ಸಂಪಾದಕೀಯ

mail-img print-img

ರಾಜಕೀಯದಲ್ಲಿ ‘ಸಜ್ಜನಿಕೆ’ಯ ಅಪಾಯ

ಸೋಮವಾರ - ಜೂನ್ -25-2012

ರಾಜಕಾರಣಿಗಳ ಪಾಲಿಗೆ ಕೆಲವೊಮ್ಮೆ ‘ಸಜ್ಜನಿಕೆ’ಯೂ ರಾಜಕಾರಣದ ಒಂದು ಭಾಗವಾಗಿ ಬಿಟ್ಟಿರುತ್ತದೆ. ಈ ಸಜ್ಜನಿಕೆಯನ್ನು ಗುರಾಣಿಯಾಗಿ ಇಟ್ಟುಕೊಂಡೇ ಅವರು ರಾಜಕೀಯದಲ್ಲಿ ಹಾಗೂ ಅಲ್ಲ, ಹೀಗೂ ಅಲ್ಲ ಎಂಬಂತೆ ಬದುಕುತ್ತಿರುತ್ತಾರೆ. ಆದುದರಿಂದಲೇ ನಾವು ಹೆಚ್ಚು ಜಾಗರೂಕರಾಗಿರ ಬೇಕಾದುದು ‘ಸಜ್ಜನ ರಾಜಕಾರಣಿ’ಗಳ ಕುರಿತಂತೆ. ತಮ್ಮ ಸಜ್ಜನಿಕೆಯ ಮೂಲಕವೇ ಅವರೊಂದು ಪ್ರಭಾವಳಿಯನ್ನು ಸೃಷ್ಟಿಸಿಕೊಂಡಿರುತ್ತಾರೆ ಮತ್ತು ಆ ಪ್ರಭಾವಳಿಯ ಕವಚದೊಳಗೆ ಸದಾ ಭದ್ರವಾಗಿರುತ್ತಾರೆ. ಆರೆಸ್ಸೆಸ್‌ನ ನಿಜವಾದ ಸಿದ್ಧಾಂತಿಗಳು ಸಜ್ಜನರಾಗಿರುತ್ತಾರೆ. ಅವರು ಈಶ್ವರಪ್ಪ, ಸಿ.ಟಿ.ರವಿಯವರಂತೆ ಯಾವುದೇ ವೇದಿಕೆಯಲ್ಲಿ ಅರಚುವುದಿಲ್ಲ. ಯಾಕೆಂದರೆ ಅವರು ಸಜ್ಜನ ರಾಜಕಾರಣಿಗಳು. ಶೂದ್ರ ಸಮುದಾಯದ ನಾಯಕರಿಗೆ ಈ ಸಜ್ಜನಿಕೆ ಅಷ್ಟು ಸುಲಭದಲ್ಲಿ ಒಲಿಯುವುದಿಲ್ಲ.ಸಜ್ಜನಿಕೆಯೆನ್ನುವುದು ರಾಜಕಾರಣದಲ್ಲಿ ಒಂದು ಕಲೆ.ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ವಿ.ಎಸ್.ಆಚಾರ್ಯ ನಮ್ಮ ಮುಂದಿದ್ದರು.ಸದಾ ಸಜ್ಜನಿಕೆಯ ಮರೆಯಲ್ಲಿ ನಿಂತೇ, ರಘುಪತಿ ಭಟ್‌ರ ಪತ್ನಿಯ ನಿಗೂಢ ಸಾವನ್ನು ಮುಚ್ಚಿ ಹಾಕಿದರು. ಮಡೆ ಸ್ನಾನವನ್ನು ಸಮರ್ಥಿಸಿಕೊಂಡರು. ಎಲ್ಲಕ್ಕಿಂತ ಮುಖ್ಯವಾಗಿ ನಾಗಾರ್ಜುನದಂತಹ ಕಂಪೆನಿಗಳ ಜೊತೆಗೆ ಒಳಗೊಳಗೆ ಕೈ ಜೋಡಿಸಿಕೊಂಡರು.

ಸ್ವತಃ ಪೇಜಾವರ ಶ್ರೀಗಳೇ ಅವರ ಮೇಲೆ ಮುನಿದಿದ್ದರು. ಆದರೂ ಅವರು ಮಾಧ್ಯಮಗಳ ಕಣ್ಣಿಗೆ ಕೊನೆಯವರೆಗೂ ‘ಸಜ್ಜನ ರಾಜಕಾರಣಿ’ಯಾಗಿಯೇ ಉಳಿದರು.ಇದೀಗ ಸುರೇಶ್ ಕುಮಾರ್ ಎನ್ನುವ ‘ಸಜ್ಜನ ರಾಜಕಾರಣಿ’ಯ ಸರದಿ. ಸುಳ್ಳು ಪ್ರಮಾಣ ಪತ್ರ ನೀಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಜಿ ಕೆಟಗರಿ ನಿವೇಶನ ಪಡೆದಿರುವ ಆರೋಪ ಇವರ ಮೇಲೆ ಬರುತ್ತಿದ್ದ ಹಾಗೆಯೇ ಸುರೇಶ್ ಕುಮಾರ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ತಮಾಷೆಯೆಂದರೆ, ಸುರೇಶ್ ಕುಮಾರ್ ಮೇಲಿರುವ ಆರೋಪ ಬದಿಗೆ ಸರಿದು, ಇವರು ನೀಡಿದ ರಾಜೀನಾಮೆಯೇ ಮಾಧ್ಯಮಗಳಲ್ಲಿ ಸುದ್ದಿಯಾಯಿತು.

