ಸುಚಿತ್ರದಲ್ಲಿ ಕಂಬಾರರು ಮಕ್ಕಳಿಂದ ಹೇಳಿಸಿದ ಕಿಟ್ಟಿಕತೆ
mail-img print-img

ಸುಚಿತ್ರದಲ್ಲಿ ಕಂಬಾರರು ಮಕ್ಕಳಿಂದ ಹೇಳಿಸಿದ ಕಿಟ್ಟಿಕತೆ

ಮಂಗಳವಾರ - ಜುಲೈ -10-2012

ಇತ್ತೀಚೆಗೆ ಬೇಸಿಗೆ ಶಿಬಿರದ ಪ್ರಯುಕ್ತ ಸುಚಿತ್ರ ಬಾಲಜಗತ್ ಸಂಗೀತ, ನೃತ್ಯ, ಗೊಂಬೆ ಆಟ ಹಾಗೂ ನಾಟಕ ಪ್ರಯೋಗ ಆಯೋಜಿಸಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಜಾನಪದ ತಜ್ಞರಾದ ಡಾ.ಚಂದ್ರಶೇಖರ ಕಂಬಾರರು ಜಾನ ಪದ ಕಥೆ ಆಧರಿಸಿ ರಚಿಸಿರುವ ಕಿಟ್ಟಿ ಕಥೆ ಎಂಬ ಮಕ್ಕಳ ನಾಟಕವನ್ನು ವಿಶೇಷವಾಗಿ ಪ್ರಯೋಗಿಸಲಾಯಿತು. ಈ ಹಿಂದೆ ಆಶಾಡದ ಒಂದು ದಿನ, ಪೋಲಿ ಕಿಟ್ಟಿ, ಬಂಡ್ವಾಳಿಲ್ಲದ-ಬಡಾಯಿ ಮುಂತಾದ ನಾಟಕ ನಿರ್ದೇಶಿಸಿರುವ ಅಭಿರುಚಿ ಚಂದ್ರು ನಿರ್ದೇಶನದಲ್ಲಿ, ಸುಚಿತ್ರದ ಮಹಮದ್ ಪೀರ್ ರಂಗ ಮಂದಿರದಲ್ಲಿ ಶಸ್ವಿಯಾಗಿ ಪ್ರಯೋಗಿ ಸಲಾಯಿತು.ನಾಟಕದಲ್ಲಿ ಒಬ್ಬ ಸೋಮಾರಿ ಯುವಕ ಕಿಟ್ಟಿ ತನ್ನ ಮಾತು ಹಾಗೂ ಕುತಂತ್ರದಿಂದ ಜನರನ್ನು ಕುರಿ ಗಳನ್ನಾಗಿಸಿ, ತಾನು ಇಚ್ಛಿಸಿದಂತೆಯೇ ಒಬ್ಬ ಸುಂದರ ಯುವತಿಯನ್ನು ಮದುವೇ ಆಗಿ, ಕಡೆಗೆ ರಾಜನಾಗಿ ಮೆರೆಯುವ ಜಾನಪದ ಕತೆಯನ್ನು ಕಂಬಾರರು ಸಮಕಾಲೀನಗೊಳಿಸಿ, ಈ ಕಾಲದಲ್ಲಿ ಮಾತು ಬಲ್ಲವನು ಬದುಕಬಲ್ಲ, ಅಪ್ರಾಮಾಣಿಕರಲ್ಲಿ ಹೆಚ್ಚು ಪ್ರಾಮಾಣಿಕ ಗದ್ದುಗೆಗೆ ಏರುತ್ತಾನೆ ಎಂದು ಚಿತ್ರಿಸಿ, ಮಕ್ಕಳ ಮೂಲಕ ಸಮಾಜವನ್ನು ಎಚ್ಚರಿಸುವ ಕಥೆಯನ್ನು ಹೊಂದಿರುವ ಈ ನಾಟಕ ಪ್ರೇಕ್ಷರ ಗಮನ ಸೆಳೆಯಿತು.

ರಂಗಕೃತಿಯ ಆರಂಭವೇ ‘‘ನಾವು ಹಾಡಿ ಕುಣಿ ಯುತ್ತೇವೆ. ... ನಿಮ್ಮ ಮುಂದ...’’ಎಂದು ರಂಗ ಮಧ್ಯದಲ್ಲಿ ಕುಳಿತ ಪುಟಾಣಿಗಳ ಮೇಳದ ಹಾಡಿ ನೊಂದಿಗೆ ದೀಪ ರಂಗಕ್ಕೆ ತೆರೆದು ಕೊಳ್ಳುತ್ತದೆ. ರಂಗದ ಎಡಬದಿಗೆ ನಾಯಕ ಕಿಟ್ಟಿ ರಗ್ಗು ಹೊದ್ದು ಮಲಗಿ ದ್ದಾನೆ. ಅಜ್ಜಿ ಏಳೋ ಟೈಂ ಆಯ್ತು ಅನ್ನುತ್ತಿದ್ದ ಹಾಗೆ ಪಂಚೆ ಬಣ್ಣದ ಜುಬ್ಬ, ಪೇಟ ತೊಟ್ಟ ಭಾಗವತ (ಚಲನ.ಜಿ) ಇದೇನೊ! ನಾನು ಬರುವ ಮುಂಚೆಯೇ ನಾಟಕ ಶುರು ಮಾಡೋದೆ ಶಾಸ್ತ್ರದ ಪ್ರಕಾರ ನಾಟಕ ಶುರು ಆಗಬೇಕು. ಆ ಮೇಲೆ ನಿನ್ನ ಎಂಟ್ರಿ ಎಂದು ಹೇಳುವ ಮೂಲಕ, ಪ್ರಯೋಗ ಅಧಿಕೃತ ಚಾಲನೆ ಪಡೆಯಿತು.

ಇಲ್ಲಿ ಕಂಬಾರರು ಬೇಕಂತಲೇ ಶಾಸ್ತ್ರಿಯವಾದ ಒಂದು ನಾಟಕ ಆರಂಭದ ಚೌಕಟ್ಟನ್ನು ಮುರಿದು, ನಾಟಕ ಆರಂಭಿ ಸುವುದು ಗೋಚರಿಸುತ್ತದೆ. ಭಾಗವತನು ಪ್ರೇಕ್ಷಕರಿಗೆ ಪ್ರೇಕ್ಷಕ ಮಕ್ಕಳೆ ಕಿಟ್ಟಿ ನಿಮ್ಮ ಹಾಗೆ ಒಬ್ಬ ಹುಡುಗ. . . ಎಂದು ಮಾತು ಆರಂಭಿಸಿ ಏಕೆ ಮಲಗಿದ್ದಾನೆ, ತಿಂಡಿಬೇಕಾ, ಮದುವೇನಾ.. ಎಂದಾಗ ತಕ್ಷಣ ಏಳುವ ಕಿಟ್ಟಿ ನನಗೆ ಮದುವೆ ಮಾಡು ಅಜ್ಜಿ ಎನ್ನುತ್ತಿದ್ದಂತೆ. ಪುಟಾಣಿಗಳ ಕೋರಸ್ ಅಜ್ಜಿ ಅಜ್ಜಿ.. ಅಜ್ಜಿ.. ಅಜ್ಜಿ.. ಹುಡುಗಿ ಬೇಕು ನನಗೆ ಮದುವೆ ಮಾಡಬೇಕು ನನ್ಗೆ ಭಾರಿ ಅರ್ಜೆಂಟು I want marry,I am in hurry ಎಂಬ ದೇಶಿ ಹಾಗೂ ಪಾಶ್ಚಾತ್ಯ ಶೈಲಿಯ ಸಂಗೀತವು ಮಕ್ಕಳಿಗೆ ಅತಿ ರಂಜನೀಯವಾಗಿ ದೊಡ್ಡವರಿಗೂ ಮುದ ನೀಡುವುದು.


ಹೀಗೆ ಲವಲವಿಕೆಯಿಂದಲೇ ಹಾಸ್ಯಮಯವಾದ ಪ್ರಯೋಗ ನಮ್ಮನ್ನು ಒಂದು ಐತಿಹಾಸಿಕ ಲೋಕಕ್ಕೆ ನೇರವಾಗಿ ಕರೆದುಕೊಂಡು ಹೋಗುತ್ತದೆ. ಆದರೆ ನಾಯಕ ಕಿಟ್ಟಿ (ಸೂರಜ್)ಮಾತ್ರ ಮಾಡ್ರನ್ ಹುಡುಗನಂತೆ ಕೆಂಪು ಬಣ್ಣದ ಷರಟು 1/3 ಚಡ್ಡಿ ತೊಟ್ಟಿರುತ್ತಾನೆ. ಕಿಟ್ಟಿಯು ಒಬ್ಬ ಸುಂದರಿಯನ್ನು ಮದುವೆಯಾಗಲು 10 ಪೈಸೆ ತೆಗೆದುಕೊಂಡು ಮನೆಬಿಟ್ಟು ಹೊರಟು ಸಂತೆಯಲ್ಲಿ ಒಂದು ಮಡಿಕೆ, ಒಂದು ಕೇಜಿ ಅಕ್ಕಿ ಕೊಳ್ಳುತ್ತಾನೆ. ಅದರಿಂದ ದಾರಿಯಲ್ಲಿ ಸಿಕ್ಕ ಅಜ್ಜಿ ಕೈಲಿ ಅನ್ನ ಮಾಡಿಸಿ ತಿಂದು ಆಕೆ ಬಳಿ ಇದ್ದ ಟಗರು ಪಡೆಯಲು ಮಡಿಕೆ ಮಾತಾ ಡುತ್ತೆ ನಿನಗೆ ಸಂಗಾತಿಯಾಗುತ್ತಾಳೆ ಎಂದು ಸುಳ್ಳು ಹೇಳಿ ಟಗರು ಪಡೆದುಕೊಂಡು ಅದನ್ನು ಒಬ್ಬ ವ್ಯಕ್ತಿಯ ಮುದಿ ತಂದೆಗೆ ಚಳಿ ಹೆಚ್ಚಾಗಿದ್ದನ್ನು ಕಂಡು, ಟಗರು ಚಳಿ ಮೇಯುತ್ತೆ ಎಂದು ರೂ-4,000/- ಕ್ಕೆ ಮಾರಿ, ಹೋಗುವಾಗ ದಾರಿಯಲ್ಲಿ ಕರಡಿ ಆತನನ್ನು ಹಿಡಿದುಕೊಳ್ಳುತ್ತದೆ.

ಅದರಿಂದ ತಪ್ಪಿಸಿ ಕೊಂಡು ಆ ಕರಡಿಯನ್ನೇ ಭಗವಂತನಿಗೆ ಕೊಟ್ಟು ಕರಡಿಯೊಂದಿಗೆ ಗುದ್ದಾಡಿದರೆ ಹಣ ಉದುರುವುದು ಎಂದು ಸುಳ್ಳು ಹೇಳಿ ಅವನಿಂದ ಕುದುರೆ ಪಡೆದು ಅದನ್ನು ನರ್ತಕಿಗೆ ಕೊಟ್ಟು ಅಲ್ಲಿಂದ, ಆನೆ ಪಡೆದು ಕೊಳ್ಳುತ್ತಾನೆ. ಆನೆ ರೂಪಾಯಿಯ ಲದ್ದಿ ಹಾಕುತ್ತೆ ಎಂದೂ ಮತ್ತೊಬ್ಬನಿಗೆ ನಂಬಿಸುವನು. ಕಡೆಗೆ ಮೋಸಹೊದವರೆಲ್ಲ ಈತನನ್ನು ಹಿಡಿದು ಕೊಂಡಾಗಲೂ, ಅವ ರಿಂದ ಪಡೆದ ವಸ್ತು ಪ್ರಾಣಿಗಳನ್ನು ಅವರಿಗೆ ಕೊಟ್ಟು ತಾನು ಒಬ್ಬ ಪ್ರಾಮಾಣಿಕ ರಾಜಕಾರಣಿ ಯಂತೆ ವರ್ತಿಸಿ ಅವರನ್ನು ಕುರಿ ಗಳಾಗಿಸಿ, ನಾನು ಪ್ರಾಮಾಣಿಕ, ನಿಮಗೆಲ್ಲ ತಿಳಿದ ಹಾಗೆಯೇ ಮೋಸ ಮಾಡಿದ್ದೇನೆ.

ನಮ್ಮ ರಾಜಕಾರಣಿಗಳ ಹಾಗೆ ನಿಮಗೆ ತಿಳಿಯದಂತೆ ಮೊಸ ಮಾಡಬಹುದಾಗಿತ್ತು ಹಾಗೆ ಮಾಡ್ಲಿಲ್ಲ, ನೀವು ಅಂತಃಕರಣದ ಜನ ಎಂದು ನಂಬಿಸಿ ಅವರನ್ನು ಶಿಷ್ಯರನ್ನಾಗಿಸಿ ತಾನು ಸುಂದರಿಯನ್ನು ಮದುವೆಯಾಗಿ ರಾಜನಾಗುತ್ತಾನೆ. ಪ್ರಯೋಗವು ಹೀಗೆ ವೃತ್ತಿನಿರತ ಕಲಾವಿದರಂತೆ, ಗಂಭೀರವಾದ ಓಘದಲ್ಲಿ, ಹಾಸ್ಯ ದೊಂದಿಗೆ, ಮಕ್ಕಳು ಅಭಿನಯಿಸಿದ್ದು ರಂಜಿಸುತ್ತದೆ. ಪ್ರಜೆಗಳು ರಾಜಕಾರಣಿಗಳಿಗೆ, ಮೋಸಗಾರರಿಗೆ ಪದೆ ಪದೆ ಹೇಗೆ ಮೋಸ ಹೋಗುತ್ತಾರೆ ಎಂಬುದನ್ನು ಕಂಬಾರರು ಈ ಕಥೆಯೊಂದಿಗೆ ಚಾಟಿ ಏಟಿನಂತೆ ಪ್ರೇಕ್ಷಕರಿಗೆ ಎಚ್ಚೆತ್ತುಕೊಳ್ಳಲು ಪ್ರೇರೇಪಿಸುತ್ತಾರೆ. ಹಾಗೆ ಕಚಗುಳಿ ಇಡುತ್ತಾರೆ.

ಅಂತಿಮವಾಗಿ ಕಿಟ್ಟಿರಾಜನಾಗಿ ಪಟ್ಟಕ್ಕೇರುವ ದೃಶ್ಯಕ್ಕೆ ರಂಗದ ಎರಡು ಬದಿಯಿಂದ ಅರವತೈದಕ್ಕೂ ಹೆಚ್ಚಿನ ಮಕ್ಕಳು ಪಂಜು-ಫಲಕ, ಒಡ್ಡೊಲಗದೊಂದಿಗೆ ರಾಜನ ಮೆರವಣಿಗೆಯಲ್ಲಿ ರಂಗಕ್ಕೆ ಬರುವ ದೃಶ್ಯ ಕಳೆಕಟ್ಟಿತು. ಈ ಪ್ರಯೋಗವನ್ನು ನಿರ್ದೇಶಕ ಚಂದ್ರು ಅತ್ಯಂತ ಪರಿಶ್ರಮದಿಂದ ಮಕ್ಕಳನ್ನು ತಿದ್ದಿ ತೀಡಿ ಪ್ರಯೋಗಕ್ಕೆ ಪಳಗಿಸಿರುವುದು ಎದ್ದು ಕಾಣುತ್ತದೆ. ಒಟ್ಟಾರೆ ಪ್ರಯೋಗ ಇನ್ನಷ್ಟು ಗಟ್ಟಿಗೊಳ್ಳಬೇಕಿತ್ತು. ಇನ್ನಷ್ಟು ಟೆಂಪೊ ಅಗತ್ಯ ಇತ್ತು. ಸಂತೆ ದೃಶ್ಯವನ್ನು ಇರುವ ಮಕ್ಕಳನ್ನು ಬಳಸಿ ಕಟ್ಟಿದರೂ ಮುಖ್ಯಪಾತ್ರಗಳು ಗುಂಪಿನಲ್ಲಿ ಕಳೆದುಹೋಗುತ್ತವೆ. ಹಾಗೇ, ನೃತ್ಯಗಳು ಏಕತಾನತೆಗೆ ಹೊರತಿರಲಿಲ್ಲ. ಇದನ್ನು ಹೊರತುಪಡಿಸಿ ದೃಶ್ಯಗಳು ನೈಜವಾಗಿ ಮೂಡಿಬಂದವು.

ಸಂಗೀತವನ್ನು ನಾರಾಯಣ ರಾಯಚೂರು ಮತ್ತು ರಾಘವೇಂದ್ರ ಭಾವಪೂರ್ಣವಾಗಿ, ಜಾನಪದ ಸೊಗಡಿನೊಂದಿಗೆ ಉತ್ತಮವಾಗಿ ನಿರ್ವಹಿಸಿದ್ದಾರೆ. ಅರುಣ್‌ಮೂರ್ತಿ ಬೆಳಕು ವಿನ್ಯಾಸ ಉತ್ತಮ. ಒಟ್ಟಾರೆ ಮನೆ, ಶಾಲೆ ಬಿಟ್ಟು ಬಂದ ಮಕ್ಕಳಿಗೆ ಎಚ್.ಎಸ್.ವೆಂಕಟೇಶಮೂರ್ತಿ, ವಿ.ಎನ್. ಸುಬ್ಬರಾವ್, ವೆಂಕಟಸ್ವಾಮಿ, ಬಿ.ಆರ್. ಲಕ್ಷ್ಮಣ ರಾವ್, ಅವರಂತಹ ಹಿರಿಯರ (ಅಜ್ಜಂದಿರ) ಪ್ರೀತಿ ಪುಟಾಣಿಗಳಿಗೆ ಹಾಗೇ ಹಿರಿಯರಿಗೆ ಮೊಮ್ಮಕ್ಕಳ ಮುದ್ದು ಶಿಬಿರದಲ್ಲಿ ಸಿಕ್ಕಿದೆ. ಚಂದ್ರು ಅವರು ಹೇಳು ವಂತೆ ಇಲ್ಲಿ ಮಕ್ಕಳು ಅಕಾರಣ ಪ್ರೀತಿಯೊಂದಿಗೆ, ದೊಡ್ಡವರು ಚಿಕ್ಕವರು ಒಂದೇ ಆಗಿ, ಒಂದು ತಿಂಗಳು ಶಿಬಿರದಲ್ಲಿ ಕಳೆದ ಅನುಭವ ಅನನ್ಯವಾದುದ್ದಾಗಿದೆ.

ಭಾಗವತನಾಗಿ(ಚಲನ.ಜಿ), ಕಿಟ್ಟಿಯಾಗಿ (ಸುರಜ್), ಅಜ್ಜಿ (ರಾಜಸ್ವಿ), ಕರಡಿ(ಲೇಹರ್), ನರ್ತಕಿ (ನಿಮಿಷ), ಟಗರಜ್ಜಿ (ಅಕ್ಷತ), ಭಗವಂತ (ಹಿತೈಷಿ), ಲಾಂಛನ(ಆದ್ಮಿನಿ.ಜಿ) ಮುಂತಾದವರು ಪ್ರಾತೋಚಿತವಾಗಿ ಅಭನಯಿಸಿದರು. ಇದು ಸುಚಿತ್ರ ಬಾಲಜಗತ್‌ನ ಒಂದು ಉತ್ತಮ ಪ್ರಯತ್ನ ಮತ್ತು ಮಕ್ಕಳ ರಂಗದಲ್ಲಿ ಪ್ರೇಮಕಾರಂತ ಹಾಗೂ ಬಿ.ವಿ. ಕಾರಂತ ದಂಪತಿಗಳ ಕೊರತೆಯನ್ನು ಈ ಪ್ರಯೋಗ ತುಂಬಿಸಿತು ಎಂದರೆ ತಪ್ಪಾಗಲಾರದು.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಚರ್ಚ್‌ದಾಳಿ ಗೃಹ ಇಲಾಖೆಗೆ ಪಾಠವಾಗಲಿ

‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...


- ಬಿ.ಶ್ರೀಪಾದ ಭಟ್

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್