ಮಾಸ್ಕೊ,ಆ.23: ಸಿರಿಯ ಬಿಕ್ಕಟ್ಟನ್ನು ನಿವಾರಿಸುವ ಸಂಬಂಧ ಅಲ್ಲಿನ ವಿಪಕ್ಷದೊಂದಿಗೆ ಮಾತುಕತೆ ನಡೆಸಲು ಸಿರಿಯ ಸರಕಾರ ಚಿಂತನೆ ನಡೆಸಿದೆ ಎಂದು ರಶ್ಯದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಸಿರಿಯದ ಸರ್ವ ನಾಗರಿಕರಿಗೆ ಸಮ್ಮತವಾಗುವ ರೀತಿಯಲ್ಲಿ ಪರಿಹಾರವೊಂದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಬಂಡುಕೋರರೊಂದಿಗೆ ಮಾತುಕತೆ ನಡೆಸಲು ಡಮಾಸ್ಕಸ್ ಸಿದ್ಧತೆ ನಡೆಸಿದೆ ಎಂದು ಮಂಗಳವಾರ ಮಾಸ್ಕೊದಲ್ಲಿ ರಶ್ಯದ ವಿದೇಶಾಂಗ ಸಚಿವ ಸರ್ಜೆಯಿ ಲಾವ್ರೊವ್‌ರನ್ನು ಭೇಟಿಯಾದ ವೇಳೆ ಸಿರಿಯದ ಉಪ ಪ್ರಧಾನಿ ಖಾದ್ರಿ ಜಮೀಲ್ ತಿಳಿಸಿದ್ದಾರೆ ಎಂದು ರಶ್ಯದ ವಿದೇಶಾಂಗ ಸಚಿವಾಲಯವನ್ನು ಉಲ್ಲೇಖಿಸಿ ‘ಕ್ಸಿನ್ಹುಆ’ ವರದಿ ಮಾಡಿದೆ. ಸುಮಾರು 18 ತಿಂಗಳುಗಳಿಂದ ಸಿರಿಯದಲ್ಲಿ ನೆಲೆಸಿರುವ ಪ್ರಕ್ಷುಬ್ಧತೆಯನ್ನು ಹೋಗಲಾಡಿಸುವ ಮಾರ್ಗೋಪಾಯಗಳ ಬಗ್ಗೆ ಉಭಯ ನಾಯಕರು ವಿಚಾರ ವಿನಿಯಮ ನಡೆಸಿರುವುದಾಗಿಯೂ ವರದಿ ವಿವರಿಸಿದೆ. “ಕೋಫಿ ಅನ್ನಾನ್ ಪ್ರಸ್ತಾಪಿತ ಆರು ಅಂಶಗಳ ಸಿರಿಯ ಶಾಂತಿಯೋಜನೆಯನ್ನು ಆಧರಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ಹಾಗೂ ಜಿನಿವಾ ಒಪ್ಪಂದಗಳಿಗೆ ಪರ್ಯಾಯವಾದ ಪರಿಹಾರ ಸೂತ್ರವೊಂದಿಲ್ಲ ಎಂದು ಉಭಯ ನಾಯಕರು ಒಪ್ಪಿಕೊಂಡಿರುವುದಾಗಿಯೂ ರಶ್ಯದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ವಿವರಿಸಿದೆ.
“ಕೋಫಿ ಅನ್ನಾನ್ ಪ್ರಸ್ತಾಪಿತ ಆರು ಅಂಶಗಳ ಸಿರಿಯ ಶಾಂತಿಯೋಜನೆಯನ್ನು ಆಧರಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ಹಾಗೂ ಜಿನಿವಾ ಒಪ್ಪಂದಗಳಿಗೆ ಪರ್ಯಾಯವಾದ ಪರಿಹಾರ ಸೂತ್ರವೊಂದಿಲ್ಲ ಎಂದು ಉಭಯ ನಾಯಕರು ಒಪ್ಪಿಕೊಂಡಿರುವುದಾಗಿಯೂ ರಶ್ಯದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ವಿವರಿಸಿದೆ.
