mail-img print-img

ಶಿಕ್ಷಣ ಉದ್ಯೋಗ ಮಾರ್ಗದರ್ಶಿ

ಬುಧವಾರ - ಆಗಸ್ಟ್ -03-2011

ನರ್ಸಿಂಗ್ ಕೋರ್ಸ್‌ಗೆ ಆನ್‌ಲೈನ್ ಅರ್ಜಿ ಆಹ್ವಾನ

ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ನಿರ್ದಿಷ್ಟಪಡಿಸಿದ ಸರಕಾರಿ ಮತ್ತು ಖಾಸಗಿ ನರ್ಸಿಂಗ್ ಶಾಲಾ ಕಾಲೇಜುಗಳಲ್ಲಿ ಜಿಎನ್‌ಎಂ ಮತ್ತು ಬಿಎಸ್ಸಿ ನರ್ಸಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಮತ್ತು ವಿವಿಧ ಭತ್ತೆಗಳ ಪಾವತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.online www.kbcwd.in <http://www.kbcwd.in> ಬಿಎಸ್ಸಿ ನರ್ಸಿಂಗ್‌ಗೆ ಹಿಂದುಳಿದ ವರ್ಗಗಳ ಅಭ್ಯರ್ಥಿಯು ಪಿಯುಸಿ ಅಥವಾ 12ನೆ ತರಗತಿ (ಪಿ.ಸಿ.ಬಿ) ಹಾಗೂ ಇಂಗ್ಲಿಷ್ ಸೇರಿದಂತೆ ಕನಿಷ್ಠ ಶೇ.45 ಅಂಕಗಳನ್ನು ಪಡೆದಿರಬೇಕು. ಜಿಎನ್‌ಎಂ ನರ್ಸಿಂಗ್‌ಗೆ ದ್ವಿತೀಯ ಪಿಯುಸಿ ಅಥವಾ 12ನೆ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ರಷ್ಟು ಅಂಕಗಳನ್ನು ಪಡೆದಿರಬೇಕು (ವಿಜ್ಞಾನ ಕಲಾ ಮತುತಿ ವಾಣಿಜ್ಯ ವಿಬಾಗ) ವಿಜ್ಞಾನದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. 17 ರಿಂದ 35 ವರ್ಷ ವಯೋಮಿತಿಯೊಳಗಿದ್ದು, ವಾರ್ಷಿಕ ರೂ.1.00 ಲಕ್ಷ ಮೀರಿರಬಾರದು. ಬಿಎಸ್ಸಿ ನರ್ಸಿಂಗ್‌ಗೆ ಕೋರ್ಸಿನ ಅವಧಿ 4 ವರ್ಷಗಳಾಗಿದ್ದು, ಜಿಎನ್‌ಎಂ ನರ್ಸಿಂಗ್‌ಗೆ 3 1/2 ವರ್ಷ ಅವಧಿಯಾಗಿದೆ. ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಸಂಪರ್ಕಿಸಬಹುದು.

ಫೊಟೊಗ್ರಫಿ, ವೀಡಿಯೊಗ್ರಫಿ ಮತ್ತು ಮೋಟಾರ್ ರಿವೈಂಡಿಂಗ್ ತರಬೇತಿಗೆ ಅರ್ಜಿ ಆಹ್ವಾನ

ನಗರ ಹೊರವಲಯದ ಕೆನರಾ ಬ್ಯಾಂಕ್ ಗ್ರಾಮೀಣ ಕೈಗಾರಿಕಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಹೊನ್ನೇನಹಳ್ಳಿ, ಟಮಕ ಅಂಚೆ, ಕೋಲಾರ ತಾಲೂಕು ಇವರು 18ರಿಂದ 35 ವರ್ಷ ವಯೋಮಿತಿಯುಳ್ಳ ನಿರುದ್ಯೋಗಿ ಪುರುಷ ಅಭ್ಯರ್ಥಿಗಳಿಗಾಗಿ ಫೊಟೊಗ್ರಫಿ, ವೀಡಿಯೊಗ್ರಫಿ ಮತ್ತು ಮೋಟಾರ್ ರಿವೈಂಡಿಂಗ್ ತರಬೇತಿಯನ್ನು ಉಚಿತವಾಗಿ ನೀಡಲು ಹಮ್ಮಿಕೊಂಡಿದ್ದು, ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸೌಕರ್ಯವನ್ನು ಉಚಿತವಾಗಿ ಕಲ್ಪಿಸಿಕೊಡಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08152-243222 ಮತ್ತು 9343754927ಗೆ ಸಂಪರ್ಕಿಸಲು ಸಂಸ್ಥೆಯ ನಿರ್ದೇಶಕರಾದ ಆರ್. ಬಾಲಸುಬ್ರಮಣ್ಯಂ ಕೋರಿದ್ದಾರೆ.


