ಸಂಪಾದಕೀಯ

mail-img print-img

ಅಡ್ವಾಣಿಯ ಮಾತು ಮತ್ತು ನುಂಗಲಾರದ ಮೋದಿ ಎಂಬ ತುತ್ತು

ಸೋಮವಾರ - ಆಗಸ್ಟ್ -06-2012

ಕೂಸು ಹುಟ್ಟುವ ಮೊದಲೇ ಕುಲಾವಿ ನೇಯುವ ಕೆಲಸ ರಾಷ್ಟ್ರ ಬಿಜೆಪಿಯೊಳಗೆ ಭರದಿಂದ ಸಾಗುತ್ತಿದೆ. ಚುನಾವಣೆಯನ್ನು ಎದುರಿಸುವ ರಣತಂತ್ರಕ್ಕಿಂತಲೂ, ಯಾರು ಪ್ರಧಾನಿ ಎನ್ನುವ ಪ್ರಶ್ನೆಯೇ ಬಿಜೆಪಿಯೊಳಗೆ ಬಿರುಸಿನ ಚರ್ಚೆಯನ್ನು ಹುಟ್ಟು ಹಾಕಿದೆ. ಯಾರು ಪ್ರಧಾನಿಯೆಂಬ ಆಧಾರದಲ್ಲಿ ಮತದಾರರು ಮುಂದಿನ ಚುನಾವಣೆಯಲ್ಲಿ ಎನ್‌ಡಿಎಯನ್ನು ಗೆಲ್ಲಿಸಬೇಕೋ ಬೇಡವೋ ಎನ್ನುವ ತೀರ್ಮಾನವನ್ನು ಮಾಡುತ್ತಾರೆಂಬುದನ್ನು ಎನ್‌ಡಿಎಯ ಒಂದು ಗುಂಪು ಬಲವಾಗಿ ನಂಬಿದೆ. ಇದಕ್ಕೆ ಕಾರಣ ಇಲ್ಲದೇ ಇಲ್ಲ. ಯಾರು ಪ್ರಧಾನಿಯೆನ್ನುವುದರ ಆಧಾರ ಎನ್‌ಡಿಎಯ ಸ್ವರೂಪವನ್ನು ನಿರ್ಧರಿಸುತ್ತದೆ. ನರೇಂದ್ರ ಮೋದಿಯನ್ನು ಒಂದು ಗುಂಪು ಪ್ರಧಾನಿಯೆಂದು ಬಿಂಬಿಸಲು ಹೊರಟಿರುವುದೇ ಇದಕ್ಕೆ ಮುಖ್ಯ ಕಾರಣ. ಅಡ್ವಾಣಿ ಬಿಜೆಪಿಯಲ್ಲಿ ಬದಿಗೆ ಸರಿದಿದ್ದು, ವಯಸ್ಸು ಅವರಿಗೆ ಪ್ರಧಾನಿಯಾಗಲು ಅತಿ ದೊಡ್ಡ ಅಡ್ಡಿಯಾಗಿದೆ. ಅಡ್ವಾಣಿ ಬಿಟ್ಟರೆ ಉಳಿದಂತೆ ಸುಷ್ಮಾ ಸ್ವರಾಜ್‌ರನ್ನು ಬಿಜೆಪಿ ಪ್ರಧಾನಿ ಮಾಡಬೇಕು. ಆದರೆ ಇದೇ ಸಂದರ್ಭದಲ್ಲಿ ಮೋದಿಯ ಪ್ರವೇಶವಾಗಿದೆ.

