
ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳಿಗೆ ಹೋಲಿಸಿದರೆ ‘ ಏಕ್ ಥಾ ಟೈಗರ್’ ಖಂಡಿತವಾಗಿಯೂ ವಿಭಿನ್ನತೆಯ ಜಾಡನ್ನು ತುಳಿದಂತಹ ಚಿತ್ರವೆನ್ನ ಬಹುದು. ‘ರೆಡಿ’ ಹಾಗೂ ‘ಬಾಡಿಗಾರ್ಡ್’ ನಂತಹ ಚಿತ್ರಗಳು ಬಾಕ್ಸ್‌ಆಫೀಸಿನಲ್ಲಿ ಯಶಸ್ಸು ಪಡೆದಿದ್ದೇನೊ ನಿಜ. ಆದರೆ ನಿಜಕ್ಕೂ ಹೇಳುವುದಾದರೆ, ಅಂತಹ ಚಿತ್ರಗಳು ಸಲ್ಮಾನ್‌ಗೆ ಬೇಕಿತ್ತೇ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲೂ ಉದ್ಭವವಾಗಿತ್ತು. ಇದೀಗ ಸಲ್ಮಾನ್ ತನ್ನ ಅಭಿಮಾನಿಗಳಿಗೆ ಏಕ್ ಥಾ ಟೈಗರ್‌ನಲ್ಲಿ ಫುಲ್ ಖುಷ್ ನೀಡಿದ್ದಾರೆ.ರೋಮ್ಯಾಂಟಿಕ್ ಹಾಗೂ ಥ್ರಿಲ್ಲರ್ ಕಥಾವಸ್ತುವಿರುವ ಏಕ್ ಥಾ ಟೈಗರ್‌ನಲ್ಲಿ ಮೈನವಿರೇಳಿಸುವ ಸಾಹಸ ದೃಶ್ಯಗಳಿವೆ, ದೇಶವಿದೇಶಗಳ ಅದ್ಭುತ ತಾಣಗಳಿವೆ, ಇಷ್ಟಕ್ಕೂ ಮಿಗಿಲಾಗಿ ಅದು ಸ್ವಾರಸ್ಯಕರ ಕಥೆಯನ್ನೂ ಕೂಡಾ ಹೊಂದಿದೆ.ಭಾರತದ ಕ್ಷಿಪಣಿ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುವ ವಿಜ್ಞಾನಿಯ ಚಟುವಟಿಕೆಗಳ ಬಗ್ಗೆ ಗೂಢಚರ್ಯೆ ನಡೆಸಲು ಭಾರತ ಸರಕಾರ ರಹಸ್ಯ ಟೈಗರ್ ಎಂಬ ಕೋಡ್‌ನೇಮ್ ಹೊಂದಿರುವ ರಹಸ್ಯ ಏಜೆಂಟ್ (ಸಲ್ಮಾನ್‌ಖಾನ್)ನನ್ನು ಕಳುಹಿಸುತ್ತದೆ.ಗೂಢಚರ್ಯೆಗೆಂದು ಬಂದ ಟೈಗರ್ ಕ್ರಮೇಣ ಪ್ರೊಫೆಸರ್‌ನ ಸಹಾಯಕಿ ಹಾಗೂ ನೃತ್ಯ ಕಲಾವಿದೆಯೂ ಆಗಿರುವ ರೆಯಾ (ಕತ್ರಿನಾ ಕೈಫ್)ಳನ್ನು ಪ್ರೇಮಿಸತೊಡಗುತ್ತಾನೆ.
ಆನಂತರ ಕಥೆಗೆ ಹಲವಾರು ಅನಿರೀಕ್ಷಿತ ತಿರುವುಗಳು ದೊರೆಯುತ್ತವೆ. ವಿಜ್ಞಾನಿಯ ಬೇಟೆಗೆ ಬಂದ ಟೈಗರ್‌ನ ‘ಮಿಶನ್’ಯಶಸ್ವಿಯಾಗುವುದೇ ಎಂಬ ಕುತೂಹಲ ಪ್ರೇಕ್ಷಕರನ್ನು ಕ್ಷಣಕ್ಷಣವೂ ಕಾಡತೊಡಗುತ್ತದೆ. ಟೈಗರ್‌ನನ್ನು ಪ್ರೇಮಿಸುವ ರೆಯಾಳ ನಿಜವಾದ ಉದ್ದೇಶವೇನು?. ಆಕೆ ಟೈಗರ್‌ನ ಕಾರ್ಯಾಚರಣೆಗೆ ಅಡ್ಡಗಾಲಾಗುವಳೇ ?. ಹೀಗೆ ಚಿತ್ರದುದ್ದಕ್ಕೂ ಸಸ್ಪೆನ್ಸ್‌ಗಳ ಸರಣಿ ನಿಮ್ಮನ್ನು ಆವರಿಸುತ್ತಲೇ ಹೋಗುತ್ತವೆ.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಕಳಂಕಿತರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಭೇಷ್ ಅನಿಸಿಕೊಂಡ ಸಿದ್ದು, ಖಾತೆ ಹಂಚಿಕೆಯಲ್ಲ ...
ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...