
ಸಂಸರಂಗ ಸಂಭ್ರಮ 2012ರ ಪ್ರಯುಕ್ತ ಧಾರವಾಡ ರಂಗ ಪರಿಷತ್ತು ವತಿಯಿಂದ ಡಾ.ಕಲಬುರ್ಗಿ ಸಂಗ್ರಹ ಮತ್ತು ರಚನೆಯ ‘ಖರೇ ಖರೇ ಸಂಗ್ಯಾ ಬಾಳ್ಯ’ ನಾಟಕವನ್ನು ಇತ್ತೀಚೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಯೋಗಿಸಲಾಯಿತು. ನಾಟಕವು ಬೈಲಹೊಂಗಲದ ಒಂದು ಸತ್ಯ ಘಟನೆ ಆಧರಿಸಿದ ಜಾನಪದ ಕಥೆಯಾಗಿದ್ದು, ಇಲ್ಲಿ ಅದೇ ಊರಿನ ಪತ್ತಾರ ರಾಯಪ್ಪ ಮಾಸ್ತರನು ಗಂಗಾ ಎಂಬ ಈರಣ್ಣನ ಹೆಂಡತಿಯಲ್ಲಿ ಮೋಹವುಳ್ಳವನಾಗಿ ತನ್ನ ಅಭಿಲಾಶೆ ವ್ಯಕ್ತಪಡಿಸಿದಾಗ ಆಕೆ ಇವನನ್ನು ತಿರಸ್ಕರಿಸುತ್ತಾಳೆ. ಕೋಪಗೊಂಡ ಪತ್ತಾರ ರಾಯಪ್ಪನು ಗಂಗಾ ನದಿಯಂತಹ ಪವಿತ್ರಳಾದ ಈಕೆಯ ಮೇಲೆ ಸುಳ್ಳು ಅಪಾದನೆ ಹೊರೆಸಿ, ಈಕೆ ಕುಟುಂಬದ ಗೆಳೆಯ ಸಂಗ್ಯಾನ ಜೊತೆ ದೈಹಿಕ ಸಂಬಂಧ ಹೊಂದಿದ್ದಾಳೆಂದು ಗುಲ್ಲೆಬ್ಬಿಸಿ ಗಂಗೆಯನ್ನು ತೌರು ಮನೆಗೆ ಸೇರಿಸಿದರೂ ಕೋಪ ಶಮನವಾಗದೆ ಆಕೆಯ ಮೇಲೆ ಸುಳ್ಳು ಸಂಗ್ಯಾ ಬಾಳ್ಯ ನಾಟಕ ರಚಿಸಿ ಆಡಿಸುತ್ತಾ ಈಕೆಯ ಕಳಂಕವನ್ನು ಜೀವಂತ ಇಟ್ಟಿರುತ್ತಾನೆ. ಹೀಗೆ ಸುಳ್ಳನ್ನೇ ಸತ್ಯ ಮಾಡಿದ ಎಂಬುದು ನಾಟಕದ ಕಥೆ.ಚಂದ್ರಶೇಖರ ಕಂಬಾರರ ‘ಸಂಗ್ಯಾ ಬಾಳ್ಯ’ವನ್ನು ಜಾನಪದದಿಂದ ಸಂಗ್ರಹಿಸಿ ಪರಿಷ್ಕರಿಸಿ ನಾಟಕ ರೂಪಕ್ಕೆ ತರುವುದಕ್ಕೆ ಮುಂಚಿನಿಂದಲೂ ಸಂಗ್ಯಾ ಬಾಳ್ಯ ನಾಟಕ ಇತ್ತು.
