ಇರಾನ್‌ನ ತೈಲ ಆಮದು ಮಾಡಿಕೊಳ್ಳುವ ಸಂಬಂಧದಲ್ಲಿ ನಿರ್ಬಂಧ ನೀತಿಯನ್ನು ಸಡಿಲಿಸಿರುವ ಅಮೆರಿಕ ಭಾರತ ಸೇರಿದಂತೆ ಜಗತ್ತಿನ 7ರಾಷ್ಟ್ರಗಳಿಗೆ ಇದರಿಂದ ವಿನಾಯಿತಿ ನೀಡಿದೆ.ಭಾರತ ಮಾತ್ರವಲ್ಲ,ದಕ್ಷಿಣ ಆಫ್ರಿಕ,ಶ್ರೀಲಂಕಾ, ಮಲೇಷಿಯಾ,ಟರ್ಕಿ,ತೈವಾನ್ ಮತ್ತು ಕೊರಿಯಾಗಳು ವಿನಾಯಿತಿ ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿವೆ.ಈ ದೇಶಗಳು ಇರಾನ್‌ನಿಂದ ಕಚ್ಚಾ ತೈಲ ಆಮದನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.ದ್ವಿಪಕ್ಷೀಯ ಮಾತುಕತೆಗಾಗಿ ಭಾರತದ ವಿದೇಶಾಂಗ ಸಚಿವ ಎಸ್.ಎಂ ಕೃಷ್ಣ ವಾಶಿಂಗ್ಟನ್‌ಗೆ ಆಗಮಿಸುವ ಕೆಲ ದಿನಗಳ ಮೊದಲು ಅಮೆರಿಕದ ಈ ಮಹತ್ವದ ತೀರ್ಮಾನ ಪ್ರಕಟವಾಗಿದೆ.ಅಣ್ವಸ್ತ್ರ ತಯಾರಿಕೆಯನ್ನು ಕೂಡಲೇ ನಿಲ್ಲಿಸಬೇಕು.ತಾನು ಕೈಗೊಂಡ ಕ್ರಮಗಳ ಬಗ್ಗೆ ಜಾಗತಿಕ ಸಮುದಾಯಕ್ಕೆ ಮನವರಿಕೆ ಮಾಡಿ ಕೊಡಬೇಕು.ಅಲ್ಲಿಯವರೆಗೆ ಈ ದೇಶಕ್ಕೆ ನಿರ್ಬಂಧದ ಶಿಕ್ಷೆ ತಪ್ಪಿದುದಲ್ಲ ಎಂದು ಅಮೆರಿಕ ಹೇಳಿದೆ.
ಇರಾನ್‌ಗೆ ಅಮೆರಿಕ ನೀಡುತ್ತಿರುವ ಕಿರುಕುಳ ಹೊಸತೇನಲ್ಲ. ಈ ಹಿಂದೆ ಇದೇ ರೀತಿ ಹಿಂಸೆ ನೀಡಿ ಸುಳ್ಳು ಆರೋಪ ಮಾಡಿ ಇರಾಕ್‌ನ್ನು ನಾಶ ಮಾಡಿದ ಕುಖ್ಯಾತಿ ಅದಕ್ಕಿದೆ.ಇರಾನ್ ಸೆಂಟ್ರಲ್ ಬ್ಯಾಂಕ್ ಮೂಲಕ ಇರಾನ್‌ನ ತೈಲವನ್ನು ಖರೀದಿಸುವ ದೇಶದೊಂದಿಗೆ ಅಮೆರಿಕದ ಯಾವುದೇ ಕಂಪೆನಿಯು ವ್ಯವಹಾರ ನಡೆಸಬಾರದು ಎಂಬುದು 2011ರ ಕೊನೆಯಲ್ಲಿ ಹೇರಿದ ಮುಖ್ಯವಾದ ನಿರ್ಬಂಧವಾಗಿದೆ.ಇರಾನ್‌ನ ರಫ್ತು ವ್ಯವಹಾರವನ್ನು ನಷ್ಟಕ್ಕೆ ಗುರಿಪಡಿಸುವ ಮೂಲಕ ಆ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುವುದು ಅಮೆರಿಕದ ಹುನ್ನಾರವಾಗಿದೆ.
