
ಮೋಹನ್ ಲಾಲ್ ಥ್ರಿಲ್ಲರ್ ಕತೆಯೊಂದಿಗೆ ಮತ್ತೆ ಬಂದಿದ್ದಾರೆ. ಇತ್ತೀಚೆಗಷ್ಟೇ ಅವರ ‘ಗ್ರಾಂಡ್ ಮಾಸ್ಟರ್’ ಸುದ್ದಿ ಮಾಡಿತ್ತು. ಇದೀಗ ಜೋಶಿ ನಿರ್ದೇಶನದ ‘ರನ್ ಬೇಬಿ ರನ್’ ಮತ್ತೊಂದು ಭರವಸೆಯ ಚಿತ್ರ. ಜೋಶಿ ಗಟ್ಟಿ ಕತೆಯಿಲ್ಲದೇ ಚಿತ್ರ ಮಾಡಿದಾಗ ಹಲವು ಬಾರಿ ಮುಗ್ಗರಿಸಿದ್ದಾರೆ. ಹಾಗೆಯೇ ಸರಿಯಾದ ಚಿತ್ರಕತೆ ಇದ್ದಾಗ ಯಶಸ್ವಿ ಸಿನೇಮಾಗಳನ್ನು ನೀಡುವ ಛಾತಿ ಅವರಿಗಿದೆ. ಯಶಸ್ವಿ ಚಿತ್ರಗಳ ನಿರ್ದೇಶಕ ಎಂಬ ತನ್ನ ಹೆಗ್ಗಳಿಕೆಯನ್ನು ಇಷ್ಟರವರೆಗೆ ಉಳಿಸಿಕೊಂಡು ಬಂದಿರುವ ಜೋಶಿ ಈ ಓಣಂ ಹಬ್ಬದ ಸಂದರ್ಭದಲ್ಲಿ ‘ರನ್ ಬೇಬಿ ರನ್’ ಎಂಬ ಚಿತ್ರವನ್ನು ಹೊರತಂದಿದ್ದಾರೆ. ಮೋಹನ್‌ಲಾಲ್ ಅಭಿನಯದ ಚಿತ್ರ, ಬಿಗಿಯಾಗಿ ಹೆಣೆಯಲ್ಪಟ್ಟ ‘ಥ್ರಿಲ್ಲರ್’ ಆಗಿದ್ದು, ಹಬ್ಬದ ಗುಂಗಿನಲ್ಲಿರುವ ಪ್ರೇಕ್ಷಕರನ್ನು ಆಕರ್ಷಿಸುವ ಎಲ್ಲ ಲಕ್ಷಣಗಳನ್ನು ಒಳಗೊಂಡಿದೆ.ಚಿತ್ರದಲ್ಲಿ ಸಾಹಸ, ಥ್ರಿಲ್ಲರ್ ಚಿತ್ರವನ್ನು ಲವಲವಿಕೆಯಿಂದ ನಿರೂಪಿಸಿದ್ದಾರೆ ಜೋಶಿ. ಚಿತ್ರದ ಮಾಧ್ಯಮವನ್ನು ಹಿನ್ನೆಲೆಯಾಗಿಟ್ಟುಕೊಂಡಿದೆ.ಟೆಲಿವಿಶನ್ ಚಾನೆಲ್‌ಗಳ ನಡುವಿನ ಪೈಪೋಟಿಯನ್ನು ಹೇಳುತ್ತದೆ. ಕ್ಯಾಮರಾಮನ್ ಮೋಹನ್‌ಲಾಲ್ ಮೂಲಕ ಕತೆ ಬೆಳೆಯುತ್ತದೆ.
ಟಿ.ವಿ.ಚಾನೆಲ್‌ಗಳ ರಾಜಕೀಯ ಮತ್ತು ರಾಜಕೀಯ ನಾಯಕರ ಸುತ್ತ ಸುತ್ತುವ ಮಾಧ್ಯಮ ವರದಿಗಾರರ ಬದುಕನ್ನೂ ಸಣ್ಣದಾಗಿ ಹೇಳುವ ಪ್ರಯತ್ನ ಮಾಡುತ್ತದೆ ‘ರನ್ ಬೇಬಿ ರನ್’.ಇಲ್ಲಿ ಮೋಹನ್‌ಲಾಲ್ ಪ್ರತಿಭಾವಂತ ಕ್ಯಾಮರಾಮನ್ ‘ವೇಣು’ವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ‘ರಾಯ್ಟರ್ಸ್’ ಮುಂತಾದ ಅಂತಾರಾಷ್ಟ್ರೀಯ ಮಾಧ್ಯಮಗಳಿಗಾಗಿ ಕೆಲಸ ಮಾಡುತ್ತಿರುತ್ತಾರೆ. ಅವರು ಸುಮಾರು ಐದು ವರ್ಷಗಳ ಹಿಂದೆ ಪ್ರಿಯತಮೆ, ಪತ್ರಕರ್ತೆ ರೇಣುಕಾ (ಅಮಲಾ ಪೌಲ್) ಜೊತೆಗೆ ಜಗಳ ಮಾಡಿ ಊರು ಬಿಟ್ಟಿದ್ದರು. ಒಂದು ದುಬಾರಿ ಕುಟುಕು ಕಾರ್ಯಾಚರಣೆ ಅವರ ನಡುವೆ ಬಿರುಕುಮೂಡಿಸಿತ್ತು. ಈ ಕುಟುಕು ಕಾರ್ಯಾಚರಣೆ ಭರತನ್ ಪಿಳ್ಳೆ (ಸಾಯಿ ಕುಮಾರ್) ಮತ್ತು ಕೈಗಾರಿಕೋದ್ಯಮಿ ರಾಜನ್ ಕರ್ತಾ (ಸಿದ್ದೀಕಿ) ಅವರ ರಾಜಕೀಯ ಆಶೋತ್ತರಗಳನ್ನು ಹೊಸಕಿ ಹಾಕಿತ್ತು.
