
ಯಮನ್ ಸನಾ, ಸೆ.11: ಅರೇಬಿಯನ್ ಪೆನಿನ್ಸು ಲಾದಲ್ಲಿರುವ ಅಲ್ ಖಾಯಿದಾ(ಎಕ್ಯೂಎಪಿ) ಗುಂಪಿನ ದ್ವಿತೀಯ ನಾಯಕನೆಂದು ಪರಿಗಣಿಸಲಾದ ಸಯೀದ್ ಅಲ್ ಶೆಹ್ರಿಯನ್ನು ಯಮನ್‌ನ ಸಶಸ್ತ್ರಪಡೆಗಳು ಹತ್ಯೆಗೈದಿರುವುದಾಗಿ ಯಮನ್ ಸರಕಾರ ವೆಬ್‌ಸೈಟೊಂದರಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಪೂರ್ವ ಯಮನ್‌ನ ಹದ್ರಾವೌತ್ ಪ್ರಾಂತದ ದುರ್ಗಮ ಪ್ರದೇಶವೊಂದರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸೌದಿ ರಾಷ್ಟ್ರೀಯನಾಗಿರುವ ಶೆಹ್ರಿಯನ್ನು ಇತರ ಆರು ಮಂದಿ ಉಗ್ರರೊಂದಿಗೆ ಹತ್ಯೆಗೈಯಲಾಯಿತು ಎಂದು ಯಮನ್‌ನ ರಕ್ಷಣಾ ಸಚಿವಾಲಯದ ವೆಬ್‌ಸೈಟ್ ತಿಳಿಸಿದೆ.
ವಿಮಾನ ಸಾರಿಗೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ತಾಣಗಳನ್ನು ಗುರಿಯಾಗಿಸಿ ದಾಳಿ ಸಂಚು ರೂಪಿಸಿತ್ತೆನ್ನಲಾಗಿರುವ ಎಕ್ಯೂಎಪಿಯನ್ನು ಗುರಿಯಾಗಿಸಿ ಅಮೆರಿಕ ಪಡೆ ಡ್ರೋನ್ ಕಾರ್ಯಾಚರಣೆ ನಡೆಸಿತ್ತು. ಎಕ್ಯೂಎಪಿಯು ಅಲ್ ಖಾಯಿದಾದ ಅತ್ಯಂತ ಅಪಾಯಕಾರಿ ಘಟಕ ಎಂದು ವಾಷಿಂಗ್ಟನ್ ಬಣ್ಣಿಸಿತ್ತು.

ಸಯೀದ್ ಅಲ್ ಶೆಹ್ರಿಯನ್ನು ಕಳೆದ ಬುಧವಾರ ಹತ್ಯೆಗೈಯಲಾಗಿದ್ದು, ಅದನ್ನು ಅಮೆರಿಕದ ಡ್ರೋನ್ ಪಡೆ ನಡೆಸಿತ್ತೆಂದು ಭಾವಿಸಲಾಗಿದೆ ಎಂದು ಯಮನ್‌ನ ಭದ್ರತಾ ಮೂಲ ಹೇಳಿಕೊಂಡಿದೆ. ಹತಗೊಂಡ ಇತರರಲ್ಲಿ ಇನ್ನೋರ್ವ ಸೌದಿ ಹಾಗೂ ಇರಾಕ್ ಮೂಲದ ವ್ಯಕ್ತಿಯೂ ಸೇರಿರುವುದಾಗಿ ಮೂಲಗಳು ತಿಳಿಸಿವೆ.
ಸಯೀದ್ ಅಲ್ ಶೆಹ್ರಿಯು ಗ್ವಾಂಟನಾಮೊ ಕೊಲ್ಲಿಯಲ್ಲಿದ್ದ ಅಮೆರಿಕದ ಬಂದಿಖಾನೆಯ ಮಾಜಿ ಕೈದಿಯಾಗಿದ್ದು, ಆತನನ್ನು 2007ರಲ್ಲಿ ಸೌದಿ ಅರೇಬಿಯವು ಉಗ್ರರಿಗಾಗಿ ಹಮ್ಮಿಕೊಂಡಿದ್ದ ಪುನರ್ವಸತಿ ಕಾರ್ಯಕ್ರಮದಡಿ ಬಿಡುಗಡೆಗೊಳಿಸಲಾಗಿತ್ತು. ಸಯೀದ್ ಅಲ್ ಶೆಹ್ರಿ ಹತನಾಗಿರುವುದಾಗಿ ಅಮೆರಿಕದ ಅಧಿಕಾರಿಗಳೂ ಹೇಳಿಕೆಯೊಂದರಲ್ಲಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದು, ಈ ಘಟನೆಯಲ್ಲಿ ಅಮೆರಿಕದ ಸಹಭಾಗಿತ್ವದ ಬಗ್ಗೆ ಯಾವುದೇ ಖಚಿತ ವಿವರ ನೀಡಿಲ್ಲವೆನ್ನಲಾಗಿದೆ.
