
ಅಂತಾರಾಷ್ಟ್ರೀಯ ಬಾನಂಗಳದಲ್ಲಿ ರೆಕ್ಕೆ ಪುಕ್ಕಗಳನ್ನು ಬಿಚ್ಚಿ ಪಟಪಟನೆ ಹಾರಾಡುವ ಭಾರತೀಯ ಶೈಲಿಯ ವಿಶೇಷ ಗಾಳಿಪಟಗಳನ್ನು ಪ್ರದರ್ಶಿಸಿರುವ ಟೀಮ್ ಮಂಗಳೂರು ತಂಡದ ಪ್ರಮುಖ ಕಲಾವಿದರಲ್ಲೊಬ್ಬರು ದಿನೇಶ್ ಹೊಳ್ಳ. ಗ್ರಾಮೀಣ ಸೊಗಡಿನ ಜಾನಪದದ ಸೊಬಗನ್ನು ರಂಗೋಲಿ ಮಿಶ್ರಿತ ರೇಖಾಚಿತ್ರಗಳ ಕಲಾಕೃತಿಗಳ ರಚನೆಯ ಅಪರೂಪದ ಕಲಾವಿದ ದಿನೇಶ್ ಹೊಳ್ಳ. ಅವರ ಜನಪದ ಶೈಲಿಯ ಕಲಾಕೃತಿಗಳೀಗ ವಿದೇಶಿ ಮಣ್ಣಿನಲ್ಲಿ ತಮ್ಮ ಸೊಬಗನ್ನು ಪಸರಿಸಲಿವೆ. ಫ್ರಾನ್ಸ್‌ನ ಡೀಪಿ ನಗರದ ‘ಇಂಗ್ಲಿಷ್ ಕ್ಯಾನಲ್’ ತಟದಲ್ಲಿ ಸೆ. 7ರಿಂದ 17ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ದಿನೇಶ್ ಹೊಳ್ಳರಿಗೆ ತಮ್ಮ ಜಾನಪದ ಹಾಗೂ ವಿಶಿಷ್ಟ ಶೈಲಿಯ ರೇಖಾಚಿತ್ರಗಳ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನಕ್ಕೆ ಅವಕಾಶ ದೊರಕಿದೆ. ಅಕ್ರೆಲಿಕ್ ಕಲರ್ ಮಾಧ್ಯಮದಲ್ಲಿ ರೂಪು ಪಡೆದಿರುವ 36 ಕಲಾಕೃತಿಗಳನ್ನು ದಿನೇಶ್ ಹೊಳ್ಳ ಈ ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಕಲಾಪ್ರೇಮಿಗಳಿಗೆ ತೆರೆದಿಡಲಿದ್ದಾರೆ.ಅದರ ಜೊತೆಯಲ್ಲಿ ಸ್ಥಳದಲ್ಲಿ ಕಲಾಕೃತಿಗಳನ್ನು ಬಿಡಿಸುವ ಪ್ರಾತ್ಯಕ್ಷಿಕೆ, ಗಾಳಿಪಟ ರಚನೆ ತರಬೇತಿಯನ್ನೂ ದಿನೇಶ್ ಹೊಳ್ಳ ಅವರನ್ನೊಳಗೊಂಡ ಟೀಮ್ ಮಂಗಳೂರು ತಂಡ ನೀಡಲಿದೆ.
ತಬಲಾ ವಾದನ, ಜಾನಪದ ನೃತ್ಯಭಂಗಿ, ಗಾಳಿಪಟವನ್ನು ಕಚ್ಚಿ ಕೊಂಡು ಹಾರುವ ಪಕ್ಷಿ, ಭಾರತ ಹಾಗೂ ಫ್ರಾನ್ಸ್ ದೇಶದ ತ್ರಿವರ್ಣ ಧ್ವಜಗಳ ಬಣ್ಣ ಹೊತ್ತ ಗಾಳಿಪಟವನ್ನೊಳಗೊಂಡ ರೇಖಾಚಿತ್ರಗಳ ಕಲಾಕೃತಿಗಳು ವಿದೇಶಿ ನೆಲದಲ್ಲಿ ಕುಂಚದ ಸೊಬಗನ್ನು ಪಸರಿಸಲಿದೆ. ಅಂತಾರಾಷ್ಟ್ರೀಯ ನೆಲದಲ್ಲಿ ಮಂಗಳೂರು ಕಲಾವಿದನೊಬ್ಬನಿಗೆ ತನ್ನ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ದೊರಕಿರುವುದು ಮಾತ್ರವಲ್ಲದೆ, ದಿನೇಶ್ ಹೊಳ್ಳರ ಪ್ರಥಮ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅಂತಾರಾಷ್ಟ್ರೀಯ ನೆಲದಲ್ಲಿ ನಡೆಯಲಿದೆ. ಜನಪದ ಶೈಲಿಯ ಕಚ್ಚೆ, ಡೋಲು, ಗೆಜ್ಜೆಯನ್ನು ತೊಟ್ಟ ಹೆಂಗಸರು ಕಲಾವಿದ ದಿನೇಶ್ ಹೊಳ್ಳರ ಕಲಾಕೃತಿಗಳ ಆಕರ್ಷಣೆ ಹಾಗೂ ವಿಶೇಷತೆ.
