ವಾಷಿಂಗ್ಟನ್, ಮೇ 2: ಇರಾನ್ ಹಾಗೂ ಸಿರಿಯ ತಮ್ಮ ವಿರುದ್ಧದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವಲ್ಲಿ ನೆರವಾಗುವ ವಿದೇಶಿ ಸಂಸ್ಥೆಗಳು, ಬ್ಯಾಂಕ್‌ಗಳು ಅಥವಾ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ರಾಷ್ಟ್ರದ ಹಣಕಾಸು ಇಲಾಖೆಗೆ ಅಧ್ಯಕ್ಷ ಒಬಾಮ ನೀಡಿದ್ದಾರೆ. ಈ ನೂತನ ಕಾರ್ಯ ನಿರ್ವಹಣಾ ಆದೇಶವು ಅಮೆರಿಕದ ಹಣಕಾಸು ಇಲಾಖೆಗೆ ಹೆಚ್ಚಿನ ಅಧಿಕಾರವನ್ನು ನೀಡಿದಂತಾಗಿದೆ.
ಇದರನ್ವಯ ಇರಾನ್ ಹಾಗೂ ಸಿರಿಯ ತಮ್ಮ ವಿರುದ್ಧದ ನಿರ್ಬಂಧಗಳಿಂದ ನುಣುಚಿಕೊಳ್ಳುವಲ್ಲಿ ನೆರವಾಗುವ ವಿದೇಶಿ ಶಕ್ತಿಗಳನ್ನು ಪತ್ತೆ ಹಚ್ಚುವ ಹಾಗೂ ಅಂತಹ ಹಣಕಾಸು ಹಾಗೂ ವಾಣಿಜ್ಯ ವ್ಯವಸ್ಥೆಗಳು ಯಾವುದೇ ರೀತಿಯಿಂದ ಅಮೆರಿಕದ ಹಣಕಾಸು ಇಲಾಖೆಯ ಸಂಪರ್ಕವನ್ನು ಹೊಂದುವುದನ್ನು ನಿಷೇಧಿಸುವ ಅಧಿಕಾರವನ್ನು ಆದೇಶದಲ್ಲಿ ನೀಡಲಾಗಿದೆ.
ಸಿರಿಯ ಹಾಗೂ ಇರಾನ್‌ಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳನ್ನು ತಪ್ಪಿಸುವಲ್ಲಿ ಯತ್ನಿಸುವ ಯಾವುದೇ ಶಕ್ತಿಗಳನ್ನು ಮುಂದಿನ ಅನಾಹುತಗಳಿಗೆ ಹೊಣೆಯನ್ನಾಗಿ ಪರಿಗಣಿಸಲಾಗುವುದಲ್ಲದೆ ಅವುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಅಮೆರಿಕದ ಭಯೋತ್ಪಾದನೆ ನಿಗ್ರಹ ಹಾಗೂ ಬೇಹುಗಾರಿಕೆ ವಿಭಾಗದ ಅಧೀನ ಕಾರ್ಯದರ್ಶಿ ಡೇವಿಡ್ ಕೊಹೆನ್ ಎಚ್ಚರಿಸಿದ್ದಾರೆ.
ಇರಾನ್ ಹಾಗೂ ಸಿರಿಯದೊಂದಿಗೆ ವ್ಯವಹಾರ ನಡೆಸುವ ವಿದೇಶಿ ಕಂಪೆನಿಗಳಿಗೆ ಅಮೆರಿಕದಲ್ಲಿ ವ್ಯಾಪಾರವನ್ನು ನಡೆಸಲು ಅವಕಾಶ ನಿರಾಕರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಕಳಂಕಿತರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಭೇಷ್ ಅನಿಸಿಕೊಂಡ ಸಿದ್ದು, ಖಾತೆ ಹಂಚಿಕೆಯಲ್ಲ ...
ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...