ಸಿರಿಯಕ್ಕೆ ನೂತನವಾಗಿ ನೇಮಕಗೊಂಡಿರುವ ವಿಶ್ವಸಂಸ್ಥೆ ಹಾಗೂ ಅರಬ್‌ಲೀಗ್‌ನ ಜಂಟಿ ರಾಯಭಾರಿ ಅಲ್ ಅಖ್ದರ್ ಅಲ್ ಇಬ್ರಾಹೀಮಿಯವರು ಸಂಬಂಧಿತ ಕಾರ್ಯಯೋಜನೆಯನ್ನು ಮುಂದುವರಿಸಲಿದ್ದಾರೆ ಎಂಬ ಭಾವನೆ ತಮಗಿರುವುದಾಗಿ ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಮಾಸ್ಕಸ್: ಸೇನಾ ದಾಳಿಗೆ 31 ಬಲಿ
ಡಮಾಸ್ಕಸ್, ಆ.22: ಸಿರಿಯದ ಸೇನಾ ಪಡೆಗಳು ಬುಧವಾರ ರಾಜಧಾನಿ ಡಮಾಸ್ಕಸ್‌ನ ಎರಡು ಜಿಲ್ಲೆಗಳಲ್ಲಿ ನಡೆಸಿದ ಶೆಲ್ ದಾಳಿಗಳಿಗೆ ಕನಿಷ್ಠ 31 ಶಂಕಿತ ಬಂಡುಕೋರರು ಬಲಿಯಾಗಿದ್ದಾರೆ ಎಂದು ಮಾನವ ಹಕ್ಕು ಕಾರ್ಯಕರ್ತರು ತಿಳಿಸಿದ್ದಾರೆ. ಸಿರಿಯದಲ್ಲಿನ ಬಂಡುಕೋರರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ತಿಂಗಳು ಡಮಾಸ್ಕಸ್‌ನಲ್ಲಿ ನಡೆಸಿದ ದಾಳಿಯಲ್ಲಿ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಆಡಳಿತದ ಪಡೆಯೊಂದು ಪ್ರಾಬಲ್ಯ ಪಡೆದ ಬಳಿಕ ನಡೆಯುತ್ತಿರುವ ದಾಳಿಗಳಲ್ಲಿ ಇದೂ ಒಂದಾಗಿದೆ. ಸರಕಾರಿ ಪಡೆಗಳು ಸಿರಿಯದ ಉತ್ತರದ ಪಟ್ಟಣ ಅಲೆಪ್ಪೊ ಹಾಗೂ ರಾಷ್ಟ್ರದ ದಕ್ಷಿಣ, ಪೂರ್ವ ಹಾಗೂ ಮಧ್ಯಭಾಗದ ಪುಟ್ಟ ನಗರಗಳಲ್ಲೂ ಬಂಡುಕೋರರೊಂದಿಗೆ ಭೀಕರ ಕಾಳಗದಲ್ಲಿ ತೊಡಗಿವೆ ಎಂದು ವರದಿಗಳು ತಿಳಿಸಿವೆ.
ಬುಧವಾರ ನಸುಕಿನ ವೇಳೆ ಡಮಾಸ್ಕಸ್‌ನಲ್ಲಿರುವ ಆಡಳಿತ ಪಡೆಗಳು ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಶೆಲ್ ದಾಳಿ ನಡೆಸಿರುವುದಾಗಿ ಬ್ರಿಟನ್ ಮೂಲದ ‘ಸಿರಿಯನ್ ಒಬ್ಸರ್ವೇಟರಿ ಫಾರ್ ಹ್ಯೂಮನ್‌ರೈಟ್ಸ್’ ಮಾಧ್ಯಮಗಳಿಗೆ ತಿಳಿಸಿದೆ.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...