ಅಜೋಲ್ಲಾ ಮತ್ತು ಅದರ ಪ್ರಾಮುಖ್ಯತೆ
mail-img print-img

ಅಜೋಲ್ಲಾ ಮತ್ತು ಅದರ ಪ್ರಾಮುಖ್ಯತೆ

ಸೋಮವಾರ - ಜುಲೈ -09-2012

 

ಬೇಸಾಯ ಎಂಬುದು ಒಂದು ಚಕ್ರ.ಇದು ಪರಿಪೂರ್ಣವಾಗಬೇಕಾದರೆ ಸಸ್ಯಕ್ಕೆ ಬೇಕಿರುವ ಆವಶ್ಯಕ ಪೋಷಕಾಂಶಗಳನ್ನು ಪೂರೈಸುವುದು ಅದ್ಯ ಕರ್ತವ್ಯ. ಪೋಷಕಾಂಶಗಳು ಯಾವ ರೀತಿ ಎನ್ನುವುದಕ್ಕಿಂತ ಎಂತಹ ಪೋಷಕತ್ವವನ್ನು ಹೋಂದಿವೆ ಮತ್ತು ಅವು ಎಷ್ಟು ಪ್ರಮಾಣದಲ್ಲಿವೆ ಎಂಬುದು ಬೆಳೆ ಬೆಳವಣಿಗೆಗೆ ಮತ್ತು ಹೆಚ್ಚಿನ ಇಳುವರಿಯ ದೃಷ್ಟಿಯಿಂದ ಇದು ಬಹಳ ಮುಖ್ಯವಾದ ಅಂಶವಾಗಿರುತ್ತದೆ. ಪೋಷಕಾಂಶಗಳಲ್ಲಿ ಹಲವಾರು ವಿಧ. ಅವುಗಳೆಂದರೆ ಸಾವಯವ, ರಾಸಾಯನಿಕ, ಜೈವಿಕ ಇತ್ಯಾದಿ.ಈ ಅಜೋಲ್ಲಾ ಎಂಬುದು ಜೈವಿಕ ಗೊಬ್ಬರಗಳ ಗುಂಪಿಗೆ ಸೇರುತ್ತದೆ. ಇದೊಂದು ಹಸಿರು ಪಾಚಿ ಸಸ್ಯ. ಇದು ನೀರಿನಲ್ಲಿ ತನ್ನ ಬೇರುಗಳನ್ನು ತೇಲಾಡಿಸಿಕೊಂಡು ವಾತಾವರಣ ದಲ್ಲಿರುವ ಸಾರಜನಕವನ್ನು ಹೀರಿಕೊಂಡು ಬೆಳೆಯ ಬಲ್ಲದು. ಸಾರಜನಕವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಯಿರುವುದು ಅದರಲ್ಲಿ ಅಡಗಿರುವ ಅನಾಬಿನಾ ಎಂಬ ಆಂಶದಿಂದ. ಈ ಸಸ್ಯದ ಕಾಂಡ ಮತ್ತು ಎಲೆಗಳು ಬಹಳ ಚಿಕ್ಕದಾಗಿದ್ದು ಮೃದುತ್ವವನ್ನು ಹೊಂದಿರುತ್ತವೆ.ಸಾಮಾನ್ಯವಾಗಿ ಇದು ನೆಲದ ಮಟ್ಟ ದಲ್ಲೆ ಬೆಳಿಯುತ್ತದೆ. ಇದರ ಎತ್ತರ 1.0-2.0 ಸೆ.ಮೀ. ನಷ್ಟು ಮಾತ್ರ ಇರುತ್ತದೆ. ನೈಸರ್ಗಿಕವಾಗಿ ಲಭ್ಯವಿರುವ ಸಾರಜನಕವನ್ನು ಈ ಎಲೆಗಳಲ್ಲಿ ಶೇಖರಿಸಿಕೊಂಡು ಸಸ್ಯಗಳಿಗೆ ಒದಗಿಸಿಕೊಡುತ್ತದೆ.

