
ಕಾರ್ಕಳ, ಜೂ.19: ತಾಲೂಕಿನ ಸೂಡ ಗ್ರಾಮದ ನಂದಳಿಕೆ ಪಾದಬೆಟ್ಟು ಎಂಬಲ್ಲಿನ ಜೋಯ್ಸಾ ಆ್ಯಂಡ್ ಕಂಪೆನಿಯ ಕಲ್ಲು ಕೋರೆಯಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ಸ್ಫೋಟದಿಂದ ಇಬ್ಬರು ಕಾರ್ಮಿಕ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರನ್ನು ಬಾಗಲಕೋಟೆಯ ಮಲ್ಲವ್ವ(35) ಹಾಗೂ ಕೊಪ್ಪಳದ ಅಂಬಿಕಾ ಮಲ್ಲೇಶ್(24) ಎಂದು ಗುರುತಿಸಲಾಗಿದೆ.ಕಲ್ಲು ಕೋರೆಗಾಗಿ ಸ್ಫೋಟಕ ದಾಸ್ತಾನು ಇರಿಸಿದ್ದ ಶೆಡ್‌ಗೆ ಸಿಡಿಲು ಬಡಿದ ಪರಿಣಾಮ ಈ ಸ್ಫೋಟ ಸಂಭವಿಸಿತೆನ್ನಲಾಗಿದೆ.ಸ್ಫೋಟದ ತೀವ್ರತೆಗೆ ಅಂಬಿಕಾಳ ಮೃತದೇಹ ಹಾಗೂ ಸ್ಫೋಟಕ ಇರಿಸಿದ್ದ ಆರ್‌ಸಿಸಿ ಬಿಲ್ಡಿಂಗ್ ಸಂಪೂರ್ಣ ಛಿದ್ರ ಛಿದ್ರವಾಗಿದೆ.ಸೂಡದ ಜಾಯ್ ಎಂಬವರಿಗೆ ಸೇರಿದ ಕಲ್ಲುಕೋರೆಗೆ ಸಂಬಂಧಿಸಿದ 90ಸ್ಫೋಟಕಗಳನ್ನು ಅಲ್ಲೇ ಸಮೀಪದ ದಾಸ್ತಾನು ಕಟ್ಟಡದಲ್ಲಿ ಇರಿಸಿ ಕಾರ್ಮಿಕನೊಬ್ಬ ಚಹಾ ಕುಡಿಯಲು ಹೋಗಿದ್ದನು.ಅದೇ ಸಮಯಕ್ಕೆ ಮಳೆಯ ಕಾರಣ ಆ ಕಟ್ಟಡದ ಬಳಿ ಆಸರೆಗೆಂದು ಅದೇ ಕೋರೆಯ ಕಾರ್ಮಿಕರಾದ ಅಂಬಿಕಾ ಮತ್ತು ಮಲ್ಲವ್ವ ನಿಂತಿದ್ದರು.ಆ ವೇಳೆ ಈ ಕಟ್ಟಡಕ್ಕೆ ಸಿಡಿಲು ಬಡಿಯಿತೆನ್ನಲಾಗಿದೆ.ಇದರ ಪರಿಣಾಮ ಕಟ್ಟಡದೊಳಗೆ ಇದ್ದ ಸ್ಫೋಟಕಗಳು ಒಮ್ಮಿಂದೊಮ್ಮೆಗೆ ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿತೆನ್ನಲಾಗಿದೆ.
ಇದರಿಂದ ಆರ್‌ಸಿಸಿ ಬಿಲ್ಡಿಂಗ್ ಸಂಪೂರ್ಣ ಛಿದಛಿದ್ರವಾಗಿ ಅದರ ಕಲ್ಲುಗಳು ಮಾರು ದೂರ ಹೋಗಿ ಬಿದ್ದಿವೆ. ಅಲ್ಲೇ ನಿಂತಿದ್ದ ಮಲ್ಲವ್ವ ಮತ್ತು ಅಂಬಿಕಾ ಸ್ಥಳದಲ್ಲೇ ಮೃತಪಟ್ಟರು.ಈ ಪೈಕಿ ಅಂಬಿಕಾಳ ದೇಹ ಛಿದ್ರವಾಗಿ ಕೈಕಾಲುಗಳು ಮಾತ್ರ ಪತ್ತೆಯಾಗಿವೆ.ಇವರಿಬ್ಬರು ಕಳೆದ ಐದು ವರ್ಷಗಳಿಂದ ಈ ಕಲ್ಲುಕೋರೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.ಈ ಕೋರೆಯಲ್ಲಿ 60ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದು,ಅವರು ಸ್ಫೋಟ ನಡೆದ ಸ್ಥಳದ ಸಮೀಪ ಶೆಡ್‌ಗಳಲ್ಲೇ ವಾಸಿಸುತ್ತಾರೆ. ಇಂದು ಸಂಜೆ ನಡೆದ ಸ್ಫೋಟದ ವೇಳೆ ಇವರೆಲ್ಲ ಕಲ್ಲು ಕೋರೆಯಲ್ಲಿ ದುಡಿಯುತ್ತಿದ್ದುದರಿಂದ ಭಾರೀ ದುರಂತ ತಪ್ಪಿದೆ.
ಸ್ಥಳಕ್ಕೆ ಕಾರ್ಕಳ ಶಾಸಕ ಗೋಪಾಲ ಭಂಡಾರಿ,ತಹಶೀಲ್ದಾರ್ ಜಗನ್ನಾಥ ರಾವ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...