ರೋಹಿತ್ ಶೆಟ್ಟಿ ಜನರ ನಿರ್ದೇಶಕ. ಒಂದೋ ಹಾಸ್ಯ, ಇಲ್ಲವೋ ಆ್ಯಕ್ಷನ್. ಇವೆರಡನ್ನು ನಿರೀಕ್ಷಿಸಿಯೇ ರೋಹಿತ್ ಶೆಟ್ಟಿಯವರ ಚಿತ್ರವನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಕಾಲಿಡುತ್ತಾರೆ. ಬೋಲ್‌ಬಚ್ಚನ್ ಅಂತಹದೇ ಚಿತ್ರಗಳಲ್ಲಿ ಇನ್ನೊಂದು. ಹಾಸ್ಯ ಮತ್ತು ಆ್ಯಕ್ಷನ್ ಎರಡೂ ಸಮ್ಮಿಳಿತಗೊಂಡ ಚಿತ್ರ ಇದು.ಚಿತ್ರದ ಮುಖ್ಯ ಪಾತ್ರದಲ್ಲಿ ಅಬ್ಬಾಸ್ ಇದ್ದಾನೆ. ಪೋಷಕ ಪಾತ್ರದಲ್ಲಿ ಅವನಿಗೆ ಸವಾಲಾಗಿ ಪೃಥ್ವಿಜಿತ್ ರಘುವಂಶ್ ಇದ್ದಾನೆ. ಇವರಿಬ್ಬರ ನಡುವೆ ಸತ್ಯ-ಸುಳ್ಳುಗಳು, ಕಣ್ಣುಮುಚ್ಚಾಲೆಯನ್ನು ಹಾಸ್ಯಮಯವಾಗಿ ನಿರೂಪಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಮತ್ತು ಅದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಅಭಿಷೇಕ್ ಬಚ್ಚನ್ ಇಲ್ಲಿ ಅಬ್ಬಾಸ್ ಪಾತ್ರವನ್ನು ನಿರ್ವಹಿಸಿದ್ದರೆ, ಪೃಥ್ವಿ ಪಾತ್ರವನ್ನು ಅಜಯ್ ದೇವಗನ್ ನಿರ್ವಹಿಸಿದ್ದಾರೆ. ಪೃಥ್ವಿ ಸತ್ಯಸಂಧ. ಸತ್ಯವನ್ನು ಬಿಟ್ಟರೆ ಅವನಿಗೆ ಬೇರೇನೂ ಇಲ್ಲ, ಸುಳ್ಳರನ್ನು ಕಂಡರಾಗುವುದಿಲ್ಲ. ಅಬ್ಬಾಸ್‌ಗೆ ಕೆಲಸ ಬೇಕು. ಅದಕ್ಕಾಗಿ ಆತ ಸುಳ್ಳು ಹೇಳಿ ಪೃಥ್ವಿಜಿತ್ ಮನೆಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಸುಳ್ಳನ್ನು ಸಮರ್ಥಿಸಲು ಮತ್ತಷ್ಟು ಸುಳ್ಳುಗಳನ್ನು ಹೆಣೆಯುತ್ತಾ ಹೋಗುತ್ತಾನೆ. ಹಾಗೆ ಒಬ್ಬನೇ ಹಲವು ಪಾತ್ರಗಳಾಗಿ ಒಡೆಯನ ಮುಂದೆ ನಟಿಸಬೇಕಾಗುತ್ತದೆ. ಆದರೆ ಈ ಸುಳ್ಳುಗಳು ಒಡೆಯನಿಗೆ ತಿಳಿದು ಹೋದರೆ?

ಗೋಲ್‌ಮಾಲ್ ಚಿತ್ರಗಳಿಗೆ ಖ್ಯಾತಿ ಪಡೆದಿರುವ ರೋಹಿತ್ ಶೆಟ್ಟಿ ಈ ಚಿತ್ರದಲ್ಲೂ ಗೋಲ್‌ಮಾಲ್‌ಗಳಿಗೆ ಆದ್ಯತೆ ನೀಡಿದ್ದಾರೆ. ತಮ್ಮ ವಂಶಪಾರಂಪರ್ಯದಿಂದ ಬಂದ ಮನೆಯನ್ನು ಕಳೆದುಕೊಂಡು ಹಳ್ಳಿಗೆ ಬರುವ ಅಬ್ಬಾಸ್ ಅಲಿ ಮತ್ತು ಆತನ ತಂಗಿ ಸಾನಿಯಾ(ಆಸಿನ್), ಜೊತೆಗೆ ಕುಟುಂಬ ಸ್ನೇಹಿತ ಶಾಸ್ತ್ರಿ, ದಿಲ್ಲಿಯಿಂದ ರಣಕ್‌ಪುರ್ ಎಂಬ ಹಳ್ಳಿಗೆ ಬಂದು, ಅಲ್ಲಿ ಪೃಥ್ವಿಜಿತ್‌ನ್ನು ಭೇಟಿ ಮಾಡುತ್ತಾರೆ. ಆದರೆ ಇವರ ಸುಳ್ಳುಗಳಿಗೆ ಕುಟುಂಬ ಸ್ನೇಹಿತ ಶಾಸ್ತ್ರಿಯವರ ಮಗ ರವಿ ಸಮಸ್ಯೆಯಾಗುತ್ತಾನೆ. ಇದರಿಂದ ಕತೆ ಸುಳ್ಳುಗಳ ಮೂಲಕ ಇನ್ನಷ್ಟು ಬೆಳೆಯುತ್ತಾ ಹೋಗುತ್ತದೆ.
ಚಿತ್ರ ಉದ್ದಕ್ಕೂ ನಗಿಸುತ್ತದೆ ಎನ್ನುವಂತಿಲ್ಲ. ಕೆಲವೆಡೆ ಸಪ್ಪೆಯಾಗಿದೆ. ಹಲವೆಡೆ ನಗು ಭುಗ್ ಎಂದು ಚಿಮ್ಮುತ್ತದೆ. ಆರಂಭದಲ್ಲಿ ಬಚ್ಚನ್ ನಟನೆ ತುಸು ಸಪ್ಪಗಿದೆಯಾದರೂ, ನಿಧಾನಕ್ಕೆ ಅದು ಚುರುಕಾಗುತ್ತಾ ಹೋಗುತ್ತದೆ. ಪೃಥ್ವಿ ಪಾತ್ರದಲ್ಲಿ ಅಜಯ್‌ದೇವಗನ್ ಫಾರ್ಮ್‌ನಲ್ಲಿದ್ದಾರೆ. ಅವರ ರೋಷ, ಮೈಕಟ್ಟಿಗೆ ತಕ್ಕ ಪಾತ್ರ ಅದು. ನಾಯಕಿಯರಿಗೆ ಇಲ್ಲಿ ವಿಶೇಷ ಕೆಲಸವೇನೂ ಇಲ್ಲ. ಆಸಿನ್‌ರ ದ್ವಿಪಾತ್ರ ಅಸಹಜವೆನಿಸುತ್ತದೆ. ಪೋಷಕ ನಟರಾಗಿ ಅಸ್ರಾನಿ, ಕೃಷ್ಣಾ, ಪುರಾಣ್ ಸಿಂಗ್, ನೀರಜ್ ವೋ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆ ಮೂಲಕ ಚಿತ್ರಕ್ಕೂ ಜೀವ ತುಂಬಿದ್ದಾರೆ.
ಸಂಭಾಷಣೆ ಹರಿತವಾಗಿದೆ. ನಗಿಸುವಂತೆಯೂ ಇದೆ. ಬಚ್ಚನ್ ನಟಿಸುತ್ತಾ ನಟಿಸುತ್ತಾ ನಮ್ಮಾಳಗೆ ನಿಧಾನಕ್ಕೆ ಪ್ರವೇಶಿಸುತ್ತಾರೆ. ಚಿತ್ರ ಬಚ್ಚನ್ ಮತ್ತು ಅಜಯ್ ದೇವಗನ್ ನಡುವೆ ಹಂಚಿ ಹೋಗಿದೆ. ಆದುದರಿಂದ ಒಬ್ಬರನ್ನೇ ಅವಲಂಬಿಸುವಂತಿಲ್ಲ. ಅಜಯ್‌ಯ ಗತ್ತುಗಾರಿಕೆ, ಬಚ್ಚನ್ ತಮಾಷೆ, ಸುಳ್ಳುಗಳು ಎರಡೂ ಚಿತ್ರದಲ್ಲಿ ಮುಖ್ಯವಾಗುತ್ತದೆ.ಉಳಿದಂತೆ ಹಾಡು, ನೃತ್ಯಗಳು ಪರವಾಗಿಲ್ಲ. ಈಗಾಗಲೇ ಗೋಲ್‌ಮಾಲ್ ಭಾಗ-1, 2 ಹೀಗೆ ಮಾಡಿ ಸುಸ್ತಾಗಿರುವ ಶೆಟ್ಟಿ ಮುಂದಿನ ದಿನಗಳಲ್ಲಿ ಬೋಲ್‌ಬಚ್ಚನ್ ಹಿಂದೆ ಬಿದ್ದರೆ ಅಚ್ಚರಿಯಿಲ್ಲ. ಏನೇ ಇರಲಿ. ಸಮಯ ಕಳೆಯುವುದಕ್ಕಾಗಿ ಒಮ್ಮೆ ನೋಡಬಹುದಾದ ಚಿತ್ರ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...