ಹರಡಿರುವಿಕೆ:ಇದು ಮೂಲಭೂತವಾಗಿ ಲ್ಯಾಟಿನ್ ಅಮೇರಿಕಾದಿಂದ ನಮ್ಮ ದೇಶಕ್ಕೆ ವಲಸೆ ಬಂದಿದ್ದು, ಇದು ಹೆಚ್ಚಾಗಿ ಶೀತೋಷ್ಣ ಮತ್ತು ಸಮ ಶೀತೋಷ್ಣ ವಾತಾವರಣದಲ್ಲಿ ಅದರಲ್ಲೂ ಹೆಚ್ಚಾಗಿ ಭತ್ತ ಬೆಳೆಯುವ ಪ್ರದೇಶಗಲ್ಲಿ ಹರಡಿದೆ. ಇದರಲ್ಲಿ ಹಲವಾರು ಜಾತಿಗಳಿದ್ದು, ಅವುಗಳು ಪ್ರಪಂಚದಾ ದ್ಯಂತ ವಿವಿಧ ವಾತಾವರಣಗಳಲ್ಲಿ ಬೆಳೆಯಬಲ್ಲ ಶಕ್ತಿಯನ್ನು ಹೊಂದಿವೆ. ಅವುಗಳೆಂದರೆ ಅಜೋಲ್ಲಾ ಕ್ಯಾರೋಲಿನಾ, ಅ.ನಿಲೋಟಿಕಾ, ಅ.ಪಿಲಿಕ್ಯೂಲಾ ಯಿಡೀಸ್, ಅ.ಮೆಕ್ಸಿಕಾನಾ, ಅ.ಮೈಕ್ರೊಪಿಲ್ಲಾ ಮತ್ತು ಅ.ಪಿನ್ನೇಟಾ. ಭಾರತದಲ್ಲಿ ಅಜೊಲ್ಲಾ ಅನಾಬಿನಾ ಹೆಚ್ಚಾಗಿ ಕಂಡುಬರುತ್ತದೆ.

ಇದರ ಬೆಳೆವಣಿಗೆಗೆ ಬೇಕಿರುವ ಆವಶ್ಯಕತೆಗಳು: ಈ ಸಸ್ಯವನ್ನು ಹಲವಾರು ವಿಧದಲ್ಲಿ ಬೆಳಸಬ ಹುದಾಗಿದ್ದು, ಅವುಗಳೆಂದರೆ ನೇರವಾಗಿ ಭತ್ತದ ಮಡಿಯಲ್ಲಿ ಮತ್ತು ಮಣ್ಣಿನ ಅಥವಾ ಸಿಮೆಂಟ್ ತೊಟ್ಟಿಯಲ್ಲೂ ಸಹ ಬೆಳಸಬಹುದಾಗಿರುತ್ತದೆ. ಭತ್ತದ ಮಡಿಯಲ್ಲಿ ಬೆಳೆಸುವಾಗ ಮಣ್ಣಿನ ರಸಸಾರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದು ಆಮ್ಲೀಯ ರಸಸಾರದಲ್ಲಿ ಉತ್ತಮವಾಗಿ ಬೆಳೆಯಬಲ್ಲದು. ಅಂದರೆ 5.0 ರಿಂದ 6.5 ಉತ್ತಮ, ವಾತಾವರಣ ದಲ್ಲಿರುವ ಉಷ್ಣತೆಯು 27 ರಿಂದ 320 ಸೆ. ಇರಬೇಕು ಹಾಗು ಪ್ರಕಾಶಮಾನವಾದ ಸೂರ್ಯನ ರಶ್ಮಿಯು ಸಹ ಬೇಕು. ಆದರೆ ಅತಿ ಹೆಚ್ಚು ನೇರ ಪ್ರಾಕಾಶಮಾನ ಬೇಕಿರುವುದಿಲ್ಲ.

