ಬುರ್ಜ್ ಖಲೀಫ:2012ರಲ್ಲಿ ಅತ್ಯಂತ ಹೆಚ್ಚು ಖರೀದಿ ನಡೆಸಿದವರ ಪಟ್ಟಿಯಲ್ಲಿ  ಭಾರತೀಯರು ನಂ.1
mail-img print-img

ಬುರ್ಜ್ ಖಲೀಫ:2012ರಲ್ಲಿ ಅತ್ಯಂತ ಹೆಚ್ಚು ಖರೀದಿ ನಡೆಸಿದವರ ಪಟ್ಟಿಯಲ್ಲಿ ಭಾರತೀಯರು ನಂ.1

ಶುಕ್ರವಾರ - ಆಗಸ್ಟ್ -10-2012

ದುಬೈ: ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫದಲ್ಲಿ 2012ರ ಮೊದಲ ಆರು ತಿಂಗಳಲ್ಲಿ ಅತ್ಯಂತ ಹೆಚ್ಚು ಖರೀದಿ ನಡೆಸಿದವರ ಪಟ್ಟಿಯ ಮೊದಲಲ್ಲಿ ಭಾರತೀಯರು ಇದ್ದಾರೆ.ಇರಾನಿಯನ್ನರು ಎರಡನೆ ಸ್ಥಾನದಲ್ಲಿದ್ದಾರೆ.ಈ 828 ಮೀಟರ್ ಎತ್ತರದ ಕಟ್ಟಡದಲ್ಲಿ ಆಸ್ತಿ ಖರೀದಿಸಲು ಭಾರತೀಯರು 81.4 ಕೋಟಿ ದಿರ‍್ಹಮ್ ವೆಚ್ಚ ಮಾಡಿದರೆ, ಇರಾನಿಯನ್ನರು 42 ಕೋಟಿ ದಿರ‍್ಹಮ್ ಖರ್ಚು ಮಾಡಿದ್ದಾರೆ ಎಂದು ದುಬೈ ಭೂ ಇಲಾಖೆಯ ಅಂಕಿ-ಅಂಶಗಳು ಹೇಳುತ್ತವೆ. ರಾಷ್ಟ್ರೀಯತೆವಾರು ಐವರು ಅತಿ ಹೆಚ್ಚಿನ ಖರೀದಿದಾರರ ಪಟ್ಟಿಯಲ್ಲಿ ಬ್ರಿಟಿಶರು ಮೂರನೆ ಸ್ಥಾನದಲ್ಲಿದ್ದಾರೆ. ಅವರು 30.1ಕೋಟಿ ದಿರ‍್ಹಮ್ ಮೌಲ್ಯದ ಸೊತ್ತುಗಳನ್ನು ಖರೀದಿಸಿದ್ದಾರೆ.ನಾಲ್ಕನೆ ಸ್ಥಾನದಲ್ಲಿ ಬರುವವರು ಎಮಿರಾಟಿಗಳು. ಅವರು ೨೩.೮ ಕೋಟಿ ದಿರ‍್ಹಮ್ ವೊತ್ತದ ಆಸ್ತಿ ಖರೀದಿಸಿದ್ದಾರೆ. ಐದನೆ ಸ್ಥಾನದಲ್ಲಿ 21 ಕೋಟಿ ದಿರ‍್ಹಮ್ ಮೌಲ್ಯದ ಆಸ್ತಿ ಖರೀದಿಸಿರುವ ಪಾಕಿಸ್ತಾನೀಯರು ಬರುತ್ತಾರೆ.2011ರ ನಾಲ್ಕನೆ ತ್ರೈಮಾಸಿಕಕ್ಕೆ ಹೋಲಿಸಿದರೆ 2012ರ ಪ್ರಥಮ ತ್ರೈಮಾಸಿಕದಲ್ಲಿ ಕಟ್ಟಡದ ಅಪಾರ್ಟ್‌ಮೆಂಟ್‌ಗಳ ಬೆಲೆಗಳಲ್ಲಿ 9ರಿಂದ 12 ಶೇ. ಏರಿಕೆಯಾಗಿವೆ.“ಕಳೆದ ವರ್ಷದ ನಾಲ್ಕನೆ ತ್ರೈಮಾಸಿಕಕ್ಕೆ ಹೋಲಿಸಿದರೆ

ಈ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಅಪಾರ್ಟ್‌ಮಂಟ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿದೆ” ಎಂದು ದುಬೈಯ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ‘ಪ್ರಾಪ್‌ಸ್ಕ್ವೇರ್ ರಿಯಲ್ ಎಸ್ಟೇಟ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಝ್ ಗಫೂರ್ ಹೇಳುತ್ತಾರೆ. ಇಲ್ಲಿ ಅಪಾರ್ಟ್‌ಮಂಟ್‌ನ ಪರಿಸರವನ್ನು ಆಧರಿಸಿ ಬೆಲೆ ನಿರ್ಧಾರವಾಗುತ್ತದೆ.ಲೇಕ್ ಮತ್ತು ಫೌಂಟನ್ ವ್ಯೂ ಅಥವಾ ಸಮುದ್ರ ಮತ್ತು ಶೇಖ್ ಝಾಯೆದ್ ರೋಡ್ ವ್ಯೂನ ಬೆಲೆ ಚದರ ಅಡಿಗೆ ೨,೮೫೦ ದಿರ‍್ಹಮ್‌ನಿಂದ ೩,೬೦೦ ದಿರ‍್ಹಮ್‌ವರೆಗಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಈ ಬೆಲೆ 2,600 ದಿರ‍್ಹಮ್‌ನಿಂದ 3,200 ದಿರ‍್ಹಮ್‌ವರೆಗಿತ್ತು.