ಓಎನ್‌ಜಿಸಿನಲ್ಲಿ 738 ಖಾಲಿ ಹುದ್ದೆಗಳು

ಆಯಿಲ್ ಎಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ಓಎನ್‌ಜಿಸಿ)ನಲ್ಲಿ 738 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-08-2011.

ಪರೀಕ್ಷಾ ದಿನಾಂಕ: 18-9-2011
ಹುದ್ದೆ ಹೆಸರು: ಕ್ಲಾಸ್-1 ಎಕ್ಸಿಕ್ಯೂಟೀವ್ಸ್ ಗ್ರಾಜುಯೇಟ್-ಟ್ರೈನೀಸ್
ಒಟ್ಟು ಹುದ್ದೆ: 738
ವೇತನ ಶ್ರೇಣಿ: ರೂ.24900-50500
ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಡ್ರಿಲ್ಲಿಂಗ್ ಹಾಗೂ ಸಿಮೆಂಟಿಂಗ್ ಅಭ್ಯರ್ಥಿಗಳಿಗೆ 28 ವರ್ಷ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಆನ್‌ಲೈನ್‌ನಲ್ಲಿ ನೋಂದಾಯಿಸಿ ರಶೀದಿ ಕಳುಹಿಸಲು ಕೊನೆಯ ದಿನಾಂಕ: 20-08-2011; ಅರ್ಜಿ ಶುಲ್ಕ: ರೂ. 500
ವಿಳಾಸ: ಪೋಸ್ಟ್ ಬಾಕ್ಸ್ ನಂ. 10737, ಸೆಕ್ಟರ್ 7, ರೋಹಿಣಿ, ದೆಹಲಿ-110085
http://ongcgt11.in/  ಹೆಚ್ಚಿನ ಮಾಹಿತಿಗೆ ಅಥವಾ www.ongcindia.com  ವೆಬ್‌ಸೈಟ್ ಸಂಪರ್ಕಿಸಿ.


ಕರ್ನಾಟಕ ಹೈಕೋರ್ಟ್‌ನಲ್ಲಿ ಅವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ 31 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-08-2011.
ಹುದ್ದೆ ಹೆಸರು: ಲಾ ಕ್ಲರ್ಕ್-ಕಮ್-ರಿಸರ್ಚ್ ಅಸಿಸ್ಟೆಂಟ್ಸ್
ಒಟ್ಟು ಹುದ್ದೆ: 31
ವೇತನ ಶ್ರೇಣಿ: ರೂ.10,000
ವಿದ್ಯಾಭ್ಯಾಸ: ಶೇಕಡಾ 55 ಅಂಕಗಳೊಂದಿಗೆ ಕಾನೂನು ಪದವಿ.
ವಯೋಮಿತಿ: 01-01-1980ರ ಬಳಿಕ ಜನಿಸಿದವರಾಗಿರಬೇಕು.
ಆಯ್ಕೆ ವಿಧಾನ: ಸಂದರ್ಶನ
ವಿಳಾಸ: ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್ ಆಫ್ ಕರ್ನಾಟಕ, ಹೈಕೋರ್ಟ್ ಬಿಲ್ಡಿಂಗ್ಸ್, ಬೆಂಗಳೂರು-560001
http://karnatakajudiciary.kar.nic.in ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ಸಂಪರ್ಕಿಸಿ.

ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್
ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಸಿಬಿಐ)ನಲ್ಲಿ 71 ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-08-2011.
ಹುದ್ದೆ ಹೆಸರು: ಸ್ಟೆನೊಗ್ರಾಫರ್; ಒಟ್ಟು ಹುದ್ದೆ: 71
ವಿದ್ಯಾರ್ಹತೆ: 12ನೇ ತರಗತಿ ಉತ್ತೀರ್ಣ ಹಾಗೂ ಶಾರ್ಟ್‌ಹ್ಯಾಂಡ್, ಟೈಪ್‌ರೈಟಿಂಗ್‌ನಲ್ಲಿ ಅನುಭವ.
ವೇತನ ಶ್ರೇಣಿ: ರೂ.15,000
ವಿಳಾಸ (ಹೈದರಾಬಾದ್ ವಲಯ): ಸಿಬಿಐ, ಮೂರನೆ ಮಹಡಿ, ಎ ಬ್ಲಾಕ್, ಕೇಂದ್ರಿಯ ಸದನ್, ಸುಲ್ತಾನ್ ಬಜಾರ್, ಕೋಟಿ, ಹೈದರಾಬಾದ್-500095
http://cbi.nic.in ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ಸಂಪರ್ಕಿಸಿ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 50 ಹುದ್ದೆಗಳು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-08-2011. ಪರೀಕ್ಷಾ ದಿನಾಂಕ: 18-9-2011
ಹುದ್ದೆ ಹೆಸರು: ಚೀಫ್ ಮ್ಯಾನೇಜರ್ (ಟೆಕ್ನಿಕಲ್)
ಒಟ್ಟು ಹುದ್ದೆ: 10; ವೇತನ ಶ್ರೇಣಿ: ರೂ.30600-36200/-
ವಯೋಮಿತಿ: ಕನಿಷ್ಠ 30 ವರ್ಷ. ಗರಿಷ್ಠ 40. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಹುದ್ದೆ ಹೆಸರು: ಸೀನಿಯರ್ ಮ್ಯಾನೇಜರ್ (ಟೆಕ್ನಿಕಲ್)
ಒಟ್ಟು ಹುದ್ದೆ: 40; ವೇತನ ಶ್ರೇಣಿ: ರೂ.25700-31500/-
ವಯೋಮಿತಿ: ಕನಿಷ್ಠ 25 ವರ್ಷ. ಗರಿಷ್ಠ 35. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಸಂದರ್ಶನ; ಅರ್ಜಿ ಶುಲ್ಕ: ರೂ. 10000/-
ವಿಳಾಸ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಚಂದರ್ ಮುಖಿ, 17ನೆ ಮಹಡಿ, ನಾರಿಮನ್ ಪಾಯಿಂಟ್, ಮುಂಬೈ-400021