ಬೆಳೆಸುವ ಕ್ರಮ: ಸಸಿ ಮಡಿಯಲ್ಲಿ ಬೆಳಸಬೇಕಿ ದ್ದರೆ ಒಂದು ಹೆಕ್ಟೇರ್ ಪ್ರದೇಶಕ್ಕೆ ನೂರು ಚದರ ಮೀಟರ್ ಪ್ರದೇಶವನ್ನು ಆಯ್ಕೆಮಾಡಿಕೊಳ್ಳಬೇಕು. ಆ ಪ್ರದೇಶಕ್ಕೆ ಒಂದು ಕಿಲೋಗ್ರಾಂ ಬೂದಿ, 300 ಗ್ರಾಂ ಪೋಟ್ಯಾಶಿಯಂ ಸಲ್ಫೆಟ್, 100 ಗ್ರಾಂ ಸೋಡಿಯಂ ಮಾಲಿಬ್ಡೇಟ್ ಮತ್ತು ಕೀಟನಾಶಕ್ಕಾಗಿ 40 ಗ್ರಾಂ ಪ್ಯೂರಡಾಂನ್‌ನ್ನು ಮಣ್ಣಿನಲ್ಲಿ ಬೆರಸಿ 5 ರಿಂದ 10 ಸೆಂಟಿಮೀಟರ್ ಎತ್ತರದವರೆಗೆ ನೀರನ್ನು ನಿಲ್ಲಿಸಬೇಕು, ಅಥವಾ 120 ಕಿಲೋಗ್ರಾಂ ದನದ ಸಗಣಿಯನ್ನು ನೀರಿನಲ್ಲಿ ಬೆರಸಿ ಮಣ್ಣಿಗೆಸೇರಿಸಬ ಹುದು. ಇಲ್ಲಿ ಪ್ಯೂರಡಾನ್‌ನ್ನು ಬಳಸುತ್ತಿರುವುದು ಕೀಟನಾಶಕ್ಕಾಗಿ. ತದನಂತರ 20-22 ಕಿಲೊ ಗ್ರಾಂನಷ್ಟು ಅಜೋಲ್ಲಾ ಸಸ್ಯವನ್ನು ಈ ಪ್ರದೇಶದಲ್ಲಿ ಹರಡಿ ನೀರಿನ ಎತ್ತರವನ್ನು ಸ್ವಲ್ಪ ಕಡಿಮೆಗೊಳಿಸು ವುದು. (5-7.5 ಸೆ.ಮೀ.ನಷ್ಟು). ಇದಾದ ನಂತರ ಅಜೋಲ್ಲಾ ಬೆಳೆಯಲು ಪ್ರಾರಂಭಿಸಿ 10-15 ದಿವಸಗಳಲ್ಲಿ ಸುಮಾರು 250-300 ಕಿ.ಗ್ರಾಂ.ನಷ್ಟು ವೃದ್ಧಿ ಹೊಂದಿ ಉಪಯೋಗಿಸಲು ಸಿದ್ಧವಾ ಗುತ್ತದೆ.

ಸಿಮೆಂಟ್ ತೊಟ್ಟಿಗಳಲ್ಲಿ ಬೆಳಸುವ ಕ್ರಮ: ಸಾಮಾನ್ಯವಾಗಿ ಇದನ್ನು ಹೆಚ್ಚಾಗಿ ಭತ್ತದ ಮಡಿಗಳಿಗಿಂತ ತೊಟ್ಟಿಗಳಲ್ಲೆ ಬೆಳೆಸುವುದು ವಾಡಿಕೆ. ಸಾಧಾರಣವಾಗಿ 2.0ಮೀಟರ್ ಉದ್ದ,1.0 ಮೀಟರ್ ಅಗಲ ಮತ್ತು 0.3 ಮೀಟರ್ ಎತ್ತರದ ತೊಟ್ಟಿಗಳನ್ನು ಕಟ್ಟಬೇಕು. ಈ ತೊಟ್ಟಿಯ ತಳ ಭಾಗದಲ್ಲಿ 7.5 ರಿಂದ 8.0 ಸೆಂ.ಮೀ.ನಷ್ಟು ಮಣ್ಣನ್ನು ಹಾಕುವುದು. ತೊಟ್ಟಿ ಯಲ್ಲಿ 10-12 ಸೆಂ.ಮೀ.ನಷ್ಟು ನೀರನ್ನು ನಿಲ್ಲಿಸಿ ಅದಕ್ಕೆ 10-12 ಗ್ರಾಂ ಸೂಪರ್ ಪಾಸ್‌ಪೇಟ್, 2.0 ಗ್ರಾಂ ನಷ್ಟು ಕಾರ್ಬೊಪ್ಯೂರಾನ್ ಸೇರಿಸಬೇಕು.200 ಗ್ರಾಂ ನಷ್ಟು ಅಜೋಲ್ಲಾವನ್ನು ತೊಟ್ಟಿಗೆ ಬಿಡಬೇಕು. ಬಿಡುಗಡೆಯಾದ 10-15 ದಿನಗಳಲ್ಲಿ ಇದು ದ್ವಿಗುಣ ಹೊಂದಿ ಸುಮಾರು 2.5-3.0 ಕಿಲೊಗ್ರಾಂನಷ್ಟು ಅಜೋಲ್ಲಾವನ್ನು ಪಡೆಯಬಹುದು.

