಅತ್ಯ ಮೂಲ್ಯ ಸಾಮಾನುಗಳು ಕಳ್ಳತನವಾಗಬಹುದೆಂಬ ಭೀತಿ, ಇನ್ನೊಂದೆಡೆ ಮಕ್ಕಳು ಶಾಲೆಯಿಂದ ಮನೆಗೆ ಸಕಾಲದಲ್ಲಿ ತಲುಪದಿದ್ದರೂ ಚಿಂತೆ. ಇವೆಲ್ಲ ಚಿಕ್ಕ ಚಿಕ್ಕ ಸಂಗತಿಗಳು ಎಂದೆನಿಸುತ್ತವೆ. ಆದರೆ ಅಷ್ಟೇ ಪ್ರಾಮುಖ್ಯತೆ ಪಡೆದಿವೆ. ಇದೇ ಕಾರಣದಿಂದಾಗಿ ಚಿಕ್ಕ ಕುಟುಂಬಗಳಲ್ಲಿಯೇ ಕಳ್ಳತನ ಹಾಗೂ ಕೊಲೆಯಂತಹ ಘಟನೆ ಗಳು ಹೆಚ್ಚುತ್ತಿವೆ. ಏಕೆಂದರೆ ಕಳ್ಳರಿಗೆ ಇಲ್ಲಿ ಯಾರೂ ಹೆಚ್ಚು ಪ್ರತಿರೋಧ ತೋರಿಸುವುದೇ ಇಲ್ಲ.

ಭಾವನಾತ್ಮಕ ಆಧಾರದ ಕೊರತೆ: ಜೀವನದಲ್ಲಿ ಎಂತಹ ಕೆಲವು ಸಂದರ್ಭಗಳು ಬರುತ್ತವೆಂದರೆ, ಕೆಲ ವೊಮ್ಮೆ ತಡೆಯಲಾರದ ಯಾತನೆಯುಂಟಾದಾಗ ದೊಡ್ಡ ವರ ಭಾವನಾತ್ಮಕ ಆಸರೆ ಬೇಕು ಎಂದು ಅನಿಸುತ್ತದೆ. ಅವರ ಮಾರ್ಗದರ್ಶನ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಇನ್ನು ಗಂಡ-ಹೆಂಡತಿಯರ ಪರಸ್ಪರ ಘರ್ಷಣೆಯ ಸಂದರ್ಭದಲ್ಲಿ ದೊಡ್ಡವರ ತಿಳುವಳಿಕೆ ಬಹಳ ಕೆಲಸಕ್ಕೆ ಬರುತ್ತದೆ. ಏಕೆಂದರೆ ಅವರು ಪರಿಸ್ಥಿತಿ ಯನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಅರ್ಥ ಮಾಡಿ ಕೊಳ್ಳುತ್ತಾರೆ ಹಾಗೂ ನಮಗಿಂತಲೂ ಚೆನ್ನಾಗಿ ಅವನ್ನು ನಿರ್ವಹಿಸಲು ತಿಳಿದಿರುತ್ತಾರೆ.

ಮೂಲ ಸಂಸ್ಕಾರಗಳೊಂದಿಗೆ ಹೊಂದಿಕೊಳ್ಳುವುದಿಲ್ಲ: ಎಲ್ಲಾ ವಿಚಾರಗಳು ಕಂದಾಚಾರದಿಂದ ಕೂಡಿರುವುದಿಲ್ಲ. ನಮ್ಮ ಪರಂಪರೆಯಲ್ಲಿ ತಿಳಿಯಬೇಕಾದ, ಕಲಿಯಬೇಕಾದ ಎಷ್ಟೋ ಸಂಗತಿಗಳಿವೆ. ನಮ್ಮ ಹಬ್ಬಗಳು ಹಾಗೂ ಅವು ಗಳಿಗೆ ಸಂಬಂಧಪಟ್ಟ ಹಲವು ಕಥೆಗಳು ಇರುತ್ತವೆ. ಅವುಗಳಿಂದ ಬಹಳಷ್ಟನ್ನು ಕಲಿತುಕೊಳ್ಳಬಹು ದಾಗಿದೆ. ಆದರೆ ಇದು ಸಾಧ್ಯವಾಗುವುದು ದೊಡ್ಡವರು ನಮ್ಮ ಜತೆ ಗಿದ್ದಾಗ ಮಾತ್ರ. ಚಿಕ್ಕ ಕುಟುಂಬದಲ್ಲಿ ನಾವು ಇದೆಲ್ಲದ ರಿಂದ ವಂಚಿತರಾಗುತ್ತೇವೆ. ಭಾವನೆ ಹಂಚಿಕೊಳ್ಳುವ ಹಾಗೂ ಕಾಳಜಿಯ ಕೊರತೆ: ಕುಟುಂಬ ನಮಗೆ ಪರಸ್ಪರ ಸುಖ-ದುಃಖಗಳಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಭಾವನೆ ಹಂಚಿಕೊಳ್ಳಲು ಹಾಗೂ ಪರಸ್ಪರರ ಬಗ್ಗೆ ಕಾಳಜಿ ವಹಿಸುವುದನ್ನು ಕಲಿಸುತ್ತದೆ. ಆದರೆ ಚಿಕ್ಕ ಕುಟುಂಬದಲ್ಲಿ ದೊಡ್ಡವರಾಗಲಿ, ಚಿಕ್ಕವರಾಗಲಿ ಇದನ್ನು ಕಲಿತುಕೊಳ್ಳುವುದಿಲ್ಲ.ನ್ಯೂಕ್ಲಿಯರ್ ಅಥವಾ ಚಿಕ್ಕ ಕುಟುಂಬದಿಂದ ಕೇವಲ ನಕಾರಾತ್ಮಕ ಪ್ರಭಾವವಷ್ಟೇ ಉಂಟಾಗುವುದಿಲ್ಲ ಅದರ ಕೆಲವು ಸಕಾರಾತ್ಮಕ ಪ್ರಭಾವಗಳು ಕೂಡ ಇವೆ.

