
ದಶಕದ ಹಿಂದೆ ಮೂರು ವರ್ಷ ಎಡೆಬಿಡದೆ ಬರಗಾಲ ಆವರಿಸಿ ದಾಗ ಬಯಲುಸೀಮೆಯ ಸಾವಿರಾರು ರೈತರಿಗೆ ಬೇರೆ ಊರುಗಳಿಗೆ ಗುಳೆ ಹೋಗುವುದು ಅನಿವಾರ್ಯ ವಾಯಿತು. ಆದರೆ ರಾಜ್ಯದಲ್ಲೇ ಅತಿ ಕಡಿಮೆ ಮಳೆಯಾಗುವ ಬಾಗಲಕೋಟೆ ಜಿಲ್ಲೆ ಹುನಗುಂದದ ಸುತ್ತಲ ರೈತರಿಗೆ ಆಹಾರಕ್ಕಾಗಿ ಊರೂರು ಅರಸುವ ಪರಿಸ್ಥಿತಿ ಬರಲಿಲ್ಲ. ಆಗಾಗಲೇ ‘ತಿದ್ದಿಸಿಕೊಂಡಿದ್ದ’ ಅವರ ಹೊಲಗಳು ಮನೆಗಾಗುವಷ್ಟು ಆಹಾರ ಧಾನ್ಯಗಳನ್ನು ಬೆಳೆಯಲು ಶಕ್ತವಾಗಿದ್ದವು.ಹೊಲ ತಿದ್ದಿಸುವುದರ ಹಿಂದಿರುವ ಉದ್ದೇಶ ಮಣ್ಣು ಹಾಗೂ ನೀರಿನ ಸಂರಕ್ಷಣೆ. ಹೊಲ ತಿದ್ದಿಸಿದರೆ ಪ್ರಯೋಜನವಿದೆ ಎನ್ನುವುದನ್ನು ಹುನಗುಂದದ ಸುತ್ತಮುತ್ತಲ ರೈತರು ಪ್ರತ್ಯಕ್ಷ ಅನುಭವಿಸಿದವರು. ಹಿಡುವಳಿ ಸಣ್ಣದೇ ಇರಲಿ ಅಥವಾ ನೂರಾರು ಎಕರೆ ಇರಲಿ, ಹುನಗುಂದದ ನಾಗರಾಳ ಕುಟುಂಬ ಶತಮಾನದ ಹಿಂದೆ ತಮ್ಮ ಹೊಲದಲ್ಲೇ ಪ್ರಾರಂಭಿಸಿದ ಈ ನೆಲ-ಜಲ ಸಂರಕ್ಷಣೆಯ ಮಾದರಿ ಉಪಯುಕ್ತ ಎನಿಸಿದೆ.ಬಿಜಾಪುರದ ಪ್ರಾದೇಶಿಕ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಮುದುಕಪ್ಪ ಬಿ.ಗುಳೇದ್ ಹೇಳುವಂತೆ ನಾಗರಾಳ ಕುಟುಂಬದ ಬರನಿರೋಧಕ ಕ್ರಮಗಳು ಬಾಗಲಕೋಟೆ, ಬಿಜಾಪುರ, ರಾಯಚೂರು, ಗದಗ ಸೇರಿದಂತೆ ಉತ್ತರ ಕರ್ನಾಟಕದ ಸುಮಾರು ಎಂಟು ಜಿಲ್ಲೆಗಳಿಗೆ ಪ್ರಸ್ತುತ.
‘ಬರಕಾಮಗಾರಿ’ ಎಂಬ ಮಾತು ಮತ್ತೆ ಮತ್ತೆ ಕೇಳಿ ಬರುತ್ತಿರುವ ಸದ್ಯದ ಸನ್ನಿವೇಶದಲ್ಲಿ ಬರನಿರೋಧಕ ಶಕ್ತಿಯನ್ನು ಭೂಮಿಯಲ್ಲಿ, ಆ ಮೂಲಕ ಕೃಷಿಕರಲ್ಲಿ ತುಂಬುವ ಇಂತಹ ಪ್ರಯೋಗಗಳ ಅಗತ್ಯವಿದೆ. ಕೃಷಿ ಸಮುದಾಯಗಳು ಹಾಗೂ ಸರಕಾರ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಕೃಷಿಯಲ್ಲಿ ಸುಸ್ಥಿರತೆ ತರುವ ನಾಗರಾಳ ಕುಟುಂಬದ ಪ್ರಯೋಗಗಳು, ಅದರ ಹಿಂದಿರುವ ಕಾಳಜಿ ಈ ಹಿನ್ನೆಲೆಯಲ್ಲಿ ಮಹತ್ವ ಪಡೆದಿವೆ.
ನೆಲ-ಜಲ ಸಂರಕ್ಷಣೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಹಿರಿಯ ಪತ್ರಕರ್ತ ಶ್ರೀಪಡ್ರೆ ಅವರು ನಾಗರಾಳ ಕುಟುಂಬದ ‘ಹೊಲ ತಿದ್ದಿಸುವ’ ಪಯಣ, ಅದರ ಅಗತ್ಯ, ಕ್ರಮ, ಪರಿಣಾಮ, ಸಾಧ್ಯತೆಗಳನ್ನು ಅತ್ಯಂತ ವಿವರವಾಗಿ, ಸರಳವಾಗಿ ಈ ಪುಸ್ತಕದಲ್ಲಿ ಹೇಳಿದ್ದಾರೆ. ವಿಷಮುಕ್ತ ಒಕ್ಕಲುತನ ಮಾಡುತ್ತ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿ, ನೆಮ್ಮದಿಯ ಬದುಕು ಸಾಕಾರ ಗೊಳಿಸಿಕೊಂಡವರ ಅನುಭವ-ಚಿಂತನೆಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಕೃಷಿ ಮಾಧ್ಯಮ ಕೇಂದ್ರ ಪ್ರಕಟಿಸುತ್ತಿರುವ ಪುಸ್ತಕ ಸರಣಿಯಲ್ಲಿ 9ನೇ ಪುಸ್ತಕ ಇದಾಗಿದೆ.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...