ಹಾಸನ, ಮೇ 10: ಆಲೂಗೆಡ್ಡೆ ಬೆಳೆಗೆ ತಗಲುತ್ತಿರುವ ಅಂಗಮಾರಿ ರೋಗ ನಿಯಂತ್ರಿಸಿ ಉತ್ತಮ ಇಳುವರಿ ಪಡೆಯಲು ಸ್ಥಳೀಯ ವಿಜ್ಞಾನಿಗಳು ಈ ಭಾಗದ ಮಣ್ಣು ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ರಸಗೊಬ್ಬರ ತಯಾರಿಸಿ ಸರಕಾರದ ಮೂಲಕ ವಿತರಣೆ ಮಾಡುವ ಅಗತ್ಯವಿದೆ ಎಂದು ಬೆಂಗಳೂರಿನ ಮಣ್ಣು ವಿಜ್ಞಾನ ಕೇಂದ್ರದ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಪಳನಿಯಪ್ಪನ್ ಸಲಹೆ ನೀಡಿದ್ದಾರೆ.
ಹಾಸನದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಅರಕಲಗೂಡಿನ ಪೊಟ್ಯಾಟೋ ಕ್ಲಬ್ ಆಯೋಜಿಸಿದ್ದ ಆಲೂಗೆಡ್ಡೆ ಬೆಳೆ ಬಗ್ಗೆ ರೈತರ ಮತ್ತು ವಿಜ್ಞಾನಿಗಳ ಚಿಂತನಾ ಸಭೆ ಉದ್ದೇಶಿಸಿ ಮಾತನಾಡಿದ ಡಾ.ಪಳನಿಯಪ್ಪನ್, ರೈತರು ಮಣ್ಣಿನ ಪರೀಕ್ಷೆ ನಡೆಸಿ ಮಣ್ಣಿನ ಗುಣ ಆಧರಿಸಿ ಬೆಳೆ ಬೆಳೆಯದಿರುವುದೇ ರೈತರು ನಷ್ಟ ಅನುಭವಿಸುವಂತಾಗಿದೆ ಎಂದರು. ಯಾವ ಭೂಮಿಯಲ್ಲಿ ರಂಜಕ, ಸಾರಜನಕ, ಪೊಟ್ಯಾಷಿಯಂ ಅಂಶ ಎಷ್ಟು ಪ್ರಮಾಣದಲ್ಲಿದೆ ಎಂಬ ಮಾಹಿತಿಯೇ ರೈತರಿಗೆ ಇರುವುದಿಲ್ಲ. ಮನಸ್ಸಿಗೆ ಬಂದ ರಸಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪಡಿಸುತ್ತಿರುವುದೇ ರೈತರು ತೊಂದರೆಗೆ ಸಿಲುಕು ಕಾರಣವಾಗಿದೆ ಎಂದು ಹೇಳಿದರು.
ಬೆಳೆ ಮಾಡುವ ಮೊದಲು ರೈತರು ಮಣ್ಣು ಪರೀಕ್ಷೆ ಮಾಡಿಸುವುದು ಸೂಕ್ತ. ತಮ್ಮ ಭೂಮಿಯಲ್ಲಿ ಯಾವ ಬೆಳೆ ಬೆಳೆದರೆ ಉತ್ತಮ ಫಸಲು ಬರುತ್ತದೆ ಎಂಬ ಅರಿವಾಗುತ್ತದೆ. ಅಲ್ಲದೇ ಮಣ್ಣಿನಲ್ಲಿ ಪೋಷಕಾಂಶ ಆಧರಿಸಿ ರಸಗೊಬ್ಬರ ಹಾಕಬೇಕು. ರಂಜಕದ ಕಡಿಮೆ ಇರುವ ಭೂಮಿಗೆ ಸಾರಜನಕ ಹೆಚ್ಚಿರುವ ಗೊಬ್ಬರ ಹಾಕಿದರೆ ಪ್ರಯೋಜನವಾಗುವುದಿಲ್ಲ ಎಂದು ರೈತರಿಗೆ ತಿಳಿ ಹೇಳಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ರಾವಲ್ ಮಾತನಾಡಿ, ಆಲೂಗೆಡ್ಡೆಗೆ ತಗಲುತ್ತಿರುವ ರೋಗ ನಿಯಂತ್ರಿಸಲು ರೈತರಿಗೆ ಮಾಹಿತಿಯ ಕೊರತೆ ಇದೆ ಎಂದರು. ಅಲೂಗೆಡ್ಡೆ ಬೆಳೆಗೆ ತಗುಲಿರುವ ರೋಗ ಯಾವುದು ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಬೇಕು. ನಂತರ ಅದರ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬೇಕೆಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಬಿತ್ತನೆ ವೇಳೆ ಬೀಜೋಪಚಾರ ಮಾಡುವುದರಿಂದ ರೋಗ ತಗಲುವುದನ್ನು ನಿಯಂತ್ರಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು. ಕೃಷಿ ಮಹಾವಿದ್ಯಾಲಯದ ಸಸ್ಯರೋಗ ತಜ್ಞ ಡಾ.ವೆಂಕಟೇಶ್, ಕೃಷಿ ಮಹಾ ವಿದ್ಯಾಲಯ ತೋಟಗಾರಿಕಾ ತಜ್ಞ ಸಿದ್ದಗಂಗಯ್ಯ, ಪ್ರಗತಿಪರ ಚಿಂತಕ ಹೆಮ್ಮಿಗೆ ಮೋಹನ್, ಜಿಲ್ಲಾ ಕೃಷಿ ಸಮಾಜ ಅಧ್ಯಕ್ಷ ಕೃಷ್ಣೇಗೌಡ, ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್.ಯೋಗಾರಮೇಶ್, ಮುತ್ತಿಗೆ ರಾಜೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...