mail-img print-img

ರಾಜ್ಯದಲ್ಲಿ ರ್ಯಾಸ್ಕಲ್‌ಗಳ ಆಡಳಿತ;ರಾಜ್ಯಾದ್ಯಂತ ಬಿಜೆಪಿ ಹಠಾವೋ ಚಳವಳಿಯಾಗಲಿ: ಎಚ್.ಎಸ್.ದೊರೆಸಾ್ವಮಿ

ಮಂಗಳವಾರ - ಜುಲೈ -10-2012

ಬೆಂಗಳೂರು, ಜು. 9: ರಾಜ್ಯದಲ್ಲಿ ರ್ಯಾಸ್ಕಲ್‌ಗಳು ಅಧಿಕಾರ ನಡೆಸುತ್ತಿದ್ದಾರೆ. ಮೂರು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಕೆಲವರು ಜೈಲಿಗೋದರೆ, ಮತ್ತೆ ಕೆಲವರು ಕೋರ್ಟ್‌ಗಳಿಗೆ ಅಲೆಯುತ್ತಿದ್ದಾರೆ. ಇಂತಹ ಸರಕಾರವನ್ನು ಕಿತ್ತೊಗೆ ಯಲು ರಾಜ್ಯಾದ್ಯಂತ ಬಿಜೆಪಿ ಹಠಾವೋ ಚಳವಳಿಯನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್. ಎಸ್.ದೊರೆಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಸೋಮವಾರ ನಗರದ ಭಾರತೀಯ ವಿದ್ಯಾ ಭವನದಲ್ಲಿ ದಿ ಸ್ಪೈಡರ್ ಆಫ್ ಇಂಡಿಯಾ ಕನ್ನಡ ವಾರ ಪತ್ರಿಕೆ ಬಿಡುಗಡೆ ಕಾರ್ಯ ಕ್ರಮವನ್ನು ಉದ್ಘಾಟಸಿ ಅವರು ಮಾತನಾಡುತ್ತಿ ದ್ದರು.
ಬಿಜೆಪಿಯವರು ರಾಜಕೀಯ ಅನಾಚಾರದ ಹಾದಿಯಲ್ಲಿ ಬಹಳ ದೂರ ಸಾಗಿದ್ದಾರೆ. ಅವರು ನಡೆದಿರುವ ಹಾದಿ ಹೊಲಸು ಮತ್ತು ಅಮೇಧ್ಯ ದಿಂದ ಕೂಡಿದೆ. ಬಿಜೆಪಿಯ ಹೈಕಮಾಂಡ್‌ನ ದೊಡ್ಡ ನಾಯಕರೆಲ್ಲ ಇಂತಹ ಕೆಟ್ಟ ಸರಕಾರಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ದೊರೆಸ್ವಾಮಿ ಕಿಡಿ ಕಾರಿದರು.
ಒಬ್ಬ ಮನುಷ್ಯನನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಜಾತಿ ರಾಜಕಾರಣ ದಂತಹ ದುರ್‌ರ್ಮಾರ್ಗವನ್ನು ಅನುಸರಿಸುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರ, ಜಾತಿ ರಾಜಕಾರಣ, ಅರಾಜಕತೆ ತಾಂಡವವಾಡುತ್ತಿದ್ದರೂ ಎಲ್ಲಾ ರಾಜಕೀಯ ಪಕ್ಷಗಳು ನಿಷ್ಕ್ರಿಯಗೊಂಡಿವೆ. ಜನರೂ ಕೂಡ ಇಂತಹ ಅನಾಚಾರಗಳನ್ನು ನೋಡಿಕೊಂಡು ಸತ್ತಂತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾಜವನ್ನು ಪತ್ರಿಕೆಗಳು ಎಚ್ಚರಿಸಬೇಕು. ಬಿಜೆಪಿಯಂತಹ ಪಕ್ಷಗಳನ್ನು ತೊಡೆದು ಹಾಕಲು ಎಲ್ಲಾ ಪತ್ರಿಕೆಗಳು ತಯಾ ರಾದರೆ ದೇಶ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕೆಗಳು ಜನರಿಗೆ ತಲುಪಬೇಕಾದರೆ ಉತ್ತಮ ಜನಸ್ಪಂದನೆ ಅಗತ್ಯ. ಪತ್ರಿಕೆಗಳು ಜೀವಂತಿಕೆಯಿಂದ ಇರಬೇಕಾದರೆ, ಬರ ಗಾರರು ಜನರ ಮನಸ್ಸನ್ನು ಗೆಲ್ಲುವಂತೆ ಬರೆಯ ಬೇಕು. ಇಲ್ಲದಿದ್ದರೆ ಪತ್ರಿಕೆ ರದ್ಧಿಯಾಗುತ್ತದೆ. ಆದುದರಿಂದ ಪತ್ರಿಕೆಗಳು ಸದಾ ಜನರನ್ನು ಅನ್ಯಾ ಯದ ವಿರುದ್ಧ ಜನ ಜಾಗೃತಿಗೊಳಿಸುವ ಹಾಗೂ ಹೋರಾಟಕ್ಕೆ ಅಣಿಗೊಳಿಸುವ ಕೆಲಸ ವನ್ನು ಮಾಡಬೇಕು ಎಂದು ದೊರೆಸ್ವಾಮಿ ಹೇಳಿದರು.
ಇದೇ ವೇಳೆ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಸಣ್ಣ ಪತ್ರಿಕೆಗಳು ಜನಸಾಮಾನ್ಯರಿಗೆ ತಲುಪಿ ಅವರನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ. ಸಣ್ಣ ಪತ್ರಿಕೆಗಳಿಂದ ಕನ್ನಡದ ಅಭಿವೃದ್ಧಿ ಹಾಗೂ ಬೆಳವಣಿಗೆ ಸಾಧ್ಯ. ರಾಜ್ಯದಲ್ಲಿ ಸುಮಾರು 8 ಸಾವಿರ ಸಣ್ಣ ಪತ್ರಿಕೆಗಳಿದ್ದು, ಈ ಪತ್ರಿಕೆಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ಪ್ರತಿ ತಿಂಗಳು ಸುಮಾರು ನೂರರಿಂದ ನೂರಿಪ್ಪತ್ತು ಹೊಸ ಶಬ್ದಗಳು ಸೇರುತ್ತಿವೆ. ಆ ಮೂಲಕ ಕನ್ನಡದ ಬೆಳವಣಿಗೆಗೆ ಸಣ್ಣ ಪತ್ರಿಕೆಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಜೆ.ಹುಚ್ಚಪ್ಪ, ಪತ್ರಿಕೆಯ ಸಂಪಾದಕ ಎಚ್.ಎಚ್. ಧನಂಜಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್