ಹೋಂ ಸ್ಟೇ ದಾಳಿ ಆರೋಪಿಗಳು ಜೈಲಿನಲ್ಲಿದ್ದಷ್ಟು ಸಮಾಜಕ್ಕೆ ಒಳ್ಳೆಯದು: ವಿನಯ್ ಹೆಗ್ಡೆ
mail-img print-img

ಹೋಂ ಸ್ಟೇ ದಾಳಿ ಆರೋಪಿಗಳು ಜೈಲಿನಲ್ಲಿದ್ದಷ್ಟು ಸಮಾಜಕ್ಕೆ ಒಳ್ಳೆಯದು: ವಿನಯ್ ಹೆಗ್ಡೆ

ಸೋಮವಾರ - ಆಗಸ್ಟ್ -06-2012

ಮಂಗಳೂರು, ಆ.5: ಹೋಂ ಸ್ಟೇ ಪ್ರಕರಣದಲ್ಲಿ ಆರೋಪಿಗಳ ಕೃತ್ಯ ಕೊಲೆಗಿಂತಲೂ ಅಮಾನುಷವಾದುದು. ಆ ದುಷ್ಕರ್ಮಿಗಳು ಎಷ್ಟು ವರ್ಷ ಜೈಲಿನಲ್ಲಿ ಇರುತ್ತಾರೋ ಅಷ್ಟು ಸಮಾಜಕ್ಕೆ ಒಳ್ಳೆ ಯದು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್.ವಿನಯ್ ಹೆಗ್ಡೆ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಲೊಯೊಲೊ ಸಭಾಂಗಣದಲ್ಲಿ ಮಂಗಳೂರಿನ ನಾಗರಿಕರ ಸಂಘ ಟನೆಯ ವತಿಯಿಂದ ಹಮ್ಮಿಕೊಳ್ಳಲಾ ಗಿದ್ದ ನಾಗರಿಕರ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ನನ್ನ ಮಕ್ಕಳ ಹುಟ್ಟುಹಬ್ಬವನ್ನು ಎಲ್ಲಿ ಆಚರಿಸಬೇಕು ಎಲ್ಲಿ ಆಚರಿಸಬಾರದು ಎನ್ನುವುದನ್ನು ನಿರ್ಬಂಧಿಸಲು ಅವರು ಯಾರು...? ಯುವತಿಯರ ಮೇಲೆ ದೌರ್ಜನ್ಯ ಎಸಗಿದ ಪುಂಡರಿಂದ ನಮ್ಮ ಸಂಸ್ಕೃತಿ ಏನು ಎಂದು ತಿಳಿದುಕೊಳ್ಳಬೇ ಕಾಗಿಲ್ಲ. ನಮ್ಮಲ್ಲಿ ಧರ್ಮ ಸಹಿಷ್ಣುತೆಯ ಸಾಕಷ್ಟು ಉದಾಹರಣೆಗಳಿವೆ. ಅವೆಲ್ಲ ವನ್ನು ಗಾಳಿಗೆ ತೂರಿ ಯಾರೋ ಕೆಲವು ದುಷ್ಕರ್ಮಿಗಳು ಹೇಳಿದಂತೆ ಸಮಾಜದ ಜನ ಕೇಳಬೇಕೆಂದರೆ ಯಾವ ರಾಜ ಕೀಯ ವ್ಯವಸ್ಥೆಯಲ್ಲಿ ನಾವಿದ್ದೇವೆ ಎನ್ನು ವುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದು ಎನ್.ವಿನಯ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಹೋಂ ಸ್ಟೇ ಘಟನೆಗೆ ಸಂಬಂಧಿಸಿ ದಂತೆ ರಾಜ್ಯ ಗೃಹ ಸಚಿವರ ಜೊತೆ ಮಾತನಾಡಿದಾಗ ಎರಡು ಕಡೆಯವರ ತಪ್ಪಿದೆ ಎನ್ನುವ ಮಾತುಗಳನ್ನು ಗೃಹ ಸಚಿವರು ಆಡಿದ್ದಾರೆ. ಹೀಗಿರುವಾಗ ನಾವು ಯಾವ ರೀತಿಯ ರಾಜಕಾರಣಿ ಗಳನ್ನು ಆರಿಸಿ ಕಳುಹಿಸಿದ್ದೇವೆ, ಅದರ ಪರಿಣಾಮದಿಂದ ಏನೆಲ್ಲಾ ತಪ್ಪಾಗುತ್ತಿವೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಪ್ರಸಕ್ತ ಪರಿಸ್ಥಿತಿಗೆ ಪ್ರಬುದ್ಧ ರಾಜಕಾರಣಿ ಗಳನ್ನು ಆರಿಸಿ ಕಳುಹಿಸದಿರುವುದೂ ಪ್ರಮುಖ ಕಾರಣ ಎಂದು ವಿನಯ ಹೆಗ್ಡೆ ಟೀಕಿಸಿದರು.

ಹಿಂಸೆಯ ಮಾರ್ಗವೇ ಪರಿಹಾರ ಎನ್ನುವ ಭ್ರಮೆ: ನಮ್ಮ ಸುತ್ತಮುತ್ತಲಿನ ಸಮಾಜದ ವಿವಿಧ ಸಮಸ್ಯೆಗಳಿಗೆ ಹಿಂಸಾ ಮಾರ್ಗದಿಂದ ಮಾತ್ರ ಪರಿಹಾರವಿದೆ ಎಂದು ಭಾವಿಸಿರುವವರು ಇಂದು ಜನರ ಮತ ಪಡೆದು ಓಟ್ ಬ್ಯಾಂಕಿನ ರಾಜಕೀಯ ದಲ್ಲಿ ತೊಡಗಿದ್ದಾರೆ. ಇದರಿಂದ ಮಂಗಳೂರಿನ ಘನತೆಗೆ ಧಕ್ಕೆಯಾಗುವ ಘಟನೆಗಳು ನಡೆಯುತ್ತಿದೆ. ಹೋಂ ಸ್ಟೇಯಲ್ಲಿ ನಡೆದಿರುವ ಘಟನೆ ಅರಾ ಜಕತೆಯ ಪ್ರತೀಕವಾಗಿದೆ ಎಂದು ಯೂನಿಟ್ ಹೆಲ್ತ್ ಕಾಂಪೆಕ್ಸ್‌ನ ಅಧ್ಯಕ್ಷ ಸಿ.ಪಿ.ಹಬೀಬ್ ರಹ್ಮಾನ್ ಅಭಿಪ್ರಾಯಿಸಿದರು.

ಮಂಗಳೂರು ಮಹಾನಗರ ಪಾಲಿಕೆಗೆ ತೆರಿಗೆ ಸಲ್ಲಿಸಿ ಕಟ್ಟಡ ನಿರ್ಮಿ ಸಿರುವ ಮೂಲಕ ಆ ಕಟ್ಟಡದ ಮಾಲಕರು ತಮ್ಮ ಕೊಡುಗೆ ನೀಡಿ ದ್ದಾರೆ. ಇದೀಗ ಅಲ್ಲಿ ಯುವಕ- ಯುವತಿಯರ ಮೇಲಾಗಿರುವ ದೌರ್ಜನ್ಯ ಇಡೀ ನಗರದ ಜನತೆ ತಲೆ ತಗ್ಗಿಸುವಂತೆ ಮಾಡಿದೆ ಎಂದು ಕೆಸಿಸಿಐಯ ನಿಕಟಪೂರ್ವ ಅಧ್ಯಕ್ಷೆ ಅನಿತಾ ಕಿಣಿ ಆರೋಪಿಸಿದ್ದಾರೆ.

ಪೊಲೀಸರಿಂದ ಆಚರಣೆಗಳಿಗೆ ನಿರ್ಬಂಧ: ಹೋಂ ಸ್ಟೇ ದಾಳಿಯ ಬಳಿಕ ಬೀಚ್‌ಗಳಲ್ಲಿ ಯಾವುದೇ ಆಚರಣೆ ಗಳಿಗೆ ನಿರ್ಬಂಧ ಹೇರುವ ಮೂಲಕ ಸಮಸ್ಯೆಯನ್ನು ಗಂಭೀರವಾಗಿಸಿದ್ದಾರೆ ಎಂದು ಯತೀಶ್ ಬೈಕಂಪಾಡಿ ಆರೋಪಿ ಸಿದ್ದಾರೆ. ಕೆಲವು ಕಿಡಿಗೇಡಿಗಳ ವರ್ತನೆ ಯಿಂದ ಮಂಗಳೂರಿನ ಬಹು ಸಂಖ್ಯೆಯ ಶಾಂತಿ ಪ್ರೀಯ ಜನತೆಯ ಬಗ್ಗೆ ತಪ್ಪು ಸಂದೇಶ ರವಾನೆಯಾಗು ವಂತಾಗಿದೆ.

ಪೊಲೀಸರು ಜನರ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವ ಮೂಲಕ ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿ ಸುತ್ತಿದ್ದಾರೆ ಎಂದು ಯತೀಶ್ ಬೈಕಂಪಾಡಿ ಆರೋಪಿಸಿದರು.

