ಅಮ್ಮಾನ್, ಮೇ 10: ರಾಷ್ಟ್ರದಲ್ಲಿ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಉತ್ತೇಜಿಸುವ ಕಾನೂನೊಂದನ್ನು ಜೋರ್ಡಾನ್ ಸಂಸತ್ತು ಅಂಗೀಕರಿಸಿದೆ. ಜೋರ್ಡಾನ್‌ನಲ್ಲಿ ಈ ವರ್ಷಾಂತ್ಯದ ವೇಳೆಗೆ ಚುನಾವಣೆ ನಡೆಯಲಿರುವ ಸಂದರ್ಭದಲ್ಲೇ ಜೋರ್ಡಾನ್‌ನ ದೊರೆ ಎರಡನೆ ಅಬ್ದುಲ್ಲಾರು ಪ್ರಕಟಿಸಿರುವ ಪ್ರಮುಖ ಸುಧಾರಣೆಗಳಲ್ಲಿನ ಒಂದು ಕ್ರಮವು ಇದೀಗ ಕಾರ್ಯರೂಪಕ್ಕೆ ಬಂದಂತಾಗಿದೆ. ‘‘ರಾಷ್ಟ್ರವು ಪ್ರಸಕ್ತ ವರ್ಷದಲ್ಲಿ ತನ್ನ ಭವಿಷ್ಯದ ಬಗೆಗಿನ ಐತಿಹಾಸಿಕ ಅವಕಾಶವನ್ನು ಪಡೆಯಲಿದೆ’’ ಎಂದು ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ದೊರೆ ಅಬ್ದುಲ್ಲಾ ತಿಳಿಸಿದ್ದಾರೆ. ನ್ಯಾಯಯುತ ಹಾಗೂ ಪಾರದರ್ಶಕ ಸಂಸದೀಯ ಚುನಾವಣೆಯನ್ನು ಖಾತರಿಪಡಿಸುವ ಬಗ್ಗೆಯೂ ಅವರು ಭರವಸೆ ನೀಡಿದ್ದಾರೆ. ರಾಜಕೀಯ ವೌಲ್ಯಗಳನ್ನು ಆಧರಿಸಿದ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನೂತನ ಚುನಾವಣಾ ಕಾನೂನು ಒದಗಿಸಿಕೊಡಲಿದೆ.
ಈ ಮೊದಲಿನ ವ್ಯವಸ್ಥೆಯ ಪ್ರಕಾರ ಬುಡಕಟ್ಟುಗಳನ್ನು ಆಧರಿಸಿದ ಹಲವು ಸಣ್ಣ ಪಕ್ಷಗಳ ರಚನೆಗೆ ಅವಕಾಶ ಕಲ್ಪಿಸಲಾಗಿತ್ತು. ಹೊಸ ಕಾನೂನಿನಂತೆ ಚುನಾವಣೆಗೆ ರಾಷ್ಟ್ರದ ಆಂತರಿಕ ನಿಧಿಯಿಂದ ಖರ್ಚು ಮಾಡಬೇಕಾಗುತ್ತದೆಯಲ್ಲದೆ, ಅದು ಪಕ್ಷಗಳು ವಿದೇಶಿ ನೆರವನ್ನು ಪಡೆಯುವುದನ್ನು ನಿರ್ಬಂಧಿಸುತ್ತದೆ. ರಾಜಕೀಯ ಪಕ್ಷಗಳ ಚಲನವಲನ ಹಾಗೂ ಹಣಕಾಸು ವ್ಯವಹಾರದ ದಾಖಲೆಗಳನ್ನು ಪರಿಶೀಲಿಸಲು ಸರಕಾರಕ್ಕೆ ಅಧಿಕಾರ ನೀಡುವುದು ಸೇರಿದಂತೆ ಇದೇ ರೀತಿಯ ಹಲವು ನಿರ್ಬಂಧಗಳನ್ನು ನೂತನ ಕಾನೂನಿನನ್ವಯ ರದ್ದುಪಡಿಸಲಾಗಿದೆ. ರಾಷ್ಟ್ರದಲ್ಲಿ ಇದೊಂದು ಪ್ರಗತಿಯ ಹೆಜ್ಜೆಯಾಗಿದೆ ಎಂದು ಪ್ರಮುಖ ವಿಪಕ್ಷ ಮುಸ್ಲಿಂ ಬ್ರದರ್‌ಹುಡ್ ನೂತನ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...
Click here to post your views ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...
ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...