ಭತ್ತದಲ್ಲಿ ಅಜೋಲ್ಲಾ ಉಪಯೋಗಿಸುವ ಕ್ರಮ:ಭತ್ತದ ಪೈರನ್ನು ನಾಟಿ ಮಾಡುವುದಕ್ಕಿಂತ ಮುಂಚೆ ಮಡಿಯಲ್ಲಿರುವ ನೀರನ್ನೆಲ್ಲಾ ಬಸಿದು ಅಜೋಲ್ಲಾವನ್ನು ಮಣ್ಣಿಗೆ ಸೇರಿಸುವುದು.ಅದರ ಜೊತೆಯಲ್ಲಿ ಆಯಾ ಪ್ರದೇಶಕ್ಕೆ ಶಿಫಾರಸು ಮಾಡಿರುವ ಸಾರಜನಕದ ಶೇ.25ರಷ್ಟು ಒದಗಿಸಿ ಪೂರ್ಣ ಪ್ರಮಾಣದ ರಂಜಕ ಮತ್ತು ಪೋಟ್ಯಾಷನ್ನು ಒದಗಿಸುವುದು.

ಉಪಯೋಗಗಳು:ಅಜೋಲ್ಲಾ ಬೆಳೆಸುವುದರಿಂದ ಮತ್ತು ಬಳಸುವು ದರಿಂದ ಅನೇಕ ಉಪಯೋಗಗಳಿದ್ದು ಅವುಗಳಲ್ಲಿ ಅತಿ ಮುಖ್ಯವಾದವೆಂದರೆ

1.ಭತ್ತದ ಬೆಳೆಗೆ ಅವಶ್ಯವಿರುವ ಶೇ.20-30 ರಷ್ಟು ಸಾರಜನಕವನ್ನು ಒದಗಿಸುತ್ತದೆ.
2.ಸಾರಜನಕವನ್ನು ಒದಗಿಸುವುದರ ಜೊತೆಗೆ ಸಸ್ಯದ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.
3.ಅಜೋಲ್ಲಾದಲ್ಲಿ ಬೆಳೆಗೆ ಬೇಕಿರುವ ಎಲ್ಲಾ ಸಸ್ಯ ಪೋಷಕಾಂಶಗಳಿದ್ದು, ಇದರಿಂದ ಸ್ವಲ್ಪ ಪ್ರಾಮಾಣ ದಲ್ಲಿಯಾದರೂ ಇತರೆ ಪೊಷಕಾಂಶಗಳು ಬೆಳೆಗೆ ದೊರೆಯುತ್ತವೆ.
4. ಸಸಿ ಮಡಿಯಲ್ಲಿ ಬೆಳೆದು ಪೈರು ನಾಟಿಗೆ ಮುಂಚೆ ಭೂಮಿಗೆ ಸೇರಿಸುವು ದರಿಂದ ನಾಟಿ ಮಾಡಿದ ಕೂಡಲೆ ಸಸ್ಯ ನಾಟಿ ಹೊಂದಿ ಬೆಳವಣಿ ಯಾಗಲು ಸಹಕರಿಸುತ್ತದೆ
5. ಅಜೋಲ್ಲಾವನ್ನು ಹಸಿರು ಗೊಬ್ಬರವನ್ನಾಗಿಯೂ ಬಳಸ ಬಹುದು.
6. ಇತ್ತೀಚೆಗೆ ಕಂಡುಬಂದಿ ರುವ ಉತ್ತಮವಾದ ಅಂಶ ವೆಂದರೆ ಜಾನುವಾರು ಸಾಕಾಣಿಕೆ ಯಲ್ಲಿ ಅಜೋಲ್ಲಾವನ್ನು ಬಳಸುವು ದರಿಂದ ಹೆಚ್ಚಿನ ಹಾಲನ್ನು ಪಡೆ ಯಬಹುದಾಗಿದೆ. ಇದ ರಿಂದಲೇ ಇತ್ತೀಚೆಗೆ ಇದನ್ನು ಮಣ್ಣಿನ, ಸಿಮೆಂಟ್ ಮತ್ತು ಕಬ್ಬಿಣದ ತೊಟ್ಟಿಗಳಲ್ಲಿಯೂ ಬೆಳೆಸಲು ಪ್ರಾರಂಭಿಸಿದ್ದಾರೆ. ಬಳಸುವಾಗಿ ಇದನ್ನು ಚೆನ್ನಾಗಿ ನೀರಿನಲ್ಲಿ ನಾಲ್ಕಾರು ಬಾರಿ ಸ್ವಚ್ಚಗೊಳಿಸಿ ನೆರಳಿನಲ್ಲಿ ಒಣಗಿಸಿ ತದನಂತರ ಜಾನುವಾರುಗಳಿಗೆ ನೀಡುವ ಪೀಡ್ ಜೊತೆಯಲ್ಲಿ ಸುಮಾರು 250-300 ಗ್ರಾಂ.ನಷ್ಟು ಪ್ರತಿದಿನ ನೀಡುತ್ತಿರುವುದು ಉತ್ತಮ ಫಲಿತಾಂಶ ಕಂಡು ಬಂದಿದೆ.
7.ಕೋಳಿ ಸಾಕಾಣಿಕೆದಾರರು ಇದನ್ನು ಆಹಾರ ವಾಗಿ ಬಳಸುತ್ತಿದ್ದಾರೆ. 8.ಉತ್ತಮವಾದ ಹಸಿರು ಗೊಬ್ಬರವನ್ನಾಗಿಯೂ ಬಳಸಬಹುದು.
9.ಹಸಿರು ಮೇವಾಗಿಯೂ ಸಹ ಬಳಸಬಹುದು
10.ಭತ್ತದ ಮಡಿಯಲ್ಲಿ ಇದು ಕಳೆ ನಿಯಂತ್ರಣ ವಾಗಿಯೂ ಕಾರ್ಯನಿರ್ವಸುತ್ತದೆ.
12.ಮೀನುಗಳಿಗೆ ಉತ್ತಮವಾದ ಆಹಾರ ವಾಗಿಯೂ ಬಳಸುತ್ತಾರೆ.

