ಅಹ್ಲಾದ ನೀಡುವ ಫೆರಾರಿ ಕಿ ಸವಾರಿ
mail-img print-img

ಅಹ್ಲಾದ ನೀಡುವ ಫೆರಾರಿ ಕಿ ಸವಾರಿ

- ಮುಸಾಫಿರ್
ಶನಿವಾರ - ಜೂನ್ -16-2012

ಬಾಲಿವುಡ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಯೋಗಶೀಲತೆಯ ಚಿತ್ರಗಳದ್ದೇ ಹವಾ. ಈ ವಾರ ತೆರೆಕಂಡ ‘ಫೆರಾರಿ ಕಿ ಸವಾರಿ’ ಕೂಡಾ ಅಂತಹ ಚಿತ್ರಗಳ ಸಾಲಿಗೆ ಸೇರುತ್ತದೆ.ಬಾಲಿವುಡ್‌ನ ಮೇರು ಪ್ರತಿಭೆ ‘ವಿಧು ವಿನೋದ್ ಚೋಪ್ರಾ’ ನಿರ್ಮಿಸಿರುವ ಫೆರಾರಿ ಕಿ ಸವಾರಿಯು ರಾಜೇಶ್ ಮಾಪುಸ್ಕರ್ ಎಂಬ ಉದಯೋನ್ಮುಖ ನಿರ್ದೇಶಕನನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಸೆಂಟಿಮೆಂಟ್ ದೃಶ್ಯಗಳಿಗೆ ಫೆರಾರಿಯಲ್ಲಿ ಅವಕಾಶವಿಲ್ಲ.ಆದರೆ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕನಿಗೆ ಹೊರಗಿನ ಜಂಜಡಗಳಿಂದ ಸಂಪೂರ್ಣ ರಿಲ್ಯಾಕ್ಸ್ ನೀಡುವಂತಹ ಮನರಂಜನೆ ದೊರೆಯುವುದಂತೂ ಗ್ಯಾರಂಟಿ.ಅಂದ ಹಾಗೆ ಈ ಚಿತ್ರದ ಕಥಾನಾಯಕ ಕಾಯೊ (ರಿತ್ವಿಕ್ ಸಹಾಯ್) ಎಂಬ ಓರ್ವ ಪುಟ್ಟ ಬಾಲಕ. ಈ ಮುಗ್ಧ ಹುಡುಗನಿಗೆ ಕ್ರಿಕೆಟಿಗನಾಗುವ ಮಹದಾಸೆ.ಕ್ರಿಕೆಟ್ ಮೈದಾನದಲ್ಲಿ ಅತ್ಯುತ್ತಮ ಆಟಗಾರನೂ ಹೌದು. ಕಾಯೊನ ತಂದೆ ರುಸ್ತುಂ ದೇಬೂ (ಶರ್ಮನ್ ಜೋಶಿ) ಸಾಮಾನ್ಯ ಸರಕಾರಿ ನೌಕರನಾದರೂ, ಮಗನ ಎಲ್ಲ ಆಸೆಗಳನ್ನು ಈಡೇರಿಸುವ ಹಂಬಲವನ್ನು ಸದಾ ಹೊಂದಿರುತ್ತಾನೆ.

ರುಸ್ತುಂನ ತಂದೆ ದೆಬೊ (ಬೊಮ್ಮನ್ ಇರಾನಿ) ಜೀವನದಲ್ಲಿ ಕಹಿಯುಂಡ ವೃದ್ಧ ಜೀವ. ಭಾರತದ ಕ್ರಿಕೆಟ್ ತಂಡದಲ್ಲಿ ಆಡುವ ತನ್ನ ಕನಸು ಈಡೇರಲಿಲ್ಲವೆಂಬ ಕೊರಗು ಆತನನ್ನು ಕಾಡುತ್ತಿರುತ್ತದೆ.ಹೀಗಾಗಿ ಆತ ಕ್ರಿಕೆಟ್ ಆಟವನ್ನೇ ದ್ವೇಷಿಸತೊಡಗುತ್ತಾನೆ.ರುಸ್ತುಂ ತನ್ನ ಪುತ್ರನ ಆಕಾಂಕ್ಷೆಗಳನ್ನು ಹಾಗೂ ಕ್ರಿಕೆಟ್ ಬಗ್ಗೆ ತನ್ನ ತಂದೆಗಿರುವ ದ್ವೇಷದ ಮಧ್ಯೆ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಭಾರೀ ಕಷ್ಟಪಡುತ್ತಾನೆ.ಕಯೋ ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುವ ಪ್ರತಿಷ್ಠಿತ ಕ್ರಿಕೆಟ್ ಶಿಬಿರಕ್ಕೆ ಆಯ್ಕೆಯಾಗುತ್ತಾನೆ.

