ದಲಿತ ಮಹಿಳೆಯರ ಒಡೆತನಕ್ಕೆ ಭೂಮಿ ಕೊಡಿ, ದೇಶಕ್ಕೆ ಅನ್ನ ಕೊಡುತ್ತೇವೆ: ಡಾ. ಸುಜಾತ
mail-img print-img

ದಲಿತ ಮಹಿಳೆಯರ ಒಡೆತನಕ್ಕೆ ಭೂಮಿ ಕೊಡಿ, ದೇಶಕ್ಕೆ ಅನ್ನ ಕೊಡುತ್ತೇವೆ: ಡಾ. ಸುಜಾತ

ಬುಧವಾರ - ಜೂನ್ -20-2012

ಕೋಲಾರ, ಜೂ.19 : ದಲಿತರಿಗೆ ಕೃಷಿ ಮಾಡಿ ಬದುಕಲು ಭೂಮಿ ಕೊಟ್ಟಿಲ್ಲ, ಕನಿಷ್ಠ ಶವ ಸಂಸ್ಕಾರಕ್ಕೂ ಭೂಮಿ ಕೊಡು ತ್ತಿಲ್ಲ !ದಲಿತರಿಗೆ ಕೈಗಾರಿಕಾಭಿವೃದ್ಧಿ ಬೇಡ. ಬದಲಾಗಿ ಮಹಿಳೆಯರ ಒಡೆ ತನದಲ್ಲಿ ಪ್ರತಿ ಕುಟುಂಬಕ್ಕೆ 5 ಎಕರೆ ಭೂಮಿ ಕೊಡಿ. ದೇಶಕ್ಕೆ ಅನ್ನ ಕೊಡುತ್ತೇವೆ ಎಂದು ಆಂಧ್ರ ಪ್ರದೇಶದ ಶಾತವಾಹನ ವಿಶ್ವವಿದ್ಯಾ ಲಯದ ಪ್ರಾಧ್ಯಾಪಕಿ ಡಾ. ಸುಜಾತ ಆಗ್ರಹಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಭೂ ರಹಿತ ದಲಿತ ಕುಟುಂಬಗಳಿಗೆ ಭೂಮಿ ನೀಡುವಂತೆ ಒತ್ತಾಯಿಸಿ ಆದಿಮ ಶಕ್ತಿ ದಲಿತ ಮಹಿಳಾ ಒಕ್ಕೂಟದಿಂದ ಆಯೋಜಿಸಲಾಗಿದ್ದ ಬೃಹತ್ ಪ್ರತಿ ಭಟನಾ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ದಲಿತರು ದೇಶದ ದುಡಿಯುವ ಬೆವರಿನ ಸಮುದಾಯ. ಭೂಮಿಯನ್ನು ಮುಟ್ಟುವ ದುಡಿಯುವ ವರ್ಗವಾ ಗಿದ್ದರೂ ಶೇ.80ರಷ್ಟು ದಲಿತರ ಒಡೆತನ ದಲ್ಲಿ ಭೂಮಿಯೇ ಇಲ್ಲ. ಅವರೆಲ್ಲಾ ಇಂದಿಗೂ ಕೂಲಿಯನ್ನೇ ನೆಚ್ಚಿಕೊಂಡಿದ್ದಾರೆ ಎಂದ ಅವರು, ದಲಿತರಿಗೆ ನಿಲ್ಲಲು ನೆರಳೂ ಇಲ್ಲ, ದುಡಿಯಲು ಭೂಮಿ ಯೂ ಇಲ್ಲ, ಕನಿಷ್ಠ ಶವ ಸಂಸ್ಕಾರಕ್ಕೂ ಭೂಮಿ ನೀಡುತ್ತಿಲ್ಲ ಎಂದು ವಿಷಾದಿ ಸಿದರು.

ಇಲ್ಲಿಯವರೆಗೆ ಸಂವಿಧಾನ ಬದ್ಧವಾಗಿ ದಲಿತರು ಹೋರಾಟ ಮಾಡಿ ಪಡೆದುಕೊಂಡ ಅಷ್ಟಿಟ್ಟು ಭೂಮಿ ಯನ್ನೂ ಕೈಗಾರಿಕಾಭಿವೃದ್ಧಿಯ ನೆಪದಲ್ಲಿ ಸರಕಾರ ಪುನಃ ವಾಪಸು ಪಡೆಯುತ್ತಿದೆ. ದಲಿತರಿಗೆ ಬೇಕಾಗಿರುವುದು ಉಳುಮೆ ಮಾಡಲು ಭೂಮಿ. ಅದನ್ನು ಸರಕಾರ ನೀಡಲೇಬೇಕೆಂದು ಈ ಸಂದರ್ಭ ಅವರು ಒತ್ತಾಯಿಸಿದರು. ಜಿಲ್ಲೆಯಲ್ಲಿರುವ ಸರಕಾರಿ ಭೂಮಿ ಯನ್ನು ಗುರುತಿಸಿ ಪ್ರತಿ ಭೂರಹಿತ ದಲಿತ ಕುಟುಂಬಕ್ಕೆ ತಲಾ 5 ಎಕರೆ ಯಂತೆ ಹಂಚಬೇಕು. ತಾಲೂಕು ಮಟ್ಟದಲ್ಲಿ ಭೂ ಒಡೆತನ ಸಮಿತಿ ರಚನೆ ಯಾಗಬೇಕು. ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿರುವಂತೆ ಭೂ ಒಡೆತನ ಪರಿಮಿತಿ ಕಾಯ್ದೆಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು.

