ಶಿವಾಜಿ ಸಮಾಜವಾದಿಯೇ?
mail-img print-img

ಶಿವಾಜಿ ಸಮಾಜವಾದಿಯೇ?

- ಬಿ.ದಾಮೋದರ ಭಟ್
ಬುಧವಾರ - ಆಗಸ್ಟ್ -22-2012

ಬೆಳ್ತಂಗಡಿ ಸಾಮ್ರಾಟ ಶಿವಾಜಿ ಸಮಾಜವಾದಿಯೇ, ಚರಿತ್ರೆಯನ್ನು ಅಭ್ಯಸಿಸಿದರೆ ನಿಜಕ್ಕೂ ಆಧುನಿಕ ಭಾರತದ ಮೊದಲ ಸಮಾಜವಾದಿ ಶಿವಾಜಿಯೆಂದೇ ಹೇಳಬೇಕಾಗುತ್ತದೆ. ಶೂದ್ರಾತಿ ಶೂದ್ರ ಸಮುದಾಯದಲ್ಲಿ ಹುಟ್ಟಿ, ಬುಡಗಟ್ಟು ಜನರನ್ನು ಹಿಂದುಳಿದ ವರ್ಗದ ಜನರನ್ನು, ಮುಸ್ಲಿಮರನ್ನು ಒಗ್ಗೂಡಿಸಿ, ಸೈನ್ಯಕಟ್ಟಿ ಹಿಂದೂ ಪಾಳೆಗಾರರ ವಿರುದ್ಧ ಮಾತ್ರವಲ್ಲದೇ ಮೊಗಲ ಸಾಮ್ರಾಟ ಔರಂಗಜೇಬನ ವಿರುದ್ಧವು ಯುದ್ಧವನ್ನು ಮಾಡುವ ಮೂಲಕ ಸಿಂಹ ಘರ್ಜನೆ ಮಾಡಿದ ಶಿವಾಜಿಯನ್ನು ಹಿಂದೂ ರಾಷ್ಟ್ರ ಕಟ್ಟಬೇಕೆಂದು ಹೋರಾಟ ನಡೆಸಿದ ಹಿಂದೂವಾದಿಯೆಂದು ಸಂಘ ಪರಿವಾರ ಬಿಂಬಿಸುತ್ತಿರುವುದು ದೇಶದ ಜನರನ್ನು ತಪ್ಪುದಾರಿಗೆಳೆಯುವ ವಿಷಯವಲ್ಲದೇ ಮತ್ತೇನು ಅಲ್ಲ. ಶಿವಾಜಿಯ ಸೈನ್ಯದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಮುಸ್ಲಿಂ ಪಠಾಣ್ ಸೈನಿಕರಿದ್ದರು. ಮಾತ್ರವಲ್ಲ ಶಿವಾಜಿಯ ಫಿರಂಗಿದಳದ ಮುಖ್ಯಸ್ಥ ಇಬ್ರಾಹಿಂ ಖಾನ್, ಶಿವಾಜಿಯ ನೌಕಾದಳದಲ್ಲಿ ಅತೀ ಹೆಚ್ಚು ಮುಸ್ಲಿಮರು ಇದ್ದು, ನೌಕಾದಳದ ನಾವಿಕರನ್ನಾಗಿ ಮುಸ್ಲಿಮರನ್ನು ಶಿವಾಜಿ ನೇಮಿಸುತ್ತಿದ್ದರು. ನೌಕಾದಳದಲ್ಲಿ ಬೆಸ್ತರು ಅಧಿಕ ಸಂಖ್ಯೆಯಲ್ಲಿ ಇರುತ್ತಿದ್ದರು. ಯುದ್ಧದಲ್ಲಿ ಕಾಲು ಕಳೆದುಕೊಂಡ ಮುಸ್ಲಿಮ್ ಯೋಧನಿಗೆ ಸ್ವಂತ ಮಗಳನ್ನು ಕೊಟ್ಟು ಮದುವೆಯನ್ನು ಮಾಡಿಕೊಟ್ಟ ಶಿವಾಜಿಯಲ್ಲಿ ಮಾನವೀಯ ಮೌಲ್ಯವನ್ನು, ಸೌಹಾರ್ಧತೆಯನ್ನು ಕಾಣಬಹುದು.

ಶಿವಾಜಿಯ ಕಡು ವೈರಿ ಔರಂಗಜೇಬನ ಸೈನ್ಯದಲ್ಲೂ ಮೂವತ್ತು ಸಾವಿರಕ್ಕೂ ಅಧಿಕ ರಜಪೂತ ಸೈನಿಕರಿದ್ದರು. ಶಿವಾಜಿ ಮತ್ತು ಔರಂಗಜೇಬನ ನಡುವೆ ಆಗಲಿ ಅಥವಾ ಯಾವುದೇ ಮುಸ್ಲಿಮ್ ಮತ್ತು ಹಿಂದೂ ರಾಜರ ನಡುವೆ ಆಗಲಿ ರಾಜಕೀಯ ಸಂಘರ್ಷವಿತ್ತೇ ವಿನಹ ಧಾರ್ಮಿಕ ಸಂಘರ್ಷ ಎಂದೂ ನಡೆಯಲಿಲ್ಲ. ರಾಜ್ಯ ವಿಸ್ತರಣೆ, ಭೂಮಿ, ಅಧಿಕಾರ, ಸ್ವಾಮಿನಿಷ್ಠೆ ಮಾತ್ರವೇ ಮುಖ್ಯವಾಗಿದ್ದ ಕಾಲವದು. ಪಾಳೇಗಾರಿಕೆ, ಭೂಮಾಲಿಕ ಪದ್ಧತಿಯನ್ನು ಹುಟ್ಟಿ ಹಾಕಿದ ಶಿವಾಜಿ, ಮಧ್ಯವರ್ತಿ ಭೂಮಾಲಿಕರ ಶೋಷಣೆ, ದಬ್ಬಾಳಿಕೆ, ದೌರ್ಜನ್ಯವನ್ನು ತಡೆಗಟ್ಟಲು ಅಧಿಕಾರಿಗಳನ್ನು ನೇಮಿಸಿದರು.

ಬರಗಾಲ ಮತ್ತು ಮಳೆಯ ಅತಿವೃಷ್ಟಿಯಿಂದ ಬೆಳೆ ನಾಶವಾದರೆ, ಸರಕಾರದಿಂದ ಪರಿಹಾರ ಧನವನ್ನು ಆಹಾರ ಧಾನ್ಯಗಳನ್ನು ಕೊಡುವ ಮುಖಾಂತರ ಸಮಾಜವಾದಿ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ತಂದದ್ದು ಇವತ್ತಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಇತ್ತ ಭೂಮಾಲಿಕತ್ವವನ್ನು ಕಳೆದುಕೊಂಡ ಪಾಳೇಗಾರರಾದ ಕ್ಷತ್ರೀಯ, ಬ್ರಾಹ್ಮಣ, ವೈಶ್ಯ ಸಮುದಾಯಗಳ ಮನುವಾದಿಗಳು ಹೇಗಾದರೂ ಮಾಡಿ ಶಿವಾಜಿಯನ್ನು ಮುಗಿಸಬೇಕೆಂದು, ಶಿವಾಜಿಯ ರಜಪೂತ ವೈರಿಯಾದ ಮಧ್ಯಪ್ರದೇಶದ ರಾಜ ಜಯಸಿಂಗನ ಪರವಾಗಿ ಶತಕೋಟಿ ಚಂಡಿಕಾ ಯಾಗವನ್ನು ಒಟ್ಟು ಮೂರು ಬಾರಿ ನಡೆಸಿ ಜಯಸಿಂಗನು ಶಿವಾಜಿ ವಿರುದ್ಧ ಯುದ್ಧದಲ್ಲಿ ಗೆಲ್ಲಬೇಕೆಂದು ಮತ್ತು ಶಿವಾಜಿ ಮರಣ ಹೊಂದಬೇಕೆಂದು ನಡೆಸಿದರೂ, ಅದು ಫಲಕಾರಿಯಾಗದೇ ಎರಡು ಬಾರಿ ನಡೆದ ಯುದ್ಧದಲ್ಲಿ ಜಯಸಿಂಗನು ಸೋತು ಸುಣ್ಣವಾದುದು ಇತಿಹಾಸ.

