mail-img print-img

ದುಬೈ: ರಸ್ತೆಯಲ್ಲಿ ಚಲಿಸುವ ರೈಲು: ಹೊಸ ಸಂಚಾರಿ ಸಂಕೇತ ಅಳವಡಿಸಲು ಸಿದ್ಧತೆ

ಮಂಗಳವಾರ - ಜನವರಿ -14-2014

ದುಬೈ, ಜ.13: ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಅನುಕೂಲಕರವನ್ನಾಗಿಸಲು ಈ ವರ್ಷಾಂತ್ಯದ ವೇಳೆಗೆ ದುಬೈ ಟ್ರಾಮ್(ರಸ್ತೆ ರೈಲುಬಂಡಿ) ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರವು ಶೀಘ್ರದಲ್ಲೇ ಹೊಸ ಸಂಚಾರಿ ಸಂಕೇತಗಳನ್ನು ಅಳವಡಿಸಲು ಸಿದ್ಧತೆ ನಡೆಸಿದೆ.

ಹೆಚ್ಚಿನ ಹೊಸ ಸಂಚಾರಿ ಸಂಕೇತಗಳು ಟ್ರಾಮ್ ಹಾಗೂ ರೈಲುಮಾರ್ಗಗಳಿಗೆ ಸಂಬಂಧಿಸಿದ್ದರೆ, ಕೆಲವು ಸಂಕೇತಗಳು ಸ್ಪೀಡ್‌ಬ್ರೇಕರ್ ಹಾಗೂ ಪಾದಚಾರಿ ದಾಟುಗಳಿಗೆ ಸಂಬಂಧಿಸಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ದುಬೈ ಟ್ರಾಮ್ ಇತರ ವಾಹನಗಳೊಂದಿಗೆ ರಸ್ತೆಯನ್ನು ಹಂಚಿಕೊಳ್ಳಲಿರುವ ಹಿನ್ನೆಲೆಯಲ್ಲಿ ರಸ್ತೆ ಸಂಚಾರವನ್ನು ನಿಯಂತ್ರಿಸಲು ಹೊಸ ಸಂಕೇತಗಳನ್ನು ಪರಿಚಯಿಸುವುದು ಅತ್ಯಂತ ಅಗತ್ಯವಾಗಿದೆ. ರಸ್ತೆ ರೈಲುಬಂಡಿ(ಟ್ರಾಮ್)ಗಳ ಜೊತೆಗೆ ರಸ್ತೆಯಲ್ಲಿ ವಾಹಗಳನ್ನು ಹೇಗೆ ಚಲಾಯಿಸಬೇಕೆಂಬುದರ ಬಗ್ಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನವೊಂದನ್ನು ನಾವು ನಡೆಸುತ್ತಿದ್ದೇವೆ’’ ಎಂದು ಇಲ್ಲಿನ ರಸ್ತೆ ಹಾಗೂ ಸಾರಿಗೆ ಪ್ರಾಧಿಕಾರ ಪರವಾನಿಗೆ ನೀಡಿಕೆ ಘಟಕದ ಸಿಇಒ ಅಹ್ಮದ್ ಹಾಶಿಂ ಬೆಹ್ರೂಝಿಯನ್ ತಿಳಿಸಿದ್ದಾರೆ.

ರಸ್ತೆಗಳ ಬಲಪಾರ್ಶ್ವದಲ್ಲಿ ಟ್ರಾಮ್‌ಗಳು ಸಂಚರಿಸಲಿದ್ದು, ಅವುಗಳು ಛೇದಕ ರಸ್ತೆಗಳಲ್ಲಿ ಹಾದುಹೋಗುವಾಗ ಎಲ್ಲ ಕಡೆಗಳಿಂದ ಬರುವ ವಾಹನ ಸಂಚಾರವನ್ನು ನಿಲುಗಡೆಗೊಳಿಸಬೇಕಾಗುತ್ತದೆ. ಟ್ರಾಮ್ ಹಾಗೂ ಇತರ ವಾಹನಗಳು ಸಂಚಾರ ನಿಯಮಗಳನ್ನು ಹೇಗೆ ಒಂದಕ್ಕೊಂದು ಸಹಕಾರಿಯಾಗಿ ಪಾಲಿಸಬೇಕೆಂಬುದರ ಬಗ್ಗೆ ವಿವರ ನೀಡಲು ಹೊಸ ಅಭಿಯಾನವೊಂದನ್ನು ಮುಂದಿನ ಕೆಲವೇ ವಾರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಾತ್ರವಲ್ಲದೆ, ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ಸಹಕಾರಿಯಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

ಇನ್ನು ಮುಂದೆ ಚಾಲನಾ ತರಬೇತಿ ನೀಡುವ ಸಂದರ್ಭದಲ್ಲೂ ರಸ್ತೆ ರೈಲುಗಳ ಜೊತೆಗೆ ಇತರ ವಾಹನಗಳು ಹೇಗೆ ಸ್ಥಳಹೊಂದಾಣಿಕೆ ಮಾಡಿಕೊಳ್ಳಬೇಕೆಂಬುದರ ಬಗೆಗಿನ ನಿಯಮಾವಳಿಯನ್ನು ಪರಿಚಯಿಸಲಾಗುವುದು ಎಂದವರು ವಿವರಿಸಿದ್ದಾರೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   ಸಂಪಾದಕೀಯ

ಶಿವಸೇನೆ-ಬಿಜೆಪಿ ಜಗಳ ಉಂಡು ಮಲಗುವವರೆಗೆ

ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿಗಳ ನಡುವಿನ ಜಗ್ಗಾಟ ತೀವ್ರರೂಪವನ್ನು ಮುಟ್ಟಿದೆ. ಭಾರತೀಯ ಜನತಾ ಪಕ್ಷಕ್ಕೆ 119ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಕೊಡ ...