ಆದರೆ, ವೇಣು ಮತ್ತೆ ಕೊಚ್ಚಿಗೆ ಕಾಲಿಟ್ಟಾಗ ಆತನ ಮನದಲ್ಲಿ ಹಳೆಯ ದ್ವೇಷ ಹೊಗೆಯಾಡುತ್ತಿತ್ತು. ಅಲ್ಲಿ ವೇಣು ತಾನು ಒಂದೇ ಸಮನೆ ದ್ವೇಷಿಸುತ್ತಿದ್ದ ರೇಣುಕಾ ಜೊತೆ ಮತ್ತೆ ಜೊತೆಯಾದರು. ಆದರೆ, ರಾಜಕಾರಣಿಯೊಬ್ಬನ ಹತ್ಯೆಯನ್ನು ನೇರವಾಗಿ ತೋರಿಸುವ ಇನ್ನೊಂದು ಕಟುಕು ಕಾರ್ಯಾಚರಣೆಗೆ ಅವರಿಗೆ ಅಪಕೀರ್ತಿ ತಂದಿತು. ಅವರು ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿಕೊಂಡರು. ಅದು ಪತ್ರಕರ್ತರಾಗಿ ಅವರಿಗೆ ಮುಜುಗರ ತಂದಿತು. ಈ ಗೊಂದಲವನ್ನು ಅವರು ಹೇಗೆ ನಿವಾರಿಸಿದರು ಎಂಬುದು ಚಿತ್ರದ ಮುಂದಿನ ಕತೆ.
ಒಂದೇ ವೇಗದಲ್ಲಿ ಚಿತ್ರ ಮುಂದೆ ಹೋಗುವುದು ಇದರ ಪ್ರಮುಖ ಅಂಶ. ಜೋಶಿ ಮತ್ತು ಸಂಕಲನಕಾರ ಶ್ಯಾಮ್ ಶಶಿಧರನ್ ಇಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಇದು ಸಚಿಯ ಮೊದಲ ಸ್ವತಂತ್ರ ಚಿತ್ರಕತೆ. ಇಲ್ಲಿ ತರ್ಕಕ್ಕೆ ಮೀರಿದ ಬೆಳವಣಿಗೆ ನಡೆಯುವುದಿಲ್ಲ. ಇದರಿಂಗಾಗಿ ಚಿತ್ರ ಹೆಚ್ಚಿನ ಶ್ರಮವಿಲ್ಲದೆ ಕ್ಲೈಮಾಕ್ಸ್ ತಲುಪುತ್ತದೆ.
ಆದರೆ, ಇಲ್ಲಿ ಪ್ರೇಮ ವ್ಯವಹಾರ ಮತ್ತು ಹಾಡುಗಳು ಅಗತ್ಯವಿರಲಿಲ್ಲ. ಅದು ಇಲ್ಲದೆಯೂ ಚಿತ್ರ ನಡೆಯುತ್ತಿತ್ತು. ನಟನೆಯಲ್ಲಿ ಮೋಹನ್‌ಲಾಲ್ ಮತ್ತೊಮ್ಮೆ ಮಿಂಚುತ್ತಾರೆ. ಅವರು ಟಿವಿ ಕ್ಯಾಮರಾಮನ್ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ..ಅಮಲಾ ಪೌಲ್ ಜೂನಿಯರ್‌ನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಉಳಿದ ಪಾತ್ರಗಳು ನಟನೆಯಲ್ಲಿ ಓಕೆ. ಜೋಶಿಯ ಕಲ್ಪನೆಗಳಿಗೆ ಪೂರಕವಾಗಿ ಆರ್.ಡಿ. ರಾಜಶೇಖರ್‌ರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು ಅದನ್ನು ಮೋಹನ್‌ಲಾಲ್ ಹಾಡಿದ್ದಾರೆ. ಅದು ಚೆನ್ನಾಗಿ ಮೂಡಿಬಂದಿದೆ.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...