ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಣವ್‌ಮುಖರ್ಜಿಯವರ ಮುಂದೆ ಅಭ್ಯರ್ಥಿಯನ್ನು ನಿಲ್ಲಿಸಲು ಮುಂದಾದ ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣೆಗೆ ಮುನ್ನವೇ ಮುಖಭಂಗವನ್ನು ಅನುಭವಿಸಿದೆ. ಮುಖರ್ಜಿಯವರನ್ನು ನೇರವಾಗಿ ಬೆಂಬಲಿಸಿದರೆ, ಆ ಹೆಗ್ಗಳಿಕೆಯಾದರೂ ಎನ್‌ಡಿಎಗೆ ಇರುತ್ತಿತ್ತು.ಆದರೆ ಏನೋ ಮಾಡಲು ಹೋದ ಎನ್‌ಡಿಎ ತನ್ನೊಳಗಿನ ಬಿರುಕನ್ನು ದೇಶದ ಮುಂದೆ ಬಹಿರಂಗ ಪಡಿಸಿಕೊಂಡಿದೆ.ಮೂರು ಬಾರಿ ಜೊತೆಯಾಗಿ ಕುಳಿತುಕೊಂಡರೂ,ರಾಷ್ಟ್ರಪತಿಯ ವಿಷಯದಲ್ಲಿ ಸಹಮತಕ್ಕೆ ಬರುವುದಕ್ಕೆ ಬಿಜೆಪಿಗೆ ಸಾಧ್ಯವಾಗಿಲ್ಲ. ಎನ್‌ಡಿಎಯೊಳಗಿನ ಮುಖ್ಯ ಗುಂಪು ಮುಖರ್ಜಿಯವರನ್ನು ಬೆಂಬಲಿಸಲು ನಿರ್ಧರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಖರ್ಜಿಯವರ ಆಯ್ಕೆಯ ವಿಷಯದಲ್ಲಿ ಬಿಜೆಪಿಯೊಳಗೇ ಭಿನ್ನಮತವಿದೆ. ಬಿಜೆಪಿಯ ಕೆಲವು ನಾಯಕರು ಮುಖರ್ಜಿ ರಾಷ್ಟ್ರಪತಿಯಾಗುವುದರ ಪರವಾಗಿದ್ದಾರೆ. ಪಕ್ಷದ ನಾಯಕರಾಗಿರುವ ಅಡ್ವಾಣಿಯವರೂ ಮುಖರ್ಜಿಯವರನ್ನು ವಿರೋಧಿಸಲು ವಿಶೇಷ ಆಸಕ್ತಿಯನ್ನು ತೋರಿಸುತ್ತಿಲ್ಲ. ಮೇನಕಾ ಗಾಂಧಿ ಮುಖರ್ಜಿಯವರ ಪರವಾಗಿ ಹೇಳಿಕೆಯನ್ನು ನೀಡಿದ್ದಾರೆ. ಇತ್ತ ಶಿವಸೇನೆಯ ನಾಯಕ ಬಾಳಾ ಠಾಕ್ರೆ ಕೂಡ ಮುಖರ್ಜಿಯವರ ಪರವಾಗಿ ಮಾತನಾಡುತ್ತಿರುವುದು, ಎನ್‌ಡಿಎ ಬಳಗಕ್ಕಾಗಿರುವ ಭಾರೀ ಮುಖಭಂಗವೇ ಸರಿ.
ಬಿಜೆಪಿಯ ಉದ್ದೇಶ ಸ್ಪಷ್ಟ. ರಾಷ್ಟ್ರಪತಿ ಯಾರಾಗುತ್ತಾರೆ ಎನ್ನುವುದು ಅದಕ್ಕೆ ಮುಖ್ಯವಲ್ಲ. ಬದಲಿಗೆ ಉಪರಾಷ್ಟ್ರಪತಿಯಾಗಿ ಬಿಜೆಪಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವೋ ಎಂಬ ಪ್ರಯತ್ನವನ್ನು ಅದು ಮಾಡುತ್ತಿದೆ. ಜಸ್ವಂತ್ ಸಿಂಗ್ ಈಗಾಗಲೇ ಉಪರಾಷ್ಟ್ರಪತಿಯಾಗುವ ನಿಟ್ಟಿನಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದ್ದು ವಿವಿಧ ರಾಜಕೀಯ ಮುಖಂಡರನ್ನು ಸಂಪರ್ಕಿಸಿದ್ದಾರೆ. ಆದರೆ ಬಿಜೆಪಿಯೊಳಗೇ ಜಸ್ವಂತ್ ಸಿಂಗ್‌ರ ಕುರಿತಂತೆ ಭಿನ್ನಾಭಿಪ್ರಾಯ ಹೊಂದಿದ ಜನರಿರುವಾಗ, ಅದು ಸಾಧ್ಯವಾಗುವ ಮಾತು ಎಂದೆನಿಸುವುದಿಲ್ಲ.
