ಕೊಪ್ಪಳ, ಎ.10: ವೈಚಾರಿಕ ನೆಲೆಗಟ್ಟನ್ನು ಹೊಂದಿರದ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಸಾಧನೆಗಾಗಿ ಸಮಾಜದ ಲ್ಲಿ ಶಾಂತಿ ಕದಡಿಸುವ ಕೆಲಸ ಮಾಡುತ್ತಿವೆ ಎಂದು ಹಿರಿಯ ಚಿಂತಕ ಪ್ರೊ. ಕೆ.ಎಸ್.ಭಗವಾನ್ ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡನೆಟ್ ಡಾಟ್ ಕಾಂನ ಕವಿ ಸಮೂಹ ತನ್ನ 100ನೆ ಕವಿ ಸಮಯದ ನಿಮಿತ್ತ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ನಡೆದ ‘ಈ ದಶಕದ ಬರಹಗಾರರ ತಲ್ಲಣಗಳು’ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಾಲ್ಮೀಕಿ ರಾಮನನ್ನು ಒಬ್ಬ ಮನುಷ್ಯನನ್ನಾಗಿ ಚಿತ್ರಿಸಿದ. ಎಲ್ಲೂ ದೇವರೆಂದು ಚಿತ್ರಿಸಲಿಲ್ಲ. ಆದರೆ ಇಂದು ರಾಮ ದೇವರಾಗಿ ಪೂಜಿಸಲ್ಪಡುತ್ತಿದ್ದಾನೆ. ತುಂಬು ಗರ್ಭಿಣಿಯನ್ನು ಕಾಡಿಗಟ್ಟಿ ಮಹಿಳಾ ವಿರೋಧಿಯಾದ, ಶಂಭೂಕ ಎಂಬ ಶೂದ್ರನ ವಧೆ ಮಾಡಿ ದುಡಿವ ವರ್ಗದ ವಿರೋಧಿಯಾದ ರಾಮ ಹೇಗೆ ದೇವರಾಗುತ್ತಾನೆ. ಪ್ರಪಂಚದಲ್ಲಿಯೇ ಭಾರತದಂತಹ ಅನಾಗರಿಕ ಸಮಾಜ ಮತ್ತೊಂದಿಲ್ಲ. ಇಲ್ಲಿನ ಅನಾಗರಿಕತೆಯೇ ನಮ್ಮ ರಾಜಕೀಯ ಪಕ್ಷಗಳಿಗೆ ಮುಖ್ಯ ಅಸ್ತ್ರ. ಈ ದಶಕದ ತಲ್ಲಣಗಳು ನಮ್ಮ ದೇಶ ಯಾವತ್ತೂ ಅನುಭವಿಸುತ್ತಿರುವ ತಲ್ಲಣಗಳೇ ಆಗಿವೇ. ಈ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿಯನ್ನು ,ಸಾಮರಸ್ಯವನ್ನು ಮೂಡಿಸುವ ಕೆಲಸ ಬರಹಗಾರರಿಂದ ಆಗಬೇಕಿದೆ ಎಂದರು.
ಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಹೋರಾಟಗಾರ ಬಸವರಾಜ್ ಸೂಳಿಬಾವಿ ಮಾತನಾಡಿ, ಪ್ರಭುತ್ವ ಯಾವತ್ತು ಬರಹಗಾರರನ್ನು ಕಟ್ಟಿಹಾಕಲು ಬಯಸುತ್ತದೆ. ಭಯ ಹುಟ್ಟಿಸುವುದರಿಂದಲೋ ಇಲ್ಲವೆ ಅವರಿಗೆ ಪ್ರಶಸ್ತಿ, ಪುರಸ್ಕಾರ ಗಳಿಂದಲೊ ಮತ್ಯಾವುದೋ ರೂಪದಿಂದ ಆಮಿಷಕ್ಕೆ ಒಳ ಗಾಗಿಸಿ ಅವರ ಧ್ವನಿಯನ್ನು ಹತ್ತಿಕ್ಕಲು ನೋಡುತ್ತದೆ ಎಂದರು. ಈ ಗೋಷ್ಠಿಯಲ್ಲಿ ಡಾ.ಅರುಣ್ ಜೋಳದ ಕೂಡ್ಲಿಗಿ ಕಾವ್ಯದ ಕುರಿತು, ಡಾ.ಜಾಜಿ ದೇವೇಂದ್ರಪ್ಪ -ಸಂಶೋಧನೆ ಮತ್ತು ವಿಮರ್ಶೆ ಹಾಗೂ ಡಾ.ಮಮ್ತಾಜ್ ಬೇಗಂ - ಚಳವಳಿಗಳು ಹಾಗೂ ಮಹಿಳೆ ಕುರಿತು ಮಾತನಾಡಿದರು. ಇದೆ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಪುರಸ್ಕಾರ ಪಡೆದ ವೀರಣ್ಣ ಮಡಿವಾಳರಿಗೆ ಸನ್ಮಾನಿಸಲಾಯಿತು.
ಪುಸ್ತಕಗಳ ಬಿಡುಗಡೆ : ಮಧ್ಯಾಹ್ನ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಠ್ಠಪ್ಪ ಗೋರಂಟ್ಲಿಯವರ ‘ಒಳನೋಟ’, ಅಲ್ಲಮಪ್ರಭು ಬೆಟ್ಟದೂರರ ‘ಸಹಜ ವಿಮರ್ಶೆ’, ಎ.ಎಸ್.ಮಕಾನದಾರ ಸಂಪಾದಿಸಿದ ‘ಬೊಗಸೆ ತುಂಬ ಬಯಲು’ ಕಥಾಸಂಕಲನ ಹಾಗೂ ಸಿರಾಜ್ ಬಿಸರಳ್ಳಿಯವರ ಕೊಪ್ಪಳ ಜಿಲ್ಲಾ ಡೈರೆಕ್ಟರಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪುರಸ್ಕಾರವನ್ನು ಪಡೆದಿರುವ ಗುರುಮೂರ್ತಿ ಪೆಂಡಕೂರರು ಪುಸ್ತಕಗಳ ಬಿಡುಗಡೆ ಮಾಡಿದರು.
ಅನ್ಮೋಲ್ ಟೈಂಸ್ ಪತ್ರಿಕೆಯ ಸಂಪಾದಕ ವಲೀ ಸಾಹೇಬ್, ಸ್ಯೆಯದ್ ಫೌಂಡೇಷನ್ ಅಧ್ಯಕ್ಷ ಕೆ.ಎಂ. ಸ್ಯೆಯದ್, ಹಿರಿಯ ಪತ್ರಕರ್ತ ಬಸವರಾಜ್ ಶೀಲವಂತರ, ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರಡ್ಡಿ ಅಳವಂಡಿ, ಕಾಟನ್ ಪಾಷಾ, ವಿಠ್ಠಪ್ಪ ಗೋರಂಟ್ಲಿ, ಅಲ್ಲಮಪ್ರಭು ಬೆಟ್ಟದೂರು, ಎ.ಎಸ್.ಮಕಾನದಾರ, ಸಿರಾಜ್ ಬಿಸರಳ್ಳಿ ಉಪಸ್ಥಿತರಿದ್ದರು. ಪುಸ್ತಕಗಳ ಬಿಡುಗಡೆಯ ನಂತರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ 55ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳ ವಾಚನ ಮಾಡಿದರು.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...