
ಬೀಜೋಪಚಾರದ ಮಹತ್ವ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಗಾರು ತಡವಾಗಿದ್ದು, ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ರೈತರು ಬಿತ್ತನೆ ಕಾರ್ಯವನ್ನು ಬರದಿಂದ ಆರಂಭಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಗಿ ಮತ್ತು ತೊಗರಿ ಬೆಳೆಗಾರರಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಮಂಜುನಾಥ್ ಗೌಡ, ಡಾ. ಸಿ.ಆರ್. ಜಹೀರ್ ಬಾಷ ಮತ್ತು ಡಾ. ಜೆ. ಲಕ್ಷ್ಮಿರವರು ಬೀಜೋಪಚಾರದ ಮಹತ್ವ ಹಾಗೂ ಕ್ರಮಗಳನ್ನು ಸೂಚಿಸಿದ್ದು, ರೈತ ಬಾಂಧವರು ಬೀಜೋಪಚಾರವನ್ನು ಅನುಸರಿಸಿ ಆರೋಗ್ಯವಂತ ಬೆಳೆಯನ್ನು ಬೆಳೆಯಲು ಕರೆ ನೀಡಿರುತ್ತಾರೆ. ಬೀಜವನ್ನು ಬಿತ್ತಿದ ನಂತರ ಭೂಮಿಯಲ್ಲಿ ಅಡಕವಾಗಿರುವ ಹಲವಾರು ರೋಗಕಾರಕ ಸೂಕ್ಷ್ಮ ಜೀವಿಗಳು ಹಾಗೂ ಬೀಜದ ಮೇಲ್ಮೈಯಲ್ಲಿರುವ ರೋಗಾಣು ಸೂಕ್ಷ್ಮಜೀವಿಗಳು ಬೀಜವನ್ನು ಆಕ್ರಮಿಸಿ, ಬೀಜವನ್ನು ಅಥವಾ ಬೀಜದ ಮೊಳಕೆಯನ್ನು ಕೊಳೆಸುತ್ತವೆ. ಇದರಿಂದ ಉತ್ತಮ ಗುಣಮಟ್ಟದ ಸಸಿಗಳು ಸಿಗದೇ ಬೆಳೆ ಕುಂಠಿತಗೊಂಡು ಇಳುವರಿಯ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿರುವುದರಿಂದ ರೈತರು ಸಂಕಷ್ಟಕ್ಕೊಳಗಾಗುತ್ತಾರೆ. ಇದರಿಂದಾಗಿ ಬೀಜವನ್ನು ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಬಹುಮುಖ್ಯ.
ಪ್ರಮುಖ ಖುಷ್ಕಿ ಬೆಳೆಯಲ್ಲಿ ಬೀಜೋಪಚಾರ ಮಾಡುವ ಕ್ರಮಗಳು:
ರಾಗಿ:ಒಂದು ಕೆ.ಜಿ. ಬಿತ್ತನೆ ರಾಗಿಯನ್ನು 600 ಮಿ.ಲೀ. ಶುದ್ಧ ನೀರಿನಲ್ಲಿ ಇಡೀ ರಾತ್ರಿ ನೆನಸಿ ನಂತರ 24 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. ಇದರಿಂದಾಗಿ ಮೊಳಕೆಯೊಡೆಯುವ ಪ್ರಮಾಣವನ್ನು ಹೆಚ್ಚಿಸಬಹುದು. ಹಾಗೆಯೇ ರಾಗಿಯಲ್ಲಿ ಮುಖ್ಯವಾಗಿ ಕಾಡುವ ಬೆಂಕಿ ರೋಗ ಹಾಗೂ ರಾಗಿ ಕೊಳೆರೋಗದ ಹತೋಟಿಗಾಗಿ 2 ಗ್ರಾಂ ಕಾರ್ಬೆಂಡಿಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಇದಲ್ಲದೇ ಒಂದು ವೇಳೆ ಜೈವಿಕ ಗೊಬ್ಬರಗಳನ್ನು ಬೀಜೋಪಚಾರವಾಗಿ ಬಳಸುವುದಾದರೆ, ಮೊದಲು ಶಿಲೀಂಧ್ರ ನಾಶಕದಿಂದ ಬೀಜಗಳನ್ನು ಉಪಚಾರ ಮಾಡಿ ನೆರಳಿನಲ್ಲಿ ಒಣಗಿಸಿದ ನಂತರ ಜೈವಿಕ ಗೊಬ್ಬರದಿಂದ ಬೀಜೋಪಚಾರ ಮಾಡವುದು ಸೂಕ್ತ. ತೊಗರಿ: ಬಿತ್ತನೆ ಬೀಜವನ್ನು ಶೇ.2ರ ಬೆಲ್ಲದ ದ್ರಾವಣದಲ್ಲಿ ನೆನಸಿ ಪ್ರತಿ ಕೆ.ಜಿ. ಬೀಜಕ್ಕೆ 2 ಗ್ರಾಂ ಕಾರ್ಬೆಂಡಿಜಿಂ ಅಥವಾ 5 ಗ್ರಾಂ ಟ್ರೈಕೋಡರ್ಮ ಜೈವಿಕ ರೋಗ ನಾಶಕವನ್ನು ಉಪಚರಿಸಿ, ನೆರಳಿನಲ್ಲಿ ಒಣಗಿಸಿ ನಂತರ ಬಿತ್ತನೆಗೆ ಉಪಯೋಗಿಸಬೇಕು.
ಮೆಕ್ಕೆ ಜೋಳ:
ಈ ಬೆಳೆಯಲ್ಲಿ ಕಂಡುಬರುವ ಕೇದಿಗೆ ರೋಗವನ್ನು ಹತೋಟಿಯಲ್ಲಿಡಲು ಪ್ರತಿ ಕೆ.ಜಿ. ಬೀಜಕ್ಕೆ 2.5 ಗ್ರಾಂ ಸಂಯುಕ್ತ ಶಿಲೀಂಧ್ರ ನಾಶಕವಾದ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ (ರಿಡೋಮಿಲ್) ಬಳಸಿ ಮಿಶ್ರಣ ಮಾಡಿ ಬಿತ್ತನೆ ಮಾಡಬೇಕು. ಸೂಚನೆ: ಶಿಲೀಂಧ್ರ ನಾಶಕ, ಕೀಟ ನಾಶಕಗಳ ಜೊತೆಗೆ ಜೈವಿಕ ಗೊಬ್ಬರಗಳನ್ನು ಉಪಯೋಗಿಸುವ ರೈತಬಾಂಧವರು ಮೊದಲನೆಯದಾಗಿ ಶಿಲೀಂಧ್ರ ನಾಶಕವನ್ನು ಲೇಪಿಸಿ, ನೆರಳಿನಲ್ಲಿ ಒಣಗಿಸಿ, ನಂತರ ಕೀಟನಾಶಕವನ್ನು ಉಪಚರಿಸಿದ ಮೇಲೆ ಮತ್ತೊಮ್ಮೆ ನೆರಳಿನಲ್ಲಿ ಒಣಗಿಸಿದ ನಂತರ ಜೈವಿಕ ಗೊಬ್ಬರಗಳನ್ನು ಉಪಚರಿಸಿ ಬಿತ್ತನೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ಯಕ್ರಮ ಸಂಯೋಜಕರು, ಕೃಷಿ ವಿಜ್ಞಾನ ಕೇಂದ್ರ, ಕುರುಬೂರು ಫಾರಂ, ಚಿಂತಾಮಣಿ
ದೂ: 08154-290554
ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...
Click here to post your views ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...
ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...