ಯಾವ ದೇಶಗಳು ಇರಾನ್‌ನಿಂದ ಆಮದುಮಾಡಿಕೊಳ್ಳುವ ತೈಲದ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸುತ್ತವೆಯೋ ಅಂತಹ ದೇಶಗಳಿಗೆ ದಿಗ್ಬಂಧನದಿಂದ ವಿನಾಯಿತಿ ನೀಡುವ ಅಧಿಕಾರ ಅಮೆರಿಕದ ಅಧ್ಯಕ್ಷರಿಗಿದೆ.ಅಮೆರಿಕದ ಒತ್ತಡಕ್ಕೆ ಮಣಿದು ಜಪಾನ್ ಮತ್ತು ಯೂರೋಪ್‌ನ ಹತ್ತು ದೇಶಗಳು ಇರಾನ್‌ನಿಂದ ತೈಲ ಆಮದು ಪ್ರಮಾಣವನ್ನು ಕಡಿತಗೊಳಿಸಲು ತೀರ್ಮಾನಿಸಿವೆ.ಆ ದೇಶಗಳಿಗೆ ದಿಗ್ಬಂಧನದಿಂದ ವಿನಾಯಿತಿ ನೀಡಲಾಗಿದೆ.ಯೂರೋಪ್ ಒಕ್ಕೂಟ ಇರಾನ್ ಜೊತೆಗಿನ ತೈಲ ಒಪ್ಪಂದವನ್ನು ಈ ವರ್ಷದ ಜನವರಿಯಲ್ಲಿ ರದ್ದು ಮಾಡಿದೆ.
ಈಗಿರುವ ತೈಲ ಒಪ್ಪಂದಗಳು ಜುಲೈ 9ರಿಂದ ಸ್ಥಗಿತಗೊಳ್ಳಲಿವೆ. ಇರಾನ್‌ನಿಂದ ತೈಲ ಖರೀದಿಸುವ ಪ್ರಮುಖ ದೇಶಗಳಲ್ಲಿ ಭಾರತವೂ ಒಂದು.ತೈಲ ಖರೀದಿಯನ್ನು ನಿಲ್ಲಿಸಲೇಬೇಕೆಂದು ಅಮೆರಿಕ ಕಳೆದ ಎರಡು ವರ್ಷಗಳಿಂದ ಭಾರತದ ಮೇಲೆ ಒತ್ತಡ ಹಾಕುತ್ತಿದೆ.ಭಾರತವೂ 2010ರಲ್ಲಿ ತನ್ನ ಅಗತ್ಯದ ಶೇಕಡಾ 12ರಷ್ಟು ತೈಲವನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿದೆ.ಪ್ರತಿ ವರ್ಷ 7.1ಮಿಲಿಯನ್ ಟನ್‌ಗಳಷ್ಟು ತೈಲವನ್ನು ಇರಾನ್‌ನಿಂದ ತರಿಸಿಕೊಳ್ಳುವ ಮೂಲಕ ಮಂಗಳೂರಿನ ತೈಲ ಸಂಸ್ಕರಣಾ ಕೇಂದ್ರ ದೊಡ್ಡ ಗ್ರಾಹಕನಾಗಿ ಬೆಳೆದು ನಿಂತಿದೆ.