ಇಷ್ಟಕ್ಕೂ ಸುಮ್ಮನಿರದ ಆರ್ಯರಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು, ಶಿವಾಜಿಯ ಪಟ್ಟಾಭಿಷೇಕವನ್ನು ತೀವ್ರ ವಿರೋಧಿಸಿದರು. ಮಹಾರಾಷ್ಟ್ರದ ಯಾವೊಬ್ಬ ಬ್ರಾಹ್ಮಣನು ಶಿವಾಜಿಯ ಪಟ್ಟಾಭಿಷೇಕವನ್ನು ನಡೆಸಬಾರದೆಂದು ಫರ್ಮಾನು ಕೂಡಾ ಹೊರಡಿಸಲಾಯಿತು. ಇತ್ತ ಶಿವಾಜಿ ರಾಜನಾಗಿದ್ದರು, ಪಟ್ಟಾಭಿಷೇಕದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಶಿವಾಜಿಗೆ ಬೇಕಾಗಿದ್ದು, ಪ್ರಜೆಗಳಿಗೆ ಉತ್ತಮ ಆಡಳಿತವನ್ನು ಮತ್ತು ಎಲ್ಲಾ ಜಾತಿ, ಧರ್ಮಗಳ ಜನರಿಗೆ ಸಮಾನ ರೀತಿಯ ನ್ಯಾಯವನ್ನು ಕೊಡಬೇಕೆಂದು ಮಾತ್ರವೇ ಅಂದುಕೊಂಡಿದ್ದನು.

ಆದರೆ ಶಿವಾಜಿಗೆ ಸ್ವಾಮಿನಿಷ್ಠೆ ಅರ್ಪಿಸಿದ ಶಿವಾಜಿಯ ಸೈನಿಕರಿಗೆ ಮತ್ತು ಪ್ರಜೆಗಳಿಗೆ ತಮ್ಮ ನಾಯಕನಿಗೆ ಪಟ್ಟಾಭಿಷೇಕ ಮಾಡಬೇಕೆಂಬ ಹಂಬಲವಿತ್ತು. ಇದಕ್ಕಾಗಿ ಪಠಾಣ್ ಸೈನಿಕನೊಬ್ಬನನ್ನು ನೇಮಿಸಿದರು. ಮಹಾರಾಷ್ಟ್ರದಿಂದ ಹೊರಟ ಪಠಾಣ್ ಸೈನಿಕನು ಕಾಶಿಯಿಂದ ಬಡಬ್ರಾಹ್ಮಣನಾದ ಗಗಾಭಟ್ಟನೆಂಬ ಬ್ರಾಹ್ಮಣನಿಗೆ ಅತಿ ಹೆಚ್ಚು ಚಿನ್ನದ ನಾಣ್ಯವನ್ನು ಕೊಡುವುದಾಗಿ ಒಪ್ಪಿಸಿ ಕರೆದುಕೊಂಡು ಬರುತ್ತಾನೆ. ಶಿವಾಜಿಗಾಗ 44ನೆ ವಯಸ್ಸು. ಪಟ್ಟಾಭಿಷೇಕ ಮಾಡಬೇಕಾದರೆ ಶೂದ್ರ ಶಿವಾಜಿ ಕ್ಷತ್ರಿಯನಾಗಬೇಕೆಂದು ಮೊದಲು ಉಪನಯನ ಸಂಸ್ಕಾರವನ್ನು, ತದನಂತರ ಕ್ಷತ್ರಿಯ ಸಂಪ್ರದಾಯದ ಪ್ರಕಾರ ಮದುವೆಯಾದ ಪತಿಯನ್ನು ಪುನಃ ಮದುವೆಯಾಗಿ ಕೊನೆಗೆ ಜೂನ್ 6, 1674ನೆ ಇಸವಿಯಂದು ಶಿವಾಜಿ ಮಹಾರಾಜರಿಗೆ ಪಟ್ಟಾಭಿಷೇಕ ನಡೆಯಿತು.