ಕಲಬುರ್ಗಿ ಅವರು ರಚಿಸಿದ ಖರೇ ಖರೇ ಸಂಗ್ಯಾ ಬಾಳ್ಯ(ನಿಜವಾದ ಸಂಗ್ಯಾ ಬಾಳ್ಯ) ರಂಗ ಕೃತಿ ಗಮನಿಸಿದಾಗ, ರಂಗ ಮದ್ಯದಲ್ಲಿ ಈರಣ್ಣನ ಮನೆಯ ಬಾಗಿಲು, ಜಗುಲಿ ಹಾಗೂ ಪತ್ತಾರ ರಾಯಪ್ಪನ ಚಿನ್ನದ ಅಂಗಡಿಯ ಸೆಟ್ ಇದೆ. ಹಾಗೆ ಕೆಳ-ಬಲ ರಂಗದಲ್ಲಿ ಮೇಳ ಕುಳಿತು ವಿಘ್ನ ನಿವಾರಕ ಗಜವದನನ... ಸ್ಮರಣೆಯೊಂದಿಗೆ ಪ್ರಯೋಗ ರಂಗಕ್ಕೆ ತೆರೆದುಕೊಳ್ಳುತ್ತದೆ. ಭಾಗವತನು ರಂಗಕ್ಕೆ ಬಂದು ತಾಳ ಮೇಳ ಬರೋಬ್ರಿ ಐತೇನಪ್ಪ ಆಟ ಶುರು ಮಾಡೋಣಪ್ಪ ಎನ್ನುತ್ತಿದ್ದಂತೆ ಪಂಚೆ ಶರಟು ತೊಟ್ಟ ಇಬ್ಬರು ಕಲಾವಿದರು ನೃತ್ಯದೊಂದಿಗೆ ರಂಗಪ್ರವೇಶ ಮಾಡಿ ನಾಟಕದ ಪಾತ್ರವಾಗುತ್ತಿದ್ದಂತೆ, ಪ್ರೇಕ್ಷಕರ ಮಧ್ಯದಿಂದ ಒಬ್ಬ ವಯಸ್ಸಾದ ಗಡ್ಡಧಾರಿ ಅಜ್ಜ ಕೋಲು ಹಿಡಿದು ರಸವಾಗಿ ರಂಗಕ್ಕೆ ನುಗ್ಗಿ ಯಾರು ಹೇಳ್ಯಾರ ಆಟ ಆಡೋಕೆ ಎಂದಾಗ ಕಲಾವಿದರು ನಾವೇ ನಿರ್ಧಾರ ಮಾಡಿವಿ... ಎಂದಾಗ ಅಜ್ಜ ಆಡೋರು ಬುದ್ದಿ ಗೇಡಿಗಳು, ನೋಡೋರು ನೀತಿಗೇಡಿಗಳು ಬರದೋರು ಕಿಡಿಗೇಡಿಗಳು... ಅಕ್ಷರ ಬೆಂಕಿ... ಸಾಹಿತಿ ಸತ್ಯ ನಾಶ ಮಾಡಬಾರದು ಎನ್ನುವ ಮಾತಿನೊಂದಿಗೆ ನಾಟಕ ಜೀವ ತಾಳುತ್ತದೆ.
ಈ ಮೇಲೆ ಕಲ್ಬುರ್ಗಿ ಅವರು ಹೇಳಿದ ಮಾತುಗಳೇ ಇಲ್ಲಿ ಸಂಭಾಷಣೆ ಆಗಿರುವುದನ್ನು ಕಾಣಬಹುದು.ಎರಡುವರೆ ಗಂಟೆಯ ಈ ನಾಟಕವನ್ನು ನಿರ್ದೇಶಕ ವಿಠಲಕೊಪ್ಪದ ಅವರು ಒಂದೂವರೆ ಗಂಟೆಗೆ ಇಳಿಸಿದ್ದು, ನಾಟಕ ಕೃತಿಗೆ ನಿಷ್ಠವಾಗಿ ಪ್ರಯೋಗ ಕಟ್ಟಿರುವುದು ಗೋಚರಿಸುತ್ತದೆ.ಪ್ರತಿಯೊಂದು ದೃಶ್ಯಗಳಿಗೂ ಪೂರಕವಾಗಿ ಮೇಳದ ಬಳಕೆ ಚೆನ್ನಾಗಿದ್ದರೂ ಮೂಲತಃ ಭಜನೆ ಮಾಡುವವರೆ ಮೇಳದಲ್ಲಿದ್ದುದರಿಂದ ಎಲ್ಲ ಹಾಡುಗಳು ಗೀಗೀಪದದ ಧಾಟಿ ಹಾಗೂ ಭಜನೆಯಂತಿತ್ತು.ಪರವ್ವ ಗಂಗೀಯನ್ನು ತಾಳಿಸರ ಮಾಡಿಸಲು ಪತ್ತಾರ ರಾಯಪ್ಪನಲ್ಲಿಗೆ ಕರೆದುಕೊಂಡು ಬರುವ ದೃಶ್ಯದಲ್ಲಿ ಗಂಗೀ ಎಂದು ಕತ್ತಲಲ್ಲಿ ಭ್ರಮಿಸಿ ವಯಸ್ಸಾದ ಪರವ್ವನನ್ನು ಅಪ್ಪಿಕೊಳ್ಳಲು ಪತ್ತಾರ ಪಡುವ ತ್ರಾಸು ಮತ್ತು ಈ ದೃಶ್ಯದಲ್ಲಿ ರಂಗದಲ್ಲಿ ಪರವ್ವಳ ಮಾಗಿದ ಅಭಿನಯ, ವಯಸ್ಸನ್ನು ಮೀರಿದ ದೈಹಿಕ ರಂಗ ಭಾಷೆಯಿಂದ ಗಮನ ಸೆಳೆಯಿತು.
