ಕೊಂಕಣ ರೈಲ್ವೆಯಿಂದ ಮತ್ತೊಂದು ‘ರೋರೋ’ ಸೇವೆ
mail-img print-img

ಕೊಂಕಣ ರೈಲ್ವೆಯಿಂದ ಮತ್ತೊಂದು ‘ರೋರೋ’ ಸೇವೆ

ಬುಧವಾರ - ಜುಲೈ -25-2012

ಮಂಗಳೂರು, ಜು.24: ರೈಲ್ವೆ ವೇಗನ್‌ಗಳ ಮೂಲಕ ಸರಕು ಸಾಮಾನು ತುಂಬಿದ ಭಾರೀ ಟ್ರಕ್‌ಗಳನ್ನು ಸಾಗಿಸುವ ನಿಟ್ಟಿನಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್‌ನಿಂದ ಆರಂಭಿಸ ಲ್ಪಟ್ಟ ರೋರೋ ಸೇವೆಗೆ ಮಳೆಗಾಲದ ಬಳಿಕ ಮತ್ತೊಂದು ರೈಲು ವೇಗನ್ ಸೇರ್ಪಡೆಯಾ ಗಲಿದೆ ಎಂದು ಲಿಮಿಟೆಡ್‌ನ ಉಪ ಮುಖ್ಯ ಆಯುಕ್ತ ನಂದು ತೆಲಂಗ್ ತಿಳಿಸಿದ್ದಾರೆ.

ಲಿಮಿಟೆಡ್‌ನ ಮಂಗಳೂರು ಕಚೇರಿಯ ಲ್ಲಿಂದು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ 1999ರ ಜನವರಿ 26ರಂದು ಆರಂಭಗೊಂಡ ರೋರೋ ಸೇವೆಯ ಕಾರ್ಯವೈಖರಿ, ಉಪ ಯೋಗಗಳ ಬಗ್ಗೆ ಮಾಹಿತಿ ನೀಡಿದರು.

ಭಾರೀ ಪ್ರಮಾಣದ ಸಾಮಗ್ರಿಗಳಿಂದ ತುಂಬಿದ ಟ್ರಕ್‌ಗಳನ್ನು ರೈಲ್ವೆ ವೇಗನ್‌ಗೆ ಹತ್ತಿಸಿ ಕಡಿಮೆ ವೆಚ್ಚ, ಸಮಯ ಹಾಗೂ ಸುರಕ್ಷಿತವಾಗಿ ಒಂದೆಡೆಯಿಂದ ಮತ್ತೊಂದೆಡೆ ಸಾಗಿಸುವ ಸಲುವಾಗಿ ಕೊಂಕಣ ರೈಲ್ವೆಯಿಂದ ಈ ರೋರೋ ಸೇವೆ ಆರಂಭಗೊಂಡಿತ್ತು. ಪ್ರಸ್ತುತ ಕೊಲಾಡ್- ವರ್ನಾ, ಕೊಲಾಡ್- ಸುರತ್ಕಲ್ ಹಾಗೂ ಅಂಕೋಲಾ- ಸುರತ್ಕಲ್ ನಡುವೆ ಒಟ್ಟು 5 ರೈಲುಗಳ ವೇಗನ್‌ಗಳ ಮೂಲಕ ರೋರೋ ಸೇವೆಯನ್ನು ನೀಡಲಾಗುತ್ತಿದ್ದು, ಮಳೆಗಾಲದ ಬಳಿಕ 6ನೆ ರೈಲು ವೇಗನ್ ಈ ಸೇವೆಗೆ ಸೇರ್ಪಡೆಗೊಳ್ಳಲಿದೆ ಎಂದು ಅವರು ತಿಳಿಸಿದರು.

