ಸಂಪಾದಕೀಯ

mail-img print-img

ಅಮೆರಿಕದ ಒತ್ತಡಕ್ಕೆ ಮಣಿಯುತ್ತಿರುವ ಕೇಂದ್ರ ಸರಕಾರ

ಶನಿವಾರ - ಆಗಸ್ಟ್ -11-2012

ಮನಮೋಹನ್ ಸಿಂಗ್ ಎರಡನೆ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದ ಆಂತರಿಕ ಹಾಗೂ ವಿದೇಶಾಂಗ ನೀತಿಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಜವಹರಲಾಲ್ ನೆಹರೂ ಕಾಲದಿಂದ ಅನುಸರಿಸಿಕೊಂಡು ಬಂದ ಆರ್ಥಿಕ ಹಾಗೂ ವಿದೇಶಾಂಗ ನೀತಿಗಳಿಗೆ ತಿಲಾಂಜಲಿ ನೀಡಲಾಗಿದೆ. ನವ ಉದಾರೀಕರಣದ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಈ ಸರಕಾರ ಎಲ್ಲಿಲ್ಲದ ಆಸಕ್ತಿಯನ್ನು ತೋರಿಸಿದೆ. ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಅಮೆರಿಕದ ಆಳುವ ವರ್ಗ ಹಾಕಿದ ಗೆರೆಯನ್ನು ದಾಟುವ ಸಾಹಸವನ್ನು ಈ ಸರಕಾರ ಎಂದೂ ಮಾಡಿಲ್ಲ. ಇದೆಲ್ಲದರ ಒಟ್ಟು ಪರಿಣಾಮ ವೆಂದರೆ ಭಾರತದ ಶತಕೋಟಿ ಜನರ ಹಿತಾಸಕ್ತಿಗೆ ಧಕ್ಕೆಯುಂಟಾಗಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ. ಸ್ವಾವಲಂಬನೆಯ ಆರ್ಥಿಕ ನೀತಿಯನ್ನು ಹೂತು ಹಾಕಲಾಗಿದೆ. ಇದರಿಂದಾಗಿ ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರಕ್ಕೆ ಎಂದೆಂದೂ ಕಂಡರಿಯದ ಗಂಡಾಂತರ ಎದುರಾಗಿದೆ. ಅಮೆರಿಕದ ಅಧ್ಯಕ್ಷ ಒಬಾಮ, ಭಾರತ ಉದಾರೀಕರಣದ ದಾರಿಯಲ್ಲಿ ಇನ್ನಷ್ಟು ಹೆಜ್ಜೆ ಇಡಬೇಕೆಂದು ಒತ್ತಡ ರೂಪದ ಸಲಹೆಯನ್ನು ನೀಡುತ್ತಲೇ ಇದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ನೇತೃತ್ವ ವಹಿಸಿದ ಸಾಮ್ರಾಜ್ಯಶಾಹಿ ಶಕ್ತಿಗಳು ಜಾಗತೀಕರಣದ ಲಾಭವನ್ನು ಗರಿಷ್ಠ ಗಳಿಸಿಕೊಳ್ಳಲು ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿವೆ. ಈ ಮಾರ್ಗಗಳನ್ನು ಅನುಸರಿಸಲು ಭಾರತದ ಮೇಲೆ ಒತ್ತಡ ತರುತ್ತಿವೆ. ಭಾರತ ಸರಕಾರವೂ ಕೂಡ ಆ ಒತ್ತಡಕ್ಕೆ ಮಣಿಯುತ್ತಲೇ ಇದೆ. ದೇಶದ ಹಿತಾಸಕ್ತಿಗಿಂತ ಅಮೆರಿಕದ ಹಿತಾಸಕ್ತಿಯನ್ನು ಕಾಳಜಿಯಿಂದ ಕಾಪಾಡು ತ್ತಿರುವ ಪಿ.ಚಿದಂಬರಂ ಹಣಕಾಸು ಸಚಿವರಾದ ನಂತರ ದೇಶ ವಿದೇಶಗಳ ಕಾರ್ಪೊರೇಟ್ ಕಂಪೆನಿಗಳಿಗೆ ರಿಯಾಯಿತಿ ಮೇಲೆ ರಿಯಾಯಿತಿಯ ನೀಡುತ್ತಿದ್ದಾರೆ.

