ಅಬುಧಾಬಿ: ಹೊರಾಂಗಣ ಆಸನ ವ್ಯವಸ್ಥೆಯುಳ್ಳ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳು ಜನವಸತಿ ಪ್ರದೇಶದಿಂದ ಕನಿಷ್ಠ 30 ಮೀಟರ್ ದೂರ ಇರಬೇಕು ಹಾಗೂ ಪ್ರಾರ್ಥನಾ ಸ್ಥಳಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಎಟಿಎಂಗಳ ಪಕ್ಕದಲ್ಲಿ ಇರಬಾರದು ಎಂದು ಅಬುಧಾಬಿ ಮುನಿಸಿಪಾಲಿಟಿ ಹೇಳಿದೆ.ಇಂಥ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳಿಂದ ಹೊರಹೊಮ್ಮುವ ಶಬ್ದದಿಂದ ಇವುಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ನಿಯಮ ರೂಪಿಸಲಾಗಿದೆ.ಈ ಹೊರಾಂಗಣ ಆಸನ ವ್ಯವಸ್ಥೆ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಬಾರದು ಹಾಗೂ ಹೊರಾಂಗಣ ಆಸನ ವ್ಯವಸ್ಥೆಗೆ ಸಂಬಂಧಿಸಿದ ಕೈಪಿಡಿಗೆ ಅನುಗುಣವಾಗಿರಬೇಕು.ಮುನಿಸಿಪಾಲಿಟಿ ಅಧಿಕಾರಿಗಳು ಇತ್ತೀಚೆಗೆ ಕೈಗೊಂಡ ಸುರಕ್ಷತೆ ಮತ್ತು ಆರೋಗ್ಯ ತನಿಖೆ ವೇಳೆ ಈ ಅಂಶಗಳನ್ನು ಗುರುತಿಸಲಾಯಿತು. ನಗರದ ಸೌಂದರ್ಯ ಸೇವೆ ಅಂಗಡಿಗಳು, ಬ್ಯೂಟಿ ಪಾರ್ಲರ್‌ಗಳು, ದೋಬಿ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳ ಹೊರಾಂಗಣ ಆಸನ ವ್ಯವಸ್ಥೆಗಳಿಗೆ ಸಂಬಂಧಿಸಿದ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳ ಉಲ್ಲಂಘನೆಗಳ 113 ಪ್ರಕರಣಗಳನ್ನು ಅಧಿಕಾರಿಗಳು ಪತ್ತೆಹಚ್ಚಿದರು.
ಈ ವ್ಯಾಪಾರ ಮಳಿಗೆಗಳು ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಕೊಂಡು ಹೋಗುವುದನ್ನು ಖಾತರಿಪಡಿಸಲು ಸಂಜೆಯ ವೇಳೆಗೆ ತನಿಖಾ ಅಭಿಯಾನ ನಡೆಸಲಾಗುವುದು ಎಂದು ಮುನಿಸಿಪಾಲಿಟಿ ಹೇಳಿದೆ. ಇತ್ತೀಚೆಗೆ ನಡೆದ ತನಿಖೆಗೆ ಸಂಬಂಧಿಸಿ 74 ಪ್ರಕರಣಗಳಲ್ಲಿ ಎಚ್ಚರಿಕೆಯನ್ನೂ ನೀಡಲಾಗಿದೆ.ಪುರುಷರ ತಲೆಗೂದಲು ಕತ್ತರಿಸುವ ಸೆಲೂನ್‌ಗಳಲ್ಲಿ ಕ್ರಿಮಿನಾಶಕ ಉಪಕರಣಗಳನ್ನು ಬಳಸಲಾಗುತ್ತಿದೆಯೇ ಹಾಗೂ ಕರ್ತವ್ಯದ ಅವಧಿಯಲ್ಲಿ ಕೆಲಸಗಾರರು ಬಿಳಿ ಬಟ್ಟೆ ಧರಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುವುದು.
ಅದೇ ವೇಳೆ, ಸೆಲೂನ್ಗಳು ಮತ್ತು ಮಹಿಳೆಯರ ಬ್ಯೂಟಿಪಾರ್ಲರ್‌ಗಳಲ್ಲಿ ಬಳಸ ಲಾಗುವ ಉತ್ಪನ್ನಗಳು ಸುರಕ್ಷಿತವೇ ಎಂಬುದನ್ನು ತಪಾಸಣೆ ಗೊಳಪಡಿಸಲಾಗುವುದು.ದೋಬಿ ಅಂಗಡಿಗಳು ಬಟ್ಟೆಗಳನ್ನು ನೆಲದ ಮೇಲೆ ಬಿಡಬಾರದು ಹಾಗೂ ಅವುಗಳನ್ನು ಸಿಂಕ್‌ಗಳಲ್ಲಿ ಒಗೆಯ ಬಾರದು ಎಂದು ಮುನಿಸಿಪಾಲಿಟಿ ಹೇಳಿದೆ.ಅನ್ವಯವಾಗುವ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಂತೆ ಮುನಿಸಿಪಾಲಿಟಿ ಅಧಿಕಾರಿಗಳು ಅಂಗಡಿ ಮಾಲಕರಿಗೆ ಕರೆ ನೀಡಿದ್ದಾರೆ. ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳುವುದಕ್ಕೆ ಈ ಕ್ರಮಗಳು ಅಗತ್ಯ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...