ಆದರೆ ಲಂಡನ್‌ಗೆ ಹೋಗಲು ಬೇಕಾದಷ್ಟು ಹಣ ರುಸ್ತುಂನಲ್ಲಿರುವುದಿಲ್ಲ. ಈ ಸಂದರ್ಭದಲ್ಲಿ ಓರ್ವ ‘ವೆಡ್ಡಿಂಗ್ ಪ್ಲಾನರ್’ (ಸೀಮಾ ಭಾರ್ಗವ) ರುಸ್ತುಂಗೆ ಒಂದು ಹೊಸ ಅಫರ್ ನೀಡುತ್ತಾಳೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ರ ಫೆರಾರಿ ಕಾರನ್ನು ಮದುವೆ ಸಮಾರಂಭವೊಂದಕ್ಕಾಗಿ ಕೆಲವು ತಾಸುಗಳ ಮಟ್ಟಿಗೆ ತಂದುಕೊಟ್ಟಲ್ಲಿ, 1.5 ಲಕ್ಷ ರೂ.ಗಳನ್ನು ತಾನು ಕೊಡುವುದಾಗಿ ಆಕೆ ಹೇಳುತ್ತಾಳೆ. ಆದರೆ ದುರದೃಷ್ಟವಶಾತ್ ರುಸ್ತುಂ ತನಗೆ ಗೊತ್ತಿಲ್ಲದೆಯೇ ಸಚಿನ್‌ನ ಫೆರಾರಿ ಕಾರನ್ನು ಕದ್ದ ಬಳಿಕ ಆತ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ.

ಆಗ ಶುರುವಾಗುತ್ತದೆ ಫೆರಾರಿ ಕಿ ಸವಾರಿ... ಈ ಪಯಣವು ಅವರ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಪ್ರಧಾನಪಾತ್ರಧಾರಿಗಳಾದ ಶರ್ಮನ್ ಜೋಶಿ, ರಿತ್ವಿಕ್ ಸಹಾಯ್ ಹಾಗೂ ಬೊಮ್ಮನ್ ಇರಾನಿ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಇವರೊಂದಿಗೆ ಪರೇಶ್ ರಾವಲ್ ಮತ್ತು ವಿದ್ಯಾಬಾಲನ್ ಕೂಡಾ ಭೇಷ್ ಎನಿಸುವಂತೆ ನಟಿಸಿದ್ದಾರೆ. ಬೊಮ್ಮನ್ ಇರಾನಿಯ ಪರಿತ್ಯಕ್ತ ಗೆಳೆಯನಾಗಿ ಪರೇಶ್ ರಾವಲ್ ನಟಿಸಿದ್ದಾರೆ. ವಿದ್ಯಾಬಾಲನ್ ತನ್ನ ‘ಲಾವಣಿ’ ಡಾನ್ಸ್‌ನಿಂದ ಪರದೆಗೆ ಕಿಚ್ಚಿಡುತ್ತಾಳೆ.‘ವೆಡ್ಡಿಂಗ್ ಪ್ಲಾನರ್’ ಸೀಮಾ ಭಾರ್ಗವ ಅಭಿನಯದಲ್ಲಿ ನೈಜತೆಯಿದೆ.

ಸಚಿನ್ ತೆಂಡುಲ್ಕರ್‌ರ ಮನೆಗೆಲಸದವನ ಪಾತ್ರದಲ್ಲಿ ನಟಿಸಿದ ಆಕಾಶ್ ದಬಾಡೆ ಮಾತ್ರ ತುಸು ಮಂಕಾದಂತೆ ಕಾಣಿಸುತ್ತಾರೆ.ಬೊಮ್ಮನ್ ಇರಾನಿ ಮತ್ತು ಪರೇಶ್ ರಾವಲ್‌ರ ಮಧ್ಯದ ಪಂಚಿಂಗ್ ಡೈಲಾಗ್ ದೃಶ್ಯಗಳನ್ನು ಕಾಣುವುದೇ ಒಂದು ಸೊಬಗು.ರಾಜ್‌ಕುಮಾರ್ ಹಿರಾನಿ ಬರೆದಿರುವ ಸಂಭಾಷಣೆಗಳು ಈ ಚಿತ್ರದ ಇನ್ನೊಂದು ಪ್ಲಸ್‌ಪಾಯಿಂಟ್.ನಿರ್ದೇಶಕ ರಾಜೇಶ್ ಮಾಫುಸ್ಕರ್ ತನ್ನ ಚೊಚ್ಚಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ.

ಮುಂಬರುವ ದಿನಗಳಲ್ಲಿ ಈ ಯುವನಿರ್ದೇಶಕನಿಂದ ಇನ್ನಷ್ಟು ಹೊಸತನದ ಚಿತ್ರಗಳನ್ನು ನಿರೀಕ್ಷಿಸಬಹುದು. ಬಾಲಿವುಡ್‌ನಲ್ಲಿಯೂ ಹಿರೋಯಿನ್ ಗ್ಲಾಮರ್ ಇಲ್ಲದೆಯೂ ಒಂದು ಉತ್ತಮ ಮನರಂಜನೆಯ ಚಿತ್ರವನ್ನು ಮಾಡ ಬಹುದೆಂಬುದನ್ನು ಫೆರಾರಿ ಕಿ ಸವಾರಿ ಸಾಬೀತುಪಡಿಸಿದೆ. ಚಿತ್ರವನ್ನು ತುಸು ಸಣ್ಣದು ಮಾಡಿದ್ದರೆ ಫೆರಾರಿ ಇನ್ನೂ ಹೆಚ್ಚಿನ ವೇಗ ಪಡೆಯುತ್ತಿತ್ತೇನೋ. ಕೆಲವು ಅನಗತ್ಯ ಪಾತ್ರಗಳನ್ನು ತಪ್ಪಿಸಬಹುದಾಗಿತ್ತು. ಒಟ್ಟಿನಲ್ಲಿ ಫೆರಾರಿಯ ಸವಾರಿ ನಿಜಕ್ಕೂ ಒಂದು ಅಹ್ಲಾದಕರ ಅನುಭವ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್