ಬಿಜೆಪಿಯಲ್ಲಿ ನಾಯಕತ್ವದ ಕೊರತೆ ತಲೆಯೆತ್ತಿರುವ ಪರಿಣಾಮವಾಗಿ, ಉಗ್ರವಾದಿಗಳಿಗೆ ನರೇಂದ್ರ ಮೋದಿ ಒಂದು ಆಶಾವಾದವಾಗಿ ಭಾಸವಾಗುತ್ತಿದ್ದಾರೆ.ನರೇಂದ್ರ ಮೋದಿಯನ್ನು ಎನ್‌ಡಿಎಯ ಉಳಿದ ಪಕ್ಷಗಳು ಒಪ್ಪಿಕೊಂಡದ್ದೇ ಆದರೆ, ಪರೋಕ್ಷವಾಗಿ ಗುಜರಾತ್ ಹತ್ಯಾಕಾಂಡದಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡಿದಂತೆ.ಜೊತೆಗೆ ಆ ರಕ್ತದ ಕಲೆಗಳು ಎನ್‌ಡಿಎ ನಾಯಕರಿಗೂ ಅಂಟಿಕೊಳ್ಳುತ್ತದೆ. ಆದುದರಿಂದ, ಪ್ರಧಾನಿ ಯಾರು ಎನ್ನುವುದೇ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಇರುವ ಅತಿ ದೊಡ್ಡ ತೊಡಕಾಗಿದೆ.

ಪ್ರಧಾನಿ ಯಾರೇ ಆಗಿರಲಿ, ನರೇಂದ್ರ ಮೋದಿಯಂತೂ ಅಲ್ಲ ಎನ್ನುವ ನಿಲುವನ್ನಾದರೂ ತಾಳುವುದು ಎನ್‌ಡಿಎಗೆ ಅತ್ಯಗತ್ಯವೆನಿಸಿದೆ. ಈ ಕಾರಣದಿಂದಲೇ ನಿತೀಶ್ ಕುಮಾರ್ ನರೇಂದ್ರ ಮೋದಿಯ ವಿರುದ್ಧ ಮೊದಲು ಬಂಡೆದ್ದಿದ್ದಾರೆ. ನರೇಂದ್ರ ಮೋದಿಯನ್ನು ಮೆಚ್ಚುವವರು ಇದ್ದಷ್ಟೇ ಅವರನ್ನು ದ್ವೇಷಿಸುವವರೂ ಈ ದೇಶದಲ್ಲಿದ್ದಾರೆ. ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಿದರೆ, ಬಿಹಾರದಲ್ಲಿ ಅದು ಜನತಾದಳ(ಯು) ಮೇಲೂ ಪರಿಣಾಮ ಬೀರುತ್ತದೆ. ಮೋದಿಯನ್ನು ಶತಾಯಗತಾಯ ವಿರೋಧಿಸುತ್ತಿರುವ ನಿತೀಶ್ ಈ ಕಾರಣದಿಂದಲೇ, ಅವರು ಪ್ರಧಾನಿ ಅಭ್ಯರ್ಥಿ ಆಗಬಾರದು ಎಂದು ಬಯಸಿದ್ದಾರೆ.

ಜನತಾದಳ (ಯು)ಗೆ ಸಿಗಲಿರುವ ಜಾತ್ಯತೀತ ಮತಗಳಿಗೆ ಮೋದಿ ಬಹುದೊಡ್ಡ ತೊಡಕು. ಆದುದರಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದನ್ನು ಚುನಾವಣೆಗೆ ಮೊದಲು ಘೋಷಿಸಲೇ ಬೇಕು.ಇದೇ ಸಂದರ್ಭದಲ್ಲಿ ಅಡ್ವಾಣಿಯವರು ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪ್ರಧಾನಿಯೊಬ್ಬರ ಸಾಧ್ಯತೆಯ ಕುರಿತಂತೆ ಹೇಳಿಕೆಯನ್ನು ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇದು ಒಂದು ರೀತಿಯಲ್ಲಿ ನಿತೀಶ್ ಪರವಾದ ಹೇಳಿಕೆ. ಮಗದೊಂದು ರೀತಿಯಲ್ಲಿ ಬಿಜೆಪಿಗೆ ವಿರುದ್ಧವಾದ ಹೇಳಿಕೆಯೂ ಹೌದು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯನ್ನು ನಿಗದಿ ಪಡಿಸುವಷ್ಟು ಶಕ್ತಿಯನ್ನು ಪಡೆದಿಲ್ಲ ಎನ್ನುವುದನ್ನು ಚುನಾವಣೆಗೆ ಮೊದಲೇ ಅಡ್ವಾಣಿ ಘೋಷಿಸಿದಂತಾಗಿದೆ.

