mail-img print-img

ದಾರಿದೀಪ

ಸೋಮವಾರ - ಜನವರಿ -14-2013

ಹೊಲಿಗೆ ಯಂತ್ರ ಜರಿ ಎಂಬ್ರಾಯಡರಿ ತರಬೇತಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಹೊಲಿಗೆಯಂತ್ರ, ಜರಿ ಎಂಬ್ರಾಯಡರಿ ತರಬೇತಿ ಗಾಗಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಪಾರ್ಸಿ, ಬೌದ್ಧ, ಮತ್ತು ಆಂಗ್ಲೋ ಇಂಡಿಯನ್ ಈ ಜನಾಂಗದವರಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಜಾತಿ ಆದಾಯ ಪ್ರಮಾಣ ಪತ್ರವನ್ನು ತಹಸೀಲ್ದಾರರಿಂದ ಪಡೆದು ಸಲ್ಲಿಸುವುದು. ನಗರ ಪ್ರದೇಶದಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ ವಾರ್ಷಿಕ ವರಮಾನ ರೂ. 55 ಸಾವಿರ ಇರಬೇಕು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಭ್ಯರ್ಥಿಗಳು ರೂ. 40 ಸಾವಿರಗಳು ಮೀರಿರಬಾರದು. ಪಡಿತರ ಚೀಟಿ, ಗುರುತಿನ ಚೀಟಿಯ ನಕಲು ಪ್ರತಿ ನೀಡಬೇಕು. 7ನೆ ತರಗತಿ ಪಾಸಾಗಿದ್ದು, ದಾಖಲಾತಿ ನೀಡಬೇಕು. ವಯೋ ಮಿತಿ 18 ವರ್ಷಗಳಿಂದ 30 ವರ್ಷದೊಳಗಿರ ಬೇಕು.

ಇತ್ತೀಚಿನ ಎರಡು ಭಾವಚಿತ್ರಗಳನ್ನು ನೀಡಬೇಕು. ತರಬೇತಿ ಅವಧಿ 6 ತಿಂಗಳು.ತರಬೇತಿ ನೀಡುವ ಸಂಸ್ಥೆಯವರು ಹೊಲಿಗೆ ಯಂತ್ರ, ಜರಿ ಎಂಬ್ರಾಯಡರಿ ತರಬೇತಿ ನೀಡುವ ಸಂಸ್ಥೆಯವರು ತುಲನಾತ್ಮಕ ದರಪಟ್ಟಿ ಸೀಲ್ಡ್ ಮಾಡಿದ ಕವರ್‌ನಲ್ಲಿ ನೀಡಬೇಕು. ಸಂಸ್ಥೆಯು ಸರಕಾರಿ ಅಥವಾ ಸರಕಾರದಿಂದ ಮಾನ್ಯತೆ ಪಡೆದ ಬಗ್ಗೆ ಆದಾಯ ತೆರಿಗೆ ನೀಡುತ್ತಿರುವ ಬಗ್ಗೆ ಧೃಡೀಕರಣ ಪತ್ರ ನೀಡಬೇಕು.

ತರಬೇತಿ ಮುಗಿದ ನಂತರ ಎನ್‌ಎಂಡಿಎಫ್‌ಸಿರವರಿಂದ ತರಬೇತಿ ಶುಲ್ಕವು ಮಂಜೂರಾದ ನಂತರ ಹಣ ಬಿಡುಗಡೆ ಮಾಡಲಾಗುವುದು. ಮೇಲಿನ ತರಬೇತಿಗಳಿಗೆ ಅರ್ಜಿ ನಮೂನೆಯನ್ನು ನಿಗಮದಿಂದ ಪಡೆದು ಜ.30 ರೊಳಗೆ ಸಲ್ಲಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಯನ್ನು ವ್ಯವಸ್ಥಾಪಕರು, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ, 2ನೆ ಮಹಡಿ, ಅಮೀದ್ ಶಾ ಕಾಂಪ್ಲೆಕ್ಸ್, ಹಲಸೂರು ಗೇಟ್ ಪೊಲೀಸ್ ಸ್ಟೇಷನ್ ಹಿಂಭಾಗ, ಬೆಂಗಳೂರು ಇವರಿಂದ ಪಡೆಯ ಬಹುದು. ದೂ: 080-22114815 ಸಂಪರ್ಕಿಸ ಬಹುದು.

ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು ತಾಲೂಕು(ನಗರ) ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಕಾವೂರು ಗ್ರಾಮದ ನ್ಯೂ ಫ್ರೆಂಡ್ಸ್ ಮುಲ್ಲಕಾಡು, ಅಳಪೆ ಜೋಡುಕಟ್ಟೆ ಯುವಕ ಮಂಡಲದ, ಬಜಾಲ್‌ನ ಜಯನಗರ ಅಂಗನವಾಡಿ ಕೇಂದ್ರಗಳಿಗೆ ಸಹಾಯಕರ ಹುದ್ದೆ ಭರ್ತಿಗಾಗಿ ಸಾಮಾನ್ಯ ವರ್ಗದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜ.30 ಕಡೆಯ ದಿನಾಂಕವಾಗಿರುತ್ತದೆ. ವಿವರಗಳಿಗಾಗಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಮಂಗಳೂರು ನಗರ ಇವರನ್ನು ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ವೆಲೆನ್ಸಿಯಾ, ಮಂಗಳೂರು ನಗರ ತಿಳಿಸಿದ್ದಾರೆ..

ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿ 70 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-1-2013.
ಹುದ್ದೆ ವಿವರ: 1) ಪ್ರೊಫೆಸರ್-3 ಹುದ್ದೆ, ವೇತನ ಶ್ರೇಣಿ: ರೂ 37,400- 67,000, 2) ಅಸೊಸಿಯೇಟ್ ಪ್ರೊಫೆಸರ್: 2 ಹುದ್ದೆ, ವೇತನ ಶ್ರೇಣಿ: ರೂ 37,400- 67,000, 3)ಅಸಿಸ್ಟೆಂಟ್ ಪ್ರೊಫೆಸರ್: 65 ಹುದ್ದೆ, ವೇತನ ಶ್ರೇಣಿ: ರೂ 15,600- 39,100
ಅರ್ಜಿ ಶುಲ್ಕ: ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್: ರೂ 700. ಅಸಿಸ್ಟೆಂಟ್ ಪ್ರೊಫೆಸರ್: ರೂ. 500.
ವಿಳಾಸ: ಆಡಳಿತಾಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560 065
ಮಾಹಿತಿಗೆ: "http://www.uasbangalore.edu.in"


ವೈಜ್ಞಾನಿಕ ಸಹಾಯಕರು ಬೇಕಾಗಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್‌ನ ನ್ಯಾಯ ವಿಜ್ಞಾನ ಪ್ರಯೋಗಾಲಯದ ಘಟಕದಲ್ಲಿ ಖಾಲಿ ಇರುವ 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-1-2013.
ಹುದ್ದೆ ವಿವರ: ವೈಜ್ಞಾನಿಕ ಸಹಾಯಕರು (ರಸಾಯನ ಶಾಸ್ತ್ರ-3, ಭೌತಶಾಸ್ತ್ರ-3, ಜೀವಶಾಸ್ತ್ರ-15, ಪ್ರಶ್ನಿತ ದಸ್ತಾವೇಜು ವಿಭಾಗ-2, ವಿಷ ವಿಜ್ಞಾನ-19, ಬಂದೂಕು ವಿಭಾಗ-3, ಛಾಯಾಚಿತ್ರ ವಿಭಾಗ-5)
 ವಯೋಮಿತಿ: ಕನಿಷ್ಠ 21, ಗರಿಷ್ಠ 35. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವೇತನ ಶ್ರೇಣಿ: ರೂ. 21,600- 40,050
ಅರ್ಜಿ ಶುಲ್ಕ: ರೂ. 250
 ಇತರೆ ಮಾಹಿತಿಗೆ ಕೆಳಗಿನ ವಿಳಾಸ ಸಂಪರ್ಕಿಸಬಹುದು:
http://www.ksp.gov.in/home/

recruitment/recruitment.php

 

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

296 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-31-1-2013.

ಹುದ್ದೆ ಹೆಸರು: 1) ಸಹಾಯಕ ಸಂಚಾರ ನಿರೀಕ್ಷಕ, ಹುದ್ದೆ: 37

ವಿದ್ಯಾಭ್ಯಾಸ: ಪಿಯುಸಿಯಲ್ಲಿ ಪ್ರಥಮ ದರ್ಜೆ

2)ಭದ್ರತಾ ರಕ್ಷಕ, ಹುದ್ದೆ: 259

ವಿದ್ಯಾರ್ಹತೆ: ಪಿಯುಸಿಯಲ್ಲಿ ಉತ್ತೀರ್ಣ ಅಥವಾ ಮಾಜಿ ಸೈನಿಕರಾಗಿದ್ದಲ್ಲಿ ದ್ವಿತೀಯ ದರ್ಜೆಯ ಸೇನಾ ಪ್ರಮಾಣಪತ್ರ ಪಡೆದಿರಬೇಕು.

ವಯೋಮಿತಿ: ಕನಿಷ್ಠ 18, ಗರಿಷ್ಠ ೩೫.  ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 300

* ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆಗಳಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:-5-2-2013

ಮಾಹಿತಿಗೆ http://www.nekrtcrct.com

 

 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   ನಿಮ್ಮ ಅನಿಸಿಕೆ

postClick here to post your views
EPAPER
access