ನ್ಯಾಯಕ್ಕಾಗಿ ಮಹಿಳೆಯರಿಬ್ಬರ ಮುಗಿಯದ ಹೋರಾಟ
mail-img print-img

ನ್ಯಾಯಕ್ಕಾಗಿ ಮಹಿಳೆಯರಿಬ್ಬರ ಮುಗಿಯದ ಹೋರಾಟ

ಬುಧವಾರ - ಸೆಪ್ಟೆಂಬರ್ -12-2012

♦ಸುಪ್ರೀಂ ಕೋರ್ಟ್ ಆದೇಶಕ್ಕೂ ಸಿಗದ ಬೆಲೆ!
ಮಾಸಿಕ 15 ರೂ.ಗಳಿಗೆ 42 ವರ್ಷಗಳ ದುಡಿಮೆ!
 ಮಂಗಳೂರು, ಸೆ.11: ಸಂವಿಧಾನದ ಬೆನ್ನೆಲುಬಾಗಿ ಪರಿಗಣಿಸಲ್ಪಟ್ಟಿರುವ ಸುಪ್ರೀಂ ಕೋರ್ಟ್‌ನ ಆದೇಶವನ್ನೂ ರಾಜ್ಯ ಸರಕಾರ ಯಾವ ರೀತಿಯಲ್ಲಿ ಕಡೆಗಣಿಸಿ ಜನಸಾಮಾನ್ಯರನ್ನು ಸತಾಯಿಸುತ್ತದೆ ಎಂಬುದಕ್ಕೊಂದು ಸ್ಪಷ್ಟ ನಿದರ್ಶನವಾಗಿದೆ ಉಡುಪಿಯ ಅಕ್ಕು ಮತ್ತು ಲೀಲಾ ಎಂಬ ಬಡ ಮಹಿಳೆಯರಿಬ್ಬರ ನ್ಯಾಯಕ್ಕಾಗಿನ ಹೋರಾಟ.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಾರ್ಯ ಕರ್ತ ಡಾ.ರವೀಂದ್ರನಾಥ್ ಶಾನುಭೋಗ್, ಉಡುಪಿಯ ಸರಕಾರಿ ಮಕ್ಕಳ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಸ್ವೀಪರ್ ಆಗಿ ಅಕ್ಕು ಹಾಗೂ ಸ್ಕಾವೆಂಜರ್ ಆಗಿ ಲೀಲಾ 1971ರಿಂದ 42 ವರ್ಷಗಳಿಂದ ಮಾಸಿಕ ತಲಾ 15 ರೂ.ಗಳಿಗೆ ಸೇವೆ ಸಲ್ಲಿಸುತ್ತಿರುವ ಕರುಣಾಜನಕ ಸ್ಥಿತಿಯ ಬಗ್ಗೆ ವಿವರ ನೀಡಿದರು.

1971ರಲ್ಲಿ ಉಡುಪಿಯ ಸರಕಾರಿ ಮಕ್ಕಳ ತರಬೇತಿ ಸಂಸ್ಥೆಯಲ್ಲಿ ಅಕ್ಕು ತನ್ನ ತಾಯಿ ಮಾಡು ತ್ತಿದ್ದ ಕೆಲಸವನ್ನು ಮುಂದುವರಿಸಿದರೆ, ಲೀಲಾ ತನ್ನ ಅಜ್ಜಿ ಮಾಡುತ್ತಿದ್ದ ಸೇವೆಯನ್ನು ಆರಂಭಿಸಿದ್ದರು. ಆರಂಭದಲ್ಲಿ 1 ತಿಂಗಳು ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವಂತೆಯೂ ಮುಂದೆ ಖಾಯಂ ಆಗಿ ಸರಕಾರ ನಿರ್ಧರಿಸುವ ಕನಿಷ್ಠ ಕೂಲಿಯ ಭರವಸೆಯೊಂದಿಗೆ ಇವರಿಬ್ಬರಿಗೆ ಸಂಸ್ಥೆಯ ಮುಖ್ಯಸ್ಥ ರಿಂದ ಭರವಸೆ ದೊರಕಿತ್ತು. ಮಾತ್ರವಲ್ಲದೆ ಕೆಲಸದ ಆದೇಶವೂ ಇವರಿಗೆ ನೀಡಲಾಗಿತ್ತು. ಸುಮಾರು 27 ವರ್ಷಗಳ ಕಾಲ ಮಾಸಿಕ 15 ರೂ.ಗಳಿಗೆ ದುಡಿದ ಇವರು ಅದೇ ಸಮಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟವರಿಗೆ ಕನಿಷ್ಠ ಕೂಲಿಗಾಗಿ ಮನವಿ ಸಲಿಸುತ್ತಾ ಬಂದಿದ್ದರು. ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಯಲ್ಲಿ 1999ರಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿ ಷ್ಠಾನವನ್ನು ಸಂಪರ್ಕಿಸಿದ್ದರು. ಈ ನಡುವೆ ಇವರಿಬ್ಬರಿಗೆ ನೀಡಲಾಗುತ್ತಿದ್ದ ಮಾಸಿಕ ತಲಾ 15 ರೂ.ಗ ಳನ್ನು ಕೂಡಾ ಈ ಅವಧಿಯಿಂದ ನಿಲ್ಲಿಸಲಾಗಿದೆ. ಹಾಗಿದ್ದರೂ ಇವರಿಬ್ಬರೂ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಅಕ್ಕು ಕಳೆದ ತಿಂಗಳು ನಿವೃತ್ತಿ ಹೊಂದಿದ್ದು, ಲೀಲಾಗೆ ನಿವೃತ್ತಿಗೆ 1 ವರ್ಷದ ಅವಧಿ ಇದೆ ಎಂದು ಶ್ಯಾನುಭೋಗ್ ವಿವರಿಸಿದರು. ಪ್ರತಿಷ್ಠಾನವು ಈ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದರೂ ಯಾವುದೇ ಪ್ರತಿಫಲ ದೊರೆ ಯದ ಹಿನ್ನೆಲೆಯಲ್ಲಿ ಕಾನೂನು ಮೊರೆ ಹೋಗಲಾಗಿತ್ತು. ಕರ್ನಾಟಕ ಅಡ್ಮಿನಿಸ್ಟ್ರೇ ಶನ್ ಟ್ರಿಬ್ಯುನಲ್(ಕೆಎಟಿ), ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಕಾನೂನು ಹೋರಾಟ ಮುಂದುವರಿಯಿತು.