120 ವರ್ಷಗಳಿಂದ ವಾಸವಾಗಿರುವ ಕೆಜಿಎಫ್ ಗಣಿ ಕಾರ್ಮಿಕರ ಮನೆಗಳಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು. ಚಿನ್ನದ ಗಣಿ ಪ್ರದೇಶದಲ್ಲಿರುವ 8 ಸಾವಿರ ಎಕರೆ ಭೂಮಿಯನ್ನು ಚಿನ್ನದ ಗಣಿ ಕಾರ್ಮಿಕರ ಕುಟುಂಬಗಳಿಗೆ ಹಂಚಬೇಕು. ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಇತರೆ ಯೋಜನೆ ಗಳನ್ನು ಬದಿಗೊತ್ತಿ ಭೂ ರಹಿತ ದಲಿತ ಕುಟುಂಬಗಳಿಗೆ ಭೂಮಿ ಖರೀದಿಸಿ ಹಂಚುವ ಕಾಯಕಲ್ಪಕ್ಕೆ ಆದ್ಯತೆ ನೀಡ ಬೇಕು ಎಂಬ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಇದಕ್ಕೂ ಮುಂಚಿತವಾಗಿ ಪ್ರತಿಭಟನಾ ರ್ಯಾಲಿಯು ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡಿತು.

ಎಸ್.ಪಿ.ಜೆ ರಾಜ್ಯ ಸಂಚಾಲಕ ಐಪಲ್ಲಿ ನಾರಾಯಣಸ್ವಾಮಿ, ಚೆನ್ನೈನ ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ಒಕ್ಕೂಟದ ಪ್ರ.ಕಾರ್ಯದರ್ಶಿ ಆರ್. ಗೀತಾ, ತಮಿಳುನಾಡು ಟ್ಯಾಪರೇ ರಾಜ್ಯ ಸಂಚಾ ಲಕ ಸೆಲ್ವಕುಮಾರ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂ.ಸಂಚಾಲಕ ಗೊಲ್ಲಹಳ್ಳಿ ಶಿವಪ್ರಸಾದ್, ಪ್ರಾಂತ ರೈತ ಸಂಘದ ರಾಜ್ಯ ಪ್ರ. ಕಾರ್ಯದರ್ಶಿ ಬಯ್ಯಾರೆಡ್ಡಿ, ಕಾರ್ಮಿಕ ಮುಖಂಡ ಗಾಂಧಿ ನಗರ ನಾರಾಯಣಸ್ವಾಮಿ ಮಾತನಾಡಿದರು.

ದಲಿತ ಮುಖಂಡರಾದ ಹಾರೋಹಳ್ಳಿ ರವಿ, ಮದಿ ವಣ್ಣನ್,ವಕ್ಕಲೇರಿ ರಾಜಪ್ಪ, ಆದಿಮ ಶಕ್ತಿ ದಲಿತ ಮಹಿಳಾ ಒಕ್ಕೂಟದ ಸರಸ್ವತಿ, ಪ್ರಭಾವತಿ, ನೀಲಮ್ಮ, ನಾರಾಯಣಮ್ಮ, ಗ್ರಾಮೀಣ ಮಹಿಳಾ ಒಕ್ಕೂಟದ ರಾಧಾ, ಪಾಪಮ್ಮ,, ಹಿರೇಕರಪನಹಳ್ಳಿ ಯಲ್ಲಪ್ಪ,ತಿರುಮಲಕೊಪ್ಪ ಮುನಿಯಪ್ಪ, ಹೂವಳ್ಳಿ ನಾಗರಾಜ್, ಎಂ.ಜಿ.ಶ್ರೀನಿವಾಸ್, ಆಂಜಿನಪ್ಪ, ಕೆ. ರಾಮಮೂರ್ತಿ, ಕೆಜಿಎಫ್ ಬಾಬು ಮತ್ತಿತರರು ಭಾಗವಹಿಸಿದ್ದರು.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೊದಲ ಯುದ್ಧದಲ್ಲಿ ಗೆದ್ದ ಸಿದ್ದರಾಮಯ್ಯ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೊದಲ ಯುದ್ಧವನ್ನು ಗೆದ್ದಿದ್ದಾರೆ. ಸರಕಾರ ಸುಸೂತ್ರವಾಗಿ ನಡೆಯ ಬೇಕೆಂದಿದ್ದರೆ ಈ ಯುದ್ಧವನ್ನು ಗೆಲ್ಲಲೇ ಬೇಕಾಗ ...


ನಿಮ್ಮ ಅನಿಸಿಕೆ

postClick here to post your views
EPAPER
access

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