ಈ ರಿಯಾಯಿತಿ ನೀಡಬೇಕೆಂದು ವಾಷಿಂಗ್ಟನ್ ನಿರಂತರವಾಗಿ ಒತ್ತಡ ಹೇರುತ್ತಿದೆ. ಚಿಲ್ಲರೆ ವ್ಯಾಪಾರ ವಲಯವನ್ನು ವಿದೇಶಿ ಹೂಡಿಕೆಗೆ ಮುಕ್ತಗೊಳಿಸಬೇಕು. ಅಂದರೆ ವಾಲ್ಮಾರ್ಟ್ ನಂತಹ ಚಿಲ್ಲರೆ ವ್ಯಾಪಾರ ಕಂಪೆನಿಗಳು ಭಾರತವನ್ನು ಪ್ರವೇಶಿಸಲು ಅವಕಾಶ ಕೊಡಬೇಕು. ಸಬ್ಸಿಡಿಗಳನ್ನು ಕಡಿತಗೊಳಿಸ ಬೇಕು. ಪೆಟ್ರೋಲ್ ಉತ್ಪನ್ನಗಳ ಬೆಲೆಯ ಹತೋಟಿಯನ್ನು ತೆಗೆಯಬೇಕು. ವಿಮೆ ವಲಯದಲ್ಲಿ ವಿದೇಶಿ ನೇರ ಹೂಡಿಕೆಯ ಪಾಲನ್ನು ಈಗಿರುವ ಶೇ.26ರಿಂದ ಶೇ.69ಕ್ಕೆ ಏರಿಸಬೇಕು. ಭಾರತೀಯ ಖಾಸಗಿ ಬ್ಯಾಂಕ್ ಕ್ಷೇತ್ರದಲ್ಲಿ ವಿದೇಶಿ ಬ್ಯಾಂಕ್‌ಗಳಿಗೆ ಅವಕಾಶ ನೀಡಿಕೆ ಮತ್ತಿತರ ಹಲವು ರೀತಿಯ ಒತ್ತಡಗಳನ್ನು ತರುತ್ತಿದೆ.ಆರ್ಥಿಕ ಒತ್ತಡ ಒಂದು ಕಡೆಯಾದರೆ ಭಾರತದ ವಿದೇಶಾಂಗ ನೀತಿಯನ್ನೇ ಬದಲಿಸುವಂತಹ ಬಾಹ್ಯ ಒತ್ತಡವನ್ನು ಅಮೆರಿಕ ಹೇರುತ್ತಿದೆ.

ಅಮೆರಿಕದ ನಿರ್ಬಂಧವನ್ನು ಪುರಸ್ಕರಿಸುವುದಕ್ಕಾಗಿ ಇರಾನ್‌ನ ಹಡಗಿಗೆ ನಿಷೇಧ ಹೇರುವುದರ ಮೂಲಕ ಭಾರತ ಕಚ್ಚಾ ತೈಲ ಆಮದಿಗೆ ಸಂಚಕಾರ ತಂದುಕೊಂಡಿದೆ. ಅಮೆರಿಕ ನಿರ್ಬಂಧಿತ ಹಡಗುಗಳು ಭಾರತದ ಜಲ ಪ್ರದೇಶವನ್ನು ಪ್ರವೇಶಿಸದಂತೆ ನಿಷೇಧ ಹಾಕಲಾಗಿದೆ. ಇದರಿಂದ ಇರಾನ್‌ನಿಂದ ಭಾರತಕ್ಕೆ ಬರುತ್ತಿದ್ದ ಕಚ್ಚಾ ತೈಲದ ಆಮದಿನಲ್ಲಿ ಭಾರೀ ಪ್ರಮಾಣದ ಕಡಿತ ಉಂಟಾಗಿದೆ. ತನ್ನ ಕಚ್ಚಾ ತೈಲ ಪೂರೈಕೆಗಾಗಿ ಪ್ರಧಾನವಾಗಿ ಇರಾನನ್ನೇ ಅವಲಂಬಿಸಿರುವ ಮಂಗಳೂರಿನ ಎಂಆರ್‌ಪಿಎಲ್ ಕಳೆದ ವರ್ಷ 73 ಲಕ್ಷ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಆದರೆ ಅಮೆರಿಕದ ಒತ್ತಡಕ್ಕೆ ಮಣಿದು 62 ಲಕ್ಷ ಟನ್‌ಗೆ ಇಳಿಸಬೇಕಾಯಿತು.