ಬುರ್ಜ್ ಖಲೀಫದ ಅಪಾರ್ಟ್‌ಮಂಟ್‌ಗಳ ಖರೀದಿದಾರರ ಪೈಕಿ ಪ್ರಮುಖರೆಂದರೆ ಲಂಡನ್‌ನಲ್ಲಿ ನೆಲೆಸಿರುವ ಎನ್‌ಆರ್‌ಐ ಉದ್ಯಮಿ ರಾಜ್ ಕುಂದ್ರಾ, ಸ್ಥಳೀಯ ಉದ್ಯಮಿ ಬಿ.ಆರ್.ಶೆಟ್ಟಿ ಮತ್ತು ಇತ್ತೀಚೆಗೆ ಅಪಾರ್ಟ್‌ಮಂಟ್ ಖರೀದಿಸಿದ ಸಿಂಗಾಪುರದಲ್ಲಿ ನೆಲೆಸಿರುವ ಸ್ಪೈಸ್ ಗ್ರೂಪ್ ಅಧ್ಯಕ್ಷ ಬಿ.ಕೆ. ಮೋದಿ. ರಾಜ್ ಕುಂದ್ರಾ ಇಲ್ಲಿನ ಒಂದು ಅಪಾರ್ಟ್‌ಮಂಟನ್ನು ತನ್ನ ಹೆಂಡತಿ ಶಿಲ್ಪಾ ಶೆಟ್ಟಿಗೆ ಉಡುಗೊರೆ ನೀಡಿದ್ದಾರೆ.ಕಟ್ಟಡದ ಮಾಲಕರಾದ ಎಮ್ಮಾರ್ ಪ್ರಾಪರ್ಟೀಸ್ 2012ಕ್ಕೆ ಸೇವಾ ಶುಲ್ಕದಲ್ಲಿ ಹೆಚ್ಚಳ ಮಾಡದಿದ್ದರೂ, ಇಲ್ಲಿನ ಅಪಾರ್ಟ್‌ಮಂಟ್‌ಗಳ ಬೆಲೆ ವಿಶ್ವದ ಅತ್ಯಂತ ದುಬಾರಿ ಅಪಾರ್ಟ್ ಮಂಟ್‌ಗಳ ಪೈಕಿ ಒಂದಾಗಿದೆ ಎಂದು ಪರಿಣತರು ಅಂದಾಜಿಸುತ್ತಾರೆ.ಅಪಾರ್ಟ್‌ಮಂಟ್ ಮಾಲಕರು ಪ್ರಸ್ತುತ ಚದರ ಅಡಿಗೆ 55.01 ದಿರ‍್ಹಮ್ ಸೇವಾ ಶುಲ್ಕ ಪಾವತಿಸುತ್ತಿದ್ದಾರೆ.

2011 ಮತ್ತು 2010ರಲ್ಲಿ ಈ ಶುಲ್ಕ ಚದರ ಅಡಿಗೆ ಕ್ರಮವಾಗಿ 55 ದಿರ‍್ಹಮ್ ಮತ್ತು 52.77 ದಿರ‍್ಹಮ್‌ಗಳಷ್ಟು ಇತ್ತು. ಅರ್ಮಾನಿ ರೆಸಿಡೆನ್ಸಸ್‌ನ ಸೇವಾ ಶುಲ್ಕ ಅತ್ಯಧಿಕವಾಗಿದೆ. ಅಲ್ಲಿ ಚದರ ಅಡಿಗೆ 83.12 ದಿರ‍್ಹಮ್ ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಅಂದರೆ, 2,500 ಚದರಡಿ ಅಪಾರ್ಟ್‌ಮಂಟ್‌ನಿಂದ ವರ್ಷಕ್ಕೆ ಸೇವಾ ಶುಲ್ಕದ ರೂಪದಲ್ಲಿ 2,07,800 ದಿರ‍್ಹಮ್ ವಸೂಲಿ ಮಾಡಲಾಗುತ್ತಿದೆ.2011 ಮತ್ತು 2010ರಲ್ಲಿ ಸೇವಾ ಶುಲ್ಕ ಕ್ರಮವಾಗಿ ಚದರಡಿಗೆ 83.71 ದಿರ‍್ಹಮ್ ಮತ್ತು 78.63 ದಿರ‍್ಹಮ್ ಆಗಿತ್ತು.

 

 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್