mail-img print-img

ಗಣಿ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದಿಂದ ಭ್ರಷ್ಟಾಚಾರ;ಬಡವರ ಸಬ್ಸಿಡಿಗಳಿಗೆ ಕೇಂದ್ರ ಸರಕಾರ ಕನ್ನ: ಬೃಂದಾ ಕಾರಟ್

ಮಂಗಳವಾರ - ಮೇ -29-2012

 ಬೆಂಗಳೂರು, ಮೇ 28: ಗಣಿ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದಿಂದಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಸೋಮವಾರ ನಗರದ ಸೆಂಟ್ರಲ್ ಕಾಲೇಜಿನ ಸನೆಟ್ ಸಭಾಂಗಣದಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಮತದಾರರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ರಾಜಕಾರಣಿಗಳು ಗಣಿ ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆಗಳನ್ನು ನಡೆಸುತ್ತಿದ್ದು, ರಾಜ್ಯದ ಭೂಮಿ ಹಾಗೂ ಅರಣ್ಯ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದಾಗಿ ಭ್ರಷ್ಟಾಚಾರ ಮಿತಿಮೀರಿದ್ದು, ಚುನಾವಣೆಗಳೂ ಕೂಡ ಭ್ರಷ್ಟಗೊಂಡಿವೆ ಎಂದು ಬೃಂದಾ ಕಾರಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಡವರು, ಸ್ಲಂ ನಿವಾಸಿಗಳು ಹಾಗೂ ದುಡಿಯುವ ವರ್ಗಗಳಿಗೆ ದನಿ ಇಲ್ಲ ದಂತಾಗಿದೆ. ಬೆಲೆ ಏರಿಕೆ, ಪಡಿತರ ಅವ್ಯವಸ್ಥೆ, ಬಡವರಿಗೆ ಸೂರು ಒದಗಿಸುವ ಬಗ್ಗೆ ಎಂದಾ ದರೂ ವಿಧಾನ ಸಭೆಯಲ್ಲಿ ಚರ್ಚೆ ನಡೆದಿ ವೆಯೇ? ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳ ಅಪವಿತ್ರ ಮೈತ್ರಿಯಿಂದಾಗಿ ಇಂತಹ ಚರ್ಚೆ ಗಳನ್ನು ಮುಚ್ಚಿ ಹಾಕುವ ಮೂಲಕ ಉಳ್ಳವರ ಹಿತಕಾಯಲು ಸಂಚು ನಡೆಸುತ್ತಿದೆ ಎಂದು ಅವರು ಕಿಡಿ ಕಾರಿದರು.
ಇದೇ ವೇಳೆ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬಡವರಿಗೆ ನೀಡುತ್ತಿದ್ದ ಎಲ್ಲಾ ಸಬ್ಸಿಡಿಗಳನ್ನು ಕೇಂದ್ರ ವಾಪಸ್ ಪಡೆಯುತ್ತಿದ್ದು, ಈಗ ಪೆಟ್ರೋಲ್ ಬೆಲೆಯನ್ನು ಏರಿಸುವ ಮೂಲಕ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಿದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಯಾಗದಿದ್ದರೂ ಸಹ ಪೆಟ್ರೋಲ್ ಬೆಲೆಯನ್ನು ಏರಿಸಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಧಿಕ ತೆರಿಗೆಗಳನ್ನು ವಿಧಿಸುತ್ತಿದ್ದು, ಕೇಂದ್ರ ಸರಕಾರವು ವಾರ್ಷಿಕ 92 ಸಾವಿರ ಕೋಟಿ, ಹಾಗೂ ರಾಜ್ಯ ಸರಕಾರ 17 ಸಾವಿರ ಕೋಟಿ ರೂ.