ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಂದಲ್ಲೊಂದು ಹೇಳಿಕೆ ನೀಡಿ ವಿವಾದದ ಸುಳಿಗೆ ಸಿಲುಕುತ್ತಲೇ ಇದ್ದಾರೆ. ನ್ಯಾಯಾಲಯದ ತೀರ್ಪನ್ನು ಖರೀದಿಸಬಹುದೆಂದು ಇತ್ತೀಚೆಗೆ ಅವರು ನೀಡಿದ ಹೇಳಿಕೆಯ ಕುರಿತಂತೆ ಕಲ್ಕತ್ತಾ ಹೈಕೋರ್ಟ್ ನ್ಯಾಯಾಂಗ ನಿಂದನೆಯ ಆರೋಪದ ವಿಚಾರಣೆಯನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲೂ ಮಮತಾ ಬ್ಯಾನರ್ಜಿಯವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ. ಮಮತಾ ಬ್ಯಾನರ್ಜಿಯವರ ಈ ಹೇಳಿಕೆಯ ಕುರಿತು ಸಮಾಜದ ಹಲವಾರು ವಲಯಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆದರೂ ಯಾವುದಕ್ಕೂ ಜಗ್ಗದ ಮಮತಾ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ ತುಂಬಿದೆ ಎಂಬ ಹೇಳಿಕೆಗೆ ಈಗಲೂ ತಾನು ಬದ್ಧ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಯನ್ನು ಎದುರಿಸಲು ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ. ಮಮತಾ ಬ್ಯಾನರ್ಜಿಯವರು ಹೋರಾಟ ಗಳ ಮೂಲಕ ಇಷ್ಟು ಎತ್ತರಕ್ಕೆ ಬೆಳೆದು ನಿಂತಿರುವುದು ನಿಜ. ಆದರೆ ಅವರ ವಿಚಿತ್ರ ವರ್ತನೆ ಹಲವಾರು ಬಾರಿ ವಿವಾದಕ್ಕೆ ಗ್ರಾಸವಾಗುತ್ತದೆ.
ಸಿಪಿಎಂನ ಸರ್ವಾಧಿಕಾರಿ ಆಡಳಿತವನ್ನು ಸೋಲಿಸಿ ತಾನು ಅಧಿಕಾರಕ್ಕೆ ಬಂದಿರುವುದಾಗಿ ಹೇಳಿಕೊಳ್ಳುವ ಮಮತಾ ಬ್ಯಾನರ್ಜಿಯವರು ರಾಜ್ಯದ ಅಧಿಕಾರ ಸೂತ್ರ ಹಿಡಿದ ನಂತರ ಯಾವ ಸರ್ವಾಧಿಕಾರಿಗೂ ಕಡಿಮೆಯಿಲ್ಲದಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಹಜವಾದ ಭಿನ್ನಾಭಿಪ್ರಾಯವನ್ನು ಅವರು ಎಂದೂ ಸಹಿಸುವುದಿಲ್ಲ. ಇತ್ತೀಚೆಗೆ ಝಾರಾಗಾಮ್ ಎಂಬ ಗ್ರಾಮದಲ್ಲಿ ತನ್ನ ಆಡಳಿತ ವೈಖರಿಯನ್ನು ಪ್ರಶ್ನಿಸಿದ ರೈತನನ್ನು ಬ್ಯಾನರ್ಜಿಯವರು ಮಾವೊವಾದಿ ಎಂದು ಕರೆದರು. ಬಹಿರಂಗ ಸಭೆಯಲ್ಲಿ ಪ್ರಶ್ನಿಸಿದ ಆತ ಮಾವೊವಾದಿಯಾಗಿದ್ದಾನೆ, ಆತನನ್ನು ಬಂಧಿಸಿ ಎಂದು ಪೊಲೀಸರಿಗೆ ಭಾಷಣದಲ್ಲೇ ಆದೇಶ ನೀಡಿದರು.
ಮುಖ್ಯಮಂತ್ರಿಯ ಮಾತನ್ನು ತಳ್ಳಿ ಹಾಕಲಾಗದ ಪೊಲೀಸರು ಆ ರೈತನನ್ನು ಬಂಧಿಸಿ ಜೈಲಿಗೆ ಅಟ್ಟಿದರು. ವಾಸ್ತವವಾಗಿ ಆ ರೈತನಿಗೆ ಮಾವೊವಾದ ಎಂದರೆ ಏನೆಂದೇ ಗೊತ್ತಿಲ್ಲ. ಆತ ತನ್ನ ಬದುಕಿನ ಬವಣೆಗಳ ಸಂಕಟವನ್ನು ತೋಡಿಕೊಳ್ಳಲು ಧ್ವನಿ ಯೆತ್ತಿದುದೇ ಅಪರಾಧವಾಗಿತ್ತು. ಪ್ರಜಾಪ್ರಭುತ್ವದಲ್ಲಿ ಟೀಕೆ-ವಿಮರ್ಶೆಗಳು ಸಹಜ. ಇಂತಹ ವಿಮರ್ಶೆಗಳು ಇಲ್ಲದಿದ್ದರೆ ಜನತಂತ್ರದ ಆರೋಗ್ಯ ಕೆಟ್ಟು ಹೋಗುತ್ತದೆ. ಆದರೆ ಅಧಿಕಾರದಲ್ಲಿರುವವರು ಇಂತಹ ಟೀಕೆಗಳನ್ನು ಎಂದೂ ಸಹಿಸುವುದಿಲ್ಲ. ಎದುರಾಳಿಗಳ ವಿರುದ್ಧ ‘ಮಾವೊವಾದಿ’ ‘ಭಯೋತ್ಪಾದಕ’ ಎಂಬೆರಡು ಅಸ್ತ್ರಗಳನ್ನು ಬಳಸಿ ಎಂತಹ ಪ್ರತಿರೋಧವನ್ನಾದರೂ ಅವರು ಹತ್ತಿಕ್ಕುತ್ತಾರೆ.
