
ಚಿಕ್ಕಮಗಳೂರು:ಸುಮಾರು ನೂರು ವರ್ಷಗಳ ಹಿಂದೆ (1910) ಇಂಗ್ಲಿಷ್ ವಿಜ್ಞಾನಿ ಡಾ॥ಇಂದಿನವರೆಗೂ ಬೋರ್ಡೋ ಹೊರತುಪಡಿಸಿ ಯಾವುದೇ ಕೊಳೆರೋಗದ ಔಷಧಿಯನ್ನು ತೋವಿಯ ತೋಟಗಾರಿಕಾ ಸಂಶೋಧನಾ ಕೇಂದ್ರಗಳ ಮೂಲಕ ಶಿಫಾರಸು ಮಾಡಿರುವುದಿಲ್ಲ. ಮಲೆನಾಡಿನಲ್ಲಿ ಅಡಿಕೆ ಬೇಸಾಯ ಒಂದು ಸಾಂಪ್ರದಾಯಿಕ ಪರಂಪರೆ. ಇಲ್ಲಿ ಎಲ್ಲವೂ ವ್ಯವಸ್ಥಿತ. ಬೇಸಾಯ ಪದ್ಧತಿ, ಔಷಧಿ ಸಿಂಪರಣೆ, ಕೊಯಿಲು, ಸಂಸ್ಕರಣೆ ಎಲ್ಲವೂ ವಿಶಿಷ್ಠ. ಅಡಿಕೆ ಒಣಗಿಸಲು ಕೂಡ ವಿಶೇಷ ಚಪ್ಪರವನ್ನು ಮಾಡಿ ಯಾರೂ ಕಾಲಿನಿಂದ ತುಳಿಯದಂತೆ ನೋಡಲಾಗುತ್ತದೆ. ಅಡಿಕೆ ಬೇಸಾಯ ಮಲೆನಾಡಿನಲ್ಲಿ ಒಂದು ಜೀವನದ ಹೋರಾಟ. ಇಲ್ಲಿ ಎಲ್ಲರೂ ಮಧ್ಯಮ ಮತ್ತು ಸಣ್ಣ ಹಿಡುವಳಿದಾರರು. ಈಗಾಗಲೇ ಅಡಿಕೆ ಸಾಕಷ್ಟು ಪ್ರಮಾಣದಲ್ಲಿ ಗುಟ್ಕಾದಂತಹ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆಯಾ ಗುತ್ತಿರುವುದರಿಂದ, ಅಡಿಕೆ ಬೆಲೆ ಭವಿಷ್ಯ ನ್ಯಾಯಾಲ ಯಗಳ ತೀರ್ಪಿನ ಮೇಲೆ ತೂಗುಯ್ಯಾಲೆಯಾಡುತ್ತಿದೆ.ಇದನ್ನೇ ಬಂಡವಾಳವಾಗಿ ಮಾಡಿಕೊಂಡ ವ್ಯಾಪಾರಿ ಗಳು ಬೆಲೆಯನ್ನು ನಿಯಂತ್ರಿಸುತ್ತಿದ್ದಾರೆ. ಮಲೆನಾಡಿನಲ್ಲಿ ಅಡಿಕೆ ಜಾಗವನ್ನು ಸ್ಥಳಾಂತರಿಸಬಲ್ಲ ಪರ್ಯಾಯ ಲಾಭದಾಯಕ ಬೆಳೆ ಇನ್ನೂ ಕಂಡುಬಂದಿರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ರಬ್ಬರ್ ಬೆಳೆ ಪ್ರಚಲಿತವಾಗಿದ್ದರೂ ಇದನ್ನು ಮೇಲ್ಮಟ್ಟದ ಜಾಗದಲ್ಲಿ ಚೆನ್ನಾಗಿ ಬೆಳೆಯಬ ಹುದು. ಅಡಿಕೆ ಮತ್ತು ಭತ್ತದ ಬೆಳೆ ಇಲ್ಲವಾದರೆ ಜನ ವಲಸೆ ಹೋಗುವ ಅನಿವಾರ್ಯತೆ ಬರಬಹುದು. ಆದ್ದರಿಂದ ಅಡಿಕೆ ಬೆಳೆಗಾರರು ದೀರ್ಘಕಾಲದಿಂದ ಪರೀಕ್ಷಿಸಲ್ಪಟ್ಟಿರುವ ಹೊಸ ಔಷಧಿಗಳನ್ನು ಮಾತ್ರ ಬಳಸಬೇಕು. ಈ ಹೊಸ ಔಷಧಿಗಳಲ್ಲಿ ಮನುಷ್ಯರ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಗಳಾಗುತ್ತವೆ ಎಂಬುದರ ಅಧ್ಯಯನ ಮೊದಲಾಗ ಬೇಕು. ಈ ಔಷಧಿಗಳಲ್ಲಿ ಯಾವ ಯಾವ ರಾಸಾಯನಿಕಗಳಿವೆ ಎಂಬುದನ್ನು ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಮುದ್ರಿಸಬೇಕು. ಮನುಷ್ಯರು ಬಳಸುವ ಔಷಧಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಸಂಶೋಧನೆಗಾಗಿ ಶತಕೋಟಿ ಡಾಲರ್‌ಗಳಲ್ಲಿ ಹಣ ವ್ಯಯವಾಗುತ್ತದೆ.
ವೈಜ್ಞಾನಿಕ ಬೋರ್ಡೋ ದ್ರಾವಣ ತಯಾರಿಕೆ
ನೂರು ವರ್ಷಗಳ ಬಳಕೆಯ ನಂತರವೂ ಅನೇಕ ರೈತರು ಸರಿಯಾದ ರೀತಿಯಲ್ಲಿ ಬೋರ್ಡೋ ದ್ರಾವಣವನ್ನು ತಯಾರಿಸುವುದಿಲ್ಲ.ಶೇ. 1ರ ಬೋರ್ಡೋ ದ್ರಾವಣವೆಂದರೆ 1ಕಿ.ಗ್ರಾಂ. ಮೈಲುತುತ್ತ ಹಾಗೂ 1 ಕಿ.ಗ್ರಾಂ. ಸುಣ್ಣದ ಮಿಶ್ರಣ ವುಳ್ಳ 100 ಲೀ.ನೀರಿನ ದ್ರಾವಣ ಎಂದರ್ಥ.ಆದರೆ ಇತ್ತೀಚೆನ ದಿನಗಳಲ್ಲಿ ವಾಣಿಜ್ಯ ಪೈಪೋಟಿಯಿಂದಾಗಿ ವಿವಿಧ ಕಂಪೆನಿಗಳು ಹಾಗೂ ಸಂಸ್ಥೆಗಳಲ್ಲಿ ಗುಣ ಮಟ್ಟದ ಮೈಲುತುತ್ತ ಮತ್ತು ಸುಣ್ಣ ದೊರಕು ವುದರಿಂದ ಯಥೇಚ್ಛವಾಗಿ ಔಷಧಿ ಬಳಕೆ ಮಾಡಬೇಕಾಗಿಲ್ಲ. ಪ್ರಯೋಗ ಶಾಲೆಯಲ್ಲಿ ಮಾದರಿ ಪರಿಶೀಲಿಸಿ ಗುಣಮಟ್ಟದ ಮತ್ತು ಶುಚಿತ್ವದ ಆಧಾರದ ಮೇಲೆ ಮೈಲುತುತ್ತ ಮತ್ತು ಸುಣ್ಣದ ಪ್ರಮಾಣ ಬಳಸಬಹುದಾಗಿದೆ. ಸಾಮಾನ್ಯವಾಗಿ ಪಾರದರ್ಶಕ ಗಾಜಿನ ಪಾತ್ರೆಯಲ್ಲಿ ಮೈಲುತುತ್ತದ ಹರಳು ಹಾಕಿ ನಿಧಾನವಾಗಿ ಹರಳಿನ ಎಲ್ಲಾ ಭಾಗದಿಂದ ಸಣ್ಣ ಸಣ್ಣ ನೀರುಗುಳ್ಳೆ ಬಂದಲ್ಲಿ ಅದು ಉತ್ತಮ ಮೈಲುತುತ್ತ.