ತಮ್ಮ ‘ಸಜ್ಜನಿಕೆ’ಯ ಬಿರುದನ್ನು ಬಳಸಿಕೊಂಡು ಸುರೇಶ್ ಕುಮಾರ್ ಮಾಧ್ಯಮಗಳ ಮೂಲಕ ಹುತಾತ್ಮ ಫೋಸ್ ನೀಡತೊಡಗಿದರು. ಆರೋಪದಿಂದ ನೋವಾಗಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎಂದೂ ಬಿಜೆಪಿ ಇದನ್ನು ಬಿಂಬಿಸಿತು. ಅಂದರೆ ಸತ್ಯಾಸತ್ಯವನ್ನು ಮುಚ್ಚಿ ಹಾಕಿ, ಅವರ ಮೇಲೆ ಆರೋಪ ಮಾಡಿದವನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆದಿದೆ. ಸಾಧಾರಣವಾಗಿ ರಾಜಕಾರಣಿಗಳ ಮೇಲೆ ಆರೋಪ ನಡೆಸಿದಾಗ ಅದರ ಸತ್ಯಾಸತ್ಯವನ್ನು ಪರಿಶೀಲಿಸಲಾಗುತ್ತದೆ. ಈ ರಾಜ್ಯದ ಮಾಜಿ ಮುಖ್ಯಮಂತ್ರಿಯೇ ಹತ್ತು ಹಲವು ಆರೋಪಗಳನ್ನು ಹೊತ್ತುಕೊಂಡು ಸಿಬಿಐಯ ಹಿಂದೆ ಅಲೆಯುತ್ತಿರುವಾಗ,ಮಾಮೂಲಿ ಸಚಿವರೊಬ್ಬರು ಮಾಡಿರುವ ಹಗರಣವನ್ನು ಅವರು ‘ಸಜ್ಜನರು’ ಎನ್ನುವ ಕಾರಣಕ್ಕಾಗಿ ಪ್ರಶ್ನಿಸಬಾರದು ಎಂದರೆ, ಅದಕ್ಕಿಂತ ದೊಡ್ಡ ವಿಪರ್ಯಾಸವಿದೆಯೇ? ತನ್ನ ಮೇಲಿರುವ ಆರೋಪವನ್ನು ಸುರೇಶ್ ಕುಮಾರ್ ಎಲ್ಲೂ ಸ್ಪಷ್ಟವಾಗಿ ಅಲ್ಲಗಳೆದಿಲ್ಲ.

ಮಗದೊಂದೆಡೆ ಕಣ್ತಪ್ಪಿನಿಂದ ಪ್ರಮಾದ ನಡೆದಿದೆ ಎಂದು ಅವರ ಬಳಗ ಸಮಜಾಯಿಶಿ ಕೊಡುತ್ತದೆ. ಅದೇನೇ ಇರಲಿ. ನಿಜಕ್ಕೂ ಸುರೇಶ್‌ಕುಮಾರ್ ಸಜ್ಜನರೇ ಆಗಿದ್ದರೆ ರಾಜೀನಾಮೆಯ ನಾಟಕವನ್ನು ಆಡುತ್ತಿರಲಿಲ್ಲ.ರಾಜೀನಾಮೆ ಪತ್ರ ಮುಖ್ಯ ಮಂತ್ರಿ ಕಚೇರಿಗೆ ತಲುಪುವ ಮುನ್ನವೇ ಸದಾನಂದ ಗೌಡರು ರಾಜೀನಾಮೆಯನ್ನು ನಿರಾಕರಿಸಿದ್ದಾರೆ.ನಿರಾಕರಿಸುತ್ತಾರೆ ಎನ್ನುವುದು ಗೊತ್ತಿದ್ದೇ ಸುರೇಶ್ ಕುಮಾರ್ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಒಂದು ಅಣಕು ರಾಜೀನಾಮೆ ಪತ್ರದಿಂದ ಸುರೇಶ್‌ಕುಮಾರ್ ಬಚಾವಾಗುವುದಿದ್ದರೆ, ಬಿಜೆಪಿಯೊಳಗಿನ ಉಳಿದ ಸಚಿವರು, ಶಾಸಕರಿಗೂ ಈ ರಿಯಾಯಿತಿ ಸಿಗಬೇಕಲ್ಲ?