ಮಮತಾ ಬ್ಯಾನರ್ಜಿಯವರು ಈಗ ಅದೇ ದಾರಿ ಹಿಡಿದಿದ್ದಾರೆ. ಈ ಹಿಂದೆ ತನ್ನ ಬಗ್ಗೆ ವ್ಯಂಗ್ಯಚಿತ್ರವೊಂದನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಟೀಕಿಸಿದುದಕ್ಕಾಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರನ್ನು ಜೈಲಿಗೆ ಹಾಕಿಸಿದರು. ಮಮತಾರ ಈ ವರ್ತನೆಯ ಬಗ್ಗೆ ಅವರ ಒಂದು ಕಾಲದ ಬೆಂಬಲಿಗರಾದ ಮಹಾಶ್ವೇತಾದೇವಿ ಕಟುವಾಗಿ ಟೀಕಿಸಿದ್ದಾರೆ. ಮಮತಾ ಬ್ಯಾನರ್ಜಿಯವರ ಈ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಕಂಡೇಯ ಕಟ್ಜು, ಪ್ರಜಾಪ್ರಭುತ್ವ ವಿರೋಧಿಯಾದ ಹೇಳಿಕೆ ಸ್ವತಂತ್ರ ಮನೋಧರ್ಮಕ್ಕೆ ಅಗೌರವ ತರುವ ಸಂಗತಿ ಎಂದಿದ್ದಾರೆ.
ಮಾಧ್ಯಮ ವಲಯದಿಂದ ಇದಕ್ಕೆ ಟೀಕೆ ವ್ಯಕ್ತವಾಗಿದೆ. ಹಲವಾರು ಹಿರಿಯ ವಕೀಲರು ಖಂಡಿಸಿದ್ದಾರೆ. ಆದರೂ ತನ್ನ ತಪ್ಪನ್ನು ತಿದ್ದಿಕೊಳ್ಳಲು ಮಮತಾ ಬ್ಯಾನರ್ಜಿಯವರು ತಯಾರಿಲ್ಲ. ರಾಜಕೀಯ ಅಧಿಕಾರ ಎಂಬುದು ಎಂತಹ ಮನುಷ್ಯನನ್ನೂ ಒಮ್ಮಿಂದೊಮ್ಮೆಲೇ ಬದಲಾಯಿಸಿ ಬಿಡುತ್ತದೆ. ತಾನು ಉಳಿದವರಿಗಿಂತ ಶ್ರೇಷ್ಠ, ತನ್ನನ್ನು ಯಾರೂ ಪ್ರಶ್ನಿಸಬಾರದು ಎಂಬ ಮಾನಸಿಕ ಕಾಯಿಲೆ ಬಂದು ಬಿಡುತ್ತದೆ. ಇಂತಹ ಕಾಯಿಲೆ ಮಮತಾ ಬ್ಯಾನರ್ಜಿಯವರಿಗೆ ಬಂದಿದೆ. ಈ ಖಾಯಿಲೆಯಿಂದ ಅವರು ವಿಮುಖರಾದರೆ ಅವರ ರಾಜಕೀಯ ಭವಿಷ್ಯ ಉಜ್ವಲವಾಗುತ್ತದೆ.
ದುರಹಂಕಾರ ಮಮತಾ ಬ್ಯಾನರ್ಜಿಯವರಿಗೆ ಮಾತ್ರವಲ್ಲ, ಅಧಿಕಾರಕ್ಕೆ ಬರುವ ಬಹುತೇಕ ರಾಜಕಾರಣಿಗಳನ್ನು ದಾರಿ ತಪ್ಪಿಸುತ್ತದೆ. ಹೀಗೆ ದಾರಿ ತಪ್ಪಿದವರು ಆಳವಾದ ಕಂದಕಕ್ಕೆ ಹೋಗಿ ಬೀಳುತ್ತಾರೆ. ಮಮತಾ ಬ್ಯಾನರ್ಜಿಯವರು ಅಂತಹ ದುರಂತದ ಅಂಚಿಗೆ ಬಂದು ನಿಂತಿದ್ದಾರೆ. ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳವನ್ನು ಮೂರು ದಶಕಗಳ ಕಾಲ ಆಳಿದ ಜ್ಯೋತಿ ಬಸು ಅವರ ಬದುಕಿನ ಪುಟಗಳಿಂದ ಪಾಠ ಕಲಿಯಬೇಕಾಗಿದೆ. ಅಧಿಕಾರದ ಅಮಲು ಬಸು ಅವರ ದಾರಿ ತಪ್ಪಿಸಲಿಲ್ಲ. ಇದೇ ಮಮತಾ ಬ್ಯಾನರ್ಜಿ ತನ್ನನ್ನು ಕೆಟ್ಟ ಭಾಷೆಯಲ್ಲಿ ಟೀಕಿಸಿದಾಗಲೂ ಬಸು ತಾಳ್ಮೆಯನ್ನು ಕಳೆದು ಕೊಳ್ಳಲಿಲ್ಲ.
ಕೊನೆಗೂ 17 ವರ್ಷದ ಜೆಡಿಯು-ಬಿಜೆಪಿ ನಡುವಿನ ಮೈತ್ರಿ ಮುರಿದಿದೆ. ನರೇಂದ್ರ ಮೋದಿಯ ಕೈಗೆ ಬಿಜೆಪಿಯ ನೇತೃತ್ವವನ್ನು ಕೊಟ್ಟ ಬೆನ್ನಿಗೇ ಇದು ನಡೆದಿದ ...
Click here to post your views ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...
1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...