ಅದೇ ರೀತಿ ಸುಣ್ಣದ ಪುಡಿ ಇರುವ ಪಾತ್ರೆಗೆ ಸಾಧಾರಣ ನೀರು ಹಾಕಿ ಮೂರರಿಂದ ಐದು ನಿಮಿಷಗಳ ನಂತರ ನಿಧಾನಗತಿಯ ಕುದಿ ಬಂದಲ್ಲಿ ಉತ್ತಮ ಸುಣ್ಣ ಎಂದರ್ಥ.ರೈತರು ಸಂಶಯವಿದ್ದಲ್ಲಿ ಗುಣಮಟ್ಟ ಪರೀಕ್ಷೆಗೆ ವಿವಿಧ ಸಂಶೋಧನಾ ಕೇಂದ್ರದಲ್ಲಿ ತಪಾಸಣೆಗೊಳಿಸಬಹು ದಾಗಿದೆ. ಲಿಟ್ಮಸ್ ಅಥವಾ ಪಿ.ಹೆಚ್. ಹಾಳೆ ಮೂಲಕ ರಸ ಸಾರ ಪತ್ತೆ ಮಾಡಬಹುದಾಗಿದೆ.
ತಯಾರಿಸಿದ ಬೋರ್ಡೋ ದ್ರಾವಣದ ಮಿಶ್ರಣ ಸರಿಯಾಗಿದೆ, ಇಲ್ಲವೇ? ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ದ್ರಾವಣಕ್ಕೆ ಅದ್ದಬೇಕು.ಒಂದು ವೇಳೆ ಚಾಕು ಅಥವಾ ಬ್ಲೇಡ್ ಮೇಲೆ ಕೆಂಪು ಬಣ್ಣ ಕಂಡು ಬಂದರೆ ಇನ್ನೂ ಸ್ಪಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು.ಕೆಂಪು ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೋ ದ್ರಾವಣದಲ್ಲಿ ಅದ್ದಿ ತೆಗೆದರೆ ಕೆಂಪು ಬಣ್ಣದ ಲಿಟ್ಮಸ್ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೋ ದ್ರಾವಣವು ಸರಿಯಾಗಿರುತ್ತದೆ.ಈ ರೀತಿ ತಯಾರಿಸಿದ ಮಿಶ್ರಣ ಆಕಾಶ ತಿಳಿನೀಲಿ ಬಣ್ಣದ್ದಾಗಿರಬೇಕು.
ಹೆಚ್ಚಿನ ಅಡಿಕೆ ಬೆಳೆಗಾರರು ಮೈಲುತುತ್ತ ನೀರಿಗೆ ಸುಣ್ಣ ಬೆರೆಸುವುದು ಹಾಗೂ ಸುಣ್ಣದ ನೀರಿಗೆ ಮೈಲುತುತ್ತ ಬೆರೆಸುವುದು ಸಾಮಾನ್ಯವಾಗಿ ಕಂಡು ಬಂದಿದೆ.ಆದರೆ ಇದು ತಪ್ಪುಕ್ರಮ. ಪ್ರತ್ಯೇಕವಾಗಿ ತಯಾರು ಮಾಡಿದ ಸುಣ್ಣ ಹಾಗೂ ಮೈಲುತುತ್ತದ ನೀರನ್ನು ಮೂರನೇ ನೀರಿರುವ ಪಾತ್ರೆಗೆ ಏಕಕಾಲಕ್ಕೆ ಎತ್ತರದಿಂದ ಸುರಿದು ಬ್ಯಾರಲ್‌ನಲ್ಲಿ ನೀರಿನಮಟ್ಟ ಕಾಪಾಡಿ ಕೊಳ್ಳಬೇಕು.ತೆರೆದ ಆವರಣದಲ್ಲಿ ಬೋರ್ಡೋ ದ್ರಾವಣ ತಯಾರಿ ಮಾಡುವುದರಿಂದ ವಾತಾವರಣದ ಆಮ್ಲಜನಕ ರಾಸಾಯನಿಕ ಕ್ರಿಯೆಗೆ ಬಹು ಸಹಕಾರಿ ಯಾಗಿದೆ. ತಯಾರಿಸಿದ 100 ಲೀ. ಬೋರ್ಡೋ ದ್ರಾವಣಕ್ಕೆ 200 ಮಿಲಿ ರಾಳವನ್ನು ಬೆರೆಸಿ ಸಿಂಪಡಿ ಸಬೇಕು. ಇದರಿಂದ ದ್ರಾವಣದ ಔಷಧಿಯ ಅಂಶವು 45 ರಿಂದ 50 ದಿನಗಳವರೆಗೆ ಕಾಯಿಗಳಲ್ಲಿ ಉಳಿಯುತ್ತದೆ.
ವಿಶೇಷತೆಗಳು:ಸುಣ್ಣದಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಅಡಿಕೆ ಕಾಯಿಗಳ ಬೆಳವಣಿಗೆಗೆ ಯೋಗ್ಯವಾಗಿದೆ ಹಾಗೂ ಕಾಲಕ್ಕೆ ಸರಿಯಾಗಿ ಗೊನೆಗಳ ಕಟಾವು ಮಾಡಬಹುದಾಗಿದೆ. ಮಳೆಗಾಲದ ವೇಳೆ ವಾತಾವರಣದಲ್ಲಿನ ಏರುಪೇರುಗಳಿಂದ ಉಂಟಾಗುವ ಇತರೇ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ರೋಗಾಣುಗಳು ಸೃಷ್ಟಿಯಾಗು ವುದನ್ನು ಬೋರ್ಡೋ ಸಿಂಪಡಣೆಯಿಂದ ನಿವಾರಿಸ ಬಹುದು ಹಾಗೂ ಬೋರ್ಡೋ ದ್ರಾವಣವನ್ನು ಸುಳಿ ಭಾಗಕ್ಕೂ ಸಿಂಪಡಿಸಿದಲ್ಲಿ ಶಿರ ಮತ್ತು ಬೂದು ಕೊಳೆರೋಗವನ್ನು ಹತೋಟಿ ಮಾಡಬಹುದು. ವಾತಾವರಣದಲ್ಲಿನ ಆಮ್ಲಜನಕವು ಹಾಗೂ ನಿಧಾನಗತಿಯ ಗಾಳಿಯು ಕುದಿಯುತ್ತಿರುವ ಸುಣ್ಣದ ರಾಸಾಯನಿಕ ಕ್ರಿಯೆಯನ್ನು ಪರಿಪೂರ್ಣಗೊಳಿಸು ವುದರಿಂದ, ಮಿಶ್ರಣವಾಗುವ ಮೈಲುತುತ್ತ ದ್ರಾವಣ ವು ಆಕಾಶ ನೀಲಿ ಬಣ್ಣಕ್ಕೆ ತಿರುಗಿ ಯೋಗ್ಯ ಸಿಂಪರಣಾ ಔಷಧಿಯಾಗಿ ಪರಿಣಾಮಕಾರಿಯಾಗಿ ಯಶಸ್ವಿಗೊಳ್ಳುವುದು.