ನಿಮ್ಮ ಅನಿಸಿಕೆ

postClick here to post your views
EPAPER
access

ರ‍್ಯಾಗಿಂಗ್ ಕುರಿತು ಒಂದಿಷ್ಟು...

ರ‍್ಯಾಗಿಂಗ್ ಸಮಸ್ಯೆಗೆ ಒಂದು ಇತಿಹಾಸವಿದೆ; ಇದು ವಸಾಹತುಶಾಹಿ ಕಾಲದಲ್ಲಿ ಇಂಗ್ಲೆಂಡ್‌ನಲ್ಲಿ ಇದ್ದಂತಹ ...


- ಸಿ.ಎನ್.ರಾಮಚಂದ್ರನ್

ಮಿತ್ರ ಪಕ್ಷಗಳಿಂದ ಸೀಟಿಗಾಗಿ ಕಚ್ಚಾಟ! ದೋಸ್ತಿ ಖತಂ!?

img7

ಮಹಾರಾಷ್ಟ್ರದ ಮಹಾಸಮರದಲ್ಲಿ ಮಿತ್ರ ಪಕ್ಷಗಳ ಹೊ-ಕೈ
‘ರಾಜಕೀಯ ರಂಗ’ ಎನ್ನುವುದು ಒಂದೊಮ್ಮೆ ಸಮಾಜ ...


‘ಮುಖ್ಯವಾಹಿನಿಗೆ ಬರಲು ಬಯಸಿದರೂ, ದ್ರೋಹಿಗಳಾಗಲು ಬಯಸಿಲ್ಲ’

ಸರಕಾರದ ಶರಣಾಗತಿ ಪ್ಯಾಕೇಜಿಗೆ ಪ್ರತಿಕ್ರಿಯಿಸಿ ನಾವು ಪತ್ರಿಕಾ ಹೇಳಿಕೆ ಕೊಟ್ಟಿರುವುದಾಗ ...


- -ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ಮಾಜಿ ನಕ್ಸಲ್ ನಾಯಕರು

ಇವರ ದೇಶನಿಷ್ಠೆ ಪ್ರಶ್ನಾತೀತವಲ್ಲ

ಪ್ರಧಾನಿ ನರೇಂದ್ರ ಮೋದಿ ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ. ಆದರೆ ಅವರು ಹೇಳಲಿ ಬಿಡಲಿ ಮುಸಲ್ಮಾನರ ...


ಕಾಶ್ಮೀರ ಪ್ರವಾಹಕ್ಕೆ ಮಾನವನ ದುರಾಸೆ ಕಾರಣವಾಯಿತೇ?

img7

ಲೇ: ಮಾರಿಯಾನ್ ಡಿ ನಝರೆತ್
ಕಂದುಬಣ್ಣದ ನೆರೆನೀರಿನ ದೈತ್ಯ ಅಲೆಗಳು, ಜೀಲಂ ನದಿಯ ದಂಡೆಯಲ್ಲ ...


ಸ್ಮಾರಕದ ಹೆಸರಲ್ಲಿ ರಾಜಕೀಯ?

img7

ಮಾಜಿ ಸಚಿವ ಅಜಿತ್ ಸಿಂಗ್ ವಾಸಿಸುತ್ತಿರುವ ನಿವಾಸವನ್ನು ಮಾಜಿ ಪ್ರಧಾನಿ ಚರಣ್ ಸಿಂಗ್‌ರ ಹೆಸರ ...


- ಪತ್ರಕರ್ತ

ಕಾಶ್ಮೀರ ಪ್ರವಾಹಕ್ಕೆ ಉಗ್ರರೇ ಕಾರಣ...

img7

ಬೆಳಗ್ಗಿನ ದಿನಪತ್ರಿಕೆ ಹಿಡಿದುಕೊಂಡು ಎಂದಿನಂತೆ ಶೌಚ ಕರ್ಮಗಳಿಗೆ ಪತ್ರಕರ್ತ ಎಂಜಲು ಕಾಸಿ ಹ ...


- ಚೇಳಯ್ಯ

ಮಕ್ಕಳಿಗಾಗಿ ಸೇಫ್‌ಸರ್ಚ್

img7

ಇಂಟರ್‌ನೆಟ್ ಸಂಪರ್ಕವಿರುವ ಕಂಪ್ಯೂಟರುಗಳು ಮನೆಗೆರಡರಂತೆ, ಕೆಲವೊಮ್ಮೆ ತಲೆಗೊಂದರಂತೆ ನಮ್ಮ ಮನೆಯ ...


- ಸಂಗೀತ