ಆಜೋಲ್ಲಾ ಹೆಚ್ಚು ಪ್ರಚಲಿತವಾಗದಿರಲು ಕಾರಣಗಳು:

1. ವರ್ಷದ ಪೂರ್ತಿ ಇದರ ಬೆಳವಣಿಗೆಗೆ ಆವಶ್ಯ ಕವಾಗಿ ಬೇಕಿರುವ ವಾತಾವರಣ ದೊರೆಯದಿರುವುದು.
2. ಅಜೋಲ್ಲಾವನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಿರುವುದು.
3. ಬೆಳವಣಿಗೆಗೆ ಬೇಕಿರುವ ಆವಶ್ಯಕ ಅಂಶಗಳನ್ನು ಒದಗಿಸದಿರುವುದು.
4. ಸದಾ ನೀರು ಆವಶ್ಯಕವಾಗಿರುವುದು.
3. ಇದರ ಬೆಳವಣಿಗೆಗೆ ಬೇಕಿರುವ ಆವಶ್ಯಕ ಅಂಶಗಳನ್ನು ಒದಗಿಸದಿರುವುದು.
4. ರೈತ ಮತ್ತು ರೈತ ಮಹಿಳೆಯರಲ್ಲಿ ಜಾಗೃತಿ ಉಂಟಾಗದಿರುವುದು.
5. ಇದರ ಉಪಯುಕ್ತತೆಯ ಕುರಿತು ಸಾಕಷ್ಟು ಪ್ರಚಾರವಿಲ್ಲದಿರುವುದು.

- ಎಂ.ಗೋವಿಂದಪ್ಪ,

ಬೇಸಾಯ ಶಾಸ್ತ್ರಜ್ಞರು,

ಮಾದರಕಲ್ಲು, ಚಿಂತಾಮಣಿ ತಾಲೂಕು

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಪಾಪಿ ಕಾಲಿಟ್ಟಲ್ಲೆಲ್ಲ ಮೊಣಕಾಲು ನೀರು

ಕೊನೆಗೂ 17 ವರ್ಷದ ಜೆಡಿಯು-ಬಿಜೆಪಿ ನಡುವಿನ ಮೈತ್ರಿ ಮುರಿದಿದೆ. ನರೇಂದ್ರ ಮೋದಿಯ ಕೈಗೆ ಬಿಜೆಪಿಯ ನೇತೃತ್ವವನ್ನು ಕೊಟ್ಟ ಬೆನ್ನಿಗೇ ಇದು ನಡೆದಿದ ...


ನಿಮ್ಮ ಅನಿಸಿಕೆ

postClick here to post your views
EPAPER
access

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್

ಬೌದ್ಧ ಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್

1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...


- -ರಘೋತ್ತಮ ಹೊ.ಬ., ಚಾಮರಾಜನಗರ