ಬೆಂಗಳೂರು, ಮೇ 30: ಪೌರ ಕಾರ್ಮಿಕರಿಗೆ 6936 ರೂ. ಕನಿಷ್ಠ ವೇತನ ನಿಗದಿಗೊಳಿಸುವ ಮೂಲಕ ನಾಲ್ಕು ವರ್ಷಗಳ ನಮ್ಮ ಸರಕಾರದ ನಾಲ್ಕು ವರ್ಷಗಳ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರಿಗೆ ಸಾಂಕೆತಿಕವಾಗಿ ಹೆಚ್ಚಳ ಮಾಡಿದ ಕನಿಷ್ಠ ವೇತನದ ಚೆಕ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 18 ಸಾವಿರ ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸುವ ಮೂಲಕ ಅವರ ಬೇಡಿಕೆಗೆ ಗೌರವ ನೀಡಿದ್ದೇವೆ ಎಂದರು.
ನಮ್ಮ ಸರಕಾರ ನಾಲ್ಕು ವರ್ಷ ಮುಗಿಸಿದೆ. ಆದರೆ, ಯಾವುದೆ ಸಂಭ್ರಮ ಆಚರಿಸುತ್ತಿಲ್ಲ. ಸರಕಾರದ ಕಾರ್ಯ ಗಳನ್ನು ಸಕಾಲದಲ್ಲಿ ಹಂತ ಹಂತವಾಗಿ ಮುಗಿಸುವ ಮೂಲಕವೆ ನಾವು ಸಂಭ್ರಮಿಸುತ್ತೇವೆ. ಸಂಭ್ರಮಿಸುವುದ ಕ್ಕಾಗಿಯೇ ಪ್ರತ್ಯೇಕವಾಗಿ ಕಾಲಹರಣ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಬಿಬಿಎಂಪಿ, ಬಿಡಿಎ, ಬಿಡಬ್ಲೂಎಸ್‌ಎಸ್‌ಬಿಗೆ 5500 ಕೋಟಿ ರೂ. ಅನುದಾನ ನೀಡಲಾಗಿದೆ. ರಸ್ತೆ, ನೀರು, ಮತ್ತು ಸಂಚಾರ ಅಭಿವೃದ್ಧಿಗೆ ಇದನ್ನು ವಿನಿಯೋಗಿಸಬೇಕು ಎಂದು ಅವರು ನುಡಿದರು.
ಬಿಬಿಎಂಪಿ ಮೇಯರ್ ಡಿ.ವೆಂಕಟೇಶ್ ಮೂರ್ತಿ ಮಾತನಾಡಿ, ಇದುವರೆಗೆ ಪೌರಕಾರ್ಮಿಕರು 2600 ವೇತನ ಪಡೆಯುತ್ತಿದ್ದರು. ಬಿಜೆಪಿ ಸರಕಾರ ಇದನ್ನು 6936 ರೂ.ಗಳಿಗೆ ಹೆಚ್ಚಿಸಿದೆ. ಪಿಎಫ್, ಇಎಸ್‌ಐ, ಹೊರತು ಪಡಿಸಿದರೆ, ಒಬ್ಬ ಕಾರ್ಮಿಕನಿಗೆ 5054 ರೂ.ಗಳು ಕೈಗೆ ಸಿಗುತ್ತವೆ. ಪ್ರತಿಭಟನೆ ನಡೆಸಿದ 4 ಗಂಟೆಯಲ್ಲಿ ಬೇಡಿಕೆಯನ್ನು ಈಡೇರಿಸಿಲಾಗಿದೆ. ಇನ್ನು ಮುಂದೆ ಪೌರ ಕಾರ್ಮಿಕರು ನಗರ ಸ್ವಚ್ಚತೆಗೆ ಸಂತೋಷದಿಂದ ಗಮನಹರಿಸಬೇಕು ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಸಚಿವ ಸುರೇಶ್‌ಕುಮಾರ್, ಉಪಮೇಯರ್ ಎಲ್.ಶ್ರೀನಿವಾಸ್, ಆಡಳಿತ ಪಕ್ಷದ ನಾಯಕ ಎಲ್.ನಾಗರಾಜ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‌ಬಾಬು, ಶಾಸಕರಾದ ರವಿಸುಬ್ರಹ್ಮಣ್ಯ, ಅಶ್ವತ್ಥನಾರಾಯಣ, ಸದಸ್ಯ ಗಂಗಭೈರಯ್ಯ ಮುಂತಾದವರು ಉಪಸ್ಥಿತರಿದ್ದರು.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...