ಅಡ್ವಾಣಿಯವರು ಕೂಡ ಇತ್ತೀಚಿನ ದಿನಗಳಲ್ಲಿ ಮೂಲೆಗುಂಪಾಗುತ್ತಿರುವುದರಿಂದ, ಬಿಜೆಪಿಯ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗುವ ಹಂತದಲ್ಲಿದೆ.ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯನ್ನು ನಿರ್ಣಯಿಸಲು ಹೊರಟ ಎನ್‌ಡಿಎ ಇದೀಗ, ಪ್ರಧಾನಮಂತ್ರಿ ಅಭ್ಯರ್ಥಿಯ ಕುರಿತಂತೆ ಗೊಂದಲಗಳನ್ನು ಮೈಮೇಲೆ ಎಳೆದುಕೊಂಡಿದೆ. ‘‘ಜಾತ್ಯತೀತ ವ್ಯಕ್ತಿ ಎನ್‌ಡಿಎಯಿಂದ ಪ್ರಧಾನಿ ಅಭ್ಯರ್ಥಿಯಾಗಬೇಕು’’ ಎಂಬ ನಿತೀಶ್‌ರ ಹೇಳಿಕೆ ಎನ್‌ಡಿಎಯೊಳಗೆ, ಮುಖ್ಯವಾಗಿ ಬಿಜೆಪಿಯೊಳಗೆ ತಳಮಳವನ್ನು ಸೃಷ್ಟಿಸಿದೆ. ಮಾಧ್ಯಮಗಳ ಕೃತಕ ಪ್ರಚಾರದಿಂದ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಬಿಂಬಿತರಾಗುತ್ತಿದ್ದರೆ, ಬಿಜೆಪಿಯೊಳಗಿನ ಶಕ್ತಿಯೇ ಇದರ ವಿರುದ್ಧ ಧ್ವನಿಯೆತ್ತುವುದಕ್ಕೆ ಆರಂಭಿಸಿದೆ. ಜೊತೆ ಜೊತೆಗೇ ಆರೆಸ್ಸೆಸ್ ಕೂಡ ನರೇಂದ್ರ ಮೋದಿ ಪ್ರಧಾನಿಯಾಗುವ ಕುರಿತು ಒಲವನ್ನು ಹೊಂದಿದಂತಿಲ್ಲ.
ಇದೇ ಸಂದರ್ಭದಲ್ಲಿ ನಿತೀಶ್‌ರ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.ಜಾತ್ಯತೀತ ವ್ಯಕ್ತಿ ಪ್ರಧಾನಿ ಅಭ್ಯರ್ಥಿಯಾಗಬೇಕು ಎನ್ನುವ ಮಾತು, ಪರೋಕ್ಷವಾಗಿ ನರೇಂದ್ರ ಮೋದಿಯವರನ್ನು ಕೋಮುದ್ವೇಷಿ ಎಂದು ಹೇಳಿದೆ. ಇದು ಮೋದಿ ಅಭಿಮಾನಿಗಳಿಗೆ ಆಘಾತವನ್ನು ನೀಡಿದೆ. ಬಿಜೆಪಿಯೇ ನಿತೀಶ್ ಕುಮಾರ್ ‘ಸೋಗಲಾಡಿ ಜಾತ್ಯತೀತವಾದಿ’ ಎಂಬಂತಹ ಹೇಳಿಕೆಯನ್ನು ನೀಡಲು ಮುಂದಾಗಿದೆ. ಆದರೆ, ನಿತೀಶ್‌ರ ಹೇಳಿಕೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡಲು ಆಸಕ್ತಿ ಇರುವ ಮಂದಿಗೆ ಭಾರೀ ಹಿನ್ನಡೆ ಎನ್ನುವುದರಲ್ಲಿ ಎರಡು ಮಾತಿಲ್ಲ. ‘ಜಾತ್ಯತೀತ’ ಎನ್ನುವ ಪದವನ್ನೇ ಟೀಕಿಸುತ್ತಾ ಬಂದಿರುವ ಬಿಜೆಪಿ ಈಗ ನಿತೀಶ್‌ರ ಮಾತನ್ನು ಹೇಗೆ ಸ್ವೀಕರಿಸುತ್ತದೆ ಎನ್ನುವುದು ಕುತೂಹಲಕರ ಸಂಗತಿಯಾಗಿದೆ.