ಆದರೆ ಬೆಳಕು ವಿನ್ಯಾಸ ಪ್ರತಿ ದೃಶ್ಯದ ಭಾವಕ್ಕೆ ಅಡ್ಡ ಪರಿಣಾಮ ಉಂಟು ಮಾಡುತ್ತಿತ್ತು. ಹಾಗೆಯೇ ಗಂಗೀಯ ಮೈದುನರಾದ ವಿರೂಪಾಕ್ಷಿ, ಬಸವಂತ ಅವರು ಅತ್ತಿಗೆಯಲ್ಲಿ ತಾಯಿ ಪ್ರೇಮ ಕಾಣುವುದು. ಆಕೆಯಿಂದ ಪ್ರೀತಿಯ ತುತ್ತು ತಿನ್ನುವ ದೃಶ್ಯ ಪರಿಣಾಮಕಾರಿ ಯಾದರು, ಈ ಇಬ್ಬರು ದಪ್ಪ ಮೀಸೆಯ ವಯಸ್ಸಿನವರು. ಆದರೆ ಸಂಭಾಷಣೆಯಲ್ಲಿ ಇವರನ್ನು ಸಣ್ಣ ಹುಡುಗರು ಎಂದು ಕರೆದ ಮಾತು ಹೊಂದಾಣಿಕೆಯಾಗಲಿಲ್ಲ.
ಸಂಗಣ್ಣ(ಸಂಗ್ಯಾ) ರಂಗ ಪ್ರವೇಶ ಪಡೆದು, ತನ್ನ ಪಳಗಿದ ಅಭಿನಯದಿಂದ (ನೀನಾಸಂ ನ ಮಹಾಂತೇಶ) ಪ್ರೇಕ್ಷಕರ ಗಮನ ತನ್ನತ್ತ ಸೆಳೆದರೂ ಉಳಿದವರ ವಾಸ್ತವದ ಅಭಿನಯದ ಮುಂದೆ ಇವರ ಅಭಿನಯ ಸ್ವಲ್ಪ ಅತೀ ಅನಿಸುತ್ತಿತ್ತು.ಒಟ್ಟಾರೆ ಪ್ರಯೋಗ ಗಮನಿಸಿದಾಗ ಹೆಂಡತಿ ಗಂಗೀ ಹಾಸಿಗೆಯಲ್ಲಿ ಪರವ್ವ ಮೂಲಕ ರಾಯಪ್ಪ ಸಂಗ್ಯಾನ ಎಲೆ ಅಡಿಕೆ ಚೀಲ ಇಟ್ಟು ಗಂಡನಿಗೆ ಅನುಮಾನ ಬರುವಂತೆ ಮಾಡಿ, ಗಂಗೀಯನ್ನು ತೌರಿಗೆ ಅಟ್ಟಿ ಬಡವನಾದ ಬಾಳ್ಯನನ್ನು, ಸಂಗ್ಯಾನನ್ನು ದೇವಸ್ಥಾನಕ್ಕೆ ಕರೆತರಲು ಆಜ್ಞಾಪಿಸುವ ದೃಶ್ಯಗಳು ಪ್ರೇಕ್ಷಕರಲ್ಲಿ ವಿಸ್ಮಯ ಹುಟ್ಟು ಹಾಕಿದರೂ ಒಟ್ಟಾರೆ ಪ್ರಯೋಗ ಹಳ್ಳಿಯಲ್ಲಿ ರಾತ್ರಿ ಇಡೀ ಹಿನ್ನೆಲೆ ಸಂಗೀತದಲ್ಲಿ ನಿಧಾನವಾಗಿ ಚಲಿಸುವ ದೃಶ್ಯಗಳಂತೆ ಒಟ್ಟು ಪ್ರಯೋಗ ಅನಾವರಣವಾಯಿತು.
ರಂಗ ಕೃತಿಯಲ್ಲಿ ಒಂದು ನಿರಂತರ ಒಘ ಹಾಗೂ ಟೆಂಪೋ ಕಾಣಲಿಲ್ಲ. ಘಟನೆಗಳು ರಂಗದಲ್ಲಿ ಘಟಿಸುವಾಗ ಕ್ಷಣಕ್ಷಣದ ತುಡಿತ. ಒಂದು ಕ್ಷಣ ಪ್ರೇಕ್ಷಕ ಅತ್ತಿತ್ತವಾಲದಂತೆ ಪ್ರಯೋಗ ಪ್ರೇಕ್ಷಕರನ್ನು ಹಿಡಿದಿಟ್ಟು ಒಂದು ಅಮೋಘವಾದ ನಾಟಕಾನುಭವ ನೀಡಬೇಕು. ಜೊತೆಗೆ ನಾಟಕಕಾರನ ಆಶಯಕ್ಕೆ ನಿರ್ದೇಶಕನ ಆಶಯವೂ ಸಹ ರಂಗಕೃತಿಯಲ್ಲಿ ಕೆಲಸ ಮಾಡಬೇಕು. ಅದು ಇಲ್ಲ ಆಗಲಿಲ್ಲ.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...