ಕೈರೊ, ಮೇ 2: ಈಜಿಪ್ಟ್‌ನ ರಾಜಧಾನಿ ಕೈರೊದಲ್ಲಿರುವ ರಕ್ಷಣಾ ಸಚಿವಾಲಯದ ಮುಂದೆ ಸರಕಾರದ ವಿರುದ್ಧ ಪ್ರತಿಭಟನಾ ನಿರತರಾಗಿದ್ದ ಬಂಡುಕೋರರ ಮೇಲೆ ರಾಷ್ಟ್ರದ ಸೇನಾಡಳಿಗಾರರ ಶಂಕಿತ ಬೆಂಬಲಿಗರು ನಡೆಸಿದ ಭೀಕರ ದಾಳಿಯ ಪರಿಣಾಮ ಬುಧವಾರ ಕನಿಷ್ಠ ಹನ್ನೊಂದು ಮಂದಿ ಅಸುನೀಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈಜಿಪ್ಟ್‌ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವಂತೆಯೇ ಸೇನಾಡಳಿತ ಹಾಗೂ ಬಂಡುಕೋರರ ನಡುವೆ ಸಂಘರ್ಷ ಭುಗಿಲೆದ್ದಿರುವುದಾಗಿ ವರದಿಗಳು ತಿಳಿಸಿವೆ.
ಸರ್ವಾಧಿಕಾರಿ ಹುಸ್ನಿ ಮುಬಾರಕ್ ಬಳಿಕ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಸೇನಾಡಳಿತವನ್ನು ಕೊನೆಗೊಳಿಸುವಂತೆ ಆಗ್ರಹಿಸಿ ಬಂಡುಕೋರರು ರಕ್ಷಣಾ ಸಚಿವಾಲಯದ ಹೊರಭಾಗದಲ್ಲಿ ಕೆಲವು ದಿನಗಳಿಂದ ಸತತ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್ಚಿನ ಪ್ರತಿಭಟನಕಾರರು ಇತ್ತೀಚೆಗೆ ಅನರ್ಹಗೊಂಡಿರುವ ಅಧ್ಯಕ್ಷೀಯ ಅಭ್ಯರ್ಥಿ ಹಾಝಿಂ ಸಲಾಹ್ ಅಬೂ ಇಸ್ಮಾಯೀಲ್ ಬೆಂಬಲಿಗರಾಗಿದ್ದಾರೆ ಎನ್ನಲಾಗಿದೆ.
ಇಸ್ಮಾಯೀಲ್‌ರ ತಾಯಿ ಅಮೆರಿಕ ಹಾಗೂ ಈಜಿಪ್ಟ್ ಎರಡೂ ರಾಷ್ಟ್ರಗಳ ನಾಗರಿಕತ್ವ ಪಡೆದಿರುವ ಕಾರಣಕ್ಕಾಗಿ ಅವರನ್ನು ಚುನಾವಣಾ ಕಣದಿಂದ ನಿಷೇಧಿಸಲಾಗಿದೆ. ಈ ಪ್ರಕ್ರಿಯೆಯು ಚುನಾವಣಾ ನಿಯಮಾವಳಿಯನ್ವಯ ಮಾಡಲಾಗಿದೆ ಎಂದು ಚುನಾವಣಾ ಮಂಡಳಿ ಹೇಳಿಕೊಂಡಿದೆ.
ರಾಷ್ಟ್ರದಲ್ಲಿ ರಕ್ತಪಾತವನ್ನು ನಿಲ್ಲಿಸುವಲ್ಲಿ ಸೇನಾಡಳಿತವು ವಿಫಲಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಚುನಾವಣಾ ಅಭಿಯಾನವನ್ನು ರದ್ದುಗೊಳಿಸುವುದಾಗಿ ಅಧ್ಯಕ್ಷೀಯ ಅಭ್ಯರ್ಥಿಗಳನೇಕರು ಘೋಷಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈಜಿಪ್ಟ್‌ನಲ್ಲಿ ಪ್ರಜಾಪ್ರಭುತ್ವ ಮಾದರಿ ಸರಕಾರದ ನಿರ್ಣಾಯಕ ಹಂತವಾಗಿರುವ ಅಧ್ಯಕ್ಷೀಯ ಚುನಾವಣೆಯು ಮೇ 23 ಹಾಗೂ 24ರಂದು ನಡೆಯಲಿದೆ. 2012ರ ಜುಲೈ ಒಂದರೊಳಗೆ ನಾಗರಿಕ ಸರಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸುವುದಾಗಿ ಈಗಾಗಲೇ ಸೇನಾಡಳಿತ ಭರವಸೆ ನೀಡಿದೆ ಎಂದೂ ವರದಿ ತಿಳಿಸಿದೆ.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...