ನಕಲಿ ಎನ್‌ಕೌಂಟರ್‌ಗಳ ರಹಸ್ಯ ಭೇದಿಸಿದ್ದ ವಿ.ಎಲ್.ಸೋಲಂಕಿ
mail-img print-img

ನಕಲಿ ಎನ್‌ಕೌಂಟರ್‌ಗಳ ರಹಸ್ಯ ಭೇದಿಸಿದ್ದ ವಿ.ಎಲ್.ಸೋಲಂಕಿ

ಶುಕ್ರವಾರ - ಸೆಪ್ಟೆಂಬರ್ -21-2012

ದೇಶದಲ್ಲೇ ಕೋಲಾಹಲವೆಬ್ಬಿಸಿದ ಗುಜರಾತ್ ನಲ್ಲಿ ನಡೆದ ಎರಡು ನಕಲಿ ಎನ್‌ಕೌಂಟರ್‌ಗಳನ್ನು ಬಯಲಿಗೆಳೆದ ಸೋಲಂಕಿ ನಿಜಕ್ಕೂ ಓರ್ವ ಸೂಪರ್ ಕಾಪ್ ಎಂದರೆ ತಪ್ಪಾಗಲಾರದು. 2005ರಲ್ಲಿ ನಡೆದ ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್‌ಬಿ ಮತ್ತು ಸೊಹ್ರಾಬುದ್ದೀನ್ ಸಹಚರ ತುಳಸೀರಾಂ ಪ್ರಜಾಪತಿಯನ್ನು ನಕಲಿ ಎನ್‌ಕೌಂಟರ್‌ಗಳ ಮೂಲಕ ಹತ್ಯೆ ಮಾಡಲಾಗಿದೆಯೆಂಬುದನ್ನು ಪತ್ತೆಹಚ್ಚುವಲ್ಲಿ ಆಗಿನ ಗುಜರಾತ್ ಸಿಐಡಿಯಲ್ಲಿ ತನಿಖಾಧಿಕಾರಿಯಾಗಿದ್ದ ಸೋಲಂಕಿ ಮಹತ್ವದ ಪಾತ್ರ ವಹಿಸಿದ್ದರು. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಗುಜರಾತ್ ಸಿಐಡಿ ತನಿಖೆ ನಡೆಸುತ್ತಿದ್ದಾಗ ಆರಂಭದಲ್ಲಿ ತನಿಖಾಧಿ ಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸೋಲಂಕಿ ತನ್ನ ವೃತ್ತಿ ಜೀವನದ ಆರಂಭದಿಂದಲೇ ನಿರ್ಭಿಡೆ, ಕರ್ತವ್ಯ ನಿಷ್ಠೆಗೆ ಹೆಸರಾದವರು. ಅಮಾಯಕರಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಿ ಅವರನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆಗೈದ ಗುಜರಾತ್‌ನ ಕೆಲವು ಪೊಲೀಸ್ ಅಧಿಕಾರಿಗಳ ಬಣ್ಣವನ್ನು ಬಯಲುಗೊಳಿಸಿದ ಕೀರ್ತಿ ಈ ಧೀಮಂತ ಪೊಲೀಸ್ ಅಧಿಕಾರಿಗೆ ಸಲ್ಲಬೇಕು.

ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ಹಿಂದಿನ ರಹಸ್ಯವನ್ನು ಭೇದಿಸುವ ಮೂಲಕ ಸೋಲಂಕಿ ರಾಷ್ಟ್ರಮಟ್ಟದಲ್ಲೇ ಸುದ್ದಿ ಯಾದರು. ಈ ಪ್ರಕರಣದ ಬಗ್ಗೆ ಸೋಲಂಕಿ ಕೂಲಂಕಷವಾಗಿ ನಡೆಸಿದ ತನಿಖೆಯು ಸೇರಿದಂತೆ, ಗುಜರಾತ್ ಪೊಲೀಸರು ನಡೆಸಿದ ಇನ್ನು ಕೆಲವು ನಕಲಿ ಎನ್‌ಕೌಂಟರ್ ಪ್ರಕರಣಗಳನ್ನು ಬಯಲಿಗೆಳೆಯಲು ಸಿಬಿಐಗೆ ಬಹಳಷ್ಟು ನೆರವಾಯಿತು. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆಯಲ್ಲಿ ಸೋಲಂಕಿ ಸಂಗ್ರಹಿಸಿದ ಅಧಿಕೃತ ದಾಖಲೆಗಳು, ಹಿರಿಯ ಅಧಿಕಾರಿಗಳ ಜೊತೆ ಅವರು ನಡೆಸಿದ ಸಂಭಾಷಣೆಗಳು ಹಾಗೂ ರಾಜಕೀಯ ನಾಯಕರ ಅಪ್ಪಣೆಗಳಿಗೆ ತಲೆಭಾಗದ ಅವರ ದಿಟ್ಟತನದ ವರ್ತನೆಯಿಂದಾಗಿ ಕೇಂದ್ರೀಯ ತನಿಖಾ ದಳಕ್ಕೆ ಸೊಹ್ರಾಬುದ್ದೀನ್ ಸಹಚರ ತುಳಸಿ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣ ವನ್ನು ಸಹ ಭೇದಿಸಲು ಸಾಧ್ಯವಾಯಿತು.

ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್‌ಬಿಯನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಮೀಪದ ಟಾಂಡ್ಲಾ ಗ್ರಾಮದಲ್ಲಿ ಪೊಲೀಸರ ತಂಡವೊಂದು ಅಪಹರಿಸಿದ ಸಂದರ್ಭದಲ್ಲಿ ಅವರ ಜೊತೆ ಇನ್ನೋರ್ವ ವ್ಯಕ್ತಿ (ತುಲಸಿ ಪ್ರಜಾಪತಿ) ಯೂ ಇದ್ದನೆಂದು ಈ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳವು 2006ರ ನವೆಂಬರ್ 1ರಂದು ಬನಸ್ಕಾಂತ ಜಿಲ್ಲೆಯ ದಾಂತಾ ಸೆಶನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು.ಈ ತೃತೀಯ ವ್ಯಕ್ತಿಯ ಬಗ್ಗೆ ಸಿಬಿಐಗೆ ಮಾಹಿತಿ ದೊರೆಯಲು ಇದಕ್ಕೂ ಮೊದಲು ಸೋಲಂಕಿ ನಡೆಸಿದ ತನಿಖೆಯೇ ಕಾರಣವೆಂದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.

ಅಪಹರಣಕ್ಕೊಳಗಾದ ದಿನವಾದ 2005ರ ನವೆಂಬರ್ 22-23ರಂದು ಸೊಹ್ರಾಬುದ್ದೀನ್ ಹಾಗೂ ಕೌಸರ್‌ಬಿ ಪ್ರಯಾಣಿಸಿದ ಬಸ್‌ನಲ್ಲಿದ್ದ ಸಹಪ್ರಯಾಣಿಕ ಶರದ್ ಅಪ್ಟೆ ಹಾಗೂ ಆತನ ಕುಟುಂಬಿಕರು ನೀಡಿದ ಹೇಳಿಕೆಯನ್ನು ಸೋಲಂಕಿ ಸಂಗ್ರಹಿಸಿದ್ದರೆಂಬ ಅಂಶವನ್ನು ಸಿಬಿಐ ಪತ್ತೆಹಚ್ಚಿತ್ತು.ಇದೇ ಎನ್‌ಕೌಂಟರ್ ನಡೆದ ಸಂದರ್ಭದಲ್ಲಿ ಸೊಹ್ರಾಬುದ್ದೀನ್ ಬಳಸಿದ್ದನೆನ್ನಲಾದ ಮೋಟಾರ್ ಸೈಕಲ್, ಅಶೋಕ್ ಸಿಂಗ್ ಯಾದವ್ ಎಂಬಾತ ನಿಗೆ ಸೇರಿದ್ದೆಂಬುದನ್ನು ಕೂಡಾ ಸೋಲಂಕಿ ದಾಖಲಿಸಿಕೊಂಡಿದ್ದರೆಂಬುದನ್ನು ಸಿಬಿಐ ಕಂಡುಕೊಂಡಿತ್ತು. 2010ರ ಜುಲೈನಲ್ಲಿ ಸಿಬಿಐ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ಸೋಲಂಕಿ ಯವರನ್ನು ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ಸಾಕ್ಷಿಯೆಂದು ಸಿಬಿಐ ಗುರುತಿಸಿತ್ತು.

ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್‌ಬಿಯನ್ನು 2005ರ ನವೆಂಬರ್24ರಂದು ಗುಜರಾತ್ ಪೊಲೀಸರು ಅಹ್ಮದಾಬಾದ್‌ಗೆ ಕರೆತಂದಿದ್ದರು ಮತ್ತು ಆನಂತರ ಅವರನ್ನು ಸಬರ್‌ಮತಿ ಸಮೀಪದ ದಿಶಾ ಎಂಬಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಇರಿಸಲಾಗಿತ್ತೆಂಬುದನ್ನು ದೃಢಪಡಿಸಿದ ಇಬ್ಬರು ಸಾಕ್ಷಿಗಳನ್ನು ಕೂಡಾ ಸೋಲಂಕಿ ಗುರುತಿಸಿದ್ದರು. ಸೊಹ್ರಾಬುದ್ದೀನ್ ದಂಪತಿಯ ಅಪಹರಣಕ್ಕೆ ಸಂಬಂಧಿಸಿ, ಅಶೋಕ್ ಸಿಂಗ್ ಯಾದವ್‌ನಿಂದ ಕೆಲವು ಮಹತ್ವದ ವಿವರಗಳಿಂದಾಗಿ, ಸಿಬಿಐಗೆ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಾಧ್ಯವಾಯಿತು.

ಈ ಪ್ರಕರಣಕ್ಕೆ ಸಂಬಂಧಿಸಿ ಸೋಲಂಕಿ ಸಿದ್ಧಪಡಿಸಿದ ಎರಡನೆ ಹಾಗೂ ಮೂರನೆಯ ವರದಿಗಳಿಂದಾಗಿ ಕೆಲವು ಮಹತ್ವದ ವಿವರಗಳು ಸಿಬಿಐಗೆ ದೊರೆತವು. ಈ ಎರಡು ವರದಿಗಳನ್ನು ಸೋಲಂಕಿ 2006ರ ಡಿಸೆಂಬರ್ 7 ಹಾಗೂ 2006ರ ಡಿಸೆಂಬರ್ 15ರಂದು ಸಲ್ಲಿಸಿದ್ದರು. ಸೋಲಂಕಿಯ ಬಳಿಕ ಸೊಹ್ರಾಬುದ್ದೀನ್ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಗೀತಾ ಜೋಹ್ರಿ, ಮೋದಿ ಸರಕಾರದ ಒತ್ತಡಕ್ಕೆ ಮಣಿದು ಪ್ರಕರಣದ ತನಿಖೆಯನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸಲಿಲ್ಲ. ಅಷ್ಟೇ ಅಲ್ಲ ಪ್ರಕರಣಕ್ಕೆ ಸಂಬಂಧಿಸಿ ಸೋಲಂಕಿ ಸಿದ್ಧಪಡಿಸಿದ ಕೆಲವು ವಿವರಗಳನ್ನು ಕೂಡಾ ಅವರು ತನಿಖಾ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲೂ ಇಲ್ಲ.

2010ರಲ್ಲಿ ಸಿಬಿಐ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಾಗ ಸೋಲಂಕಿಯವರು ತನಿಖಾ ಸಂಸ್ಥೆಗೆ ಸಂಪೂರ್ಣವಾಗಿ ಸಹಕರಿಸಿದ್ದರು.ಸಿಬಿಐಗೆ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಹತ್ವದ ವಿವರಗಳನ್ನು ಕೂಡಾ ಅವರು ನೀಡಿದ್ದರು. ಆರೋಪಿಗಳನ್ನು ರಕ್ಷಿಸಲು ತನಿಖಾಧಿಕಾರಿ ಗೀತಾಜೋಹ್ರಿ ದಾಖಲೆಗಳನ್ನು ತಿರುಚಿದ್ದಾರೆಂಬುದನ್ನು ಬೆಳಕಿಗೆ ತರುವಲ್ಲೂ ಸೋಲಂಕಿ ಯಶಸ್ವಿಯಾಗಿದ್ದರು.

 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕೊಟ್ಟಂತೆ ಮಾಡಿ ಬಡವರಿಂದ ಇನ್ನಷ್ಟು ಕಿತ್ತುಕೊಳ್ಳಬೇಡಿ

ಹೊಸ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದ ನಂತೆ. ಅಧಿಕಾರಕ್ಕೇರಿದ ಉತ್ಸಾಹದಲ್ಲಿ, ಸಿದ್ದರಾಮಯ್ಯ ಇದೇ ಹಾದಿಯಲ್ಲಿ ಸಾಗುತ್ತಿ ದ್ದಾರೆಯೇ? ಮತ ಹಾಕಿದ ಜನರನ್ನು ಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್