ಸುಮಾರು 13 ವರ್ಷಗಳ ಅವಧಿಯಲ್ಲಿ ರೋರೋ ಸೇವೆಯ ಮೂಲಕ ಕೊಂಕಣ ರೈಲ್ವೆ ಕಾರ್ಪೊರೇಶನ್ 205.60 ಕೋಟಿ ರೂ.ಗಳ ಆದಾಯದೊಂದಿಗೆ 35648 ವಿವಿಧ ರೀತಿಯ ಸಾಮಗ್ರಿಗಳನ್ನು ಹೊಂದಿ ಭಾರೀ ಟ್ರಕ್‌ಗಳನ್ನು ಸಾಗಿಸಿದೆ. ಪ್ರತಿ ಟ್ರಕ್‌ನಲ್ಲಿ ಟ್ರಕ್‌ನ ಚಾಲಕ ಮತ್ತು ಸಹ ಚಾಲಕನಿಗೆ ಪ್ರಯಾಣಿಸಬಹು ದಾಗಿದೆ. ಚಾಲಕ ಟ್ರಕ್ಕನ್ನು ಚಲಾಯಿಸುವ ಅಗತ್ಯವಿರುವುದಿಲ್ಲ. ರಸ್ತೆಯಲ್ಲಿ ಟ್ರಕ್‌ಗಳಲ್ಲಿ ಘನ ವಸ್ತುಗಳನ್ನು ಸಾಗಿಸುವ ಸಂದರ್ಭ ಸಂಭವಿಸ ಬಹುದಾದ ಕಳ್ಳತನ, ಅಪಘಾತದ ಭಯ ರೋರೋ ಮೂಲಕ ಪ್ರಯಾಣಿಸುವ ಟ್ರಕ್ ಗಳಿಗೆ ಇರುವುದಿಲ್ಲ. ಟ್ರಕ್ ರೈಲ್ವೆಯ ವೇಗನ್ ಹತ್ತಿದ ಬಳಿಕ ಅದರ ಸುರಕ್ಷತೆ ರೈಲ್ವೆಯ ಜವಾ ಬ್ದಾರಿಯಾಗಿರುತ್ತದೆ. ಇದರಿಂದ ಟ್ರಕ್‌ಗಳ ನಿರ್ವ ಹಣೆ ಕಾರ್ಯ ಬಹಳಷ್ಟು ಕಡಿಮೆಯಾಗು ತ್ತದೆಯಲ್ಲದೆ, ಉದ್ದಿಮೆದಾರರಿಗೆ ಅಧಿಕ ಲಾಭ ಗಳಿಕೆಯಾಗಲಿದೆ.

ಒಂದು ರೋರೋ ಸೇವೆಯ ರೈಲ್ವೆ ವೇಗನ್‌ನಲ್ಲಿ ಏಕಕಾಲದಲ್ಲಿ ಗರಿಷ್ಠ ತಲಾ 40 ಮೆಟ್ರಿಕ್ ಟನ್‌ನ 40 ಟ್ರಕ್‌ಗಳು ಒಂದೆಡೆ ಯಿಂದ ಮತ್ತೊಂಡೆಗೆ ಸಾಗಿಸಬಹುದಾಗಿದೆ. ಈ ಮೂಲಕ ದಿನನಿತ್ಯ ಒಟ್ಟು 200 ಟ್ರಕ್‌ಗಳನ್ನು ಈ ಸೇವೆಯ ಮೂಲಕ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಬಹುದಾಗಿದೆ. ಇದರಿಂ ದಾಗಿ ಒಂದು ಕಿ.ಮೀ.ಗೆ ಸುಮಾರು 10 ಲೀಟರ್ ಡೀಸೆಲ್‌ನ ಉಳಿತಾಯ ಸಾಧ್ಯವಾ ಗಲಿದೆ. ಮಾತ್ರವಲ್ಲದೆ ವಾಯು ಮಾಲಿನ್ಯ ಮುಕ್ತ ಹಾಗೂ ಕಡಿಮೆ ಅವಧಿಯಲ್ಲಿ ವಸ್ತುಗಳು ಸಾಗಿಸಲ್ಪಡುತ್ತವೆ. ಕಾರವಾರ- ಉಡುಪಿ ಹಾಗೂ ಕಾರವಾರ- ರತ್ನಗಿರಿ ನಡುವೆಯೂ ಬೇಡಿಕೆ ಬಂದಲ್ಲಿ ರೋರೋ ಸೇವೆಯ ಸೌಲಭ್ಯವನ್ನು ಒದಗಿಸಲಾ ಗುವುದು. ಇದಕ್ಕೆ ಕೇಂದ್ರ ರೈಲ್ವೆಯಿಂದ ಅನುಮತಿ ದೊರೆಯಬೇಕು ಎಂದು ನಂದು ತೆಲಂಗ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರೈಲ್ವೆ ವೇಗನೊಂದರಲ್ಲಿ 40 ಟ್ರಕ್‌ಗಳು ಏಕಕಾಲದಲ್ಲಿ ಸಾಗಬಹುದಾಗಿದ್ದು, ಕೆಲವೊಮ್ಮೆ ಟ್ರಕ್‌ಗಳ ಸಂಖ್ಯೆ ಕಡಿಮೆಯಾಗಿದ್ದರೂ ಕನಿಷ್ಠ ಎರಡು ಟ್ರಕ್‌ಗಳಿದ್ದರೂ ರೋರೋ ಸೇವೆ ಅಬಾಧಿತವಾಗಿರುತ್ತದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಜಿ. ಘಾಟ್ಗೆ, ಸುನಿಲ್ ನರ್ಕರ್ ಉಪಸ್ಥಿತರಿದ್ದರು.