ಮಂಗಳೂರಿನಲ್ಲಿ ಯುವತಿಯರ ಮೇಲೆ ದೌರ್ಜನ್ಯ ನಡೆಸಿರುವ ಹಿನ್ನೆಲೆ ಯಲ್ಲಿ ಓಟ್ ಬ್ಯಾಂಕ್‌ನ ರಾಜಕೀಯ ಇದೆ ಎಂದು ಸಾಮಾಜಿಕ ಕಾರ್ಯ ಕರ್ತ, ಉದ್ಯಮಿ ವಿಜಯ ವಿಠ್ಠಲನಾಥ ಶೆಟ್ಟಿ ಆರೋಪಿಸಿದರು.

ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣವನ್ನು ರಾಜ್ಯಪಾಲರುಗಂಭೀರವಾಗಿ ಪರಿಗಣಿ ಸಬೇಕು ಎಂದು ವಾಲ್ಟರ್ ಡಿಸೋಜ ಅಭಿಪ್ರಾಯಿಸಿದರು.

ವಿದ್ಯಾರ್ಥಿ ಪ್ರತಿನಿಧಿ ಮೇಧಾ ಮಾತ ನಾಡಿ, ವಿದ್ಯಾರ್ಥಿಗಳಿಗಿರುವ ಹಕ್ಕನ್ನು ಚಲಾಯಿಸಲು ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗ ಬೇಕು, ಮತ್ತು ವಿದ್ಯಾರ್ಥಿಗಳ ಹಕ್ಕು ಗಳನ್ನು ರಕ್ಷಿಸಲು ಸಂಬಂಧಪಟ್ಟವರು ಸೂಕ್ತ ರಕ್ಷಣೆ ನೀಡುವಂತಾಗಬೇಕು ಎಂದು ಆಗ್ರಹಿಸಿದರು.

ಯಾವುದೇ ಸಂಘಟನೆಯ ಹೆಸರಿ ಲ್ಲದೆ ನಡೆದ ಸಮಾಲೋಚನಾ ಸಭೆ ಯಲ್ಲಿ ‘ಎಚ್ಚೆತ್ತ ಮಂಗಳೂರು’ ಎಂಬ ನಾಮಫಲಕವನ್ನು ಸಮಾವೇಶದ ವೇದಿಕೆ ಯಲ್ಲಿ ಹಾಕಲಾಗಿತ್ತು. ಸಮಾವೇಶದ ಕೊನೆಯಲ್ಲಿ ಹೋಂ ಸ್ಟೇ ಘಟನೆಯನ್ನು ವಿರೋಧಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೀರ್ಮಾನಿ ಸಲಾಯಿತು.


ದೌರ್ಜನ್ಯಕ್ಕೊಳಗಾದ ಯುವತಿಯರಿಂದಲೇ ದೂರು ದಾಖಲಾಗಲಿ
ಈ ಘಟನೆಯಲ್ಲಿ ದುಷ್ಕರ್ಮಿಗಳು ಕಠಿಣ ಶಿಕ್ಷೆಗೊಳಗಾಗಬೇಕಾದರೆ ದೂರು ನೀಡಲು ದೌರ್ಜನ್ಯಕ್ಕೊಳಗಾದ ಯುವತಿಯರು ಮುಂದೆ ಬರಬೇಕಾಗಿದೆ. ಅಥವಾ ಅವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಲಿಖಿತ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ.
-ನ್ಯಾಯವಾದಿ ಆಶಾ ನಾಯಕ್

ಮಹಿಳೆಯರ ಹಕ್ಕು ಕಸಿದ ಮಹಿಳಾ ಆಯೋಗದ ಅಧ್ಯಕ್ಷೆ
ಹೋಂ ಸ್ಟೇ ಕುರಿತು ಪರಿಶೀಲನೆಗಾಗಿ ಮಂಗಳೂರಿಗೆ ಆಗಮಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ. ಇಡೀ ಪ್ರಕರಣದ ಬಗ್ಗೆ ಅವರು ಗಮನಹರಿಸದೆ ಹೋಗಿರುವುದು ಆಯೋಗಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ.
-ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಫಿಲೋಮಿನಾ ಫೆರಿಸ್

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಅಗ್ಗದ ಮದ್ಯಕೆ ಶುದ್ಧ ನೀರು ಬೆರೆಸಿ ಕುಡಿವ ವೇಳೆಗೆ ಸೌಭಾಗ್ಯದ ಸೋನಿಯಾ ಬಾರಮ್ಮಾ...

ಕಳಂಕಿತರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಭೇಷ್ ಅನಿಸಿಕೊಂಡ ಸಿದ್ದು, ಖಾತೆ ಹಂಚಿಕೆಯಲ್ಲ ...


- ಪಿ.ಕೆ.ಮಲ್ಲನಗೌಡರ್‌

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್