ಹಾಗೆ ನೋಡಿದರೆ ಸುರೇಶ್‌ಕುಮಾರ್ ತಮ್ಮ ಸಜ್ಜನಿಕೆಯನ್ನು ಬಳಸಿಕೊಂಡೇ ರಾಜಕಾರಣ ಮಾಡುತ್ತಾ ಬಂದವರು. ಅಸಲಿ ಅವರು ಭ್ರಷ್ಟಾಚಾರವನ್ನು, ಅಕ್ರಮಗಳನ್ನು ವಿರೋಧಿಸುವವರಾಗಿದ್ದರೆ ಬಿಜೆಪಿಯ ಸಂಪುಟದಲ್ಲಿ ಸ್ಥಾನವನ್ನೇ ಪಡೆಯುತ್ತಿರಲಿಲ್ಲ. ಸಚಿವ ಸ್ಥಾನದಿಂದ ದೂರ ಉಳಿಯುತ್ತಿದ್ದರು. ಆದರೆ ಒಂದೆಡೆ ಬಿಜೆಪಿಯ ಎಲ್ಲ ಅಕ್ರಮಗಳನ್ನು ವೌನವಾಗಿ ಒಪ್ಪಿಕೊಳ್ಳುತ್ತಾ, ಅದರೆಲ್ಲ ಲಾಭವನ್ನು ಪಡೆದುಕೊಳ್ಳುತ್ತಾ ಮಗದೊಂದೆಡೆ ಸಜ್ಜನೆನ್ನುವ ಪ್ರಭಾವಳಿಯೊಳಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾ ಬಂದವರು.ಪಕ್ಕಾ ಆರೆಸ್ಸೆಸ್ ಸಿದ್ಧಾಂತಿಯಾಗಿದ್ದು, ಈಶ್ವರಪ್ಪನವರಂತೆ ಹರಕು ಬಾಯಿಯಿಂದ ಅದನ್ನು ಜಗಜ್ಜಾಹೀರು ಮಾಡಿದೆ,ನಾಲಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದೊಂದು ಕಲೆ.ಅದು ವಿ.ಎಸ್.ಆಚಾರ್ಯ,ಸುರೇಶ್ ಕುಮಾರ್‌ರಂಥವರಿಗೆ ರಕ್ತದಲ್ಲೇ ಬಂದಿದೆ. ಅದನ್ನು ಅವರು ತಮ್ಮ ರಾಜಕೀಯದಲ್ಲಿ ಚೆನ್ನಾಗಿ ಬಳಸಿಕೊಂಡು ಬಂದಿದ್ದಾರೆ.

ಎಲ್ಲಿಯವರೆಗೆ ಅಂದರೆ, ಆಚಾರ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ಒಂದು ಕಾಲದಲ್ಲಿ ಗುರುತಿಸಲ್ಪಟ್ಟಿದ್ದರು. ಬಿಜೆಪಿಯಲ್ಲಿ ಸುರೇಶ್ ಆಗಾಗ ಸಜ್ಜನ ರಾಜಕಾರಣಿ ಎನ್ನುವ ಬಿರುದಿಗಾಗಿಯೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಸಜ್ಜನಿಕೆಯ ಹಿಂದಿರುವ ನಿಜ ಮುಖವನ್ನು ಗುರುತಿಸುವುದೂ ಸದ್ಯದ ದಿನಗಳಲ್ಲಿ ಅತೀ ಅಗತ್ಯ. ಸುರೇಶ್ ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ಇನ್ನಾದರೂ ರಾಜೀನಾಮೆ ನೀಡಿ ಸಂಪುಟದಿಂದ ದೂರವಿರಬೇಕು. ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಬೇಕು ಅಥವಾ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಸಜ್ಜನಿಕೆಯನ್ನು ಗುರಾಣಿಯಾಗಿಟ್ಟು ರಕ್ಷಣೆ ಪಡೆಯುವ ತನ್ನ ತಂತ್ರದಿಂದ ಹಿಂದೆ ಸರಿಯಬೇಕು.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಅಗ್ಗದ ಮದ್ಯಕೆ ಶುದ್ಧ ನೀರು ಬೆರೆಸಿ ಕುಡಿವ ವೇಳೆಗೆ ಸೌಭಾಗ್ಯದ ಸೋನಿಯಾ ಬಾರಮ್ಮಾ...

ಕಳಂಕಿತರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಭೇಷ್ ಅನಿಸಿಕೊಂಡ ಸಿದ್ದು, ಖಾತೆ ಹಂಚಿಕೆಯಲ್ಲ ...


- ಪಿ.ಕೆ.ಮಲ್ಲನಗೌಡರ್‌

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್