mail-img print-img

ಸಚಿವರ ರಾಜೀನಾಮೆ;ಅಂಗೀಕರಿಸದ ಸಿಎಂ ನಿಲುವಿಗೆ ಸಿಪಿಐ ಖಂಡನೆ

ಸೋಮವಾರ - ಜೂನ್ -25-2012

ಬೆಂಗಳೂರು, ಜೂ.24: ಹಲವು ಹಗರಣಗಳ ಆರೋಪಗಳಿಂದ ತುಂಬಿ ತುಳುಕುತ್ತಿರುವ ರಾಜ್ಯ ಬಿಜೆಪಿ ಸರಕಾರದಲ್ಲಿ ಆರೋಪ ಕೇಳಿಬಂದ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾನೂನು ಸಚಿವ ಸುರೇಶ್ ಕುಮಾರ್‌ರ ಅಪರೂಪದ ಕ್ರಮವನ್ನು ಸಿಪಿಐ(ಭಾರತ ಕಮ್ಯಿನಸ್ಟ್ ಪಕ್ಷ) ಸ್ವಾಗತಿಸಿದ್ದು, ಅವರ ರಾಜೀನಾಮೆ ಅಂಗೀಕರಿಸಲು ನಿರಾಕರಿಸಿದ ಮುಖ್ಯ ಮಂತ್ರಿಗಳ ನಿಲುವನ್ನು ಖಂಡಿಸಿದೆ. ಭ್ರಷ್ಟಾಚಾರಿ, ಅಧಿಕಾರಶಾಯಿ, ಸ್ವಜನ ಪಕ್ಷಪಾತಿಗಳ ಹಿಂಡಿನ ಮಧ್ಯೆ ಮೇಲ್ನೋಟಕ್ಕೆ ಸಜ್ಜನರಂತೆ ಕಾಣುತ್ತಿದ್ದ ಸುರೇಶ್ ಕುಮಾರ್ ವಿವಾದಕ್ಕೆ ಕಾರಣವಾದ ನಿವೇಶನವನ್ನು ಸ್ವತಃ ಹಿಂದಿರುಗಿಸಿ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ತಪ್ಪಿಸಲೆಂದು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿ ತನಿಖೆಗೆ ಆದೇಶಿಸಬೇಕಿದ್ದ ಮುಖ್ಯ ಮಂತ್ರಿಗಳು, ಸಚಿವರ ರಾಜೀನಾಮೆ ಹಿಂಪಡೆಯುವಂತೆ ಅಂಗಲಾಚುವ ಮೂಲಕ ಜನರ ಮುಂದೆ ಸಣ್ಣವರಾಗಿ ದ್ದಾರೆ ಎಂದು ಸಿಪಿಐ ಅಭಿಪ್ರಾಯ ಪಟ್ಟಿದೆ ಎಂದು ಸಿಪಿಐ ರಾಜ್ಯ ಕಾರ್ಯ ದರ್ಶಿ ಪಿ.ವಿ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಈ ಹಿಂಜರಿಕೆಗೆ ಒಂದೋ ಸುರೇಶ್ ಕುಮಾರ್ ಮೇಲಿನ ಹಗರಣದ ಆರೋಪ ಹೊರಬರಲು ಬಿಜೆಪಿಯ ಆಂತರಿಕ ಕಿತ್ತಾಟ ಕಾರಣವಾಗಿರಬಹುದು. ಇಲ್ಲವೇ ತನ್ನ ಸಂಪುಟದಲ್ಲಿರುವ ಇತರ ಕಳಂಕಿತ ಮಂತ್ರಿಗಳ ವಿರುದ್ಧ ಇದೇ ಮಾನದಂಡ ಅನುಸರಿಸಬೇಕಾದ ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುವ ಕಾರಣರಬಹುದು. ಮೇಲ್ನೋಟಕ್ಕೆ ಕಾಣುವ ನೈತಿಕತೆಯ ಹಿನ್ನೆಲೆ ಎಂದು ಹೇಳಲಾಗುತ್ತಿರುವ ಈ ರಾಜೀನಾಮೆಯಿಂದ ಸದ್ಯದಲ್ಲಿ ನಿರೀಕ್ಷಿತ ಸಂಪುಟ ವಿಸ್ತರಣೆ ವೇಳೆ ಬಿಜೆಪಿ ನಾಯಕತ್ವ ತನ್ನ ಮಾದರಿ ನೈತಿಕತೆ ಅನುಸರಿಸುವ ಒತ್ತಡಕ್ಕೆ ಸಿಲುಕಿಸುವ ತಂತ್ರಗಾರಿಕೆ ಸುರೇಶ್ ಕುಮಾರ್ ರಾಜೀನಾಮೆಯ ಉದ್ದೇಶವಾಗಿದೆ ಎಂದು ಸಿಪಿಐ ರಾಜ್ಯ ಮಂಡಳಿ ವಿಶ್ಲೇಶಿದೆ.
ಇಂತಹ ಘಟನೆಗಳು ಮರುಕಳಿಸಿ ಆಡಳಿತ ಮತ್ತಷ್ಟು ಹದಗೆಟ್ಟು ಅತಂತ್ರ ಸ್ಥಿತಿ ನಿರ್ಮಾಣವಾಗುವ ಎಲ್ಲಾ ಸಾಧ್ಯತೆ ಗಳಿದ್ದು ಇದರ ನಿವಾರಣೆಗಾಗಿ ಮುಖ್ಯ ಮಂತ್ರಿಗಳು ವಿಧಾನಸಭೆ ವಿಸರ್ಜಿಸಿ ಹೊಸ ಜನಾದೇಶಕ್ಕೆ ಮುಂದಾಗ ಬೇಕೆಂದು ಪಕ್ಷ ಒತ್ತಾಯಿಸಿದೆ.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕೊಟ್ಟಂತೆ ಮಾಡಿ ಬಡವರಿಂದ ಇನ್ನಷ್ಟು ಕಿತ್ತುಕೊಳ್ಳಬೇಡಿ

ಹೊಸ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದ ನಂತೆ. ಅಧಿಕಾರಕ್ಕೇರಿದ ಉತ್ಸಾಹದಲ್ಲಿ, ಸಿದ್ದರಾಮಯ್ಯ ಇದೇ ಹಾದಿಯಲ್ಲಿ ಸಾಗುತ್ತಿ ದ್ದಾರೆಯೇ? ಮತ ಹಾಕಿದ ಜನರನ್ನು ಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್