2010ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕೂಡಾ ಇವರ ಪರ ಹೈಕೋರ್ಟ್ ಹಾಗೂ ಕೆಎಟಿ ನೀಡಿದ ತೀರ್ಪನ್ನು ಎತ್ತಿ ಹಿಡಿದು ಇತರ ಸರಕಾರಿ ಕಾರ್ಮಿಕರಿಗೆ ನೀಡುವ ವೇತನ ನೀಡಲು ಆದೇಶ ನೀಡಿತ್ತು. ಸರಕಾರ ನ್ಯಾಯ ಯುತವಾಗಿ ಈ ಇಬ್ಬರು ಮಹಿಳೆಯರಿಗೆ ಅವರ ದುಡಿಮೆಗಾಗಿ ಒಟ್ಟು ತಲಾ 27 ಲಕ್ಷ ರೂ.ಗಳನ್ನು ನೀಡಬೇಕಾಗಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ ಎರಡೂವರೆ ವರ್ಷ ಕಳೆದರೂ ಈ ಮಹಿಳೆಯರಿಗೆ ಮಾತ್ರ ರಾಜ್ಯ ಸರಕಾರ ನ್ಯಾಯ ನೀಡಿಲ್ಲ ಎಂದು ಶ್ಯಾನುಭೋಗ್ ತಿಳಿಸಿದರು.

‘‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಉಡುಪಿಗೆ ಆಗಮಿಸಿದಾಗ ಅವರನ್ನು ಭೇಟಿಯಾಗಿದ್ದೆವು. ಸುಪ್ರೀಂ ಕೋರ್ಟ್ ಆದೇಶ ಪ್ರತಿಯನ್ನು ಅವರಿಗೆ ನೀಡಿದ್ದೆವು. ಅದಕ್ಕವರು, ನಿಮಗೆ ಕೊಟ್ಟರೆ ಇದೇ ರೀತಿ ದುಡಿಯುತ್ತಿರುವ ರಾಜ್ಯದ 75,000 ಕಾರ್ಮಿಕರು ಕೂಡಾ ಕೇಳ್ತಾರೆ. ಹಾಗೆಲ್ಲಾ ಕೊಡುವುದಕ್ಕೆ ಆಗುವುದಿಲ್ಲ ಎಂದಿದ್ದರು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅಕ್ಕು ನೋವು ತೋಡಿಕೊಂಡರು. ಅಕ್ಕುರ ಪತಿ ಅಸ್ತಮಾ ರೋಗಿ. ಮೂವರು ಹೆಣ್ಣು, ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದು, ಓರ್ವ ಮಗಳಿಗೆ ಮದುವೆಯಾಗಿದೆ.

‘‘ಇಷ್ಟು ವರ್ಷಗಳ ಕಾಲ ನ್ಯಾಯದ ನಿರೀಕ್ಷೆ ಯಲ್ಲೇ ದುಡಿದೆ. ನನ್ನ ದುಡಿಮೆಗಾಗಿ ನನಗೆ ನ್ಯಾಯಯುತವಾಗಿ ದೊರಕಬೇಕಾದ ಹಣದಿಂದ ನನ್ನ ಮಗಳಿಗೆ ಮದುವೆಯಾದರೂ ಮಾಡಿಸು ವಾಸೆ’’ ಎಂದು ಕಣ್ಣೀರು ಹಾಕುತ್ತಾರೆ ಅಕ್ಕು. ದಲಿತ ಮಹಿಳೆಯಾಗಿರುವ ಲೀಲಾಗೆ 3 ಹೆಣ್ಣು ಹಾಗೂ ಒಬ್ಬ ಗಂಡು ಮಗ. ‘‘ನಮ್ಮ ಕುಟುಂಬಕ್ಕೆ ಆಧಾರವಾಗಬಹುದು ಎಂದು ನನ್ನ ಅಜ್ಜಿ ಮಾಡು ತ್ತಿದ್ದ ಕೆಲಸವನ್ನು ನಾನು ಮುಂದುವರಿಸಿದೆ’’ ಎಂದು ಲೀಲಾ ತಮ್ಮ ನೋವನ್ನು ತೋಡಿಕೊಂಡರು.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕೊಟ್ಟಂತೆ ಮಾಡಿ ಬಡವರಿಂದ ಇನ್ನಷ್ಟು ಕಿತ್ತುಕೊಳ್ಳಬೇಡಿ

ಹೊಸ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದ ನಂತೆ. ಅಧಿಕಾರಕ್ಕೇರಿದ ಉತ್ಸಾಹದಲ್ಲಿ, ಸಿದ್ದರಾಮಯ್ಯ ಇದೇ ಹಾದಿಯಲ್ಲಿ ಸಾಗುತ್ತಿ ದ್ದಾರೆಯೇ? ಮತ ಹಾಕಿದ ಜನರನ್ನು ಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್