
ಮಡಿಕೇರಿ:ಕೊಡಗಿನ ಪ್ರಮುಖ ಹಾಗೂ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಕೈಲ್ ಮುಹೂರ್ತ (ಕೊಡವ ಭಾಷೆಯಲ್ಲಿ ಕೈಲ್ ಪೊಳ್ದ್) ಹಬ್ಬ ಸಂಭ್ರಮೋಲ್ಲಾಸ, ಸಡಗರ ಹಾಗೂ ವೈಶಿಷ್ಟಪೂರ್ಣವಾಗಿ ನೆರವೇರಿತು. ಮಳೆಗಾಲ ಮುಗಿಯುತ್ತಿದ್ದಂತೆ ಹಬ್ಬಗಳು ಆರಂಭವಾಗುತ್ತಿದ್ದು, ಕೊಡಗಿನಲ್ಲಿ ಪ್ರಥಮ ಹಬ್ಬವೇ ಈ ಕೈಲ್ ಮುಹೂರ್ತ. ಕೈಲ್ ಎಂದರೆ ಆಯುಧ, ಪೊಲ್ದ್ ಎಂದರೆ ಪೂಜೆ ಎಂದರ್ಥವಾಗಿದ್ದು, ಕೈಲ್‌ಪೊಲ್ದ್ ಅನ್ನು ಆಯುಧ ಪೂಜೆ ಎಂಬುದಾಗಿ ಕರೆಯುತ್ತಾರೆ.ಕೊಡಗಿನವರು ಮೂಲತಃ ಕೃಷಿಕರಾಗಿದ್ದು, ಜೊತೆಗೆ ಉತ್ತಮ ಬೇಟೆಗಾರರು ಆಗಿದ್ದಾರೆ. ಹಿಂದಿನ ಕಾಲದಲ್ಲಿ ಪ್ರಾಣಿಗಳ ಬೇಟೆ ಮಾಡುವುದಕ್ಕಾಗಿ ಕೋವಿ,ಕತ್ತಿ ಮತ್ತು ಗುರಾಣಿ ಇತ್ಯಾದಿ ಆಯುಧಗಳನ್ನು ಬಳಸುತ್ತಿದ್ದರು. ಆದರೆ, ವ್ಯವಸಾಯದ ಸಂದರ್ಭದಲ್ಲಿ ಅಂದರೆ ಕಕ್ಕಡ (ಆಟಿ) ಮಾಸದಲ್ಲಿ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ಕನ್ನಿಕೋಂಬರೆ (ಆಯುಧ
ಕೋಣೆ)ಯಲ್ಲಿ ಇಟ್ಟಿರುತ್ತಾರೆ.
ಕೃಷಿ ಕಾರ್ಯ ಮುಗಿದ ಅನಂತರ ಆಯುಧಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಅವುಗಳನ್ನು ಹೊರಗೆ ತೆಗೆಯಲಾಗುತ್ತದೆ.ಈ ಆಯುಧಗಳನ್ನು ಸೆ.3ರಂದು ಕನ್ನಿಕೋಂಬರೆ (ಆಯುಧ ಕೋಣೆ)ಯಿಂದ ಹೊರ ತೆಗೆದು ಶ್ರದ್ಧಾಭಕ್ತಿಯಿಂದ ಪೂಜಿಸಲಾಯಿತು. ಕೋವಿಯನ್ನು ಪೂಜಿಸಲು ತೋಕ್‌ಪೂ (ಕೋವಿಹೂ)ವನ್ನು ಬಳಸಲಾಯಿತು. ಈ ಹೂವು ಕಾಡುಗಳಲ್ಲಿ ಹಬ್ಬಿ ಬೆಳೆಯುವ ವರ್ಣ ರಂಜಿತ ಹೂವಾಗಿದೆ. ಇದು ಈ ಸಮಯದಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ಗೌರಿ ಹೂ ಎಂತಲೂ ಕರೆಯುತ್ತಾರೆ.
ವ್ಯವಸಾಯದ ಉಪಕರಣಗಳಿಗೆ ಪೂಜೆ
ಕೈಲ್ ಮುಹೂರ್ತ ಹಬ್ಬದ ಅನಂತರ ಕತ್ತಿ ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ಗದ್ದೆ ವ್ಯವಸಾಯದಲ್ಲಿ ಬಳಕೆಯಾಗುತ್ತಿದ್ದ ನೇಗಿಲು, ನೊಗ, ಗುದ್ದಲಿ ಇತ್ಯಾದಿ ವ್ಯವಸಾಯ ಉಪಕರಣಗಳನ್ನು ತೊಳೆದು ಪೂಜೆ ಸಲ್ಲಿಸಲಾಯಿತು. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ, ಗಂಧ ಹಚ್ಚಿ ಅಲಂಕರಿಸಲಾಯಿತ್ತಲ್ಲದೆ., ಅಕ್ಕಿ - ಬೆಲ್ಲದಿಂದ ಮಾಡಿದ ಪಾಯಸ (ಪಣಿ ಪುಟ್ಟ್) ತಿನ್ನಿಸುತ್ತಾರೆ.ಕಡಂಬಿಟ್ಟು ಹಾಗೂ ಹಂದಿ ಮಾಂಸದ ಸಾರಿನ ಊಟ ಕೈಲ್
ಮುಹೂರ್ತ ಹಬ್ಬದ ವಿಶೇಷವಾಗಿದ್ದು, ಮದ್ಯ ಸೇವನೆಗೂ ಈ ದಿನ ಮಹತ್ವವಿರುತ್ತದೆ.
ಇದಾದ ಅನಂತರ ಎಲ್ಲರೂ ಆಯಾ ಊರು ಗಳಲ್ಲಿರುವ ಆಟದ ಮೈದಾನಗಳಲ್ಲಿ ಸೇರಿ ಅಲ್ಲಿ ಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿ ಹಬ್ಬದ ಆಚರಣೆಯನ್ನು ಸಾರಿದರು. ಮಕ್ಕಳಾದಿಯಾಗಿ ಹಿರಿಯರವರೆಗೆ ಎಲ್ಲರಿಗೂ ಅಲ್ಲಿ ಶೌರ್ಯ ಪ್ರದರ್ಶನ, ವಿವಿಧ ಸ್ಪರ್ಧೆಗಳು ನಡೆಯಿತು.
ಮರದ ತುದಿಗೆ ತೆಂಗಿನ ಕಾಯಿಯನ್ನು ಕಟ್ಟಿ ಅದಕ್ಕೆ ಗುಂಡು ಹೊಡೆಯುವುದು ಈ ಸ್ಪರ್ಧೆಗಳಲ್ಲೊಂದು ವಿಶೇಷವಾಗಿತ್ತು. ಇನ್ನುಳಿದಂತೆ ಪುಟಾಣಿಗಳಿಗೆ ಕಾಳು ಹೆಕ್ಕುವುದು, ಗೋಣಿ ಚೀಲದ ಓಟ, ಇತರ ಓಟ, ತೆಂಗಿನ ಕಾಯಿಯನ್ನು 50ಮೀಟರ್ ದೂರದಲ್ಲಿಟ್ಟು ಕಲ್ಲಿನಿಂದ ಹೊಡೆಯುವುದು ಇತ್ಯಾದಿ ಕ್ರೀಡಾಕೂಟಗಳು ಆಕರ್ಷಣೀಯವಾಗಿ ನಡೆಯಿತು.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...