ಈ ಹಿಂದೆ ದಿನೇಶ್ ಹೊಳ್ಳರು ಫ್ರಾನ್ಸ್‌ನ ಬಾನಂಗಳದಲ್ಲಿ ಗಾಳಿಪಟ ಉತ್ಸವದಲ್ಲಿ ಕಲಾಕೃತಿಗಳ ಪ್ರಾತ್ಯಕ್ಷಿಕೆ ನೀಡಿದ್ದರು. ಅದು ಅಲ್ಲಿನ ವೀಕ್ಷಕರು ಹಾಗೂ ಸಂಘಟಕರನ್ನು ಆಕರ್ಷಿಸಿತ್ತು. ಹಾಗಾಗಿ ಈ ಬಾರಿ ಗಾಳಿಪಟ ಉತ್ಸವದ ಜೊತೆಯಲ್ಲೇ ದಿನೇಶ್ ಹೊಳ್ಳರ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನಕ್ಕೆ ಆಹ್ವಾನ ದೊರಕಿದೆ. ಕಳೆದ ಎಪ್ರಿಲ್ನಲ್ಲಿಯೂ ಇಟೆಲಿಯ ಸಾರ್ವಿಯಾ ನಗರದಲ್ಲಿ ಕಲಾವಿದ ಕ್ಲಾಡಿಯೋ ಕಪೇಲಿ ಆಯೋಜಿಸಿದ ‘ಆರ್ಟ್ ಇವೆಂಟೊ’ ಪ್ರದರ್ಶನದಲ್ಲಿ ದಿನೇಶ್ ಹೊಳ್ಳ ಕಲಾಕೃತಿಗಳ ಪ್ರಾತ್ಯಕ್ಷಿಕೆ ನೀಡಿದ್ದರು.ಕಳೆದ 22ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ದಿನೇಶ್‌ರನ್ನೊಳಗೊಂಡ ಟೀಮ್ ಮಂಗಳೂರು ತಂಡದ ಬೃಹದಾಕಾರದ ಕಥಕ್ಕಳಿ ಗಾಳಿಪಟ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನವನ್ನು ಗಿಟ್ಟಿಸಿರುವುದು ಹಳೆಯ ವಿಚಾರ.
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳ ಮೂಲಕ ಸರ್ವೇಶ್ ರಾವ್, ಶಶಾಂಕ್, ಸತೀಶ್ ರಾವ್, ಪ್ರಾಣ್ ಹೆಗ್ಡೆ ಮತ್ತು ದಿನೇಶ್ ಹೊಳ್ಳರ ಟೀಮ್ ಮಂಗಳೂರು, ಭಾರತದ ಹೆಸರನ್ನು ವಿದೇಶಿ ಬಾನಂಗಳದಲ್ಲೂ ಪಸರಿಸಿದೆ. ಇದೀಗ ಗಾಳಿಪಟಗಳ ಜೊತೆಗೆ ದಿನೇಶ್ ಹೊಳ್ಳರ ಜಾನಪದ ಸೊಗಡಿನ ಚಿತ್ತಾರಗಳು ಕೂಡಾ ವಿದೇಶಿಯರ ಕಣ್ಮನಗಳನ್ನು ತಣಿಸಲು ಸಿದ್ಧವಾಗಿವೆ. ನಿರೀಕ್ಷಿಸಿರಲಿಲ್ಲ
‘‘ಕಳೆದ ವರ್ಷ ಗಾಳಿಪಟ ಉತ್ಸವದಲ್ಲಿ ನನ್ನ ಕಲಾಕೃತಿಗಳ ಪ್ರಾತ್ಯಕ್ಷಿಕೆ ನೀಡಿದ್ದೆ. ಆದರೆ ನನ್ನ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಇಷ್ಟೊಂದು ಶೀಘ್ರದಲ್ಲಿ ಸಿಗಬಹುದೆಂಬ ನಿರೀಕ್ಷೆ ಮಾತ್ರ ಇರಲಿಲ್ಲ. ತುಂಬಾ ಖುಷಿಯಾಗಿದೆ’’ ಎಂದು ಫ್ರಾನ್ಸ್‌ಗೆ ಚಿತ್ರಕಲಾ ಪ್ರದರ್ಶನಕ್ಕೆ ಹೊರಡಲು ಸಿದ್ಧತೆಯಲ್ಲಿರುವ ಟೀಮ್ ಮಂಗಳೂರು ತಂಡದ ದಿನೇಶ್ ಹೊಳ್ಳ ವಾರ್ತಾಭಾರತಿ ಜೊತೆ ಪ್ರತಿಕ್ರಿಯಿಸಿದ್ದಾರೆ. ‘‘ರೇಖಾಚಿತ್ರವೇ ನನ್ನ ಕಲಾಕೃತಿಗಳ ಮಾಧ್ಯಮ. ಅದು ಬಿಟ್ಟು ಗಾಳಿಪಟ ರಚನೆ ನಮ್ಮ ತಂಡದ ಪ್ರಮುಖ ಆದ್ಯತೆ’’ ಎಂದವರು ಅಭಿಪ್ರಾಯಿಸಿದ್ದಾರೆ.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...