ಈ ಘೋಷಣೆಗೆ ಇನ್ನೊಂದು ಕಾರಣವೂ ಇದೆ. ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಮಾಡುವಂತಹ ಶಕ್ತಿಗಳು ಬಿಜೆಪಿಯೊಳಗೆ ತೀವ್ರವಾಗಿ ಕೆಲಸ ಮಾಡುತ್ತಿವೆ. ನರೇಂದ್ರ ಮೋದಿಯ ವಿರುದ್ಧ ಬಹಿರಂಗವಾಗಿ ಧ್ವನಿಯೆತ್ತುವಂತಹ ವಾತಾವರಣ ಬಿಜೆಪಿಯೊಳಗಿಲ್ಲ. ಇದು ಅಡ್ವಾಣಿಯನ್ನು ಅಸಹಾಯಕರನ್ನಾಗಿಸಿದೆ. ಇಂತಹ ಸಂದರ್ಭದಲ್ಲಿ ಅವರು ಎನ್‌ಡಿಎ ನಾಯಕ ನಿತೀಶ್ ಅವರ ನೆರವನ್ನು ಪಡೆದುಕೊಂಡಿದ್ದಾರೆ. ‘ಪ್ರಧಾನಿ ಯಾರು ಎನ್ನುವುದನ್ನು ಚುನಾವಣೆಗೆ ಮೊದಲೇ ನಿರ್ಧರಿಸಬೇಕು’ ಎಂದು ನಿತೀಶ್ ಹೇಳಿಕೆಯನ್ನೇ ಬಳಸಿಕೊಂಡ ಅಡ್ವಾಣಿಯವರು ‘‘ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪ್ರಧಾನಿ’’ಯನ್ನು ಉಲ್ಲೇಖ ಮಾಡಿದ್ದಾರೆ. ಇದರ ಮುಖ್ಯ ಉದ್ದೇಶವೇ, ನರೇಂದ್ರ ಮೋದಿಯನ್ನು ಪ್ರಧಾನಿಯಾಗದಂತೆ ನೋಡಿಕೊಳ್ಳುವುದು.

ಒಂದು ವೇಳೆ ಎನ್‌ಡಿಎ ಬಹುಮತ ಪಡೆದರೂ ಬಿಜೆಪಿಯ ನಾಯಕರು ಪ್ರಧಾನಿಯಾಗದಂತೆ ನೋಡಿಕೊಳ್ಳುವ ಗೆರೆಯೊಂದನ್ನು ಅಡ್ವಾಣಿ ಎಳೆದಿದ್ದಾರೆ. ಅಡ್ವಾಣಿಯ ಈ ಹೇಳಿಕೆ ಎನ್‌ಡಿಎಯನ್ನು ಬಲಪಡಿಸಬಹುದಾದರೂ, ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಗಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಪಾಪಿ ಕಾಲಿಟ್ಟಲ್ಲೆಲ್ಲ ಮೊಣಕಾಲು ನೀರು

ಕೊನೆಗೂ 17 ವರ್ಷದ ಜೆಡಿಯು-ಬಿಜೆಪಿ ನಡುವಿನ ಮೈತ್ರಿ ಮುರಿದಿದೆ. ನರೇಂದ್ರ ಮೋದಿಯ ಕೈಗೆ ಬಿಜೆಪಿಯ ನೇತೃತ್ವವನ್ನು ಕೊಟ್ಟ ಬೆನ್ನಿಗೇ ಇದು ನಡೆದಿದ ...


ನಿಮ್ಮ ಅನಿಸಿಕೆ

postClick here to post your views
EPAPER
access

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್

ಬೌದ್ಧ ಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್

1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...


- -ರಘೋತ್ತಮ ಹೊ.ಬ., ಚಾಮರಾಜನಗರ