ಇದು ಜನ ನಾಯಕ ರಾಜನೊಬ್ಬ ಮೇಲ್ವರ್ಗದ ಬ್ರಾಹ್ಮಣಶಾಹಿಗಳಿಂದ ಅನುಭವಿಸಿದ ಮಾನಸಿಕ ಯಾತನೆಯ ನೈಜ ಇತಿಹಾಸ. ಹೀಗೆ ರೈತ, ಕಾರ್ಮಿಕ, ಬೆಸ್ತ, ಕೃಷಿಕೂಲಿ ಎಲ್ಲಾ ಬಗೆಯ ಜನರಿಗೆ ಸಮಾನತೆಯ ಬದುಕನ್ನು ಕಲ್ಪಿಸಿಕೊಟ್ಟ ದೇಶದ ಪ್ರಥಮ ಸಮಾಜವಾದಿ ಶಿವಾಜಿಯೆಂದರೆ ತಪ್ಪಾಗಲಾರದು. ಯಾವ ಕ್ಷತ್ರಿಯ, ಬ್ರಾಹ್ಮಣ, ವೈಶ್ಯ ಪಾಳೇಗಾರರು ಶಿವಾಜಿಯ ಮರಣಕ್ಕಾಗಿ ಹಾತೊರೆಯುತ್ತಿದ್ದರೋ ಮತ್ತು ಶಿವಾಜಿಯ ಪಟ್ಟಾಬಿಷೇಕವನ್ನು ಬಹಿಷ್ಕರಿಸಿದ್ದರೋ ಅವರೇ ಇಂದು ಶಿವಾಜಿಯ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ.

ಶಿವಾಜಿಯ ಹೆಸರಲ್ಲಿ ರಾಜಕೀಯ ಪಕ್ಷವನ್ನು ಮಹಾರಾಷ್ಟ್ರದಲ್ಲಿ ಕಟ್ಟಿ ರಾಜಕೀಯ ಮಾಡುತ್ತಿದ್ದಾರೆ.ಇತ್ತ ಸಂಘಪರಿವಾರದ ಮನುವಾದಿಗಳು ಶಿವಾಜಿಯನ್ನು ಹಿಂದೂ ಮತಾಂಧರನ್ನಾಗಿಸಿಕೊಂಡಿದ್ದಾರೆ. ಹಿಂದುತ್ವ ವಾದಿಗಳ ಬಣ್ಣವನ್ನು ಮರಾಠಿ ಚರಿತ್ರೆಕಾರ, ಗೋವಿಂದ ಪಾನಸಾರೆಯವರು ತಮ್ಮ ಕೃತಿ ಶಿವಾಜಿ ಯಾರು ಎಂಬ ಕೃತಿಯಲ್ಲಿ ಬಯಲು ಗೊಳಿಸಿದ್ದಾರೆ. ಕನ್ನಡದಲ್ಲೂ ಇದು ಭಾಷಾಂತರಗೊಂಡಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಚರಿತ್ರೆಯ ಬಗ್ಗೆ ತಿಳಿದುಕೊಂಡರೆ ಸಂಘ ಪರಿವಾರದ ಕಪಿಮುಷ್ಟಿಯಿಂದ ಸಮಾಜವಾದಿ ಶಿವಾಜಿಯನ್ನು ಹೊರತರಲು ಸಾಧ್ಯ. ಸತ್ಯಕ್ಕೆ ಎಂದೂ ಸಾವಿಲ್ಲ. ಸುಳ್ಳಿನ ಕಥೆ ಸೃಷ್ಟಿಸಿದವರಿಗೆ ಕ್ಷಮೆಯಿಲ್ಲ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಭಾರತದ ಹೆಮ್ಮೆ ಅನಂತಮೂರ್ತಿ

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್