ಏನಿದು ರೋರೋ...?
ಸರಕು ಸಾಮಗ್ರಿಗಳಿಂದ ತುಂಬಿದ ಟ್ರಕ್‌ಗಳನ್ನು ರೈಲ್ವೆ ವೇಗನ್‌ಗೆ ಹತ್ತಿಸಿ ಕಡಿಮೆ ವೆಚ್ಚ, ಸಮಯ ಹಾಗೂ ಸುರಕ್ಷಿತ ವಾಗಿ ಒಂದೆಡೆಯಿಂದ ಮತ್ತೊಂದೆಡೆ ಸಾಗಿಸುವ ಈ ಸೇವೆಗೆ ‘ರೋರೋ’ ಎನ್ನಲಾಗುತ್ತದೆ. ಇದನ್ನು ಕೊಂಕಣ ರೈಲ್ವೆ 1999ರ ಜನವರಿ 26ರಂದು ಆರಂಭಿಸಿದೆ. ಈಗಾಗಲೇ ಐದು ರೈಲ್ವೆ ವೇಗನ್‌ಗಳ ಮೂಲಕ ರೋರೋ ಸೇವೆ ಆರಂಭಿಸಿರುವ ಕೊಂಕಣ್, ಆರನೆ ವೇಗನ್ ಸೇವೆ ಆರಂಭಿಸಲಿದೆ. ಸಾಗಾಟ ದಲ್ಲಿ ಮಿತವ್ಯಯಿಯಾಗಿರುವ ರೋರೋ ಸೇವೆ ವಾಯುಮಾಲಿನ್ಯ ಮುಕ್ತವಾಗಿ ರುತ್ತದೆ ಹಾಗೂ ಕಡಿಮೆ ಅವಧಿಯಲ್ಲಿ ಸರಕು ಸಾಗಾಟಕ್ಕೆ ನೆರವಾಗುತ್ತದೆ.

ಒಂದು ರೋರೋ ಸೇವೆಯ ರೈಲ್ವೆ ವೇಗನ್‌ನಲ್ಲಿ ಏಕಕಾಲದಲ್ಲಿ ಗರಿಷ್ಠ ತಲಾ 40 ಮೆಟ್ರಿಕ್ ಟನ್‌ನ 40 ಟ್ರಕ್‌ಗಳ ಸಾಗಾಟ ಸಾಧ್ಯವಾಗುತ್ತದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಚರ್ಚ್‌ದಾಳಿ ಗೃಹ ಇಲಾಖೆಗೆ ಪಾಠವಾಗಲಿ

‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...


- ಬಿ.ಶ್ರೀಪಾದ ಭಟ್

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್