ಅಲ್ ಖಾಯಿದಾ ಭೀತಿ ಇನ್ನೂ ಜೀವಂತ: ಲಿಯಾನ್ ಪನೆಟ್ಟ
ವಾಷಿಂಗ್ಟನ್,ಸೆ.11: ತನ್ನ ಉನ್ನತ ನಾಯಕತ್ವವು ಅವಸಾನಗೊಂಡ ಬಳಿಕವೂ ಅಲ್ ಖಾಯಿದಾ ಒಂದು ಬೆದರಿಕೆಯಾಗಿಯೇ ಮುಂದುವರಿದಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಿಯಾನ್ ಪನೆಟ್ಟ ಅಭಿಪ್ರಾಯಿಸಿದ್ದಾರೆ.
‘‘ಅಲ್ ಖಾಯಿದಾದ ಕೆಲವು ಅತ್ಯಂತ ಪ್ರಮುಖ ನಾಯಕರನ್ನು ನಾವು ಅಂತ್ಯಗೊಳಿಸಿದ್ದೇವೆ. ಅಲ್ ಖಾಯಿದಾವು ಮತ್ತೆ ಅಮೆರಿಕದ ಮೇಲೆ 9/11 ಮಾದರಿಯ ದಾಳಿ ನಡೆಸುವ ಶಕ್ತಿ ಹೊಂದಿದೆ ಎಂದು ನನಗನಿಸುವುದಿಲ್ಲ.
ಆದರೂ ಅಲ್ ಖಾಯಿದಾ ಭಯೋತ್ಪಾದನೆಯು ಇನ್ನೂ ಉಳಿದುಕೊಂಡಿದೆ. ಅದಕ್ಕಾಗಿಯೇ ನಾವು ಅದರ ವಿರುದ್ಧ ಯಮನ್, ಸೊಮಾಲಿಯ, ಉತ್ತರ ಆಫ್ರಿಕ ಹಾಗೂ ಇತರೆಡೆಗಳಲ್ಲೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದೇವೆ’’ ಎಂದವರು ವಿವರಿಸಿದ್ದಾರೆ.
ಕಾರ್‌ಬಾಂಬ್ ದಾಳಿ: ಯಮನ್‌ನ ರಕ್ಷಣಾ ಸಚಿವ ಪಾರು
ಸನಾ, ಸೆ.11: ಯಮನ್‌ನ ರಕ್ಷಣಾ ಸಚಿವರನ್ನು ಗುರಿಯಾಗಿಸಿ ದುಷ್ಕರ್ಮಿಗಳು ನಡೆಸಿದ ಭೀಕರ ಕಾರ್‌ಬಾಂಬ್ ದಾಳಿಗೆ ಕನಿಷ್ಠ 13 ಮಂದಿ ಅಸುನೀಗಿದ್ದು, ರಕ್ಷಣಾ ಸಚಿವರು ಅಪಾಯದಿಂದ ಪಾರಾಗಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಸಂಪುಟ ಸಭೆಯಲ್ಲಿ ಹಾಜರಾಗಲು ಮಂಗಳವಾರ ರಕ್ಷಣಾ ಸಚಿವ ಮೇಜರ್ ಜನರಲ್ ನಾಸಿರ್ ಅಹ್ಮದ್ ಬೆಂಗಾವಲು ಪಡೆಯೊಂದಿಗೆ ತೆರಳುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಭದ್ರತಾ ಅಧಿಕಾರಿಗಳು ವಿವರಿಸಿದ್ದಾರೆ. ರಕ್ಷಣಾ ಸಚಿವರು ಯಾವುದೇ ಗಾಯಗಳಿಲ್ಲದೆ ಪಾರಾಗಿರುವರಾದರೂ ಅವರ ಜೊತೆಗಿದ್ದ ಎಂಟು ಮಂದಿ ಭದ್ರತಾ ಅಧಿಕಾರಿಗಳು ಜೀವ ಕಳೆದುಕೊಂಡಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿರುವ ಇತರ ಐದು ಮಂದಿ ಸ್ಥಳೀಯ ನಾಗರಿಕರಾಗಿದ್ದಾರೆ ಎಂದು ವರದಿ ತಿಳಿಸಿದೆ. ಮಂಗಳವಾರ ನಡೆದ ಈ ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲವೆನ್ನಲಾಗಿದೆ.
ಅಲ್ ಖಾಯಿದಾದ ದ್ವಿತೀಯ ಶ್ರೇಣಿಯ ನಾಯಕನೆನಿಸಿಕೊಂಡಿದ್ದ ಸಯೀದ್ ಅಲ್ ಶಾಹಿರಿ ಹತ್ಯೆಯನ್ನು ಯಮನ್ ಸರಕಾರ ಪ್ರಕಟಿಸಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.
ಕೊನೆಗೂ 17 ವರ್ಷದ ಜೆಡಿಯು-ಬಿಜೆಪಿ ನಡುವಿನ ಮೈತ್ರಿ ಮುರಿದಿದೆ. ನರೇಂದ್ರ ಮೋದಿಯ ಕೈಗೆ ಬಿಜೆಪಿಯ ನೇತೃತ್ವವನ್ನು ಕೊಟ್ಟ ಬೆನ್ನಿಗೇ ಇದು ನಡೆದಿದ ...
Click here to post your views ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...
1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...