ಕೇವಲ 5 ರೂ.ಗೆ ಚಿಕಿತ್ಸೆ ನೀಡುವ ಸಹೃದಯಿ ವೈದ್ಯ
mail-img print-img

ಕೇವಲ 5 ರೂ.ಗೆ ಚಿಕಿತ್ಸೆ ನೀಡುವ ಸಹೃದಯಿ ವೈದ್ಯ

ಮಂಗಳವಾರ - ಸೆಪ್ಟೆಂಬರ್ -11-2012

ಅದು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ರುವ ಒಂದು ಪುಟ್ಟ ಆಸ್ಪತ್ರೆ. ಅಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ರೋಗಿಗಳ ಸಂದಣಿ. ವೈದ್ಯ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ದಿನದ ಹೆಚ್ಚಿನ ಸಮಯ ರೋಗಿಗಳಿಗೆ ಚಿಕಿತ್ಸೆ ನೀಡು ವುದರಲ್ಲಿಯೇ ಕಳೆದು ಹೋಗುತ್ತದೆ. 65ರ ಇಳಿವಯಸ್ಸಿನಲ್ಲೂ ಮುಖರ್ಜಿಗೆ ಈ ಬಗ್ಗೆ ಒಂದಿಷ್ಟೂ  ಬೇಸರ ವಿಲ್ಲ. ತನ್ನಲ್ಲಿಗೆ ಚಿಕಿತ್ಸೆ ಕೋರಿ ಬರುವ ಯಾವುದೇ ರೋಗಿಯನ್ನು ವಾಪಸ್ ಕಳುಹಿಸುವ ಕಠಿಣ ಹೃದಯ ಅವರದಲ್ಲ. ಹಾಗಿದ್ದರೂ ತನ್ನ ವಯಸ್ಸಿನ ಕಾರಣದಿಂದಾಗಿ ಅವರು ತಾನು ಚಿಕಿತ್ಸೆ ನೀಡುವ ರೋಗಿಗಳ ಸಂಖ್ಯೆಯನ್ನು ದಿನಕ್ಕೆ 30ರ ಮಿತಿಯಲ್ಲಿಡಲು ಯತ್ನಿಸುತ್ತಾರೆ. ಆದರೆ ಸಂಜೆಯ ವೇಳೆಗೆ ಅವರ ನಿರ್ಧಾರವೆಲ್ಲಾ ತಿರುವು ಮುರುವಾಗಿ, ಅವರು ನೋಡಿದ ರೋಗಿಗಳ ಸಂಖ್ಯೆ 40-50ರ ಗಡಿಯನ್ನು ಮೀರುತ್ತದೆ. ಅಂದಹಾಗೆ ಮುಖರ್ಜಿಯವರ ಬಳಿ ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಬಹುತೇಕ ಮಂದಿ ಬಡವರು. ಜಾರ್ಖಂಡ್‌ನ ಮೂಲೆಮೂಲೆಗಳಿಂದ ಬಡರೋಗಿಗಳು ರಾಂಚಿಗೆ ಬಂದು ಶ್ಯಾಮ್‌ಪ್ರಸಾದ್ ಮುಖರ್ಜಿಯವರಿಂದ ಚಿಕಿತ್ಸೆ ಪಡೆಯುವುದಕ್ಕೆ ಬಲವಾದ ಕಾರಣವೊಂದಿದೆ.

ಅದೇನೆಂದರೆ ಈಗಿನ ದುಬಾರಿ ಯುಗದಲ್ಲೂ, ಶ್ಯಾಮ್  ಪ್ರಸಾದ್ ಮುಖರ್ಜಿ, ತನ್ನ ರೋಗಿ ಗಳಿಂದ ಕೇವಲ 5 ರೂ. ಶುಲ್ಕವನ್ನಷ್ಟೇ ಪಡೆಯುತ್ತಿದ್ದಾರೆ. ಹೌದು. ಕಳೆದ ಹಲವು ದಶಕಗಳಿಂದಲೂ ಮುಖರ್ಜಿಯವರ ಶುಲ್ಕ ಕೇವಲ 5 ರೂ.ಗಳಲ್ಲೇ ಉಳಿದುಕೊಂಡಿದೆ.ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ದೇಹ ರಚನಾಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರಾದ ಶ್ಯಾಮ್‌ಪ್ರಸಾದ್, 1959ರಲ್ಲಿ  ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ಸರ್ಜನ್ ಆಗಿ ನೇಮಕಗೊಂಡ ಸಂದರ್ಭದಲ್ಲಿ ಅವರು ಬಡರೋಗಿಗಳ ಸೇವೆಯನ್ನು ನಿಸ್ವಾರ್ಥವಾಗಿ ನಡೆಸುವೆನೆಂಬ ಪ್ರತಿಜ್ಞೆ ಕೈಗೊಂಡಿದ್ದರು.