ಹೆಚ್ಚಿನ ಮಾಹಿತಿಗೆ
www:centralbankofindia.co.in ವೆಬ್‌ಸೈಟ್ ಸಂಪರ್ಕಿಸಿ.


ಕಾನೂನು ತರಬೇತಿ ನೀಡಲು ಅರ್ಜಿ ಆಹ್ವಾನ

ಕೋಲಾರ: 2011-12ನೆ ಸಾಲಿಗೆ ಹಿಂದುಳಿದ ವರ್ಗಗಳ ಕಾನೂನು ಪದವೀಧರ ಅಭ್ಯರ್ಥಿಗಳಿಗೆ ನ್ಯಾಯಾಂಗ ಆಡಳಿತದಲ್ಲಿ ಕಾನೂನು ಪದವೀಧರರಿಗೆ 4 ವರ್ಷಗಳ ಅವಧಿಗೆ ಶಿಷ್ಯ ವೇತನದೊಂದಿಗೆ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಗೆ ಸೇರಲು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೋಲಾರ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ದಿನಾಂಕ: 30-8-2011ರ ಒಳಗಾಗಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಜೊತೆಗೆ ಅಗತ್ಯವಿರುವ ದಾಖಲಾತಿಗಳನ್ನು ದ್ವಿ-ಪ್ರತಿಯಲ್ಲಿ ಲಗತ್ತಿಸಿ ಸಲ್ಲಿಸುವುದು. ತಡವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೋಲಾರ ಇವರನ್ನು ಸಂಪರ್ಕಿಸಬಹುದು. (ದೂರವಾಣಿ ಸಂಖ್ಯೆ: 08152-222336)

ವಿದ್ಯಾರ್ಥಿ ವೇತನ ಮಂಜೂರಾತಿಗೆ ಅರ್ಜಿ ಆಹ್ವಾನ

ಚಿಂತಾಮಣಿ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ (5-10ನೆ ತರಗತಿ ತನಕ) ಪಡೆಯಲು ಅರ್ಜಿಗಳನ್ನು ಉಚಿತವಾಗಿ ಪಡೆದುಕೊಳ್ಳುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ರಂಗನಾಥಸ್ವಾಮಿ ಹಾಗೂ ಬಿ.ಸಿ.ಎಂ. ವಿಸ್ತರಣಾಧಿಕಾರಿ ಎನ್.ಎ.ಖಾಜಿ ಕೋರಿದ್ದಾರೆ. ಸರಕಾರಿ, ಖಾಸಗಿ, ಹಾಗೂ ಅನುದಾನಿತ ಶಾಲೆಗಳಿಗೆ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುತ್ತದೆ. ಸರಕಾರದ ಆದೇಶದಂತೆ ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿಗಳನ್ನು ತಾಲೂಕು ಪಂಚಾಯತ್ ಕಚೇರಿ ಬಿ.ಸಿ.ಎಂ ಶಾಖೆ, ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಗುಮಾಸ್ತರಗಳ ಬಳಿ ಅರ್ಜಿಗಳನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಆಗಸ್ಟ್ 20ರ ಒಳಗೆ ಇಲಾಖೆಗೆ ಸಲ್ಲಿಸಬೇಕಾಗಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಎಲ್ಲಿಂದ ಬಂತು ಈ ಸಂಪತ್ತು?