ಸಕಾರಾತ್ಮಕ ಪರಿಣಾಮ

ಪ್ರೈವೆಸಿ: ಈಗ ಪ್ರತಿಯೊಬ್ಬರೂ ತಮ್ಮ ಪ್ರೈವೆಸಿಯನ್ನು ಅಪೇಕ್ಷಿಸುತ್ತಾರೆ. ಚಿಕ್ಕ ಕುಟುಂಬದಲ್ಲಿ ಇದೆಲ್ಲ ನಿಮಗೆ ಅವಶ್ಯವಾಗಿ ದೊರೆಯುತ್ತದೆ.ನಿಮ್ಮದೇ ಆದ ರೀತಿಯಲ್ಲಿ ಜೀವಿಸಲು ನಿಮಗೆ ಸ್ವಾತಂತ್ರ ಕೊಡುತ್ತದೆ.

ಆರ್ಥಿಕ ಸ್ವಾತಂತ್ರ: ಅವಿಭಕ್ತ ಕುಟುಂಬದಲ್ಲಿ ಖರ್ಚುಗಳು ಹೆಚ್ಚಾಗುತ್ತದೆ. ಮನೆಯಲ್ಲಿ ಸಾಕಷ್ಟು ಜನರಿದ್ದರೆ, ಅನೇಕ ಮಕ್ಕಳಿದ್ದರೆ ಯಾರಿಗಾದರೂ, ಏನನ್ನಾದರೂ ತರಲು ಆಗುವುದಿಲ್ಲ.ಉಳಿದವರ ಬಗೆಗೂ ಕಾಳಜಿ ವಹಿಸಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಖರ್ಚುಗಳು ಹೆಚ್ಚುತ್ತವೆ. ಅದೇ ಚಿಕ್ಕ ಕುಟುಂಬದಲ್ಲಿ ಎಲ್ಲದಕ್ಕೂ ಸ್ವಾತಂತ್ರ ಇರುತ್ತದೆ. ನಿಮ್ಮ ಲೆಕ್ಕಾಚಾರಕ್ಕನುಗುಣವಾಗಿ ನಿಮ್ಮ ಸಂಗಾತಿ ಹಾಗೂ ಮಗುವಿಗೆ ಖರ್ಚು ಮಾಡಬಹುದು.

ಆತ್ಮವಿಶ್ವಾಸ ಹೆಚ್ಚುತ್ತದೆ: ಏಕಾಂಗಿಯಾಗಿದ್ದಾಗ ಎಲ್ಲ ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕಡಿಮೆ ವಯಸ್ಸಿನಲ್ಲಿಯೇ ಮಕ್ಕಳು ಸ್ವತಃ ಹಲವು ಕೆಲಸಗಳನ್ನು ಮಾಡಲು ಕಲಿಯುತ್ತಾರೆ.

ಶಿಸ್ತು ಬರುತ್ತದೆ: ನಿಮ್ಮದೇ ಆದ ಒಂದು ನಿಯಮಿತ ಕಟ್ಟುನಿಟ್ಟಿನ ಜೀವನ ಶೈಲಿ ರೂಪಿಸಿಕೊಂಡಿರುತ್ತೀರಿ. ಶಿಸ್ತನ್ನು ಮಕ್ಕಳು ಸಹಿತವಾಗಿ ಎಲ್ಲರೂ ಪಾಲಿಸುತ್ತಾರೆ.

ವೈಯಕ್ತಿಕ ಕಾಳಜಿ:  ಸಂಗಾತಿಯ ವಿಷಯವೇ ಆಗಿರಬಹುದು. ಮಕ್ಕಳ ವಿಷಯವೇ ಇರಬಹುದು. ಇಲ್ಲಿ ವೈಯಕ್ತಿಕ ಕಾಳಜಿ ವಹಿಸಬಹುದು. ಇದರಿಂದ ಪರಸ್ಪರ ಪ್ರೀತಿ ಹೆಚ್ಚುತ್ತದೆ.

ಮನೆ ಜನಗಳ ಹಾಗೂ ಒತ್ತಡ ಕಡಿಮೆಯಾಗುತ್ತದೆ: ಎಲ್ಲರೂ ಜತೆ ಜತೆಗಿದ್ದರೆ, ಚಿಕ್ಕ-ಪುಟ್ಟ ಮಾತುಗಳು ಕೂಡ ಜಗಳಕ್ಕೆ ಕಾರಣವಾಗುತ್ತವೆ. ನೀವು ಏಕಾಂಗಿಯಾಗಿದ್ದರೆ ಆ ಕೆಲಸವನ್ನು ನೀವೇ ಮಾಡಬೇಕೆಂದು ಗೊತ್ತಿರುತ್ತದೆ ಹಾಗೂ ಅದರ ಫಲಿತಾಂಶದ ಅರಿವೂ ಇರುತ್ತದೆ.





Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮುಂಗಾರಿನ ಆಗಮನ:ಸರಕಾರ ಜೋಪಾನ

ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು