
ನಾಟಕ ವಿಮರ್ಶೆ: ಶಶಿಕಾಂತ ಯಡಹಳಿ ಸೃಷ್ಟಿ ಸಂಸ್ಥೆಯಲ್ಲಿ ಅಭಿನಯ ಕಲೆ ಕುರಿತು ತರಬೇತಿ ಪಡೆದು ರಂಗಭೂಮಿಯಲ್ಲಿ ತೊಡಗಿಸಿಕೊಂಡ ಹಲವು ಕ್ರಿಯಾಶೀಲ ಯುವಕರು ಒಂದೆಡೆ ಸೇರಿ ರಂಗಾವಿಷ್ಕಾರ ಎನ್ನುವ ಹೊಸ ರಂಗತಂಡವೊಂದನ್ನು ಹುಟ್ಟುಹಾಕಿದ್ದಾರೆ. ಜುಲೈ 16 ರಂದು ಈ ಹೊಸ ತಂಡದ ಉದ್ಘಾಟನಾ ಸಮಾರಂಭಕ್ಕೆ ರವೀಂದ್ರ ಕಲಾಕ್ಷೇತ್ರ ಸಾಕ್ಷಿಯಾಯಿತು. ರಂಗಾವಿಷ್ಕಾರ ತಂಡದ ಉತ್ಸಾಹಿ ಕಲಾವಿದರು ಕೃಷ್ಣಕುಮಾರ ಯಾದವ್‌ರವರ ನಿರ್ದೇಶನದಲ್ಲಿ ‘ನಟಸಾಮ್ರಾಟ’ ನಾಟಕವನ್ನು ಪ್ರದರ್ಶಿಸಿದರು. ಮರಾಠಿಯ ವಿ.ವಾ. ಶಿರವಾಡಕರ್ ಮರಾಠಿಯಲ್ಲಿ ರಚಿಸಿದ ನಟಸಾಮ್ರಾಟ ನಾಟಕವನ್ನು ಡಾ.ವಾಮನ ಬೇಂದ್ರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದೇ ನಟಸಾಮ್ರಾಟ ನಾಟಕದಲ್ಲಿ ಅಮೋಘವಾಗಿ ಅಭಿನಯಿಸಿ ಜನಮಣ್ಣನೆಗಳಿಸಿದ್ದ, ಇತ್ತೀಚೆಗೆ ನಿಧನ ರಾದ ಏಣಗಿ ನಟರಾಜ್‌ರವರಿಗೆ ಈ ನಾಟಕವನ್ನು ಸಮರ್ಪಿಸಿದ್ದು ತುಂಬಾ ಸೂಕ್ತವಾಗಿತ್ತು.
ಈ ನಾಟಕದ ಮೂಲಬೇರು ಇರುವುದು ಶೇಕ್ಸ್‌ಪೀಯರ್‌ನ ಕಿಂಗ್‌ಲಿಯರ್‌ನಲ್ಲಿ. ತನ್ನ ಇಡೀ ಸಾಮ್ರಾಜ್ಯವನ್ನು ತನ್ನನ್ನು ಬಣ್ಣಿಸಿದ ಎರಡೂ ಕುವರಿಯರಿಗೆ ಹಂಚಿದ ಕಿಂಗ್‌ಲಿಯರ್ ನಂತರ ಅದೇ ಮಕ್ಕಳಿಂದ ಪಡಬಾರದ ಕಷ್ಟ ಪಡುತ್ತಾನೆ. ಇದನ್ನೇ ಆಧರಿಸಿ ಶಿರವಾಡಕರ್‌ರವರು ವಿದೇಶಿ ಕಿಂಗ್‌ಲಿಯರನನ್ನು ನಟಸಾಮ್ರಾಟನನ್ನಾಗಿಸಿ ದೇಶಿ ಕರಿಸಿದ್ದಾರೆ. ಶೇಕ್ಸಪೀಯರ್‌ನ ಕಿಂಗ್‌ಲಿಯರನಲ್ಲಿ ಚಕ್ರವರ್ತಿ ಲಿಯರ್‌ನಂತಹ ಅಸಾಮಾನ್ಯ ರಾಜನೂ ತನ್ನದೇ ಕರುಳಿನ ಕುಡಿಗಳಿಂದ ನಿರ್ಲಕ್ಷಕ್ಕೆ ಒಳಗಾಗುತ್ತಾನೆ.
ಆದರೆ ಶಿರವಾಡಕರ್‌ರ ನಟಸಾಮ್ರಾಟದಲ್ಲಿ ರಂಗ ಭೂಮಿಯ ಸುಪ್ರಸಿದ್ಧ ಮೇರು ಕಲಾವಿದನೊಬ್ಬ ತನ್ನ ವೃದ್ಧಾಪ್ಯದಲ್ಲಿ ತನ್ನದೆಲ್ಲವನ್ನೂ ಮಗ-ಮಗಳಿಗೆ ಹಂಚಿ ಕೊನೆಗೆ ಅವರಿಂದಲೇ ನಿರ್ಲಕ್ಷಕ್ಕೊಳಗಾಗಿ ನೊಂದು ಕೊಂಡು ಸಾಯುತ್ತಾನೆ. ಈ ಹಣ, ಆಸ್ತಿ, ಅಂತಸ್ತುಗಳು ಅದು ಹೇಗೆ ಮನುಷ್ಯ ಸಂಬಂಧಗಳನ್ನು ಹಾಳು ಮಾಡುತ್ತವೆ ಎನ್ನುವುದನ್ನು ಮನಮುಟ್ಟುವಂತೆ ಅನಾವರಣಗೊಳಿಸುವ ಈ ನಾಟಕ ಕೊನೆಗೆ ಪ್ರೇಕ್ಷಕರಲ್ಲಿ ವಿಷಾದವನ್ನುಂಟುಮಾಡುವ ಮೂಲಕ ಹಿರಿಯ ನಾಗರಿಕರಲ್ಲಿ ಎಚ್ಚರಿಕೆಯನ್ನು ಹಾಗೂ ಯುವಕರಲ್ಲಿ ಅರಿವನ್ನೂ ಮೂಡಿಸುವಲ್ಲಿ ಸಫಲವಾಗಿದೆ.
ಇದೊಂದು ನಟ ಪ್ರಧಾನ ನಾಟಕ. ನಿರ್ದೇಶಕ ಅದೇನೇ ಕಸರತ್ತು ಮಾಡಿದರೂ ಪ್ರೇಕ್ಷಕರ ಗಮನ ಕೇಂದ್ರೀಕರಣಗೊಳ್ಳುವುದು ಅಪ್ಪಾಸಾಹೇಬ ಪಾತ್ರದ ಮೇಲೆಯೇ. ಇಡೀ ನಾಟಕವನ್ನು ಈ ಅಪ್ಪಾಸಾಹೇಬ ಪಾತ್ರ ಆವರಿಸಿಕೊಂಡು ಬಿಡುತ್ತಾನೆ. ತಾನು ಶ್ರೇಷ್ಠ ನಟನೆನ್ನುವ ಅಹಂಕಾರ ಹಾಗೂ ತನ್ನ ಮಕ್ಕಳು ಕೊನೆಯವರೆಗೂ ಆಜ್ಞಾಧಾರಕರಾಗಿಯೇ ಇರುತ್ತಾರೆ ಎನ್ನುವ ಅಂಧನಂಬಿಕೆಗಳಿಗೆ ಬಲಿಯಾಗುವ ಅಪ್ಪಾಸಾಹೇಬ ಪಾತ್ರಕ್ಕೆ ಜೀವತುಂಬಲು ಅಸಾಧ್ಯ ತಾಕತ್ತಿನ ನಟನೇ ಬೇಕಾಗುತ್ತದೆ.
ಕನ್ನಡ ರಂಗಭೂಮಿಯಲ್ಲಿ ಅಪ್ಪಾಸಾಹೇಬ ಪಾತ್ರದ ತುಮುಲಗಳನ್ನು ಮನಮಿಡಿಯುವಂತೆ ನಟಿಸಿ ತೋರಿಸಿದ್ದು ಏಣಗಿ ನಟರಾಜ ಮಾತ್ರ. ಅಪ್ಪಾಸಾಹೇಬ ಎನ್ನುವ ರಂಗಭೂಮಿಯ ನಟನ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಇಡೀ ನಾಟಕವನ್ನು ಪ್ರಸ್ತುತಪಡಿಸಲಾಗಿದೆ. ರಂಗದಂಗಳದಲ್ಲಿ ಸಾಮ್ರಾಟನಂತೆ ಮೆರೆದು ಜನಮನಗೆದ್ದ ನಟನೊಬ್ಬ ತನ್ನ ವೃದ್ಧಾಪ್ಯದಲ್ಲಿ ತನ್ನದೇ ಮಕ್ಕಳಿಂದ ಅಪಮಾನ ನೋವುಗಳನ್ನು ಅನುಭವಿಸುವ ರೀತಿ ಮನಮಿಡಿಯುವಂತಹುದು. ಒಟ್ಟಾರೆಯಾಗಿ ಈ ನಾಟಕದ ಎಲ್ಲಾ ವಿಭಾಗಗಳು ಒಂದಕ್ಕೊಂದು ಪೂರಕವಾಗಿ ಸ್ಪಂದಿಸಿದರೆ, ಯುವ ನಟರು ಇನ್ನೂ ಹೆಚ್ಚು ಪರಿಶ್ರಮ ಪಟ್ಟರೆ, ನಿರ್ದೇಶಕರು ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡರೆ ಈ ನಾಟಕ ಗಮನಾರ್ಹವಾಗಿ ಮೂಡಿ ಬರಬಹುದಾದ ಸಾಧ್ಯತೆ ಇದೆ.
ನಾಟಕ ಮಾಡುವ ತುಡಿತಕ್ಕೆ ಹೇಗೋ ನಾಟಕ ಮಾಡುವ ಬದಲಾಗಿ ಶತಾಯಗತಾಯ ಉತ್ತಮ ನಾಟಕವೊಂದನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ನಾಟಕದ ಎಲ್ಲಾ ವಿಭಾಗಗಳೂ, ಕಲಾವಿದರು ಹಾಗೂ ತಂತ್ರಜ್ಞರು ಒಂದಾಗಿ ಶ್ರಮಿಸಬೇಕಿದೆ. ಹೊಸ ತಂಡದಿಂದ, ಹೊಸ ಯುವ ಕಲಾವಿದರಿಂದ ಪ್ರೇಕ್ಷಕರು ಇದನ್ನು ಬಯಸುತ್ತಿದ್ದಾರೆ. ಹೊಸ ಮುಖಗಳು, ಹೊಸ ಪ್ರಯತ್ನಗಳು, ವೈವಿದ್ಯಮಯ ಪ್ರಯೋಗಗಳು ರಂಗಭೂಮಿಗೆ ಅಗತ್ಯವಾಗಿವೆ.
ಅಂತಹ ಅಗತ್ಯವನ್ನು ಪೂರೈಸುವ ಕ್ರಿಯಾಶೀಲ ಮನಸುಗಳು ವೃತ್ತಿಪರತೆಯನ್ನು ಮೈಗೂಡಿಸಿ ಕೊಂಡು ದೃಶ್ಯಕಾವ್ಯಗಳನ್ನು ಕಟ್ಟಿಕೊಡಬೇಕಿದೆ. ಆ ಮೂಲಕ ಕನ್ನಡ ರಂಗಭೂಮಿಯನ್ನು ಉಳಿಸಬೇಕಿದೆ, ಬೆಳೆಸಬೇಕಿದೆ. ಅನುಭವಿ ರಂಗಕರ್ಮಿಗಳು ಇಂತಹ ಹೊಸಬರ ಪ್ರಯತ್ನಗಳನ್ನು ಬೆನ್ನುತಟ್ಟಿ ತಿದ್ದಿ, ತೀಡಿ, ಮಾರ್ಗದರ್ಶನ ನೀಡಿ ಬೆಂಗಲಿಸಬೇಕಿದೆ.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...