ಬೆಂಗಳೂರು, ಮೇ 30: ಒಂದೆಡೆ ತಂಬಾಕು ಬೆಳೆಯುವ ರೈತರಿಗೆ ಬೆಂಬಲ ಬೆಲೆ ನೀಡಿ ಪ್ರೋತ್ಸಾಹ, ಮತ್ತೊಂದೆಡೆ ತಂಬಾಕು ಸೇವನೆ ವಿರುದ್ಧ ಹೋರಾಟದಂತಹ ದ್ವಂದ್ವ ನಿಲುವಿನಿಂದಾಗಿ ಸರಕಾರ ತಂಬಾಕು ಉತ್ಪನ್ನಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಾಗುತ್ತಿಲ್ಲ. ಆದುದ ರಿಂದ ಮುಂದಿನ ಅಧಿವೇಶನದಲ್ಲಿ ನೂತನ ತಂಬಾಕು ನೀತಿ ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವಿಶ್ವ ತಂಬಾಕು ರಹಿತ ದಿನ - 2012ರ ಅಂಗವಾಗಿ ಏರ್ಪಡಿಸಿದ್ದ ಕಾರ್ಯ ಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಪಂಚದಲ್ಲೆ ಭಾರತ ತಂಬಾಕು ಉತ್ಪಾದನೆ, ರಫ್ತು ಹಾಗೂ ಬಳಕೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಇಂದು ತಂಬಾಕು ಉತ್ಪನ್ನಗಳಿಗೆ ಯುವಕರು ಹಾಗೂ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದು, ಇದೆ ಸ್ಥಿತಿ ಮುಂದುವರಿದರೆ 2020 ವೇಳೆಗೆ ಜಾಗತಿಕವಾಗಿ ಮುಂಚೂಣಿ ರಾಷ್ಟ್ರವಾಗಲು ಶ್ರಮಿ ಸುತ್ತಿರುವ ನಾವು ದೇಶದ ಶೇ. 25ರಷ್ಟು ಯುವಜನಾಂಗವನ್ನು ಅನಾ ರೋಗ್ಯ ಪೀಡಿತರನ್ನಾಗಿ ಸೃಷ್ಟಿಸಲಿದ್ದೇವೆ ಎಂದು ರಾಮದಾಸ್ ಆತಂಕ ವ್ಯಕ್ತಪಡಿಸಿದರು.
ತಂಬಾಕು ಪದಾರ್ಥಗಳ ನಿಯಂತ್ರ ಣಕ್ಕೆ ಎಷ್ಟೆ ಕಾನೂನು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಸಹ ಪ್ರತಿ ವರ್ಷ ಶೇ. 4ರಷ್ಟು ತಂಬಾಕು ಬಳಕೆದಾರರು ಜಾಸ್ತಿಯಾಗುತ್ತಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ಪ್ರತಿವರ್ಷ ಶೇ. 10ರಷ್ಟು ಜಾಸ್ತಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಪ್ರತಿ ವರ್ಷ ಶೇ. 30ರಷ್ಟು ಮಹಿಳೆಯರು ತಂಬಾಕಿನಿಂದಾಗಿ ಕ್ಯಾನ್ಸರ್ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು.
ತಂಬಾಕು ಉತ್ಪನ್ನಗಳಿಗೆ ರಾಯ ಭಾರಿಗಳಾಗುತ್ತಿರುವ ನಮ್ಮ ಸಿನಿಮಾ ನಟರು ಹಾಗೂ ಕ್ರಿಕೆಟ್ ತಾರೆಯ ರಿಂದಾಗಿ ಯುವ ಜನಾಂಗ ದುಶ್ಚಟ ಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ತಂಬಾಕು ಉತ್ಪನ್ನಗಳಿಂದ ಬರುವ ಆದಾಯ ಕ್ಕಿಂತಲೂ ಅವುಗಳಿಂದ ಉಂಟಾಗುವ ರೋಗಗಳಿಗೆ ಸರಕಾರ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ. ತಂಬಾಕು ಉತ್ಪನ್ನಗಳನ್ನು ಬಹು ರಾಷ್ಟ್ರೀಯ ಕಂಪೆನಿಗಳು ಉತ್ಪಾದಿ ಸುತ್ತಿದ್ದು, ಸರಕಾರಗಳ ಮೇಲೆ ಒತ್ತಡ ತರುವ ಮೂಲಕ ನಿಷೇಧಕ್ಕೆ ಅಡ್ಡಿಯಾ ಗಿವೆ. ಎಲ್ಲಿವರೆಗೆ ಈ ದೇಶದ ಯು ಜನಾಂಗ ತಂಬಾಕು ನಿಷೇಧಿಸುವ ಸರಕಾರಕ್ಕೆ ನಮ್ಮ ಮತ ಎಂದು ನಿರ್ಧರಿಸುವುದಿಲ್ಲವೊ, ಅಲ್ಲಿಯವರೆಗೆ ತಂಬಾಕು ನಿಷೇಧ ಅಸಾಧ್ಯ. ಆದು ದರಿಂದ ಈ ಬಗ್ಗೆ ಯುವಕರು ಜಾಗೃತ ರಾಗಬೇಕು ಎಂದು ರಾಮದಾಸ್ ತಿಳಿಸಿದರು.
ಇದೆ ವೇಳೆ ಮಾತನಾಡಿದ ರಾಜೀವ್ ಗಾಂಧಿ ಶ್ವಾಸಕೋಶ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ನಿರ್ದೇಶಕ ಡಾ.ಶಶಿಧರ ಬುಗ್ಗಿ, ವಿಶ್ವದಲ್ಲಿ ಸುಮಾರು 10 ಮಿಲಿಯನ್ ಜನ ತಂಬಾಕಿನ ಉತ್ಪನ್ನಗಳಿಂದಾಗಿ ಶ್ವಾಸಕೋಶ ಸಂಬಂಧಿ ರೋಗಗಳಿಂದ ಬಳಲು ತ್ತಿದ್ದಾರೆ. ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಶೇ. 10ರಷ್ಟು ವಿದ್ಯಾರ್ಥಿಗಳು ಧೂಮಪಾನದಂತಹ ಚಟಗಳನ್ನು ಹತ್ತಿಸಿಕೊಳ್ಳುತ್ತಿದ್ದು, ವೈದ್ಯರೂ ಸಹ ಕೆಲಸದ ಒತ್ತಡದಿಂದ ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಆದುದರಿಂದ ಪ್ರಾಥಮಿಕ ಶಿಕ್ಷಣದ ಹಂತದಿಂದಲೆ ತಂಬಾಕು ಪದಾರ್ಥಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ.ಎಂ. ವಿಜಯ್‌ಕುಮಾರ್, ನಿಮ್ಹಾನ್ಸ್‌ನ ನಿರ್ದೇಶಕ ಡಾ.ಸತೀಶ್‌ಚಂದ್ರ, ಡೆಂಟಲ್ ಕೌನ್ಸಿಲ್ ಆಫ್ ಇಂಡಿ ಯಾದ ಕಾರ್ಯಕಾರಿ ಸದಸ್ಯ ಡಾ. ಜಯಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೆ ವೇಳೆ ತಂಬಾಕು ಉತ್ಪನ್ನಗಳಿಂದ ಬರುವ ವಿವಿಧ ಮಾರಕ ಕಾಯಿಲೆಗಳ ಬಗ್ಗೆ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...