ಒಟ್ಟಿನಲ್ಲಿ, ನರೇಂದ್ರ ಮೋದಿ ಪ್ರಧಾನಮಂತ್ರಿ ಅಭ್ಯರ್ಥಿಯಾಗುವುದಕ್ಕೆ ನಿತೀಶ್ ತನ್ನ ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ, ಎನ್‌ಡಿಎ ಗೆಲ್ಲುತ್ತದೆಯೆನ್ನುವ ಯಾವ ಭರವಸೆಯೂ ಇಲ್ಲ. ಅಷ್ಟರಲ್ಲೇ ಪ್ರಧಾನಿ ಅಭ್ಯರ್ಥಿಗಾಗಿ ಎನ್‌ಡಿಎ ಪಾಳಯದೊಳಗೆ ಕಚ್ಚಾಟ ಆರಂಭವಾಗಿದೆ. ಇನ್ನು ಎನ್‌ಡಿಎ ಗೆದ್ದು ಅಧಿಕಾರದ ಹತ್ತಿರ ಬಂದರೆ ಅದರ ಸ್ಥಿತಿ ಹೇಗಿರಬಹುದು?ಸದ್ಯಕ್ಕೆ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯ ಬಗೆಗಿನ ಚರ್ಚೆಯನ್ನು ನಿಲ್ಲಿಸಿ, ಪ್ರಧಾನಮಂತ್ರಿ ಅಭ್ಯರ್ಥಿಯ ಚರ್ಚೆಯನ್ನು ಕೈಗೆತ್ತಿಕೊಳ್ಳುವುದು ಒಳಿತು.
ನಿತೀಶ್ ಹೇಳಿದಂತೆ ಚುನಾವಣೆಗೆ ಮುನ್ನವೇ ಒಬ್ಬ ಜಾತ್ಯತೀತ ಅಭ್ಯರ್ಥಿಯನ್ನು ಘೋಷಿಸಿದರೆ, ಅದು ಚುನಾವಣೆಯನ್ನು ಎದುರಿಸಲು ಪರೋಕ್ಷ ಸಹಾಯ ಮಾಡಬಹುದು.ಆದರೆ ಅಂತಹ ಜಾತ್ಯತೀತ ನಾಯಕರು ಬಿಜೆಪಿಯೊಳಗೆ ಯಾರಿದ್ದಾರೆ? ಇತ್ತೀಚೆಗೆ ಎಲ್.ಕೆ.ಅಡ್ವಾಣಿಯವರು ಅಟಲ್ ಬಿಹಾರಿ ವಾಜಪೇಯಿಯವರ ಸ್ಥಾನವನ್ನು ತುಂಬಲು ಪ್ರಯತ್ನಿಸುತ್ತಿದ್ದಾರೆ. ಅಂದರೆ ಪ್ರಜ್ಞಾಪೂರ್ವಕವಾಗಿ ಜಾತ್ಯತೀತನಾಗಲು ಹೊರಟಿದ್ದಾರೆ.ಅದರ ಹಿಂದಿರುವುದು ಪ್ರಧಾನಿ ಕುರ್ಚಿ ಎನ್ನುವುದು ಎಲ್ಲರಿಗೂ ತಿಳಿದಿರುವುದು.
ಉಳಿದಂತೆ ನಿತೀಶ್ ಜಾತ್ಯತೀತ ವ್ಯಕ್ತಿಯೆಂದು ತನ್ನನ್ನು ತಾನೇ ಕರೆದುಕೊಂಡಿದ್ದಾರೆ.ಅಂದರೆ, ಪ್ರಧಾನಿ ಅಭ್ಯರ್ಥಿಯಾಗಿ ತಾನಿದ್ದೇನೆ ಎನ್ನುವುದನ್ನು ಬಿಜೆಪಿಗೆ ಸೂಚಿಸಿದ್ದಾರೆ.ಈ ಸೂಚನೆ ಎಷ್ಟರ ಮಟ್ಟಿಗೆ ಫಲಕೊಡುತ್ತದೆ ಎನ್ನುವುದನ್ನು ಕಾದು ನೋಡಬೇಕು. ಒಟ್ಟಿನಲ್ಲಿ ಈ ಎಲ್ಲ ಗದ್ದಲಗಳಿಂದ ಪ್ರಣವ್ ಮುಖರ್ಜಿಯವರ ರಾಷ್ಟ್ರಪತಿ ಸ್ಥಾನದೆಡೆಗಿನ ನಡಿಗೆ ಇನ್ನಷ್ಟು ಸುಲಭವಾದಂತಾಗಿದೆ.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...