ನರೇಂದ್ರ ಮೋದಿ ಅಧಿಕಾರಕ್ಕೇರಿದ ದಿನದಿಂದ ಈ ದೇಶದ ಜನರು ಕಾಯುತ್ತಲೇ ಇದ್ದಾರೆ, ಒಳ್ಳೆಯ ದಿನಗಳಿಗಾಗಿ. ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ಈ ದೇಶದ ಬಹುತೇಕ ಸ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸ್ವಿಸ್ ಬ್ಯಾಂಕ್ ಖಾತೆಯ ಸಚಿವನಾರು?

img7

ಹಿಂದಿನ ಯುಪಿಎ ಸರಕಾರದ ಓರ್ವ ಸಚಿವನ ಹೆಸರು ಸ್ವಿಸ್ ಬ್ಯಾಂಕ್ ಖಾತೆದಾರರ ಪಟ್ಟಿಯಲ್ಲಿ ಇದೆ ಎ ...


ಮೋದಿಯ ಸ್ವ(ಸ್ವೇ)ಚ್ಛ ಭಾರತದ ಆಘಾತಕಾರಿ ಸತ್ಯಗಳು

ಸ್ವೇಚ್ಛೆ ಮತ್ತು ಸ್ವಚ್ಛ ಎಂಬ ಪದಗಳ ಅರ್ಥಗಳನ್ನು ಪ್ರಸ್ತುತ ಸಂದರ್ಭ ಪ್ರತಿಯೊಬ್ಬ ಭಾರತೀಯನ ...


- -ಷಣ್ಮುಖೇಗೌಡ, ಮಂಡ್ಯ

ಕ್ಲೌಡ್ ಸ್ಟೋರೇಜ್ ತಾಣಗಳು

img7

ಕಳೆದ ವಾರ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕ್ಲೌಡ್ ಸ್ಟೋರೇಜ್‌ಗಳ ಬಗ್ಗೆ ಚರ್ಚಿಸಿದ್ದೆವ ...


- *ಸಂಗೀತ

ಗೊಂಡಿ ಭಾಷೆ ರಕ್ಷಣೆಗೆ ಯೋಜನೆ

‘‘
ಪ್ರೀತಿಯೇ ಆಗಿರಲಿ, ಯುದ್ಧವೇ ಆಗಿರಲಿ; ಅಲ್ಲಿ ಮೊದಲ ಹೆಜ್ಜೆ ಸಂವಹನವಾಗಿರುತ್ತದೆ’’ ಎಂದು ಪತ್ರಕರ್ತ ಶ ...


- ಶಾಲಿನಿ ಸಿಂಗ್

ರಸ್ತೆಗಳಿಗಿಂತ ಮೊದಲು ನಮ್ಮ ಪೂರ್ವಗ್ರಹವನ್ನು ಸ್ವಚ್ಛಗೊಳಿಸಬೇಕು

ಹರ್ಷ ಮಂದರ್
ದೇಶವು ಶುಚಿತ್ವಕ್ಕಾಗಿ ಒಂದು ಬಹುದೊಡ್ಡ ಸಾಮಾಜಿಕ ಚಳವಳಿಯ ತೋರಿಕೆಯ ವೇದನ ...


ಗಾಂಧಿ ಪರಂಪರೆ ವೆಬ್‌ಸೈಟ್‌ನಲ್ಲಿ

ಅಹ್ಮದಾಬಾದ್‌ನ ಗಾಂಧಿ ಆಶ್ರಮದಲ್ಲಿ ಆಗಾಗ ಕೇಳಿಬರುವ ಹಕ್ಕಿಗಳ ಚಿಲಿಪಿಲಿ ವೌನ ಮುರಿಯುತ್ತದ ...


- ನಂದಿನಿ ಓಝಾ

ಗಾಂಧಿ ಜಯಂತಿ, ಸ್ವಚ್ಛಭಾರತ ಮತ್ತು ನಾವು

-ಕೆ.ವಿ.ಶರ್ಮ, ಬಾಳಿಲ
ನಮ್ಮಲ್ಲಿ ವರ್ಷ ಪೂರ್ತಿ ಎಂಬಂತೆ ಅಪ್ಪನ ದಿನ, ಅಮ್ಮನ ದಿನ ಮಹಿಳಾ ದಿನ ...


ವೈದ್ಯಕೀಯ ವಿಜ್ಞಾನದ ನೊಬೆಲ್ ಪ್ರಶಸ್ತಿಗೆ ಪಾತ್ರವಾದ ಸಂಶೋಧನೆ

  ‘ನಾವೆಲ್ಲಿದ್ದೇವೆ ’ ಎನ್ನುವುದು ನಮಗೆ ಹೇಗೆ ಗೊತ್ತಾಗುತ್ತದೆ?
-ಪ್ರೊ. ಎಂ. ನಾರಾಯಣ ಸ್ವಾಮಿ

‘ಎಲ ...