ಸೂಚನೆಗಳು: ಮೈಲುತುತ್ತದ ಹರಳನ್ನು ಪುಡಿಮಾಡಿ ಔಷಧಿ ತಯಾರಿಸುವ 5 ಗಂಟೆ ಮುನ್ನ ತೆಳುವಾದ ಬಟ್ಟೆಯಲ್ಲಿ ಕಟ್ಟಿ, ನೀರಿನಲ್ಲಿ ಜೋತು ಬಿಡಬೇಕು. ಔಷಧಿ ದ್ರಾವಣ ತಯಾರಿಸಲು ಪ್ಲಾಸ್ಟಿಕ್ ಪಾತ್ರೆ ಬಳಸಬೇಕು. ಸುಣ್ಣದಲ್ಲಿ ಮರಳಿನ ಕಣಗಳು ಇಲ್ಲದಂತೆ ನೋಡಿಕೊಳ್ಳಬೇಕು. ಮೈಲುತುತ್ತದ ಶುದ್ಧತೆ ಮತ್ತು ಗುಣಮಟ್ಟವನ್ನು ಪರಿಶೀಲಿಸುವುದು. ಮುಂಗಾರು ಆರಂಭದ 2ನೆ ವಾರದಲ್ಲಿ ಸುರಕ್ಷಿತ ಸಿಂಪರಣೆ ಮಾಡುವುದು. ಮಳೆಯ ಮತ್ತು ರೋಗ ಪ್ರಮಾಣ ಹೆಚ್ಚಾದಲ್ಲಿ, 45 ದಿನಗಳ ಅಂತರದಲ್ಲಿ 2ನೆ ಮತ್ತು 3ನೆ ಸಿಂಪರಣೆ ಮಾಡುವುದು.ಲಿಟ್ಮಸ್ ಹಾಳೆ, ಪಿ.ಹೆಚ್.ಹಾಳೆ, ಹರಿತವಾದ ಬ್ಲೇಡ್, ಉಪಯೋಗಿಸಿ ಬೋರ್ಡೋ ರಸಸಾರ ಪರೀಕ್ಷಿಸಬಹುದು.
ಬೋರ್ಡೋ ದ್ರಾವಣ ಸಿಂಪರಣೆಗೆ ಮಳೆ ಅಡ್ಡಿ ಬಂದಲ್ಲಿ ಇನ್ನೂರು ಲೀಟರ್ ಬ್ಯಾರಲ್ ಔಷಧಿಗೆ 400 ಗ್ರಾಂ ಬೆಲ್ಲ ಹಾಕಿ 48 ಗಂಟೆಗಳ ಕಾಲ ದ್ರಾವಣವು ಕೆಡದಂತೆ ಶೇಖರಣೆ ಮಾಡಬಹುದು. ಬೋರ್ಡೋ ದ್ರಾವಣದಲ್ಲಿ ಸುಣ್ಣದ ಅಂಶ ಕಡಿಮೆಯಾಗಿ ಅತಿ ಹೆಚ್ಚಿನ ಮೈಲುತುತ್ತ ಬಳಕೆಯಾದಲ್ಲಿ ಹಸಿ ಕಾಯಿಗಳ ಆರಂಭದ ರಚನೆಗೆ ಮತ್ತು ಕಾಯಿ ಬಲಿಯುವಿಕೆಗೆ ಧಕ್ಕೆಯಾಗುತ್ತದೆ.ಉತ್ಕೃಷ್ಟ ಮಟ್ಟದ ಮೈಲು ತುತ್ತ, ಸುಣ್ಣ ಹಾಗೂ ರಾಳವು ಔಷಧಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ರೋಗನಿರ್ವಹಣೆ ಫಲಪ್ರದವಾಗುತ್ತದೆ. ಬೋರ್ಡೋ ದ್ರಾವಣ ಸಿಂಪಡಿಸಿದಾಗ ಗಿಡಗಳಿಗೆ ಅವಶ್ಯಕವಾದ ತಾಮ್ರ, ಗಂಧಕ, ಕ್ಯಾಲ್ಸಿಯಂ ಪೋಷಕಾಂಶಗಳು ಲಭ್ಯವಾಗುತ್ತವೆ.
ಇಲಾಖೆಯಿಂದ ಬೋರ್ಡೋ ಸಿಂಪರಣೆಗಾಗಿ ಸಹಾಯಧನ ಸಿಗುವುದರಿಂದ ಇತರೆ ಔಷಧಿಗಳಿಗೆ ತುಲನೆ ಮಾಡಿದರೆ, ಶೇ. 30ರ ಖರ್ಚಿನಲ್ಲಿ ಸಿಂಪರಣೆ ಸಾಧ್ಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಶೃಂಗೇರಿ ಮತ್ತು ತೀರ್ಥಹಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರ. ಡಾ ಶಿವಕುಮಾರ್ ಮತ್ತು ಡಾ ಬಿ.ಆರ್. ಗುರುಮೂರ್ತಿಯವರನ್ನು ದೂರವಾಣಿ ಮೂಲಕ 08265 251395 ಸಂಪರ್ಕಿಸಬಹುದಾಗಿದೆ.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...