ಅಂದಿನಿಂದ ಈವರೆಗೂ ಅವರು ಈ ಪ್ರತಿಜ್ಞೆಗೆ ತಕ್ಕಂತೆ ನಡೆದುಕೊಂಡೇ ಬರುತ್ತಿದ್ದಾರೆ.ಭಾರತದಲ್ಲಿ ಲಕ್ಷಾಂತರ ಹಣ ದುಬಾರಿ ಮೊತ್ತದ ವೈದ್ಯಕೀಯ ವೆಚ್ಚಗಳನ್ನು ಪಾವತಿಸಲಾಗದೆ, ರೋಗಗಳಿಂದ ನರಳುತ್ತಿರುತ್ತಾರೆ. ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆಗಳು ಅವರ ಪಾಲಿಗೆ ಗಗನ ಕುಸುಮವಾಗಿದೆ.ಇಂತಹ ಪರಿಸ್ಥಿತಿಯಿರುವ ನಮ್ಮ ದೇಶದಲ್ಲಿ ಶ್ಯಾಮ್‌ಪ್ರಸಾದ್ ಮುಖರ್ಜಿ ಯವರಂತಹ ವೈದ್ಯರು ಬಡರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದಾರೆ.ಹಾಗೆಂದು ಇತರ ವೈದ್ಯರು ಕೂಡಾ ತನ್ನಂತೆ ಅತಿ ಕಡಿಮೆ ಶುಲ್ಕದಲ್ಲಿ ವೈದ್ಯರಿಗೆ ಚಿಕಿತ್ಸೆ ನೀಡಬೇಕೆಂದು ಶ್ಯಾಮ್ ಪ್ರಸಾದ್ ಹೇಳುತ್ತಿಲ್ಲ “ಪ್ರತಿಯೊಬ್ಬ ವೈದ್ಯರು ಪ್ರತಿ ದಿನ ಕನಿಷ್ಠ ಓರ್ವ ರೋಗಿಗೆ ಉಚಿತವಾಗಿ ಚಿಕಿತ್ಸೆ ನೀಡಲಿ ಎಂಬುದೇ ನನ್ನ ಸಂದೇಶವಾಗಿದೆ.

ಭಾರತದ ಎಲ್ಲ ವೈದ್ಯರು ಹೀಗೆ ಮಾಡಿದಲ್ಲಿ, ಅದೊಂದು ಅತ್ಯಂತ ಶ್ರೇಷ್ಠವಾದ ಮಾನಯ ಸೇವೆಯಾಗಲಿದೆ” ಎಂದು ಮುಖರ್ಜಿ ಹೇಳುತ್ತಾರೆ.ಮೂಲತಃ ಪಶ್ಚಿಮ ಬಂಗಾಳದವರಾದ ಶ್ಯಾಮ್ ಪ್ರಸಾದ್ 1966ರಿಂದ ರಾಂಚಿಯಲ್ಲಿ ನೆಲೆಸಿದ್ದಾರೆ. ಆಗ ಅವರು ರಾಂಚಿಯ ವೈದ್ಯಕೀಯ ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿದ್ದರು. ಕಾಲೇಜು ಮುಗಿದ ನಂತರ ಅವಧಿಯಲ್ಲಿ ಅವರು ರೋಗಿಗಳಿಗೆ ಕೇವಲ 5 ರೂ. ಶುಲ್ಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಕೆಲವೇ ತಿಂಗಳುಗಳಲ್ಲಿ ಶ್ಯಾಮ್ ಪ್ರಸಾದ್ ಇಡೀ ರಾಂಚಿ ನಗರದಲ್ಲಿ ಮನೆಮಾತಾದರು.

ಪ್ರತಿ ದಿನವೂ ನೂರಾರು ಬಡರೋಗಿಗಳು ಅವರ ಕ್ಲಿನಿಕ್‌ಗೆ ಬರತೊಡಗಿದರು.ಜಾರ್ಖಂಡ್‌ನಂತಹ ರಾಜ್ಯದಲ್ಲಿ ಬಡ ರೋಗಿಗಳಿಗೆ ಸರಕಾರಿ ಆಸ್ಪತ್ರೆ ಹೊರತಾಗಿ ಬೇರ‍್ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದೆಂದರೆ ಕನಸಿನ ಮಾತೇ ಸರಿ.ಇಂತಹ ಪರಿಸ್ಥಿತಿಯಿರುವ ಈ ರಾಜ್ಯದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಬಡವರ ಪಾಲಿನ ಆಪದ್ಭಾಂದವರಾಗಿದ್ದಾರೆ. ತನ್ನ ತಂದೆ ಶ್ಯಾಮ್ ಪ್ರಸಾದ್‌ರ ಹೃದಯವಂತಿಕೆಯ ಬಗ್ಗೆ ಪುತ್ರಿ ಮಲೊಬಿಕಾಗೆ ಭಾರೀ ಹೆಮ್ಮೆ. ತನ್ನ ತಂದೆ ಅತಿ ಕಡಿಮೆ ಶುಲ್ಕ ವಿಧಿಸುವುದಷ್ಟೇ ಅಲ್ಲ, ಅವರೊಬ್ಬ ಅತ್ಯುತ್ತಮ ರೋಗ ಪರೀಕ್ಷಕರೂ ಹೌದೆಂದು ಆಕೆಯ ಅಭಿಪ್ರಾಯ. ಇದರಿಂದಾಗಿಯೇ ಅವರು ಇಡೀ ಜಾರ್ಖಂಡ್‌ನಲ್ಲಿ  ಜನಪ್ರಿಯರಾಗಿದ್ದಾರೆಂದು ಮಲೊಬಿಕಾ ಹೇಳುತ್ತಾರೆ.
 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಭಾರತದ ಹೆಮ್ಮೆ ಅನಂತಮೂರ್ತಿ

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು