ಸ್ಟಾಫ್ ಸೆಲೆಕ್ಷನ್ ಕಮಿಷನ್ ಹುದ್ದೆಗೆ ಅರ್ಜಿ ಆಹ್ವಾನ
ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ದೆಹಲಿ ಪೊಲೀಸ್‌ನಲ್ಲಿ 335 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6-7-2012. ಲಿಖಿತ ಪರೀಕ್ಷೆ: 19-8-2012.
ಹುದ್ದೆಯ ಹೆಸರು: ಸಬ್ ಇನ್‌ಸ್ಪೆಕ್ಟರ್ (ಎಕ್ಸಿಕ್ಯೂಟಿವ್)
ಒಟ್ಟು ಹುದ್ದೆ: 335 (ಪುರುಷರು-324, ಮಹಿಳೆಯರು-11)
ವೇತನ ಶ್ರೇಣಿ: ರೂ. 9300-34800
ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ.
ವಯೋಮಿತಿ:ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.100
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ ಸಂದರ್ಶನ
ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲನೆ ಮಹಡಿ, ‘ಇ’ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು- 560034
ಹೆಚ್ಚಿನ ಮಾಹಿತಿಗೆ http://ssc.nic.in ಸಮಪಕಿಸಿರಿ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ : ಸರಕಾರದ, ಸರಕಾರ ದಿಂದ ಅನುದಾನಿತ ವಿದ್ಯಾರ್ಥಿ ನಿಲಯ ಗಳಲ್ಲಿ ವಾಸಿಸದೆ ಇರುವ ಸರಕಾರದಿಂದ ಮಾನ್ಯತೆ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧ ಶಾಲೆಗಳಲ್ಲಿ 1 ರಿಂದ 10ನೆ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿ ರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಪ್ರತಿ ವರ್ಷ ದಂತೆ 2012-13ನೆ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರಾತಿ ಗಾಗಿ ಅರ್ಜಿ ಆಹ್ವಾನಿಸಿದ್ದು, ಈ ವಿದ್ಯಾ ರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಾರ್ಷಿಕವಾಗಿ 1ರಿಂದ5ನೆ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ರೂ.250, 6 ರಿಂದ 7ನೆ ತರಗತಿಯವರೆಗಿನ ಬಾಲಕ ರಿಗೆ ರೂ.250, ಬಾಲಕಿಯರಿಗೆ 350, 8 ರಿಂದ 10ನೆ ತರಗತಿಯವರೆಗಿನ ಬಾಲಕರಿಗೆ ರೂ.500, ಬಾಲಕಿಯರಿಗೆ ರೂ. 700ಗಳನ್ನು ಮಂಜೂರು ಮಾಡಲಾಗುವುದು.ಅರ್ಹತೆಯುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಸಂಬಂಧಪಟ್ಟ ಶಾಲೆಗಳ ಮುಖಾಂತರ ಅರ್ಜಿಗಳನ್ನು ಸಲ್ಲಿಸ ಬೇಕೆಂದು ತಾಲೂಕು ಸಮಾಜ ಕಲ್ಯಾ ಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಪಡೆದು, ದೃಢೀಕರಣದೊಂದಿಗೆ ಆಗಸ್ಟ್ 31, 2012ರೊಳಗೆ ಈ ಕಚೇರಿಗೆ ಸಲ್ಲಿಸಬೇಕು. ಹಾಗೂ 2011-12ನೆ ಸಾಲಿನಲ್ಲಿ ಪಿಯುಸಿ ಹಾಗೂ ಅಂತಿಮ ಪದವಿಯಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪ.ಜಾತಿ ಮತ್ತು ಪ.ವರ್ಗದ ವಿದ್ಯಾರ್ಥಿಗಳು ಈ ಕಚೇರಿ ಯಿಂದ ಅರ್ಜಿಯನ್ನು ಪಡೆದು ಮೂಲ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 31, 2012 ರೊಳಗೆ ಕಚೇರಿಗೆ ಸಲ್ಲಿಸಬೇಕೆಂದು ಕೋರಲಾಗಿದೆ.
ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಬಂಟ್ವಾಳ: ಬಂಟ್ವಾಳ ತಾಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಪ್ರತೀ ವರ್ಷದಂತೆ ಜು.22ರಂದು ವಿತರಿಸಲಾಗುವ ‘ವಿದ್ಯಾರ್ಥಿ ಪ್ರೋತ್ಸಾಹ ಧನ’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಪಾಣೆಮಂಗಳೂರಿನ ಸುಮಂಗಲಾ ಸಮುದಾಯ ಭವನದಲ್ಲಿರುವ ಸಂಘದ ಕಚೇರಿಯಲ್ಲಿ ಈಗಾಗಲೇ ನಿಗದಿತ ಅರ್ಜಿ ನಮೂನೆ ವಿತರಿಸಲಾಗುತ್ತಿದೆ. ಅರ್ಹ ಸ್ವಜಾತಿ ವಿದ್ಯಾರ್ಥಿಗಳು ಶೈಕ್ಷಣಿಕ ತೇರ್ಗಡೆ ಬಗ್ಗೆ ಅಂಕಪಟ್ಟಿ ಪ್ರತಿ ಮತ್ತು ಶಾಲಾ ಕಾಲೇಜಿನ ಮುಖ್ಯಸ್ಥರ ಸಹಿಯೊಂದಿಗೆ ಜು.5 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ತಾಲೂಕಿನಲ್ಲಿ ನೆಲೆಸಿರುವ ಎಂಟನೆ ತರಗತಿ ಮೇಲ್ಪಟ್ಟು ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೊಮಾ, ವೈದ್ಯಕೀಯ ಮತ್ತಿತರ ವಿಭಾಗದಲ್ಲಿ ಅಭ್ಯಸಿಸುತ್ತಿರುವ ಅರ್ಹ ವಿದ್ಯಾರ್ಥಿಗಳು ಆಯಾಯ ವಲಯ ಸಮಿತಿ ಮುಖ್ಯಸ್ಥರ ಶಿಫಾರಸು ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಸಪಲ್ಯ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ ಹುದ್ದೆಗೆ ಅರ್ಜಿ ಆಹ್ವಾನ
ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) 866 ಹುದ್ದೆಗಳನ್ನು (ಕ್ರೀಡಾ ಮೀಸಲಾತಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-7-2012.
ಹುದ್ದೆಯ ಹೆಸರು: 1) ಹೆಡ್ ಕಾನ್‌ಸ್ಟೆಬಲ್/ಜಿಡಿ
ಒಟ್ಟು ಹುದ್ದೆ: 191
ವೇತನ ಶ್ರೇಣಿ: ರೂ. 5200-20200.
ವಿದ್ಯಾರ್ಹತೆ: 10+2 ಅಥವಾ ತತ್ಸಮಾನ.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ.
ಹುದ್ದೆಯ ಹೆಸರು: 2) ಕಾನ್‌ಸ್ಟೆಬಲ್/ಜಿಡಿ
ಒಟ್ಟ್ಟು ಹುದ್ದೆ: 675
ವೇತನ ಶ್ರೇಣಿ: ರೂ. 5200-20200.
ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೆ ತರಗತಿ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.100
ವಿಳಾಸ: ಡಿಐಜಿ (ಸ್ಪೋರ್ಟ್ಸ್), ಡೈರೆಕ್ಟೊರೇಟ್ ಜನರಲ್ (ಟ್ರೈನಿಂಗ್ ಬ್ರಾಂಚ್), ಸಿಆರ್‌ಪಿಎಫ್, ಈಸ್ಟ್ ಬ್ಲಾಕ್-10, ಲೆವೆಲ್-7, ಆರ್.ಕೆ.ಪುರಂ, ನವದೆಹಲಿ-110066
ಹೆಚ್ಚಿನ ಮಾಹಿತಿಗೆ http://crpf.nic.in ಸಂಪಕಿಸಿ.
ಸ್ಟಾಫ್ ಸೆಲೆಕ್ಷನ್ ಕಮಿಷನ್ ಹುದ್ದೆಗೆ ಅರ್ಜಿ ಆಹ್ವಾನ
ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ದೆಹಲಿ ಪೊಲೀಸ್‌ನಲ್ಲಿ 335 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6-7-2012. ಲಿಖಿತ ಪರೀಕ್ಷೆ: 19-8-2012.
ಹುದ್ದೆಯ ಹೆಸರು: ಸಬ್ ಇನ್‌ಸ್ಪೆಕ್ಟರ್ (ಎಕ್ಸಿಕ್ಯೂಟಿವ್)
ಒಟ್ಟು ಹುದ್ದೆ: 335 (ಪುರುಷರು-324, ಮಹಿಳೆಯರು-11)
ವೇತನ ಶ್ರೇಣಿ: ರೂ. 9300-34800
ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ.
ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.100
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ ಸಂದರ್ಶನ
ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲನೆ ಮಹಡಿ, ‘ಇ’ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು- 560034
ಹೆಚ್ಚಿನ ಮಾಹಿತಿಗೆ http://ssc.nic.in ಸಂಪಕಿಸಿ.
ಮಾಹಿತಿಗೆ ಸಕಾಲ ಕೇಂದ್ರದಲ್ಲಿ ಕೆಲಸ ನಿರ್ವಹಿಸಲು ಅರ್ಜಿ ಆಹ್ವಾನ
ಕೋಲಾರ :ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ (ಸಕಾಲ ಯೋಜನೆಯಡಿ)ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಬೇಕಾಗಿದೆ. ಸಹಾಯವಾಣಿ ಕೇಂದ್ರದಲ್ಲಿ ಸಕಾಲ ಯೋಜನೆಯಡಿ ಸಾರ್ವಜನಿಕರಿಗೆ ಯಾವ ರೀತಿಯ ಸೌಲ್ಯ ಸಿಗುತ್ತೆ, ಅರ್ಜಿಯನ್ನು ಭರ್ತಿ ಮಾಡುವ ವಿಧಾನ, ಅರ್ಜಿ ಸಲ್ಲಿಸುವ ವಿಧಾನ, ಲಭ್ಯವಿರುವ ಸೇವೆಗಳು ಮತ್ತು ಇನ್ನಿತರೆ ವಿಷಯಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸುವ ಸಲುವಾಗಿ ಸ್ವಇಚ್ಛೆಯಿಂದ ಕೆಲಸ ನಿರ್ವಹಿಸಲು ಇಚ್ಛೆಯುಳ್ಳ ಗಣಕಯಂತ್ರ ಜ್ಞಾನವುಳ್ಳ ಸರಕಾರೇತರ ಸಂಸ್ಥೆಗಳು, ನಿವೃತ್ತಿ ಹೊಂದಿರುವ ಸರಕಾರಿ ನೌಕರರು, ಶಾಲಾ ಉಪಾಧ್ಯಾಯರು, ಕಾಲೇಜು ವಿದ್ಯಾರ್ಥಿಗಳು ಮತ್ತು ಗೃಹಿಣಿಯರು ತಮ್ಮ ಹೆಸರುಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ರ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಗೋಡೆಬರಹಕ್ಕೆ ಕಲಾವಿದರ ಆಹ್ವಾನ
ಕೋಲಾರ:ಭೂಚೇತನ ಯೋಜನೆಯನ್ನು ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಈ ಯೋಜನೆಯ ಪ್ರಚಾರಕ್ಕಾಗಿ ಕನಿಷ್ಠ 80ಚದರ ಅಡಿ ಅಳತೆಯ ಗೋಡೆ ಬರಹಗಳನ್ನು ಬರೆಸಬೇಕಾಗಿರುತ್ತದೆ.ಗೋಡೆಬರಹಗಳು ಹಸಿರು ಬಣ್ಣದ ಬ್ಯಾಕ್‌ಗ್ರೌಂಡ್ ಮೇಲೆ ಹಳದಿ ಬಣ್ಣದ ಅಕ್ಷರಗಳಲ್ಲಿ ಬರೆಯಬೇಕು. ಇಚ್ಛಿಸುವ ಕಲಾವಿದರ ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು, ಕೋಲಾರ ತಾಲೂಕು, ದೂರವಾಣಿ ಸಂಖ್ಯೆ: 08152-222048 ಅನ್ನು ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.
ಮಧ್ಯ ರೈಲ್ವೆ ಹುದ್ದೆಗೆ ಅರ್ಜಿ ಆಹ್ವಾನ
ಮಧ್ಯ ರೈಲ್ವೆಯಲ್ಲಿ 134 ಹುದ್ದೆಗಳನ್ನು (ಅಂಗವಿಕಲರು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9-7-2012. ವೇತನ ಶ್ರೇಣಿ: ರೂ.520020200. ಕೆಲ ಹುದ್ದೆಗಳಿಗೆ ರೂ. 9300-34800.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
ವಿಳಾಸ: ದಿ ಡೆಪ್ಯುಟಿ ಪರ್ಸೊನೆಲ್ ಆಫೀಸರ್ (ಮುಖ್ಯಕಚೇರಿ), ಜನರಲ್ ಮ್ಯಾನೇಜರ್ ಆಫೀಸ್, ಮೊದಲ ಮಹಡಿ, ಮಧ್ಯ ರೈಲ್ವೆ, ಸಿಎಸ್‌ಟಿ ಮುಂಬೈ-400001
ಹೆಚ್ಚಿನ ಮಾಹಿತಿಗೆ http://www.rrccr.com ಸಮಪಕಿ೯ಸಿ.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...
1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...