ದುಬೈ: ಇನ್ನು ಮೂರು ತಿಂಗಳ ಬಳಿಕ ವಲಸಿಗರಿಗೆ ಕಾರ್ಮಿಕ ಕಾರ್ಡ್‌ಗಳ ಅಗತ್ಯವಿಲ್ಲ ಎಂದು ಕಾರ್ಮಿಕ ಸಚಿವಾಲಯದ ವಕ್ತಾರರೊಬ್ಬರು ಹೇಳಿದ್ದಾರೆ.‘‘ದೇಶದಲ್ಲಿ ಕೆಲಸ ಮಾಡುವ ಯಾವುದೇ ಉದ್ಯೋಗಿಗೆ ಈ ದಾಖಲೆ ಈವರೆಗೆ ಅಗತ್ಯವಾಗಿತ್ತು. ಜೂನ್ ಬಳಿಕ ಕಾರ್ಮಿಕ ಕಾರ್ಡ್‌ಗಳನ್ನು ಹೊಂದುವ ಅಗತ್ಯವಿರುವುದಿಲ್ಲ. ಯಾಕೆಂದರೆ ಆ ವೇಳೆಗೆ ಕಾರ್ಮಿಕ ಕಾರ್ಡ್‌ಗಳ ಬದಲಿಗೆ ಎಮಿರೇಟ್ಸ್ ಐಡಿಯನ್ನು ವಿತರಿಸಲಾಗುತ್ತದೆ’’ ಎಂದು ಅವರು ತಿಳಿಸಿದರು.2012ರ ದ್ವಿತೀಯಾರ್ಧದಲ್ಲಿ ಕಾರ್ಮಿಕ ಕಾರ್ಡ್‌ಗಳ ಬದಲಿಗೆ ಎಮಿರೇಟ್ಸ್ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಈ ಮೊದಲು ಕಾರ್ಮಿಕ ಸಚಿವ ಸಕರ್ ಗೋಬಶ್ ಸಯೀದ್ ಗೋಬಶ್ ಹೇಳಿದ್ದರು.ಯುಎಇಯಲ್ಲಿರುವ ಎಲ್ಲ ವಲಸಿಗರು ನೋಂದಾಯಿಸಲ್ಪಟ್ಟಿದ್ದಾರೆ ಹಾಗೂ ಎಮಿರೇಟ್ಸ್ ಐಡಿಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಬಗ್ಗೆ ಎಮಿರೇಟ್ಸ್ ನ್ಯಾಶನಲ್ ಐಡೆಂಟಿಟಿ ಅತಾರಿಟಿ (ಐಡಾ)ಗೆ ಖಾತರಿಯಾದ ಬಳಿಕ ನಿರ್ಧಾರವನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
‘‘ದೇಶದಲ್ಲಿರುವ ಎಲ್ಲ ವಲಸಿಗರ ಐಡಿ ನೋಂದಣಿ ಪೂರ್ಣಗೊಂಡ ಬಳಿಕ ಕಾರ್ಮಿಕ ಕಾರ್ಡ್‌ಗಳನ್ನು ವಾಪಸ್ ಪಡೆದುಕೊಳ್ಳಲಾಗುವುದು ಹಾಗೂ ಅವುಗಳ ಬದಲಿಗೆ ಎಮಿರೇಟ್ಸ್ ಐಡಿಯನ್ನು ವಿತರಿಸಲಾಗುವುದು’’ ಎಂದರು.ಎಮಿರೇಟ್ಸ್ ಐಡಿಯನ್ನು ಕಾರ್ಮಿಕ ಕಾರ್ಡ್‌ಆಗಿ ಬಳಸುವುದು ವಲಸಿಗ ಕಾರ್ಮಿಕರಿಗೆ ಸುಲಭವಾಗಲಿದೆ. ‘‘ಈ ವರ್ಷದ ಜೂನ್‌ನಲ್ಲಿ ಐಡಿ ನೋಂದಣಿ ಪೂರ್ಣಗೊಂಡ ಬಳಿಕ ಅವರು ಹಲವು ಕಾರ್ಡ್‌ಗಳನ್ನು ಹೊತ್ತೊಯ್ಯವುದು ತಪ್ಪುತ್ತದೆ’’ ಎಂದು ವಕ್ತಾರರು ಹೇಳಿದರು.
ವಾಸ್ತವ್ಯ ವೀಸದ ಅವಧಿ ಈ ವರ್ಷ ಮುಗಿಯುವ ದುಬೈ ನಿವಾಸಿಗಳು ತಮ್ಮ ಐಡಿ ಕಾರ್ಡ್‌ಗಳನ್ನು ತಮ್ಮ ವೀಸ ನವೀಕರಣದ ಅವಧಿಯಲ್ಲಿ ನೋಂದಾಯಿಸಬಹುದು ಅಥವಾ ನವೀಕರಿಸಬಹುದು.ಶಾರ್ಜಾದಲ್ಲಿರುವ ವಲಸಿಗರು ತಮ್ಮ ಐಡಿ ಕಾರ್ಡ್‌ಗಳನ್ನು ಫೆಬ್ರವರಿ 1ರ ಮೊದಲು ನೋಂದಾಯಿಸಬೇಕೆಂದಿತ್ತು ಹಾಗೂ ನವೀಕರಿಸಬೇಕೆಂದಿತ್ತು. ಅಬುಧಾಬಿ ನಿವಾಸಿಗಳು ಎಪ್ರಿಲ್ 1ರ ಮೊದಲು ನವೀಕರಿಸಬೇಕು; ಹಾಗೂ ದುಬೈಯಲ್ಲಿ ವಾಸಿಸುವವರು ಜೂನ್ 1ರ ಮೊದಲು ಇದನ್ನು ಮಾಡಬೇಕು.ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ವಲಸಿಗರಿಗೆ ಎಮಿರೇಟ್ಸ್ ಐಡಿ ಎರಡು ವರ್ಷಗಳ ಕಾಲ ಸಿಂಧುವಾಗಿರುತ್ತದೆ. ಅವರ ಪ್ರಾಯೋಜಕತ್ವದಡಿಯಲ್ಲಿ ಬರುವ ಕುಟುಂಬ ಸದಸ್ಯರಿಗೂ ಇದೇ ಸಿಂಧುತ್ವ ಅವಧಿ ಅನ್ವಯಿಸುತ್ತದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...