ಈ ವರ್ಷ ಅದನ್ನು 50 ಲಕ್ಷ ಟನ್‌ಗೆ ಇಳಿಸಲಾಗಿದೆ. ಈ ಮಧ್ಯೆ ಅಮೆರಿಕವನ್ನು ಒಲೈಸುವುದಕ್ಕಾಗಿ ಸಿರಿಯದ ವಿರುದ್ಧ ನಿರ್ಬಂಧಕ್ಕೆ ಭಾರತ ಸರಕಾರ ಮತ್ತೊಮ್ಮೆ ವಿಶ್ವಸಂಸ್ಥೆಯ ಭದ್ರತಾ ಸಂಸ್ಥೆಯಲ್ಲಿ ಅಮೆರಿಕ ಮತ್ತು ಇನ್ನಿತರ ಪಾಶ್ಚಿಮಾತ್ಯ ದೇಶಗಳ ಪರವಾಗಿ ಮತ ನೀಡಿದೆ. ಆದರೆ ರಶ್ಯಾ ಮತ್ತು ಚೀನಾಗಳು ಈ ನಿರ್ಣಯದ ವಿರುದ್ಧ ತಮ್ಮ ವಿಟೊವನ್ನು ಚಲಾಯಿಸಿದುದರಿಂದ ಈ ನಿರ್ಣಯ ಪಾಸಾಗಲಿಲ್ಲ. ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಿ ಅಮೆರಿಕದ ಒತ್ತಡಕ್ಕೆ ಮಣಿಯುತ್ತಿರುವುದರಿಂದ ದೇಶದ ಸ್ವತಂತ್ರ ವಿದೇಶಾಂಗ ನೀತಿಯನ್ನು ಗಾಳಿಗೆ ತೂರಲಾಗಿದೆ.

ಅಮೆರಿಕ ಇರಾನ್‌ನ ಟ್ಯಾಂಕರ್ ಕಂಪೆನಿ, ಹಡುಗುಗಳ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧವನ್ನು ಶಿರಸಾವಹಿಸಿ ಜಾರಿಗೆ ತರಲು ಮುಂದಾಗಿರುವ ಯುಪಿಎ ಸರಕಾರ, ಭಾರತದ ಜಲ ಪ್ರದೇಶದಲ್ಲಿ ಹಡಗುಗಳ ಪ್ರವೇಶವನ್ನು ನಿರ್ಬಂಧಿಸಿದೆ. ಭಾರತಕ್ಕೆ ಕಚ್ಚಾ ತೈಲ ಪೂರೈಸುತ್ತ ಬಂದ ಮಿತ್ರ ದೇಶವಾದ ಇರಾನ್‌ನ ಮೇಲೆ ಭಾರತವನ್ನು ಎತ್ತಿಕಟ್ಟಲು ಅಮೆರಿಕ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದೆ. ಈ ಒತ್ತಡಕ್ಕೆ ಭಾರತ ಮಣಿಯುತ್ತ ಬಂದಿದೆ. ವಿಶ್ವದ ಆರ್ಥಿಕ ಕ್ಷೇತ್ರದಲ್ಲಿ ತನ್ನ ಪ್ರಬಲ ಎದುರಾಳಿಯಾಗಿ ಬೆಳೆಯುತ್ತಿರುವ ಚೀನಾ ದೇಶವನ್ನು ಹತ್ತಿಕ್ಕಲು ಭಾರತವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಅಮೆರಿಕ ಇನ್ನೊಂದೆಡೆ ಇರಾನನ್ನು ನಾಶ ಮಾಡಲು ಹೊಂಚು ಹಾಕಿದೆ.

ಅಮೆರಿಕದ ಆಣತಿಗೆ ತಲೆ ಬಾಗದ ಇರಾನ್ ಮತ್ತು ಲಿಬಿಯಗಳಂತಹ ದೇಶಗಳು ಈಗ ದಿಕ್ಕು ತಪ್ಪಿ ನಿಂತಿವೆ. ಭಾರತವು ಅಂತಹ ಅಪಾಯದ ಅಂಚಿನಲ್ಲಿ ನಿಂತಿದೆ ಎಂಬುದನ್ನು ಮರೆಯಬಾರದು. ಆದುದರಿಂದ ಕೇಂದ್ರ ಸರಕಾರದ ಈ ಅಪಾಯಕಾರಿ ನೀತಿಯ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು. ಆದರೆ ವಾಸ್ತವವಾಗಿ ಎಡ ಪಕ್ಷಗಳನ್ನು ಹೊರತುಪಡಿಸಿ ಬಿಜೆಪಿಯಂತಹ ಬಲಪಂಥೀಯ ಪಕ್ಷಗಳು ಅಮೆರಿಕದ ಪರವಾದ ನೀತಿಯನ್ನು ಅನುರಿಸುತ್ತಿರುವುದರಿಂದ ಈ ದೇಶದ ಸ್ವಾತಂತ್ರಕ್ಕೆ ಎಂದೆಂದೂ ಕಂಡರಿಯದ ಗಂಡಾಂತರ ಎದುರಾಗಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಭಾರತದ ಹೆಮ್ಮೆ ಅನಂತಮೂರ್ತಿ

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್