ಆದರೆ, ಅಮೆರಿಕ ಒತ್ತಡ ನಿಲ್ಲಿಸಲಿಲ್ಲ.ಕೊನೆಗೂ ಇದಕ್ಕೆ ಮಣಿದು, ಭಾರತದ ತೈಲ ಕಂಪೆನಿಗಳು ತೈಲ ಖರೀದಿ ಪ್ರಮಾಣವನ್ನು ಕಡಿತಗೊಳಿಸಬೇಕೆಂದು ಮನಮೋಹನ್ ಸಿಂಗ್ ಸರಕಾರ ನಿರ್ದೇಶನ ನೀಡಿತು.ಇದರಿಂದಾಗಿ ಮಂಗಳೂರು ತೈಲ ಸಂಸ್ಕರಣಾ ಘಟಕ ಮತ್ತು ಹಿಂದೂಸ್ಥಾನ್ ಪೆಟ್ರೊಲಿಯಂ ಸಂಸ್ಥೆಗಳು ತಮ್ಮ ತೈಲ ಕೋರಿಕೆಯನ್ನು ಕಡಿತಗೊಳಿಸಿವೆ. ಎಸ್.ಆರ್.ಕಂಪೆನಿ ಕೂಡ ತನ್ನ ತೈಲ ಕೋರಿಕೆಯನ್ನು ಕಡಿಮೆ ಮಾಡಿದೆ. ಮನಮೋಹನ್ ಸರಕಾರ ಆರಂಭದಲ್ಲಿ ಭಾರತದ ಇಂಧನ ಅಗತ್ಯಗಳಿಗೆ ಇರಾನ್‌ನ ತೈಲ ಅವಶ್ಯ ಎಂಬ ನಿಲುವನ್ನು ತಾಳಿತ್ತು.
ಇರಾನ್‌ನಿಂದ ತರಿಸಿಕೊಳ್ಳುವ ತೈಲ ಪ್ರಮಾಣವನ್ನು ಕಡಿತ ಮಾಡುವುದಿಲ್ಲ ಎಂದು ತಿಳಿಸಿತ್ತು.ಆದರೆ ವಾಸ್ತವವಾಗಿ ವರ್ಷದಿಂದ ವರ್ಷಕ್ಕೆ ಅಘೋಷಿತವಾಗಿ ತೈಲ ಆಮದು ಪ್ರಮಾಣವನ್ನು ಕಡಿತ ಮಾಡುತ್ತಾ ಬಂದಿದೆ.ಅಂತಲೇ ಅಮೆರಿಕ ಭಾರತಕ್ಕೆ ವಿನಾಯಿತಿ ನೀಡಿದೆ.ಅಮೆರಿಕದ ಹಿತಾಸಕ್ತಿಗಾಗಿ ದೇಶದ ಹಿತಾಸಕ್ತಿಯನ್ನು ಬಲಿ ಕೊಡುವ ಯುಪಿಎ ಸರಕಾರದ ನೀತಿ ಖಂಡನೀಯವಾಗಿದೆ.ಇರಾನ್‌ನಂತೆ ಜಗತ್ತಿನ ಇನ್ನಾವ ದೇಶವೂ ಭಾರತಕ್ಕೆ ಅಗ್ಗದ ದರದಲ್ಲಿ ಅನಿಲ ನೀಡುವುದಿಲ್ಲ ಎಂಬುದನ್ನು ಮರೆಯಬಾರದು.ರಾಷ್ಟ್ರದ ಹಿತಾಸಕ್ತಿಯನ್ನು ಬಲಿಗೊಟ್ಟು ಅಮೆರಿಕದ ಷರತ್ತುಗಳಿಗೆ ಮಣಿಯಬಾರದು.ಆರ್ಥಿಕ ನೀತಿಯಲ್ಲಿ ಒತ್ತಡಕ್ಕೆ ಮಣಿಯುತ್ತಾ ಹೋದರೆ ಬರಲಿರುವ ದಿನಗಳಲ್ಲಿ ಭಾರತ ರಾಜಕೀಯ ವ್ಯವಸ್ಥೆಯಲ್ಲಿ ನೇರ ಹಸ್ತಕ್ಷೇಪ ಮಾಡಲು ಅಮೆರಿಕ ಹಿಂಜರಿಯುವುದಿಲ್ಲ. ಅದಕ್ಕೆ ಅಂತಹ ಅವಕಾಶ ನೀಡಬಾರದು.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...