ಗಳಷ್ಟು ಲಾಭಗಳಿಸುತ್ತಿವೆ. ಕಾರ್ಪೊರೇಟ್ ವಲಯಕ್ಕೆ ಸುಮಾರು 5 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ವಿನಾಯಿತಿ ನೀಡುತ್ತಿರುವ ಸರಕಾರ ಬಡಜನರ ಸಬ್ಸಿಡಿಗೆ ಮಾತ್ರ ಕತ್ತರಿ ಹಾಕಲಾಗುತ್ತಿದೆ. ಈ ವಿಷಯದಲ್ಲಿ ಎಡ ಪಕ್ಷ ಗಳನ್ನು ಹೊರತುಪಡಿಸಿ, ಬೇರೆಲ್ಲಾ ಪಕ್ಷಗಳು ಇದೇ ನೀತಿಯನ್ನು ಅನುಸರಿಸುತ್ತಾ ಬಂದಿವೆ ಎಂದು ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿ ದರು.
ರಾಜ್ಯದಲ್ಲಿರುವ ಬಿಜೆಪಿ ಸರಕಾರ ಪ್ರಗತಿಪರ ಹಾಗೂ ಜಾತ್ಯತೀತ ಸಂಸ್ಕೃತಿಗೆ ಬದಲಾಗಿ ಜಾತೀಯತೆ ಹಾಗೂ ಕೋಮುವಾದವನ್ನು ಹರಡುತ್ತಿದೆ. ಇದರಿಂದ ದಲಿತರು, ಹಿಂದುಳಿ ದವರು ಹಾಗೂ ಅಲ್ಪಸಂಖ್ಯಾತರು ಸಂಕಷ್ಟಕ್ಕೆ ಸಿಲುಕಿದ್ದು, ಇದರ ವಿರುದ್ಧ ನಿರಂತರವಾಗಿ ಹೋರಾಡುವ ಅಗತ್ಯವಿದೆ. ಆದುದರಿಂದ ಮುಂಬರುವ ವಿಧಾನ ಪರಿಷತ್ ಚುನಾವಣೆ ಯಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ಕೆ.ಎಸ್. ಲಕ್ಷ್ಮೀಯವರನ್ನು ಆರಿಸಿ ಕಳುಹಿಸ ಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ವಿಚಾರವಾದಿ ಚಿಂತಕ ಪ್ರೊ. ಜಿ.ಕೆ.ಗೋವಿಂದರಾವ್, ಭ್ರಷ್ಟಾ ಚಾರಕ್ಕೆ ಸಿಲುಕಿ ಮಂತ್ರಿ ಪದವಿಯನ್ನು ಕಳೆದು ಕೊಂಡ ಮಾಜಿ ಸಚಿವ ರಾಮಚಂದ್ರಗೌಡ ಮತ್ತೆ ಚುನಾವಣೆಗೆ ನಿಂತಿರುವುದು ಅತ್ಯಂತ ನಾಚಿಕೆ ಗೇಡಿನ ಸಂಗತಿ. ಇದು ಭಂಡತನದ ಪರಮಾ ವಧಿಯಾಗಿದ್ದು, ರಾಜ್ಯದಿಂದ ಭ್ರಷ್ಟ ಹಾಗೂ ಕೋಮುವಾದಿ ಬಿಜೆಪಿ ಸರಕಾರವನ್ನು ಕಿತ್ತೊಗೆ ಯಲು ಲಕ್ಷ್ಮೀಯವರಿಗೆ ಮತ ನೀಡಿ ಎಂದು ಕೇಳಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮು ದಾಯದ ರಾಜ್ಯ ಕಾರ್ಯದರ್ಶಿ ಟಿ.ಸುರೇಂದ್ರ ನಾಥ್ ವಹಿಸಿದ್ದು, ಸಿಪಿಎಂ ರಾಜ್ಯ ಮುಖಂಡ ಎಸ್. ಪ್ರಸನ್ನಕುಮಾರ್, ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್, ಬ್ಯಾಂಕ್ ನೌಕರರ ಮುಖಂಡ ಎಚ್.ವಿ.ರೈ ಸೇರಿದಂತೆ ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಮುಖಂಡರು ಭಾಗವಹಿಸಿದ್ದರು.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಅಗ್ಗದ ಮದ್ಯಕೆ ಶುದ್ಧ ನೀರು ಬೆರೆಸಿ ಕುಡಿವ ವೇಳೆಗೆ ಸೌಭಾಗ್ಯದ ಸೋನಿಯಾ ಬಾರಮ್ಮಾ...

ಕಳಂಕಿತರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಭೇಷ್ ಅನಿಸಿಕೊಂಡ ಸಿದ್ದು, ಖಾತೆ ಹಂಚಿಕೆಯಲ್ಲ ...


- ಪಿ.ಕೆ.ಮಲ್ಲನಗೌಡರ್‌

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್